ಜೂನ್ 14ಕ್ಕೆ ಆಗಸದಲ್ಲಿ ಕಾಣಲಿದೆ ಸ್ಟ್ರಾಬೆರಿ ಮೂನ್! ರೋಸ್ ಮೂನ್, ಹಾಟ್ ಮೂನ್, ಹನಿ ಮೂನ್ ಅಥವಾ ಮೀಡ್ ಮೂನ್ ಎನ್ನುವ ಹೆಸರಿನಿಂದಲೂ ಸ್ಟ್ರಾಬೆರಿ ಮೂನ್ ಅನ್ನು ಕರೆಯಲಾಗುತ್ತದೆ. ವರ್ಷದ ಈ ಸಮಯದಲ್ಲಿ ಅಂದರೆ, ಸ್ಟ್ರಾಬೆರಿ ಹೆಕ್ಕುವ ಸೀಸನ್‌ ನಲ್ಲಿ ಕಾಣಿಸಿಕೊಳ್ಳುವ ಸೂಪರ್‌ಮೂನ್‌ ಕಾರಣಕ್ಕಾಗಿ ಸ್ಟ್ರಾಬೆರಿ ಮೂನ್ ಎನ್ನುವ ಹೆಸರು ಬಂದಿದೆ. ನವದೆಹಲಿ (ಜೂನ್ 13):ಇನ್ನೇನು ಕೆಲವೇ ದಿನಗಳಲ್ಲಿ ಜೂನ್ ತಿಂಗಳ ಹುಣ್ಣಿಮೆ ಬರಲಿದೆ. ಆದರೆ, ಆಕಾಶಕಾಯಗಳ ಕುರಿತಾಗಿ ಆಸಕ್ತಿ ಇರುವ ವ್ಯಕ್ತಿಗಳಿಗೆ ಈ ತಿಂಗಳ ಹುಣ್ಣಮೆ ಬಹಳ ವಿಶೇಷ. ಯಾಕೆಂದರೆ, ಈ ಬಾರಿ ಕಾಣಿಸಿಕೊಳ್ಳಲಿರುವುದು ಸ್ಟ್ರಾಬೆರಿ ಮೂನ್ ( ).ಸ್ಟ್ರಾಬೆರಿ ಚಂದ್ರನನ್ನು ರೋಸ್ ಮೂನ್, ಹಾಟ್ ಮೂನ್, ಹನಿ ಮೂನ್ ಅಥವಾ ಮೀಡ್ ಮೂನ್ ಎಂದೂ ಕರೆಯಲಾಗುತ್ತದೆ. ವರ್ಷದ ಈ ಸಮಯದಲ್ಲಿ ಅಂದರೆ, ಸ್ಟ್ರಾಬೆರಿ ಹೆಕ್ಕುವ ಸೀಸನ್‌ ನಲ್ಲಿ ಕಾಣಿಸಿಕೊಳ್ಳುವ ಸೂಪರ್‌ಮೂನ್‌ ಕಾರಣಕ್ಕಾಗಿ ಸ್ಟ್ರಾಬೆರಿ ಮೂನ್ ಎನ್ನುವ ಹೆಸರು ಬಂದಿದೆ. ಏಕೆಂದರೆ ಜೂನ್ ತಿಂಗಳು ಸ್ಟ್ರಾಬೆರಿಗಳನ್ನು ಕೊಯ್ಲು ಮಾಡಲು ಸಿದ್ಧವಾಗಿರುವ ತಿಂಗಳು. ವರ್ಷದ ಈ ಸಮಯದಲ್ಲಿ ಜೇನನ್ನು () ಕೂಡ ಕೊಯ್ಲು ಮಾಡಲಿರುವ ಕಾರಣ ಇದನ್ನು ಹನಿ ಮೂನ್ ಎಂದೂ ಕರೆಯಲಾಗುತ್ತದೆ.ಸ್ಟ್ರಾಬೆರಿ ಮೂನ್ ಕಾಣುವ ದಿನವನ್ನು ಉತ್ತರ () ಹಾಗೂ ಪಶ್ಚಿಮ () ಭಾರತದ ಜನರು ವಟ ಪೂರ್ಣಿಮ ( ) ಹಬ್ಬವನ್ನು ಆಚರಣೆ ಮಾಡುತ್ತಾರೆ. ವಟ್ ಪೂರ್ಣಿಮೆಯ ದಿನವು ಸಾವಿತ್ರಿ ಮತ್ತು ಸತ್ಯವಾನರ ದಂತಕಥೆಯನ್ನು ಆಧರಿಸಿದೆ ಮತ್ತು ಈ ದಿನದಂದು, ಅನೇಕ ಭಾರತೀಯ ಮಹಿಳೆಯರು ತಮ್ಮ ಸಂಗಾತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾರೆ.ಯಮರಾಜನಿಗೆ ಸವಾಲು ಹಾಕಿ ಸಾವಿತ್ರಿ ತನ್ನ ಪತಿ ಸತ್ಯವಾನನ್ನು ಉಳಿಸಿಕೊಂಡಿದ್ದಳು ಆ ಕಾರಣಕ್ಕಾಗಿ ವಟ ಪೂರ್ಣಿಮೆಯ ದಿನದಂದು ಸಾವಿತ್ರಿಯನ್ನು ಭಾರತೀಯ ಹೆಣ್ಣುಮಕ್ಕಳು ಪೂಜೆ ಮಾಡುತ್ತಾರೆ. ಆ ದಿನವಿಡೀ ವಿವಾಹಿತ ಮಹಿಳೆಯರು ಉಪವಾಸ ಮಾಡುತ್ತಾರೆ.ಚಂದ್ರನ ಹಂತಗಳು ಬಹುತೇಕ ಪ್ರತಿ ತಿಂಗಳು ಸಂಭವಿಸುತ್ತವೆ. ಭೂಮಿಯು ಅವುಗಳ ನಡುವೆ ಇರುವಾಗ ಚಂದ್ರನು ಸೂರ್ಯನ ಎದುರು ಇರುವಾಗ ಇದು ಸಂಭವಿಸುತ್ತದೆ. ಈ ಸಮಯದಲ್ಲಿ, ಭೂಮಿಗೆ ಎದುರಾಗಿರುವ ಚಂದ್ರನ ಭಾಗವು ಪ್ರಕಾಶಮಾನವಾಗಿ ಸಂಪೂರ್ಣ ವೃತ್ತವನ್ನು ರೂಪಿಸುತ್ತದೆ. ಜ್ಯೇಷ್ಠ ಮಾಸದ ಸೂಪರ್ ಮೂನ್; ಈ ಖಗೋಳ ಕೌತುಕ ನೋಡಿ ಸಂತೋಷಪಡಿತನ್ನ ಗಾತ್ರದ ಕಾರಣಕ್ಕಾಹಿ ಜೂನ್‌ನ ಸ್ಟ್ರಾಬೆರಿ ಚಂದ್ರನನ್ನು "ಸೂಪರ್ ಮೂನ್" ಎಂದೂ ಕರೆಯಲಾಗುತ್ತದೆ ಈ ಸಮಯದಲ್ಲಿ ಸೂಪರ್ ಮೂನ್ ಅದರ ಕಕ್ಷೆಯಲ್ಲಿ ಭೂಮಿಗೆ ಹತ್ತಿರದಲ್ಲಿದೆ. ಈ ವರ್ಷ, ಸ್ಟ್ರಾಬೆರಿ ಚಂದ್ರನು ಜೂನ್ 14 ರಂದು 7:52 (ಈಸ್ಟರ್ನ್ ಡೇಲೈಟ್ ಸಮಯ) ಯಲ್ಲಿ ಆಕಾಶದಲ್ಲಿ ಕಾಣಿಸಿಕೊಳ್ಳುತ್ತಾನೆ. ಆದಾಗ್ಯೂ, ಚಂದ್ರನು ಒಂದು ದಿನ ಮೊದಲು ಮತ್ತು ನಂತರ ಪೂರ್ಣವಾಗಿ ಗೋಚರಿಸುತ್ತಾನೆ. ಇದರರ್ಥ ಜೂನ್ 13 ಮತ್ತು ಜೂನ್ 15 ರಂದು ಚಂದ್ರನು ಸಂಪೂರ್ಣವಾಗಿ ಕಾಣಿಸಿಕೊಳ್ಳುತ್ತಾನೆ.ಇಂದು ವರ್ಷದ ಮೊದಲ ಚಂದ್ರಗ್ರಹಣ:ಹಲವೆಡೆ ಬ್ಲಡ್‌ ಮೂನ್‌ ಗೋಚರಚಂದ್ರನು ಭಾರತೀಯ ಕಾಲಮಾನ ಸಂಜೆ 5:22 ರ ಸುಮಾರಿಗೆ ತನ್ನ ಉತ್ತುಂಗವನ್ನು ತಲುಪುತ್ತಾನೆ ಆದರೆ ಒಂದು ರಾತ್ರಿ ಮೊದಲು ಮತ್ತು ನಂತರ ಸಮಾನವಾಗಿ ಸುಂದರವಾಗಿ ಕಾಣುತ್ತಾನೆ. ಜನರು ಬೈನಾಕ್ಯುಲರ್‌ಗಳನ್ನು ಬಳಸಿಕೊಂಡು ಸೊಗಸಾದ ಸ್ಟ್ರಾಬೆರಿ ಚಂದ್ರನನ್ನು ವೀಕ್ಷಿಸಬಹುದು.