ಭಾರತದಲ್ಲಿ ಜನವರಿ 10ಕ್ಕೆ 11 ಸ್ಮಾರ್ಟ್‌ಫೋನ್ ಲಾಂಚ್, ಫೀಚರ್ಸ್‌ ಏನಿರುತ್ತೆ? *ಐಕ್ಯೂ 11 ಸ್ಮಾರ್ಟ್‌ಫೋನ್ ಚೀನಾ ಮಾರುಕಟ್ಟೆಯಲ್ಲಿ ಈಗಾಗಲೇ ಬಿಡುಗಡೆಯಾಗಿದೆ*ಚೀನಾ ಬೆನ್ನಲ್ಲೇ ಕಂಪನಿಯು ಭಾರತದಲ್ಲೂ ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ*ಐಕ್ಯೂ 11 ಫೋನ್ ಬೆಲೆಯ ಬಗ್ಗೆ ಇನ್ನೂ ಖಚಿತ ಮಾಹಿತಿಯನ್ನು ಕಂಪನಿ ನೀಡಿಲ್ಲ ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ( ) ಮತ್ತೊಂದು ಸ್ಮಾರ್ಟ್ಫೋನ್ ಲಾಂಚ್ ಆಗುವುದು ಖಚಿತವಾಗಿದೆ. ಈಗಾಗಲೇ ತನ್ನದೇ ಆದ ಗ್ರಾಹಕ ವಲಯವನ್ನು ಸೃಷ್ಚಿಸಿಕೊಂಡಿರುವ ಐಕ್ಯೂ() ಕಂಪನಿ ಹೊಸ ಐಕ್ಯೂ 11 ( 11) ಸ್ಮಾರ್ಟ್ಫೋನ್ ಲಾಂಚ್ ಮಾಡಲಿದೆ. 2023ರ ಜನವರಿ 10 ರಂದು ಐಕ್ಯೂ 11 ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ತನ್ನ ಅಧಿಕೃತ ಲಿಂಕ್ ಕಮ್ಯುನಿಟಿ ಸೈಟ್ನಲ್ಲಿ ಘೋಷಣೆ ಮಾಡಿದೆ. ವಿಶೇಷ ಎಂದರೆ, ಈ ಫೋನ್ ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಅಲ್ಲಿ ಲಾಂಚ್ ಆದ ಕೆಲವೇ ಗಂಟೆಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ದಿನಾಂಕವನ್ನು ಕಂಪನಿಯು ಪ್ರಕಟಿಸಿ, ಖಚಿತಪಡಿಸಿದೆ. ಹಾಗಾಗಿ, ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಗ್ರಾಹಕರು ಜನವರಿ 10ರಂದು ಐಕ್ಯೂ ಕಂಪನಿಯ ಐಕ್ಯೂ 11 ಸ್ಮಾರ್ಟ್‌ಫೋನ್ ಅನ್ನು ನಿರೀಕ್ಷಿಸಬಹುದಾಗಿದೆ. ಈಗಿರುವ ಮಾಹಿತಿಯ ಪ್ರಕಾರ ಕಂಪನಿಯು 11 ಸ್ಮಾರ್ಟ್‌ಫೋನ್ ಮಾತ್ರವೇ ಬಿಡುಗಡೆ ಮಾಡುತ್ತಿದೆ. ಆದರೆ, ಐಕ್ಯೂ 11 ಪ್ರೋ ಸ್ಮಾರ್ಟ್‌ ಫೋನ್ ಲಾಂಚ್ ಬಗ್ಗೆ ಕಂಪನಿಯು ಲಿಂಕ್ ಕಮ್ಯುನಿಟಿಯಲ್ಲಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಸ್ಪಷ್ಟವಾಗಿ ಹೇಳಬೇಕೆಂದರೆ, ಕ್ಯಾಮೆರಾಗಳು ಮತ್ತು ಬ್ಯಾಟರಿ ಬಾಳಿಕೆ/ ಚಾರ್ಜಿಂಗ್ ಸಮಯವನ್ನು ಹೊರತುಪಡಿಸಿ 11 ಮತ್ತು 11 ನಡುವೆ ತೀರಾ ಅಂಥ ವ್ಯತ್ಯಾಸಗಳೇನೂ ಇಲ್ಲ. 11 ಸ್ಮಾರ್ಟ್‌ ಫೋನಿನ ಡಿಸ್‌ಪ್ಲೇ ಸಾಕಷ್ಟು ಪ್ರಮಾಣಿತ 2.5D ಆಗಿದ್ದರೆ, 11 ಹೆಚ್ಚುವರಿಯಾಗಿ ಬಾಗಿದ ಸ್ಕ್ರೀನ್ ಅನ್ನು ಹೊಂದಿದೆ ಎಂದು ಹೇಳಬಹುದು. ಇದು 6.78-ಇಂಚಿನ ಡಿಸ್‌ಪ್ಲೇ ಜೊತೆಗೆ 144Hz ರಿಫ್ರೆಶ್ ರೇಟ್ ಮತ್ತು 10+ ಪ್ಲೇಬ್ಯಾಕ್ ಸಾಮರ್ಥ್ಯಗಳನ್ನು ಹೊಂದಿದೆ. ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ ಸಿಪಿಯು ( 8 2 ) ಅನ್ನು 16 ಮತ್ತು 512 ವರೆಗಿನ UFS4.0 ಸ್ಟೋರೇಜ್‌ನೊಂದಿಗೆ ಸಂಯೋಜಿಸಲಾಗಿದೆ.ಭಾರತದಲ್ಲಿ ಡಿಜಿಟಲ್ ಸರ್ಕಾರಿ ಡೈರೆಕ್ಟರಿ ಆರಂಭಿಸಿದ 11 ಸ್ಮಾರ್ಟ್‌ಫೋನ್ 5,000 ಬ್ಯಾಟರಿ ಮತ್ತು 120W ಕ್ಷಿಪ್ರ ವೈರ್ಡ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದ್ದರೆ, 11 ಸ್ಮಾರ್ಟ್‌ ಫೋನ್ 4,700 ಬ್ಯಾಟರಿಯನ್ನು ಹೊಂದಿದೆ ಮತ್ತು 200W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಫೋನ್ 50 ಪ್ರಾಥಮಿಕ ಕ್ಯಾಮೆರಾ ಹೊಂದಿದ್ದರೆ, 13 ಭಾವಚಿತ್ರ ಮತ್ತು 8 ಅಲ್ಟ್ರಾವೈಡ್ ಕ್ಯಾಮೆರಾವನ್ನು ಕಾಣಹುದು. 11 ಮೂರು ಕ್ಯಾಮೆರಾಗಳನ್ನು ಹೊಂದಿದೆ. 50 ಪ್ರಾಥಮಿಕ ಸೋನಿ ಕ್ಯಾಮೆರಾ ಮತ್ತು 50 ಅಲ್ಟ್ರಾವೈಡ್ ಮತ್ತು 13 ಪೋಟ್ರೆಯಟ್ ಕ್ಯಾಮೆರಾಗಳಿವೆ. ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ ಕೂಡ ಇದೆ. ಭಾರತದಲ್ಲಿ 11 ಮಾರಾಟವು ಜನವರಿ 13 ರಿಂದ ಪ್ರಾರಂಭವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಸಾಕಷ್ಟು ವಿಶಾಲವಾಗಿರು ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿಗಳು ಪ್ರಾಬಲ್ಯವನ್ನು ಮೆರೆಯುತ್ತಿವೆ. ಈ ವಿಷಯದಲ್ಲಿ ಐಕ್ಯೂ ಕೂಡ ಹಿಂದೆ ಬಿದ್ದಿಲ್ಲ. ಪ್ರೀಮಿಯಂ ಮತ್ತು ಬಜೆಟ್ ಫೋನ್‌ಗಳನ್ನು ಲಾಂಚ್ ಮಾಡುವ ಮೂಲಕ ಇಲ್ಲಿನ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತಿದೆ. ಈಗ ಬಿಡುಗಡೆಯಾಗಲಿರುವ ಫೋನ್ ಸಾಕಷ್ಟು ವಿಶೇಷತೆಗಳನ್ನು ಹೊಂದಿದ್ದು, ಬಳಕೆದಾರರಲ್ಲಿ ಆ ಬಗ್ಗೆ ಕುತೂಹಲ ಮೂಡಿದೆ. 2026ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಆ್ಯಪಲ್ ಕಾರ್, ಬೆಲೆ ಎಷ್ಟು ಗೊತ್ತಾ?