ಮಲಗಿದ್ದಾಗಲೂ ವಾಟ್ಸಪ್‌ನಿಂದ ಮೈಕ್ರೋಫೋನ್‌ ದುರ್ಬಳಕೆ: ಟ್ವೀಟರ್‌ ಸಿಬ್ಬಂದಿ ಫೋದ್‌ ದಬಿರಿ ಗಂಭೀರ ಆರೋಪ ರಾತ್ರಿ ನಾನು ಮಲಗಿದ್ದ ಹೊತ್ತಿನಲ್ಲೂ ವಾಟ್ಸಪ್‌ ನನ್ನ ಮೊಬೈಲ್‌ನ ಮೈಕ್ರೋಫೋನ್‌ ಅನ್ನು ತೆರೆಮರೆಯಲ್ಲೇ ಬಳಸುತ್ತಿದೆ ಎಂದು ಟ್ವೀಟರ್‌ ಸಂಸ್ಥೆಯ ಸಿಬ್ಬಂದಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ನವದೆಹಲಿ: ರಾತ್ರಿ ನಾನು ಮಲಗಿದ್ದ ಹೊತ್ತಿನಲ್ಲೂ ವಾಟ್ಸಪ್‌ ನನ್ನ ಮೊಬೈಲ್‌ನ ಮೈಕ್ರೋಫೋನ್‌ ಅನ್ನು ತೆರೆಮರೆಯಲ್ಲೇ ಬಳಸುತ್ತಿದೆ ಎಂದು ಟ್ವೀಟರ್‌ ಸಂಸ್ಥೆಯ ಸಿಬ್ಬಂದಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ( ), ಖಾಸಗಿತನ ಉಲ್ಲಂಘನೆಯ ( ) ಈ ಆರೋಪವನ್ನು ಸರ್ಕಾರ ಪರಿಶೀಲಿಸಲಿದೆ ಎಂದು ಭರವಸೆ ನೀಡಿದ್ದಾರೆ. ಮತ್ತೊಂದೆಡೆ ವಾಟ್ಸಪ್‌ () ಕೂಡಾ ಆರೋಪ ಮಾಡಿದ ವ್ಯಕ್ತಿ ಜೊತೆ ತಾನು ಸಂಪರ್ಕದಲ್ಲಿದ್ದು, ಸಮಸ್ಯೆ ಮೂಲವನ್ನು ಪತ್ತೆಹಚ್ಚುವ ಯತ್ನದಲ್ಲಿರುವುದಾಗಿ ಭರವಸೆ ನೀಡಿದೆ. ಅಮೆರಿಕದಲ್ಲಿ () ಟ್ವೀಟರ್‌ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಫೋದ್‌ ದಬಿರಿ ( )ಶನಿವಾರ ಟ್ವೀಟ್‌ ಮಾಡಿದ್ದು ಅದರಲ್ಲಿ ‘ನಾನು ರಾತ್ರಿ ಮಲಗಿದ್ದ ಹೊತ್ತಿನಿಂದ ಬೆಳಗ್ಗೆ 6 ಗಂಟೆಗೆ ಏಳುವವರೆಗೂ ವಾಟ್ಸಪ್‌ ನನ್ನ ಮೈಕ್ರೋಫೋನ್‌ () ಅನ್ನು ಬ್ಯಾಕ್‌ಗ್ರೌಂಡ್‌ನಲ್ಲಿ ಬಳಸಿಕೊಂಡಿದೆ. ಇಲ್ಲಿ ಏನಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ. ಈ ಟ್ವೀಟ್‌ 6.5 ಕೋಟಿ ವೀಕ್ಷಣೆ ಕಂಡಿದೆ. ಇಂಥ ಯತ್ನಗಳು ಭಾರತದಲ್ಲೂ ನಡೆದಿರಬಹುದು ಎಂದು ಕೆಲವರು ಶಂಕಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ರಾಜೀವ್‌ ಚಂದ್ರಶೇಖರ್‌, ‘ಇದು ಖಾಸಗಿತನದ ಉಲ್ಲಂಘನೆ. ಇದನ್ನು ಒಪ್ಪಲಾಗದು. ನಾವು ತಕ್ಷಣವೇ ಇದನ್ನು ಪರಿಶೀಲಿಸಲಿದ್ದೇವೆ ಮತ್ತು ಒಂದು ವೇಳೆ ಉಲ್ಲಂಘನೆಯಾಗಿದ್ದಲ್ಲಿ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಭರವಸೆ ನೀಡಿದ್ದಾರೆ. ಅಪರಿಚಿತ ಅಂತಾರಾಷ್ಟ್ರೀಯ ಕರೆ ಹಾವಳಿ: ನಂಬರ್‌ ಬ್ಲಾಕ್‌ಗೆ ವಾಟ್ಸಾಪ್‌ ಸೂಚನೆ ಕ್ರಮ- ವಾಟ್ಸಾಪ್‌: ಮತ್ತೊಂದೆಡೆ ವಾಟ್ಸಪ್‌ ಸಂಸ್ಥೆ ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆರೋಪ ಮಾಡಿದ ವ್ಯಕ್ತಿಯೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಮೇಲ್ನೋಟಕ್ಕೆ ಇದು ಆ್ಯಂಡ್ರಾಯ್ಡ್‌ ಫೋನ್‌ನಲ್ಲಿ ಬಗ್‌ ಇದ್ದಂತಿದೆ. ಈ ಕುರಿತು ನಾವು ಗೂಗಲ್‌ಗೆ ತನಿಖೆ ನಡೆಸಿ ಅದನ್ನು ಸರಿಪಡಿಸುವಂತೆ ಸೂಚಿಸಿದ್ದೇವೆ ಎಂದಿದೆ. ಅಲ್ಲದೆ ಬಳಕೆದಾರರಿಗೆ ಮೈಕ್ರೋಫೋನ್‌ ಮೇಲೆ ಪೂರ್ಣ ನಿಯಂತ್ರಣವಿದೆ ಎಂದು ಸ್ಪಷ್ಟಪಡಿಸಿದೆ. ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಮತ್ತೊಂದು ಫೀಚರ್, ಮೆಸೇಜ್ ಎಡಿಟ್‌ಗೆ ಅವಕಾಶ!