ಚಾಟಿಂಗ್ ರಹಸ್ಯವಾಗಿಡಲು ವಾಟ್ಸ್‌ಆ್ಯಟ್‌ನಲ್ಲಿ ಬಂದಿದೆ ಚಾಟ್‌ ಲಾಕ್‌ ಫೀಚರ್‌: ಬಳಕೆ ಮಾಡುವುದು ಹೀಗೆ.. ಫಿಂಗರ್‌ಪ್ರಿಂಟ್‌ ಅಥವಾ ಪಾಸ್‌ವರ್ಡ್‌ ಬಳಸಿಕೊಂಡು ಈ ಚಾಟ್‌ ಲಾಕ್‌ ಓಪನ್‌ ಮತ್ತು ಲಾಕ್‌ ಮಾಡಬಹುದು. ಇದರಿಂದ ಬಳಕೆದಾರರಿಗೆ ತಮ್ಮ ಮಾಹಿತಿಯನ್ನು ಇನ್ನಷ್ಟು ರಹಸ್ಯವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ. ನವದೆಹಲಿ (ಮೇ 16, 2023):ಪರಸ್ಪರ ರವಾನಿಸಿದ ಸಂದೇಶಗಳನ್ನು ಯಾರ ಕಣ್ಣಿಗೂ ಬೀಳದಂತೆ ರಹಸ್ಯವಾಗಿ ಕಾಪಾಡುವ ಹೊಸ ಫೀಚರ್‌ ಒಂದನ್ನು ವಾಟ್ಸಪ್‌ ಅನಾವರಣಗೊಳಿಸಿದೆ. ಹೀಗಾಗಿ ಒಂದು ವೇಳೆ ಮೊಬೈಲ್‌ನಲ್ಲಿ ವಾಟ್ಸಪ್‌ ಆ್ಯಪ್‌ ಅನ್ನು ಯಾರೇ ವೀಕ್ಷಿಸಿದರೂ, ಚಾಟ್‌ ಲಾಕ್‌ ಆಗಿರುವ ಸಂದೇಶಗಳನ್ನು ಯಾರೂ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಈ ಫೀಚರ್‌ ಆಯ್ಕೆ ಮಾಡಿಕೊಂಡರೆ ಸಂದೇಶ ಬಂದಾಗ ನೋಟಿಫಿಕೇಷನ್‌ನಲ್ಲೂ ಅದು ಕಾಣದು. ಏನಿದು ಚಾಟ್‌ ಲಾಕ್‌?ಇದು ವಾಟ್ಸಪ್‌ನ () ಮಾತೃ ಸಂಸ್ಥೆ ಮೆಟಾ () ಬಿಡುಗಡೆ ಮಾಡಿರುವ ಹೊಸ ಫೀಚರ್‌ (). ಈ ಆಪ್ಷನ್‌ ಅನ್ನು ಬಳಸಿಕೊಂಡರೆ ನಾವು ಇನ್ಯಾವುದೇ ವಾಟ್ಸಪ್‌ ಬಳಕೆದಾರರೊಂದಿಗೆ ನಡೆಸಿದ ಚಾಟ್‌ () ಸಂಪೂರ್ಣ ರಹಸ್ಯವಾಗಿರುತ್ತದೆ (). ಹೀಗೆ ವಿನಿಮಯ ಮಾಡಿಕೊಂಡ ಸಂದೇಶಗಳು () ಬೇರೊಂದು ಫೋಲ್ಡರ್‌ನಲ್ಲಿ () ಸಂಗ್ರಹವಾಗುವ ಕಾರಣ ಅದು ಯಾರಿಗೂ ಕಾಣಿಸದು. ಫಿಂಗರ್‌ಪ್ರಿಂಟ್‌ ಅಥವಾ ಪಾಸ್‌ವರ್ಡ್‌ ಬಳಸಿಕೊಂಡು ಈ ಚಾಟ್‌ ಲಾಕ್‌ ( ) ಓಪನ್‌ ಮತ್ತು ಲಾಕ್‌ ಮಾಡಬಹುದು. ಇದರಿಂದ ಬಳಕೆದಾರರಿಗೆ ತಮ್ಮ ಮಾಹಿತಿಯನ್ನು ಇನ್ನಷ್ಟು ರಹಸ್ಯವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ. ಇದನ್ನು ಓದಿ:ವಾಟ್ಸಾಪ್‌ನಿಂದ ಹೊಸ ಫೀಚರ್‌ ರಿಲೀಸ್‌: ಇನ್ಮುಂದೆ ಒಂದೇ ವಾಟ್ಸಾಪ್‌ ಖಾತೆ ಮೂಲಕ 4 ಫೋನ್‌ಗಳಲ್ಲಿ ಬಳಕೆ! ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಆಂಡ್ರಾಯ್ಡ್ 2.23.8.2 ಅಪ್‌ಡೇಟ್‌ಗಾಗಿ ಕಳೆದ ತಿಂಗಳ ವಾಟ್ಸ್‌ಆ್ಯಪ್ ಬೀಟಾದಲ್ಲಿ ಈ ವೈಶಿಷ್ಟ್ಯವನ್ನು ಗುರುತಿಸಲಾಗಿತ್ತು. ಭವಿಷ್ಯದ ಅಪ್‌ಡೇಟ್‌ನಲ್ಲಿ ಇದನ್ನು ಎಲ್ಲಾ ಬಳಕೆದಾರರಿಗೆ ಹೊರತರಲಾಗುವುದು ಎಂದು ಏಪ್ರಿಲ್‌ನಲ್ಲಿ ವರದಿ ಮಾಡಿತ್ತು. ವಾಟ್ಸ್‌ಆ್ಯಪ್ ಡೆವಲಪರ್‌ಗಳು ಈ ಹೊಸ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದೂ ತಿಳಿದುಬಂದಿತ್ತು. ಅದು ಬಳಕೆದಾರರಿಗೆ ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್‌ಗಳನ್ನು ಬಳಸಿಕೊಂಡು ವೈಯಕ್ತಿಕ ಚಾಟ್‌ಗಳನ್ನು ಲಾಕ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು ತಿಳಿದುಬಂದಿದೆ. ಈ ಲಾಕ್ ಆಗಿರುವ ಚಾಟ್‌ಗಳನ್ನು ಪ್ರತ್ಯೇಕ ವಿಭಾಗದಲ್ಲಿ ವೀಕ್ಷಿಸಲು ಬಳಕೆದಾರರಿಗೆ ಸಾಧ್ಯವಾಗುವಂತೆ ತೋರುತ್ತಿದೆ ಎಂದು ತಿಳಿದುಬಂದಿದೆ. ಇದು ಪಾಸ್‌ಕೋಡ್‌ಇಲ್ಲದ ಯಾರಿಗಾದರೂ ಈ ಚಾಟ್‌ಗಳನ್ನು ವೀಕ್ಷಿಸಲು ಅಸಾಧ್ಯವಾಗಬಹುದು ಎಂದೂ ವರದಿಯಾಗಿತ್ತು. ಇದನ್ನೂ ಓದಿ:ಇನ್ಮುಂದೆ ನಿಮ್ಮ ವಾಟ್ಸ್‌ಆ್ಯಪ್ ಬೇರೆಯವ್ರು ಕದ್ದು ನೋಡೋಕಾಗಲ್ಲ: ಶೀಘ್ರದಲ್ಲೇ ಚಾಟ್‌ ಲಾಕ್‌ ಸೌಲಭ್ಯ ಚಾಟ್‌ ಲಾಕ್‌ ಹೇಗೆ? ಚಾಟ್‌ ಲಾಕ್‌ ಅನ್‌ಲಾಕ್‌ ಹೇಗೆ? ಇದನ್ನೂ ಓದಿ:WhatsAppನಲ್ಲಿಇನ್ಮುಂದೆ ಸಿಕ್ಕ ಸಿಕ್ಕ ಸ್ಟೇಟಸ್‌ ಅಪ್ಡೇಟ್‌ ಮಾಡೋ ಹಾಗಿಲ್ಲ..!