ನೋಕಿಯಾ 130 ಮ್ಯೂಸಿಕ್, ನೋಕಿಯಾ 150 ಪ್ರಿಮಿಯಂ ಫೋನ್ ಭಾರತದಲ್ಲಿ ಬಿಡುಗಡೆ! ಸಂಗೀತ ಪ್ರಿಯರಿಗೆ ಮತ್ತು ದೀರ್ಘಾವಧಿಯ ಸಂಪರ್ಕಗಳಿಗಾಗಿ ಫೀಚರ್‌ ಫೋನ್, ವಿಸ್ತೃತ ಕರೆ ಅವಧಿ ಮತ್ತು ಸುದೀರ್ಘ ಬಳಕೆಗೆ 1450 ಎಂಎಎಚ್‌ ಬ್ಯಾಟರಿ ಸೇರಿದಂತೆ ಹಲವು ಫೀಚರ್ಸ್ ಹೊಂದಿರುವ ಹೊಚ್ಚ ಹೊಸ ಫೋನ್ ಬಿಡುಗಡೆಯಾಗಿದೆ. ನವದೆಹಲಿ(ಆ.13)ನೋಕಿಯಾ ಫೋನ್‌ ತಯಾರಿಕಾ ಕಂಪನಿಯಾಗಿರುವ ಎಚ್‌ಎಂಡಿ ಗ್ಲೋಬಲ್, ಭಾರತದ ಮಾರುಕಟ್ಟೆಗೆ ನೋಕಿಯಾ 130 ಮ್ಯೂಸಿಕ್‌ ( 130 ) ಮೊಬೈಲ್‌ ಬಿಡುಗಡೆ ಮಾಡಿದೆ. ಇದು ಸಂಗೀತ ಪ್ರಿಯರಿಗಾಗಿಯೇ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾದ ಫೀಚರ್ ಫೋನ್. ದೀರ್ಘಾವಧಿ ಬ್ಯಾಟರಿ ಬಾಳಿಕೆ ಮತ್ತು ಯೂಸರ್ ಫ್ರೆಂಡ್ಲಿ ಸೇರಿದಂತೆ ಹೆಚ್ಚಿನ ಫೀಚರ್ಸ್ ಈ ಫೋನ್‌ ಒಳಗೊಂಡಿದೆ. ಈ ಫೋನ್ ದಿನವಿಡೀ ಮನರಂಜನೆ ನೀಡಲಿದೆ. ನೋಕಿಯಾ 130 ಮ್ಯೂಸಿಕ್‌– ಭಾರತದಲ್ಲಿ ಮೂರು ಸೊಗಸಾದ ಬಣ್ಣಗಳಾದ ಡಾರ್ಕ್ ಬ್ಲ್ಯೂ, ಪರ್ಪಲ್ ಮತ್ತು ಲೈಟ್ ಗೋಲ್ಡ್‌ನಲ್ಲಿ ಲಭ್ಯವಿದೆ. ಡಾರ್ಕ್‌ ಬ್ಲ್ಯೂ ಮತ್ತು ಪರ್ಪಲ್‌ ಬಣ್ಣದ ಮೊಬೈಲ್‌ ₹ 1,849ರೂಪಾಯಿಗೆ ಲಭ್ಯವಿದೆ. ಇನ್ನು ಲೈಟ್‌ ಗೋಲ್ಡ್‌ ಬಣ್ಣದ ಮೊಬೈಲ್‌ 1,949 ರೂಪಾಯಿಗೆ ದೊರೆಯಲಿದೆ. ನೋಕಿಯಾ 130 ಸಂಗೀತ ಆಸಕ್ತರಿಗೆ ಈ ವೈಶಿಷ್ಟ್ಯಗಳಿಂದ ಸಮೃದ್ಧವಾಗಿರುವ ಈ ಮೊಬೈಲ್ ಫೋನ್, ಪ್ರಾಯೋಗಿಕತೆ ಮತ್ತು ಮನರಂಜನೆಯ ನಡುವೆ ಪರಿಪೂರ್ಣ ಸಮತೋಲನ ಒದಗಿಸಲಿದೆ. ಇದು ವಿಶ್ವಾಸಾರ್ಹ ಮತ್ತು ಕೈಗೆಟುಕುವ ಸಂವಹನ ಸಾಧನ ಬಯಸುವವರಿಗೆ ಸೂಕ್ತವಾದ ಆಯ್ಕೆಯಾಗಿದೆ. ಶಕ್ತಿಯುತ ಧ್ವನಿವರ್ಧಕ ಮತ್ತು ಎಂಪಿ3 ಪ್ಲೇಯರ್‌ನೊಂದಿಗೆ, ನೋಕಿಯಾ 130 ಮ್ಯೂಸಿಕ್‌, ನಿಮ್ಮ ಮೆಚ್ಚಿನ ರಾಗಗಳನ್ನು ಯಾವುದೇ ಸಮಯದಲ್ಲಿ ಮತ್ತು ಎಲ್ಲಿಯಾದರೂ ಆನಂದಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ. ಮೈಕ್ರೊಎಸ್‌ಡಿ ಕಾರ್ಡ್ ನೀವು ಇಷ್ಟಪಡುವ ಎಲ್ಲಾ ಬಗೆಯ ಸಂಗೀತ ಸಂಗ್ರಹಿಸಲು ನಿಮಗೆ ಅವಕಾಶ ನೀಡುತ್ತದೆ. ಜೊತೆಗೆ ಎಫ್‌ಎಂ ರೇಡಿಯೊ ವಯರ್ಡ್‌ ಮತ್ತು ವೈರ್‌ಲೆಸ್ ಮೋಡ್‌ಗಳನ್ನು ನೀಡುತ್ತದೆ. ನಿಮ್ಮ ಆದ್ಯತೆಗಳಿಗೆ ಸರಿಹೊಂದುವಂತಹ ಅಗಣಿತ ಸಂಗೀತ ಆಯ್ಕೆಗಳನ್ನು ಒದಗಿಸುತ್ತದೆ. 50MP ಡ್ಯುಯೆಲ್ ಕ್ಯಾಮೆರ, ಬಂಪರ್ ಆಫರ್; ನೋಕಿಯಾ ಸಿ32 ಸ್ಮಾರ್ಟ್‌ಫೋನ್ ಬಿಡುಗಡೆ! ನೋಕಿಯಾ 130 ಮ್ಯೂಸಿಕ್‌–ನ ದೊಡ್ಡ 2.4 ಇಂಚಿನ ಡಿಸ್‌ಪ್ಲೇ ಮತ್ತು ಸ್ಪರ್ಶಿಸಬಹುದಾದ ಕೀ ಮ್ಯಾಟ್‌ ನೆರವಿನಿಂದ ಸಂಚಾರ ಮಾರ್ಗದರ್ಶನ ಪಡೆಯುವುದು ಮತ್ತು ಪಠ್ಯ ಸಂದೇಶ ಕಳುಹಿಸುವುದು ಸರಳ ಮತ್ತು ವೇಗವಾಗಿರಲಿದೆ. ಸಮತೋಲಿತ ವಿನ್ಯಾಸ ಮತ್ತು ಬಳಸಲು ಸುಲಭವಾದ ಸಂಪರ್ಕಜಾಲ (ಯುಐ)ನಿಮ್ಮ ಒಟ್ಟಾರೆ ಮೊಬೈಲ್ ಬಳಕೆ ಅನುಭವವನ್ನು ಹೆಚ್ಚಿಸುತ್ತದೆ. ಫೋನ್‌ ಬಳಕೆಯು ತಂಗಾಳಿಯ ಅನುಭವ ಹಾಗೂ ಬಳಕೆದಾರ ಸ್ನೇಹಿ ಅನುಭವ ನೀಡುವ ರೀತಿಯಲ್ಲಿ ಇದನ್ನು ತಯಾರಿಸಲಾಗಿದೆ. ಈ ಫೋನ್ ಡ್ಯುಯಲ್-ಬ್ಯಾಂಡ್ ಜಿಎಸ್‌ಎಂ 900/1800 ಸಂಪರ್ಕ ಜಾಲಗಳನ್ನು ಸಹ ಹೊಂದಿದೆ. ಕರೆಗಳು ಮತ್ತು ಪಠ್ಯ ಸಂದೇಶಗಳಿಗೆ ವಿಶ್ವಾಸಾರ್ಹ ಸಂಪರ್ಕವನ್ನು ಖಚಿತಪಡಿಸುತ್ತದೆ. ಅರ್ಥಪೂರ್ಣ ಸಂಪರ್ಕ ಜಾಲದ ನೆರವಿನಿಂದ ಬಳಕೆದಾರರಿಗೆ ಸುಗಮ ಅನುಭವ ನೀಡುತ್ತದೆ. ಇದು 32ಜಿಬಿವರೆಗಿನ ಎಸ್‌ಡಿ ಕಾರ್ಡ್ ಬೆಂಬಲಿಸುತ್ತದೆ. ಬಹುಮಾಧ್ಯಮ ಮತ್ತು ದತ್ತಾಂಶ ಸಂಗ್ರಹಿಸಲು ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ. ನೋಕಿಯಾ 130 ಮ್ಯೂಸಿಕ್– ಫಾರ್ಮ್ ಫ್ಯಾಕ್ಟರ್ ಕಾಂಪ್ಯಾಕ್ಟ್ ಮತ್ತು ಪ್ರಾಯೋಗಿಕವಾಗಿದೆ. ಇದು ಸ್ಪಷ್ಟವಾದ ದೃಶ್ಯಗಳನ್ನು ನೀಡುವ 2.4-ಇಂಚಿನ ಕ್ಯುವಿಜಿಎ ಡಿಸ್‌ಪ್ಲೇ ಒಳಗೊಂಡಿದೆ. ಅಡೆತಡೆರಹಿತ ಸಂಪರ್ಕಕ್ಕಾಗಿ, ಈ ಮೊಬೈಲ್‌ ಮೈಕ್ರೊ ಯುಎಸ್‌ಬಿ (ಯುಎಸ್‌ಬಿ 1.1) ಪೋರ್ಟ್ ಮತ್ತು ಪ್ರಮಾಣಿತ 3.5ಎಂಎಂ ಆಡಿಯೊ ಹೆಡ್‌ಫೋನ್ ಜ್ಯಾಕ್ ಮತ್ತು ವೈಯರ್ಡ್‌ ಹೆಡ್‌ಫೋನ್‌ನೊಂದಿಗೆ ಸುಸಜ್ಜಿತವಾಗಿದೆ. ನವೀಕರಿಸಿದ ಬ್ಯಾಟರಿಯೊಂದಿಗೆ ಹೆಚ್ಚು ಕಾಲ ಮಾತನಾಡಿ: ನೋಕಿಯಾ 130 ಮ್ಯೂಸಿಕ್‌ – ಮೇಲ್ಜರ್ಜೆಗೆ ಏರಿಸಿದ 1450 ಎಂಎಎಚ್‌ ಬ್ಯಾಟರಿ ಹೊಂದಿದ್ದು, ಗಂಟೆಗಳವರೆಗೆ ಮಾತನಾಡುವ ಅವಧಿ ಮತ್ತು ಗಮನಾರ್ಹವಾದ 34 ದಿನಗಳವರೆಗೆ ಚಾಲು ಸ್ಥಿತಿಯಲ್ಲಿ ಇರಲು ಅವಕಾಶ ನೀಡುತ್ತದೆ. ಮೇಲಿಂದ ಮೇಲೆ ಮೊಬೈಲ್‌ ಚಾರ್ಜಿಂಗ್‌ ಮಾಡುವುದಕ್ಕೆ ವಿದಾಯ ಹೇಳಿ ಮತ್ತು ನಿಮ್ಮ ಪ್ರೀತಿಪಾತ್ರರ ಜೊತೆಗೆ ಅಡೆತಡೆಯಿಲ್ಲದ ಸಂಭಾಷಣೆಗಳನ್ನು ಆನಂದಿಸಿ. ನೋಕಿಯಾ 130 ಮ್ಯೂಸಿಕ್‌– 2000ದವರೆಗೆ ಸಂಪರ್ಕಗಳು ಮತ್ತು 500 ಎಸ್‌ಎಂಎಸ್‌ಗಳಿಗಾಗಿ ಸಾಕಷ್ಟು ಸಂಗ್ರಹ ಸಾಮರ್ಥ್ಯ ಒಳಗೊಂಡಿದೆ. ಇದು ನಿಮ್ಮ ಪ್ರಮುಖ ಸಂಪರ್ಕಗಳು ಮತ್ತು ಸಂದೇಶಗಳಿಗೆ ನಿರಂತರ ಚಾರ್ಜಿಂಗ್ ಮತ್ತು ಸಂಗ್ರಹಣೆ ಮಿತಿಗಳ ತೊಂದರೆಯನ್ನು ನಿವಾರಿಸುತ್ತದೆ. ಮನರಂಜನೆಗಾಗಿ ಮೊದಲೇ ಸೇರ್ಪಡೆ ಮಾಡಲಾದ ವಿಷಯ ಮತ್ತು ವೈಯರ್ಡ್‌ ಮತ್ತು ವೈರ್‌ಲೆಸ್ ಎಫ್‌ಎಂ ರೇಡಿಯೊ ನಡುವೆ ಆಯ್ಕೆ ಮಾಡುವ ಅವಕಾಶದ ನೆರವಿನಿಂದ ನೀವು ಮಾಡಬೇಕಾದ ಕೆಲಸಗಳು ಎಂದಿಗೂ ಮುಗಿಯುವುದಿಲ್ಲ. ಹೆಚ್ಚುವರಿಯಾಗಿ, ಮೈಕ್ರೊಎಸ್‌ಡಿ ಕಾರ್ಡ್ ಬೆಂಬಲ ಮತ್ತು ಎಂಪಿ3 ಪ್ಲೇಯರ್ ನಿಮ್ಮ ಎಲ್ಲಾ ಮೆಚ್ಚಿನ ಹಾಡುಗಳನ್ನು ಸಂಗ್ರಹಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಪಾವತಿ ಫೀಚರ್, ನೋಕಿಯಾ 105,105 4ಜಿ ಫೋನ್ ಬಿಡುಗಡೆ, ಬೆಲೆ 1,299 ರೂ ಮಾತ್ರ! ನೋಕಿಯಾ 130: ಮ್ಯೂಸಿಕ್‌ನ ನಯವಾದ ವಿನ್ಯಾಸ ಮತ್ತು ದೃಢವಾದ ನಿರ್ಮಾಣವು ಅತ್ಯುತ್ತಮವಾಗಿ ಕಾಣುವುದಲ್ಲದೆ ದೈನಂದಿನ ಬಳಕೆಯ ಸವೆತ ಮತ್ತು ಹಾನಿಯನ್ನು ಸಹ ತಡೆದುಕೊಳ್ಳುತ್ತದೆ. ಫೋನ್‌ನ ಪರಿಪೂರ್ಣ ಸಮತೋಲನವು ಸುಲಭವಾದ ಹಿಡಿತವನ್ನು ಖಾತ್ರಿಗೊಳಿಸುತ್ತದೆ. ದೀರ್ಘಾವಧಿಯವರೆಗೆ ಬಳಸಲು ಇದು ಆರಾಮದಾಯಕವಾಗಿದೆ. ನೋಕಿಯಾ 130 ಮ್ಯೂಸಿಕ್‌– ಮೂರು ಆಕರ್ಷಕ ಬಣ್ಣಗಳಾದ - ಡಾರ್ಕ್ ಬ್ಲ್ಯೂ, ಪರ್ಪಲ್ ಮತ್ತು ಲೈಟ್ ಗೋಲ್ಡ್‌ಗಳಲ್ಲಿ ಲಭ್ಯ ಇರಲಿದೆ. ಈ ಮೂರು ಬಣ್ಣಗಳು ನಿಮ್ಮ ಶೈಲಿ ಮತ್ತು ವ್ಯಕ್ತಿತ್ವ ತೋರ್ಪಡಿಸಲು ನಿಮಗೆ ಅನುವು ಮಾಡಿಕೊಡುತ್ತವೆ. ನೋಕಿಯಾ 130: ಮ್ಯೂಸಿಕ್‌–ನ ಹೆಮ್ಮೆಯ ವಿನ್ಯಾಸವನ್ನು ಫಿನ್‌ಲ್ಯಾಂಡ್‌ನಲ್ಲಿ ಮಾಡಲಾಗಿದೆ. ಇದು ಅತ್ಯಂತ ಒತ್ತಡದ ದಿನಗಳನ್ನು ತಡೆದುಕೊಳ್ಳುತ್ತದೆ ಮತ್ತು ಅಸಾಧಾರಣ ಕಾರ್ಯಕ್ಷಮತೆಯನ್ನು ನೀಡಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ಪ್ರತಿ ನೋಕಿಯಾ ಫೋನ್ ಕಠಿಣ ಬಾಳಿಕೆ ಪರೀಕ್ಷೆಗಳ ಮೂಲಕ ಹಾದು ಹೋಗುತ್ತದೆ. ನೋಕಿಯಾ 150; ಮಾರುಕಟ್ಟೆಗೆ ಸಂಪೂರ್ಣ ಹೊಸದಾದ ನೋಕಿಯಾ 150 ಪರಿಚಯಿಸಲಾಗುತ್ತಿದೆ. ಇದೊಂದು ಪ್ರೀಮಿಯಂ ವೈಶಿಷ್ಟ್ಯದ ಫೋನ್ ಆಗಿದೆ. ಸೊಗಸಾದ ವಿನ್ಯಾಸವನ್ನು ಒರಟಾದ ಬಾಳಿಕೆಯೊಂದಿಗೆ ಸಂಯೋಜಿಸುತ್ತದೆ. ನಿಮ್ಮ ಮೊಬೈಲ್ ಬಳಕೆ ಅನುಭವದಲ್ಲಿ ಭಾರಿ ಬದಲಾವಣೆ ತರಲಿದೆ. ಇದರ ಆಕರ್ಷಕ ಸೊಗಸಾದ ಬಾಹ್ಯ ನೋಟ ಮತ್ತು ದೃಢವಾದ ಅತ್ಯಂತ ಸೂಕ್ಷ್ಮ ವಿನ್ಯಾಸವು ಅತ್ಯಾಧುನಿಕತೆಯನ್ನು ಸಂಯೋಜಿಸುತ್ತದೆ. ದೈನಂದಿನ ಒರಟಾದ ಬಳಕೆಯನ್ನು ಇದು ತಡೆದುಕೊಳ್ಳುತ್ತದೆ. ಮೆಟ್ಯಾಲಿಕ್‌ ನವಿ ಕೀ ಏರಿಯಾ ಮತ್ತು ಅಂತರ್ಗತ ಬಣ್ಣಗಳೊಂದಿಗೆ ಪಾಲಿಕಾರ್ಬೊನೇಟ್‌ನಿಂದ ನಿರ್ಮಿಸಿರುವ ನೋಕಿಯಾ 150 ಕೇವಲ ನೋಟಕ್ಕೆ ಇಷ್ಟವಾಗುವುದರ ಜೊತೆಗೆ ಹೆಚ್ಚು ಬಾಳಿಕೆಯೂ ಬರುವಂತಹದ್ದಾಗಿದೆ. ಇದು ಐಪಿ52 ದೂಳು ಮತ್ತು ಸ್ಪ್ಲಾಶ್-ಪ್ರೂಫ್ ರೇಟಿಂಗ್‌ನಿಂದ ಬೆಂಬಲಿತವಾಗಿದೆ. ನವೀಕರಿಸಿದ 1450 ಬ್ಯಾಟರಿಯೊಂದಿಗೆ, ನೀವು 20 ಗಂಟೆಗಳ ಕರೆ ಅವಧಿ ಮತ್ತು ಪ್ರಭಾವಶಾಲಿ 34 ದಿನಗಳವರೆಗೆ ಕಾರ್ಯನಿರ್ವಹಿಸುವ ಸೌಲಭ್ಯ ಆನಂದಿಸಬಹುದು. ಫ್ಲ್ಯಾಷ್ ಮತ್ತು ವಿಶಾಲವಾದ 2.4 ಇಂಚಿನ ಡಿಸ್‌ಪ್ಲೇ ಒಳಗೊಂಡಿರುವ ವಿಜಿಎ ಹಿಂಬದಿಯ ಕ್ಯಾಮೆರಾದೊಂದಿಗೆ ನೆನಪಿಡಬಹುದಾದ ಕ್ಷಣಗಳನ್ನು ಸೆರೆಹಿಡಿಯಬಹುದು. ಶಕ್ತಿಯುತ ಧ್ವನಿವರ್ಧಕ ಮತ್ತು ಎಂಪಿ3 ಪ್ಲೇಯರ್ 30 ಗಂಟೆಗಳವರೆಗೆ ಸಂಗೀತ ಪ್ಲೇಬ್ಯಾಕ್ ಅನ್ನು ಖಚಿತಪಡಿಸುತ್ತದೆ. ವಿಸ್ತಾರವಾದ 2.4 ಇಂಚಿನ ಡಿಸ್‌ಪ್ಲೇನಲ್ಲಿ ಬಳಕೆದಾರರ ಅಂತರ ಸಂಪರ್ಕ ಸಾಧನವನ್ನು ಬಳಸುವುದು ವಿಶಿಷ್ಟ ಅನುಭವ ನೀಡಲಿದೆ. ಆರಾಮದಾಯಕ ಟೈಪ್‌ ಮಾಡಲು ಸ್ಪರ್ಶ ಕೀ ಮ್ಯಾಟ್‌ ನೆರವಾಗಲಿದೆ.