ಜಿಯೋದಿಂದ 15000 ರೂಪಾಯಿಗೆ 4ಜಿ ಲ್ಯಾಪ್‌ಟಾಪ್‌? ಮುಖೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ 4ಜಿ ಸಿಮ್‌ಕಾರ್ಡ್‌ ಇರುವ ಲ್ಯಾಪ್‌ಟಾಪ್‌ ಅನ್ನು ಕೇವಲ 15,000 ರೂಗಳಿಗೆ ಒದಗಿಸಲಿದೆ ಎಂದು ವರದಿಗಳು ಹೇಳಿವೆ. ನವದೆಹಲಿ: ಮುಖೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ 4ಜಿ ಸಿಮ್‌ಕಾರ್ಡ್‌ ಇರುವ ಲ್ಯಾಪ್‌ಟಾಪ್‌ ಅನ್ನು ಕೇವಲ 15,000 ರು.ಗಳಿಗೆ ಒದಗಿಸಲಿದೆ ಎಂದು ವರದಿಗಳು ಹೇಳಿವೆ. ಕಡಿಮೆ ದರದಲ್ಲಿ ಲಭ್ಯವಾಗುವ ಜಿಯೋ ಫೋನ್‌ಗಳು ( ) ಭಾರತದಲ್ಲಿ ಭಾರೀ ಯಶಸ್ಸು ಸಾಧಿಸಿದ ಬೆನ್ನಲ್ಲೇ, ಜಿಯೋ ಕಂಪನಿ 'ಜಿಯೋ ಬುಕ್‌' ( ) ಎನ್ನುವ ಲ್ಯಾಪ್‌ಟಾಪ್‌ () ಬಿಡುಗಡೆಗೆ ಮುಂದಾಗಿದೆ. ಇದಕ್ಕಾಗಿ ಜಾಗತಿಕ ಕಂಪನಿಗಳಾದ ಕ್ವಾಲ್‌ಕೊಮ್‌ () ಹಾಗೂ ಮೈಕ್ರೋಸಾಫ್ಟ್ () ಜತೆಗೆ ಕೈಜೋಡಿಸಿ 4ಜಿ ಸಿಮ್‌ಕಾರ್ಡ್‌ (4G ) ಇರುವ ಜಿಯೋಬುಕ್‌ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಅಕ್ಟೋಬರ್‌ನಿಂದಲೇ ಶಾಲೆಗಳು, ಸರ್ಕಾರಿ () ಸಂಸ್ಥೆಗಳಿಗೆ ಈ ಲ್ಯಾಪ್‌ಟಾಪ್‌ ಒದಗಿಸುವ ಯೋಜನೆಯಿದ್ದು, ಮುಂದಿನ 3 ತಿಂಗಳಲ್ಲಿ ಇದು ಎಲ್ಲ ಗ್ರಾಹಕರಿಗೂ ಲಭ್ಯವಾಗಲಿದೆ. ಇದರೊಂದಿಗೆ ಜಿಯೋ 5ಜಿ ಬೆಂಬಲಿತ ಸ್ಮಾರ್ಟ್ ಪೋನ್‌ () ಕೂಡಾ ಮಾರುಕಟ್ಟೆಗೆ ಬರಲಿದೆ ಎನ್ನಲಾಗಿದೆ. ಜಿಯೋ ಲ್ಯಾಪ್‌ಟಾಪ್‌ನಲ್ಲಿ ( ) ಜಿಯೋ ಆಪರೇಟಿಂಗ್‌ ಸಿಸ್ಟಮ್‌ ( ) ಇರಲಿದ್ದು, ಆ್ಯಪ್‌ಗಳನ್ನು ಜಿಯೋ ಸ್ಟೋರ್‌ನಿಂದ ಡೌನ್ಲೋಡ್‌ ಮಾಡಿಕೊಳ್ಳಬಹುದಾಗಿದೆ. ಇದನ್ನು ಕಾರ್ಪೊರೇಟ್‌ ಕಚೇರಿಯಲ್ಲೂ ಟ್ಯಾಬ್ಲೆಟ್‌ಗೆ ಪರ್ಯಾಯವಾಗಿ ಬಳಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.