3: ಮೋದಿ ಸರ್ಕಾರದ 9 ವರ್ಷ, ಬಾಹ್ಯಾಕಾಶದಲ್ಲಿ ಇಸ್ರೋ ಹರ್ಷ 3 : ಚಂದ್ರಯಾನ-3 ಮೂಲಕ ಭಾರತ ಐತಿಹಾಸಿಕ ಸಾಧನೆಗೆ ಸಜ್ಜಾಗಿದೆ. ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಿದ ಫಲಗಳು ಕಾಣುತ್ತಿದೆ. 3 : ಚಂದ್ರಯಾನ-3 ಮೂಲಕ ಭಾರತ ಐತಿಹಾಸಿಕ ಸಾಧನೆಗೆ ಸಜ್ಜಾಗಿದೆ. ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಿದ ಫಲಗಳು ಕಾಣುತ್ತಿದೆ. ' ಭಾರತದ ಬಾಹ್ಯಾಕಾಶ ಯೋಜನೆಗಳ ವಿಚಾರದಲ್ಲಿ 2014ರ ಹಿಂದಿನ ವರ್ಷಗಳದ್ದು ಒಂದು ಸಾಹಸವಾಗಿದ್ದರೆ, 2014ರ ಬಳಿಕ ಇನ್ನೊಂದು ಮಜಲಿಗೇರಿದೆ. ಅದಕ್ಕೆ ಕಾರಣ ನರೇಂದ್ರ ಮೋದಿ ಸರ್ಕಾರ ಇಸ್ರೋ ಹಾಗೂ ಬಾಹ್ಯಾಕಾಶ ಯೋಜನೆಗಳಿಗೆ ನೀಡಿದ ಪ್ರಾಮುಖ್ಯತೆ. ' ಕಳೆದ 9 ವರ್ಷಗಳಲ್ಲಿ ಇಸ್ರೋ 424 ಸ್ಯಾಟಲೈಟ್‌ಗಳನ್ನು ಉಡಾವಣೆ ಮಾಡಿದೆ. ಇದರಲ್ಲಿ 389 ಉಪಗ್ರಹಗಳು ವಿದೇಶದ್ದಾಗಿದೆ. 2014ಕ್ಕೂ ಮುನ್ನ 35 ಸ್ಯಾಟಲೈಟ್‌ಗಳನ್ನು ಇಸ್ರೋ ಉಡಾವಣೆ ಮಾಡಿತ್ತು. ' ಇನ್ನು ಕಳೆದ 10 ವರ್ಷಗಳಲ್ಲಿ ಭಾರತದ ಸ್ಪೇಸ್‌ ಸೆಕ್ಟರ್‌ಗೆ ಮೀಸಲಿಟ್ಟ ಬಜೆಟ್‌ಗಳನ್ನೂ ಭಾರೀ ಏರಿಕೆಯಾಗಿದೆ. ಇಂದು ಇಸ್ರೋದ ಬಜೆಟ್‌ 12543 ಕೋಟಿ ರೂಪಾಯಿ. ' ಕಳೆದ 9 ವರ್ಷಗಳಲ್ಲಿ ಇಸ್ರೋ ಉಡಾವಣೆ ಮಾಡಿದ 389 ವಿದೇಶಿ ಸ್ಯಾಟಲೈಟ್‌ಗೀಂದ ಈವರೆಗೂ 3300 ಕೋಟಿ ರೂಪಾಯಿಗೀ ಅಧಿಕ ಆದಾಯ ಬಂದಿದೆ. ಇದು ಬಾಹ್ಯಾಕಾಶದಲ್ಲಿ ಇಸ್ರೋದ ಶಕ್ತಿಯನ್ನು ಸಾಬೀತು ಮಾಡಿದೆ. ' ಇಸ್ರೋ ತನ್ನ ಉಪಗ್ರಹ ಉಡಾವಣೆಯ ಪರ್ಸಂಟೇಜ್‌ಅನ್ನು ದೊಡ್ಡ ಮಟ್ಟದಲ್ಲಿ ಏರಿಸಿದೆ. 2014ಕ್ಕೂ ಮುನ್ನ ಈ ಪ್ರಮಾಣ 1.2 ಆಗಿದ್ದರೆ, 2014ರ ಬಳಿಕ ಇದು 5.7ಗೆ ಏರಿಕೆಯಾಗಿದೆ. ' ಭವಿಷ್ಯದ ಬಾಹ್ಯಾಕಾಶ ಸಂಶೋಧಕರಿಗೂ ಸರ್ಕಾರ ಪ್ರೇರಣೆ ತುಂಬಿದೆ. 2014ಕ್ಕೂ ಮುನ್ನ ವಿದ್ಯಾರ್ಥಿಗಳು ತಯಾರಿಸಿದ್ದ 4 ಸ್ಯಾಟಲೈಟ್‌ಅನ್ನು ಇಸ್ರೋ ಕಕ್ಷಗೆ ಸೇರಿಸಿದ್ದರೆ, 2014ರ ಬಳಿಕ 11 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಏರಿಸಲಾಗಿದೆ. ' ಚಂದ್ರಯಾನ-2 ಯೋಜನೆಯನ್ನು 2019ರಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಈ ಯೋಜನೆಯ ಆರ್ಬಿಟರ್‌ ಈಗಲೂ ಚಂದ್ರನ ಕುರಿತಾದ ಪ್ರಮುಖ ಮಾಹಿತಿಗಳನ್ನು ಇಸ್ರೋಗೆ ರವಾನಿಸುತ್ತಿದೆ. ' ಭವಿಷ್ಯದ ವಿಜ್ಞಾನಿಗಳನ್ನು ರೂಪಿಸುವ ವಾರ್ಷಿಕ ವಿಶೇಷ ಕಾರ್ಯಕ್ರಮ ಯುವಿಕಾವನ್ನು ಸರ್ಕಾರ ಆಯೋಜನೆ ಮಾಡಿದೆ. 3 ವರ್ಷಗಳಲ್ಲಿ 603 ವಿದ್ಯಾರ್ಥಿಗಳು ಹಾಜರಾಗಿದ್ದು, ತಿರುವನಂತಪುರ, ಜಮ್ಮು ಮತ್ತು ಅಗರ್ತಲಾ ಸಂಸ್ಥೆಗಳಲ್ಲಿ 100% ಉದ್ಯೋಗಾವಕಾಶಗಳು ಸಿಕ್ಕಿವೆ. ' 2022ರ ನವೆಂಬರ್ 25 ರಂದು, ಮೊದಲ ಖಾಸಗಿ ಲಾಂಚ್‌ಪ್ಯಾಡ್ ಮತ್ತು ಮಿಷನ್ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸುವುದರೊಂದಿಗೆ ಇತಿಹಾಸವನ್ನು ನಿರ್ಮಿಸಲಾಯಿತು. ' 750 ವಿದ್ಯಾರ್ಥಿನಿಯರ ಸಹಯೋಗದ ತಂಡ, ಸ್ಪೇಸ್ ಕಿಡ್ಜ್ ಮಾರ್ಗದರ್ಶನದಲ್ಲಿ, ಐತಿಹಾಸಿಕ - D2 ಮೂರು ಉಪಗ್ರಹಗಳನ್ನು ಉಡಾವಣೆ ಮಾಡಲು ಕಾರಣವಾಯಿತು. ' ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗಾಗಿ ಸರ್ಕಾರ ಈಗಾಗಲೇ ಕೆಲವೊಂದು ಒಪ್ಪಂದಗಳನ್ನು ಮಾಡಿಕೊಂಡಿದೆ. ನಾಸಾದ ಜೊತೆ ಆರ್ಟೆಮಿಸ್‌ ಒಪ್ಪಂದ, ಇಸ್ರೋ ಹಾಗೂ ನಾಸಾ ಜಂಟಿಯಾಗಿ ತಯಾರಿಸಲಿರುವ ನಿಸ್ಸಾರ್‌ ಸ್ಯಾಟಲೈಟ್‌ನಂಥ ಯೋಜನೆಗಳು ಮುಂದಿವೆ. ' 140 ಸ್ಟಾರ್ಟ್-ಅಪ್‌ಗಳು 2020 ರಿಂದ ಭಾರತದ ಬಾಹ್ಯಾಕಾಶ ಆಕಾಶವನ್ನು ಬೆಳಗಿಸಿದೆ - ಉದ್ಯಮ, ಶೈಕ್ಷಣಿಕ ಮತ್ತು ನಾವೀನ್ಯತೆಗಳ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ, ಬಾಹ್ಯಾಕಾಶ ಪರಿಶೋಧನೆಯ ನಿರೂಪಣೆಯನ್ನು ಪುನಃ ಬರೆದಿದೆ.