ಡಿಜಿಲಾಕರ್‌ ಆ್ಯಪಲ್ಲಿ ಡಿಎಲ್‌, ಆರ್‌ಸಿ, ಅಂಕಪಟ್ಟಿ ಡೌನ್‌ಲೋಡ್‌ ಮಾಡೋದು ಹೇಗೆ? ಇಲ್ಲಿದೆ ಸುಲಭ ವಿಧಾನ ಈ ಮೇಡ್-ಇನ್-ಇಂಡಿಯಾ ಅಪ್ಲಿಕೇಶನ್ ಮೂಲಭೂತವಾಗಿ ನಿಮ್ಮ ಡಾಕ್ಯುಮೆಂಟ್‌ಗಳನ್ನು ಸುರಕ್ಷಿತವಾಗಿ ಡಿಜಿಟಲ್ ಮೋಡ್‌ನಲ್ಲಿ ಶೇಖರಿಸುವ ಒಂದು ಫೂಲ್ ಪ್ರೂಫ್ ಮಾರ್ಗವಾಗಿದೆ :ನಿಮ್ಮ ಪ್ರಮುಖ ದಾಖಲೆಗಳನ್ನು ನಿಮ್ಮ ಜತೆ ಕೊಂಡೊಯ್ಯಲು ಕಷ್ಟಪಡುತ್ತಿದ್ದರೆ, ಕೇಂದ್ರ ಸರ್ಕಾರ ‘ಡಿಜಿ ಲಾಕರ್‌’ಆ್ಯಪ್‌ ನಿಮ್ಮ ಸಹಾಯಕ್ಕೆ ಬರುತ್ತದೆ. ಆಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿ ಲಭ್ಯವಿರುವ ಮೇಡ್-ಇನ್-ಇಂಡಿಯಾ ಅಪ್ಲಿಕೇಶನ್ ಮೂಲಭೂತವಾಗಿ ನಿಮ್ಮ ಡಾಕ್ಯುಮೆಂಟ್‌ಗಳನ್ನು ಸುರಕ್ಷಿತವಾಗಿ ಡಿಜಿಟಲ್ ಮೋಡ್‌ನಲ್ಲಿ ಶೇಖರಿಸುವ ಒಂದು ಫೂಲ್ ಪ್ರೂಫ್ ಮಾರ್ಗವಾಗಿದೆ. ತಮ್ಮ ಬಳಿ ಯಾವುದೇ ಮೂಲ ದಾಖಲೆಗಳನ್ನು ಕೊಂಡೊಯ್ಯುವ ಬದಲಿಗೆ ಡಿಜಿ ಲಾಕರ್‌ನಲ್ಲಿರುವ ದಾಖಲೆ ನೀವು ಬಳಸಬಹುದು. ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್‌ನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಬಳಿಕ ಅಲ್ಲಿ ಆಧಾರ್‌, ಚಾಲನಾ ಪರವಾನಗಿ, ಆರ್‌ಸಿ, ವಿಮೆ ಇನ್ನಿತರ ದಾಖಲೆಗಳು ಇರುತ್ತವೆ. ತಮ್ಮಗೆ ಅಗತ್ಯವಿರುವ ದಾಖಲೆಗಳನ್ನು ನೊಂದಣಿ ಸಂಖ್ಯೆ ದಾಖಲೆಸಿ ದಾಖಲಾತಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಇದರಿಂದ ಮಳೆಗಾಲ ಹಾಗೂ ಮೂಲ ದಾಖಲೆಗಳನ್ನು ಕೊಂಡೊಯ್ಯುವುದು ತಪ್ಪಲಿದೆ. ಜತೆಗೆ ಪೊಲೀಸರ ಪರಿಶೀಲನೆಗೂ ಸುಲಭವಾಗಲಿದೆ. ಡಿಜಿಲಾಕರ್ ಅಪ್ಲಿಕೇಶನನ್ನು ಹೇಗೆ ಬಳಸುವುದು ಮತ್ತು ಸೆಟಪ್ ಮಾಡುವುದು ಹೇಗೆ ಎಂಬುದಎ ಮಾಹಿತಿ ಇಲ್ಲಿದೆ. ನಿಮ್ಮ ದಾಖಲೆಗಳನ್ನು ಪಡೆಯುವುದು ಹೇಗೆ? ಇದನ್ನೂ ಓದಿ:ಇನ್ನುಮುಂದೆ ಆನ್‌ಲೈನಲ್ಲೇ ಜಮೀನು ಸ್ಕೆಚ್‌, ನಕ್ಷೆ ಲಭ್ಯ!