ಶಿಯೋಮಿ 12ಟಿ, 12ಟಿ ಪ್ರೋ ಅನಾವರಣ, ವಿಶೇಷತೆಗಳೇನು? *ಶಿಯೋಮಿ 12 ಸೀರೀಸ್‌ನಲ್ಲಿ ಎರಡು ಹೊಸ ಫೋನ್ ಅನಾವರಣಗೊಳಿಸಿದೆ*ಈ ಎರಡೂ ಫೋನುಗಳು ಪ್ರೀಮಿಯಂ ಸೆಗ್ಮೆಂಟ್‌ ಸ್ಮಾರ್ಟ್‌ಫೋನ್‌ಗಳಾಗಿವೆ*ಶಿಯೋಮಿಯ ಈ ಫೋನ್ ‌ಭಾರತೀಯ ಮಾರುಕಟ್ಟೆಗೆ ಯಾವಾಗ ಬಿಡುಗಡೆಯಾಗಲಿವೆ? ಚೀನಾ ಮೂಲದ ಶಿಯೋಮಿ ( 12T) ಕಂಪನಿಯು ಶಿಯೊಮಿ 12 ಟಿ ( 12T) ಮತ್ತು ಶಿಯೋಮಿ 12ಟಿ ಪ್ರೋ ( 12T ) ಫೋನ್‌ಗಳನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರೊಂದಿಗೆ ಶಿಯೋಮಿ 12 ಸರಣಿ ಸ್ಮಾರ್ಟ್‌ಫೋನ್‌ಗಳ ಸಂಖ್ಯೆಯನ್ನು ಮಾರುಕಟ್ಟೆಯಲ್ಲಿ ಹೆಚ್ಚಳ ಮಾಡಿದೆ. ಈಗಾಗಲೇ 12 ಸರಣಿ ಫೋನುಗಳಿಗೆ ಬಳಕೆದಾರರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾಗಿ, ಈ ಹೊಸ ಫೋನುಗಳಿಗೆ ಅದೇ ಬೇಡಿಕೆ ಸೃಷ್ಟಿಯಾಗಬಹುದು. ಸದ್ಯಕ್ಕೆ ಈ ಫೋನುಗಳ ಬಗೆಗಿನ ಟೀಸರ್ ಸಾರ್ವಜನಿಕರಿಗೆ ಲಭ್ಯವಿದೆ. ಈ ಫೋನುಗಳ ಹೇಗಿದೆ ಎಂದು ನೋಡೋಣ ಬನ್ನಿ. ಶಿಯೋಮಿ 12ಟಿ ( 12T) 8GB + 128GB ಸ್ಟೋರೇಜ್ ವೆರಿಯೆಂಟ್ ಫೋನ್ ಬೆಲೆ ಅಂದಾಜು 48,800 ರೂ. ಗಳಾಷ್ಟಗಲಿದೆ. ಹಾಗೆಯೇ, ಈ ಫೋನ್ 8GB ಮತ್ತು 256 ಸ್ಟೋರೇಜ್‌ನಲ್ಲಿ ಗ್ರಾಹಕರಿಗೆ ಸಿಗಲಿದೆ. 8 ಮತ್ತು 128 ಸ್ಟೋರೇಜ್ ಇರುವ ಶಿಯೋಮಿ 12ಟಿ ಪ್ರೋ ( 12T ) ಫೋನ್ ಬೆಲೆ ಅಂದಾಜು 60,500 ರೂ. ಇರಲಿದೆ. ಆದರೆ 8GB ಮತ್ತು 256 ಸ್ಟೋರೇಜ್ ಮತ್ತು 12GB ಮತ್ತು 256 ಸ್ಟೋರೇಜ್ ವೆರಿಯೆಂಟ್‌ ಫೋನ್‌ಗಳ ಬೆಲೆ ಎಷ್ಟು ಎಂಬುದನ್ನು ಕಂಪನಿಯು ಮಾಹಿತಿ ನೀಡಿಲ್ಲ. ಶಿಯೋಮಿ 12 ಟಿ ಸ್ಮಾರ್ಟ್‌ಫೋನ್ ಟಿಎಸ್ಎಂಸಿಯ 5 ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾದ ಮೀಡಿಯಾ ಟೆಕ್ ಡೈಮೆನ್ಸಿಟಿ 8100-ಅಲ್ಟ್ರಾ CPUನಿಂದ ಚಾಲಿತವಾಗಿದೆ. ಫೋನ್ ಅಡಾಪ್ಟಿವ್ ಸಿಂಕ್ ಮತ್ತು ಅಡಾಪ್ಟಿವ್ ರೀಡಿಂಗ್ ಮೋಡ್ನಂತಹ ವೈಶಿಷ್ಟ್ಯಗಳೊಂದಿಗೆ 6.67 - ಇಂಚಿನ 120Hz HDR10+ ಡಿಸ್‌ಪ್ಲೇಯನ್ನು ಹೊಂದಿದೆ. ಇದು 256 ಸ್ಟೋರೇಜ್ ಮತ್ತು 8 ಅನ್ನು ಒಳಗೊಂಡಿದೆ. ಫೋನ್ನ ಹಿಂಭಾಗದಲ್ಲಿ 108 ಮುಖ್ಯ ಕ್ಯಾಮೆರಾ ಇದ್ದರೆ, 8 ಅಲ್ಟ್ರಾವೈಡ್ ಲೆನ್ಸ್ ಮತ್ತು 2 ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿರುವ ಟ್ರಿಪಲ್ ಕ್ಯಾಮೆರಾ ಸೆಟ್ಅಪ್ ಕಾಣಬಹುದು. ಉಳಿದಂತೆ 5,000 ಬ್ಯಾಟರಿಯಿಂದ ಈ ಫೋನ್ ಚಾಲಿತವಾಗಿದೆ. 120W ತ್ವರಿತ ಚಾರ್ಜಿಂಗ್ ಈ ಬ್ಯಾಟರಿ ಬೆಂಬಲಿಸುತ್ತದೆ. ಶಿಯೋಮಿ 12ಟಿ ( 12T) ಮೂಲ ಮಾದರಿಯು 8GB ಮತ್ತು 128 ಸ್ಟೋರೇಜ್ನೊಂದಿಗೆ ಬರುತ್ತದೆ. ಜಿಯೋದಿಂದ 15000 ರೂಪಾಯಿಗೆ 4ಜಿ ಲ್ಯಾಪ್‌ಟಾಪ್‌? ಅದೇ ರೀತಿ, ಶಿಯೋಮಿ 12ಟಿ ಪ್ರೋ ( 12T ) ಸ್ಮಾರ್ಟ್‌ಫೋನ್ 6.67-ಇಂಚಿನ 120Hz HDR10+ ಡಿಸ್ಪ್ಲೇ ಮತ್ತು ಸ್ನ್ಯಾಪ್ಡ್ರಾಗನ್ 8+ 1 ಹೊಂದಿದೆ. ಇದು ಮೂರು ಕಾನ್ಫಿಗರೇಶನ್ಗಳಲ್ಲಿ ಲಭ್ಯವಿದೆ. 256 GBವರೆಗೆ ಸ್ಟೋರೇಜ್ ಮತ್ತು 12 ಒಳಗೊಂಡಿದೆ. ಫೋನ್ನ ಹಿಂಭಾಗದಲ್ಲಿ 200 ಮುಖ್ಯ ಕ್ಯಾಮೆರಾ ಇದ್ದರೆ, 8 ಅಲ್ಟ್ರಾವೈಡ್ ಮತ್ತು 2 ಮ್ಯಾಕ್ರೋ ಕ್ಯಾಮೆರಾಗಳಿವೆ. ಈ ಫೋನ್ ಪೂರ್ಣ-ರೆಸಲ್ಯೂಶನ್ 8K ವೀಡಿಯೊ ಕ್ಯಾಪ್ಚರ್ ಅನ್ನು ಸಹ ಬೆಂಬಲಿಸುತ್ತದೆ. ಈ ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ ಮತ್ತು 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಫೋನ್ನ ಮೂಲ ಮಾದರಿಯು 8 ಮತ್ತು 128 ಆಂತರಿಕ ಸ್ಟೋರೇಜ್ನೊಂದಿಗೆ ಬರುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಫೋನ್ ಯಾವಾಗ ಲಭ್ಯವಿರುತ್ತದೆ ಎಂದು ಕಂಪನಿಯು ಇನ್ನೂ ಮಾಹಿತಿ ನೀಡಿಲ್ಲ. ಈ ಫೋನುಗಳಿಗೆ ಭಾರತೀಯ ಗ್ರಾಹಕರು ಕಾಯಬೇಕಾಗುತ್ತದೆ. 5G : ಮೋದಿ ಯುಗದ ಮತ್ತೊಂದು ಮೈಲುಗಲ್ಲು: ಹೇಗಿರಲಿದೆ ಡಿಜಿಟಲ್ ಭವಿಷ್ಯ?