ಸೋಷಿಯಲ್‌ ಮೀಡಿಯಾದಲ್ಲಿ ಸುರಕ್ಷಿತವಾಗಿರಲು ಸರ್ಕಾರದ ಈ 8 ಸಲಹೆಗಳನ್ನು ತಪ್ಪದೇ ಪಾಲಿಸಿ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕೃತ ಟ್ವಿಟರ್ ಹ್ಯಾಂಡಲ್ ಸಾಮಾಜಿಕ ಮಾಧ್ಯಮದಲ್ಲಿ ಸುರಕ್ಷಿತವಾಗಿರಲು 8 ಮಾರ್ಗಗಳನ್ನು ನೀಡಿದೆ, ಅದನ್ನು ಬಳಸಿಕೊಂಡು ನೀವು ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು ನವದೆಹಲಿ (ಜೂ. 17):ಸಾಮಾಜಿಕ ಮಾಧ್ಯಮಗಳು ನಮಗೆ ಪ್ರಪಂಚದಾದ್ಯಂತದ ಎಲ್ಲದರೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತವೆ. ಆದರೆ ಸೋಷಿಯಲ್ ಮೀಡಿಯಾ ಮತ್ತು ಮೆಸೇಜಿಂಗ್ ಆ್ಯಪ್‌ಗಳಿಂದ ನಮ್ಮ ಜೀವನ ಸುಲಭವಾಗುತ್ತಿರುವುದು ಎಷ್ಟು ನಿಜವೋ ನಮ್ಮ ಖಾಸಗಿತನಕ್ಕೂ ಕುತ್ತು ಬಂದಿರುವುದು ಅಷ್ಟೇ ನಿಜ. ತಂತ್ರಜ್ಞಾನ ಬೆಳೆದಂತೆಲ್ಲ ಸಾಮಾಜಿಕ ಜಾಲತಾಣಗಳನ್ನು ಹ್ಯಾಕ್‌ ಮಾಡಲು ವಂಚಕರು ಹೊಸ ಮಾರ್ಗಗಳನ್ನು ಕಂಡು ಹಿಡಿಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯೊಂದಿಗೆ ನಾವು ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕೃತ ಟ್ವಿಟರ್ ಹ್ಯಾಂಡಲ್ ಸಾಮಾಜಿಕ ಮಾಧ್ಯಮದಲ್ಲಿ ಸುರಕ್ಷಿತವಾಗಿರಲು 8 ಮಾರ್ಗಗಳನ್ನು ನೀಡಿದೆ, ಅದನ್ನು ಬಳಸಿಕೊಂಡು ನೀವು ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು. 1) ಪಬ್ಲಿಕ್‌ ಸರ್ಚ್‌ನಿಂದ ನಿಮ್ಮ ಪ್ರೊಫೈಲನ್ನು ನಿರ್ಬಂಧಿಸಿ: ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮದಲ್ಲಿ, ನೀವು ಈ ಮಾದರಿಯ ಆಯ್ಕೆಯನ್ನು ಪಡೆಯುತ್ತೀರಿ, ಅದರ ಮೂಲಕ ನಿಮ್ಮ ಪ್ರೊಫೈಲನ್ನು ನೀವು ಸುರಕ್ಷಿತವಾಗಿರಿಸಿಕೊಳ್ಳಬಹುದು. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ನಿಮ್ಮನ್ನು ಹುಡುಕಲು ಸಾಧ್ಯವಾಗುವುದಿಲ್ಲ 2) ಖಾತೆಯನ್ನು ಯಾವಾಗಲೂ ಲಾಗ್‌ಔಟ್ ಮಾಡಿ:ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್, ಕು ಮುಂತಾದ ಸಾಮಾಜಿಕ ಮಾಧ್ಯಮಗಳನ್ನು ಬಳಸಿದ ನಂತರ ಯಾವಾಗಲೂ ಲಾಗ್‌ಔಟ್ ಮಾಡಿ. ಇದು ಹ್ಯಾಕಿಂಗ್ ಅಪಾಯವನ್ನು ಕಡಿಮೆ ಮಾಡುತ್ತದೆ. ಬೇರೆಯವರ ಲ್ಯಾಪ್‌ಟಾಪ್, ಫೋನ್ ಅಥವಾ ಸಾರ್ವಜನಿಕ ಮಾಧ್ಯಮದಲ್ಲಿ ನಾವು ನಮ್ಮ ಸಾಮಾಜಿಕ ಮಾಧ್ಯಮಕ್ಕೆ ಹಲವಾರು ಬಾರಿ ಲಾಗಿನ್ ಮಾಡುತ್ತೇವೆ, ಆದ್ದರಿಂದ ಲಾಗ್‌ಔಟ್ ಮಾಡುವುದು ಯಾವಾಗಲೂ ಸುರಕ್ಷಿತ. 3) ಸಾಮಾಜಿಕ ಮಾಧ್ಯಮದ ವಿವರಗಳನ್ನು ಹಂಚಿಕೊಳ್ಳಬೇಡಿ:ಪಾಸ್ವರ್ಡ್ ಮಾಹಿತಿಯಂತಹ ನಿಮ್ಮ ಸಾಮಾಜಿಕ ಮಾಧ್ಯಮದ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಹಾಗೆ ಮಾಡುವುದರಿಂದ ನಿಮ್ಮ ಖಾತೆಗೆ ಅಪಾಯವಾಗಬಹುದು. ಇದನ್ನೂ ಓದಿ:ಮೀಡಿಯಾ / ಸೋಷಲ್‌ ಮೀಡಿಯಾ; ಸಿನಿಮಾ ಪ್ರಚಾರ ಮಾಡುವುದಕ್ಕೆ ಹೊಸ ದಾರಿಗಳು ಇದ್ದಾವೆ, ತಿಳಿಯಿರಿ 4) ಅಜ್ಞಾತ ಸ್ನೇಹಿತರ ವಿನಂತಿಗಳನ್ನು ಸ್ವೀಕರಿಸಬೇಡಿ:ಸೋಷಿಯಲ್ ಮೀಡಿಯಾದಲ್ಲಿ ಎಲ್ಲಾ ರೀತಿಯ ಜನರಿದ್ದಾರೆ, ಆದ್ದರಿಂದ ಎಲ್ಲರ ಸ್ನೇಹಿತರ ವಿನಂತಿಯನ್ನು ಸ್ವೀಕರಿಸಬೇಡಿ. ಕೆಲವರು ನಕಲಿ ಖಾತೆಗಳನ್ನೂ ಸೃಷ್ಟಿಸಿ ವಂಚಿಸುತ್ತಾರೆ. ಹೀಗಾಗಿ ಫ್ರೆಂಡ್‌ ರಿಕ್ವೆಸ್ಟ್‌ ಸ್ವೀಕರಿಸುವ ಮುನ್ನ ಜಾಗರೂಕರಾಗಿರಿ. 5) ಮನೆ/ಕಚೇರಿ ವಿಳಾಸವನ್ನು ಹಂಚಿಕೊಳ್ಳಬೇಡಿ: ಸೋಷಿಯಲ್ ಮೀಡಿಯಾದಲ್ಲಿ ಹಲವು ಬಾರಿ ಪೋಸ್ಟ್ ಅಥವಾ ಫೋಟೋ ಹಾಕುವುದರ ಜೊತೆಗೆ ಲೊಕೇಶನ್ ಬರೆಯುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ಗಮನಿಸಬೇಕಾದ ವಿಷಯವೆಂದರೆ ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಮನೆ ಅಥವಾ ಕಚೇರಿ ವಿಳಾಸವನ್ನು ನಮೂದಿಸಬೇಡಿ, ಇದರಿಂದ ಯಾರಾದರೂ ನಿಮ್ಮನ್ನು ಟ್ರ್ಯಾಕ್ ಮಾಡಬಹುದು. 6) ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ:ನೀವು ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ರೀತಿಯ ಲಿಂಕ್ ಕಂಡಾಗ ಅದನ್ನು ಕಿಕ್‌ ಮಾಡಬೇಡಿ. ಹ್ಯಾಕರ್‌ಗಳು ಲಿಂಕ್‌ಗಳನ್ನು ಕಳುಹಿಸುತ್ತಾರೆ, ಅದರ ಮೇಲೆ ಕ್ಲಿಕ್ ಮಾಡುವುದರಿಂದ ಖಾತೆಯನ್ನು ಹ್ಯಾಕ್ ಮಾಡುವ ಅಪಾಯವಿದೆ. ಇದನ್ನೂ ಓದಿ:ಹ್ಯಾಕ್ ಆದ ಫೇಸ್‌ಬುಕ್ ಖಾತೆ ಮರುಪಡೆಯುವುದು ಹೇಗೆ? ಇಲ್ಲಿದೆ ಡಿಟೇಲ್ಸ್ 7) ಗೌಪ್ಯತೆಯ ಸೆಟ್ಟಿಂಗ್ ನೋಡಿಕೊಳ್ಳಿ:ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಸಾಧ್ಯವಾದಷ್ಟು ನಿರ್ಬಂಧಿಸಿ. ಪ್ರೊಫೈಲ್‌ನಲ್ಲಿ ಹೆಚ್ಚಿನ ಭದ್ರತೆಯನ್ನು ಇರಿಸಿ, ವಿಶೇಷವಾಗಿ ಸಾರ್ವಜನಿಕರಿಗೆ ಯಾವುದೇ ಸೂಕ್ಷ್ಮ ಮಾಹಿತಿ ಸಿಗದಂತೆ ಎಚ್ಚರವಹಿಸಿ. 8) ಫೋಟೋಗಳು, ಸ್ಟೇಟಸ್‌ಗಳನ್ನು ಹಂಚಿಕೊಳ್ಳುವಾಗ ಜಾಗರೂಕರಾಗಿರಿ:ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳು, ಸ್ಟೇಟಸ್‌ಗಳು ಅಥವಾ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುವಾಗ ಎಚ್ಚರಿಕೆ ವಹಿಸಿ.