ಬಳಕೆದಾರರ ಭದ್ರತೆಗೆ 3 ಹೊಸ ಫೀಚರ್‌ ಬಿಡುಗಡೆ ಮಾಡಿದ ವಾಟ್ಸಾಪ್‌ ವಾಟ್ಸಾಪ್‌ ಬಳಕೆದಾರರ ಸುರಕ್ಷತೆಗೆ ಕಂಪನಿ 3 ಹೊಸ ಫೀಚರ್‌ ಬಿಡುಗಡೆ ಮಾಡಿದೆ. ಇದು ಮೊಬೈಲ್‌ ಸಾಮಾಜಿಕ ತಾಣವನ್ನು ಮತ್ತಷ್ಟು ಸುರಕ್ಷಿತ ಮಾಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ನವದೆಹಲಿ: ವಾಟ್ಸಾಪ್‌ ಬಳಕೆದಾರರ ಸುರಕ್ಷತೆಗೆ ಕಂಪನಿ 3 ಹೊಸ ಫೀಚರ್‌ ಬಿಡುಗಡೆ ಮಾಡಿದೆ. ಇದು ಮೊಬೈಲ್‌ ಸಾಮಾಜಿಕ ತಾಣವನ್ನು ಮತ್ತಷ್ಟು ಸುರಕ್ಷಿತ ಮಾಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಕೌಂಟ್‌ ರಕ್ಷಣೆಗೆ ಈ ಕ್ರಮ: ಇನ್ನು ಹೊಸ ಡಿವೈಸ್‌ನಲ್ಲಿ ವಾಟ್ಸಾಪ್‌ ಇನ್‌ಸ್ಟಾಲ್‌ ಮಾಡುವಾಗ ಹಳೆಯ ಫೋನ್‌ಗೂ ವೆರಿಫಿಕೇಶನ್‌ ಕೋಡ್‌ ರವಾನೆಯಾಗಲಿದೆ. ಬಳಕೆದಾರರು ಇಲ್ಲಿ ಒಪ್ಪಿಗೆ ಸೂಚಿಸಿದ ಬಳಿಕ ಹೊಸ ಡಿವೈಸ್‌ನಲ್ಲಿ ವಾಟ್ಸಾಪ್‌ ಬಳಕೆಗೆ ಲಭ್ಯವಾಗಲಿದೆ. ಡಿವೈಸ್‌ ದೃಢೀಕರಣ: ಇನ್ನೊಂದು ಕ್ರಮದಲ್ಲಿ, ಹಳೆಯ ಡಿವೈಸ್‌ನ ಮಾಲ್ವೇರ್‌ ಬಳಸಿ ಆಗಬಹುದಾದ ವಾಟ್ಸಾಪ್‌ ದುರ್ಬಳಕೆ ತಪ್ಪಿಸಲು ಡಿವೈಸ್‌ ವೆರಿಫಿಕೇಶನ್‌ ಫೀಚರ್‌ ತರಲಾಗಿದೆ. ಮಾಲ್ವೇರ್‌ (ವೈರಸ್‌) ಸೇರಿಸುವ ಮೂಲಕ ಬಳಕೆದಾರರಿಗೆ ತಿಳಿಯದಂತೆ ಫೋಟೋ ಹಂಚುವುದನ್ನು ತಪ್ಪಿಸಬಹುದಾಗಿದೆ. ಸ್ವಯಂಚಾಲಿತ ಭದ್ರತಾ ಕೋಡ್‌: ಇದೇ ವೇಳೆ, ಸ್ವಯಂಚಾಲಿತವಾಗಿ ಸೆಕ್ಯುರಿಟಿ ಕೋಡ್‌ ( ) ಕಳಿಸಿ ಖಾತೆಯು ಸುಭದ್ರ ಆಗಿರುವಂತೆ ನೋಡಿಕೊಳ್ಳುವ ಮತ್ತೊಂದು ಫೀಚರ್‌ ಅನ್ನು ಆರಂಭಿಸಿದೆ. ಇದು ಡಿವೈಸ್‌ ದೃಢೀಕರಣ ರೀತಿಯೇ ಇರುತ್ತದ್ದು, ಬಳಕೆದಾರರು ಹೆಚ್ಚಿನ ಕ್ರಮ ಜರುಗಿಸಬೇಕಿಲ್ಲ. ವಾಟ್ಸಾಪ್‌ ಗ್ರೂಪಲ್ಲಿ ಮತ ಕೇಳಿದ್ರೆ ಅಡ್ಮಿನ್‌ ಮೇಲೆ ಕ್ರಮ: ಚುನಾವಣಾ ಆಯೋಗ