ಝೋಮ್ಯಾಟೋ ಪರಿಸರ ಕಾಳಜಿ: ಏಪ್ರಿಲ್ 2022ರಿಂದ 100% ಪ್ಲಾಸ್ಟಿಕ್ ನ್ಯೂಟ್ರಲ್ ಡೆಲಿವರಿ: ಸಿಇಓ ದೀಪಿಂದರ್ ಗೋಯಲ್ ಮುಂದಿನ ಮೂರು ವರ್ಷಗಳಲ್ಲಿ ಸುಸ್ಥಿರ ಪ್ಯಾಕೇಜಿಂಗ್‌ನಲ್ಲಿ 10 ಕೋಟಿಗೂ ಹೆಚ್ಚು ಆರ್ಡರ್‌ಗಳನ್ನು ತಲುಪಿಸುವ ಗುರಿಯನ್ನು ಝೋಮಾಟೋ ಹೊಂದಿದೆ. :ಆನ್‌ಲೈನ್ ಆಹಾರ ವಿತರಣಾ ವೇದಿಕೆ ಝೊಮಾಟೊ ಶುಕ್ರವಾರ ಏಪ್ರಿಲ್ 2022 ರಿಂದ 100 ಪ್ರತಿಶತ ' ' ಘೋಷಿಸಿದ್ದು ಮುಂದಿನ ಮೂರು ವರ್ಷಗಳಲ್ಲಿ ಸುಸ್ಥಿರ ಪ್ಯಾಕೇಜಿಂಗ್‌ನಲ್ಲಿ 10 ಕೋಟಿಗೂ ಹೆಚ್ಚು ಆರ್ಡರ್‌ಗಳನ್ನು ತಲುಪಿಸುವ ಗುರಿಯನ್ನು ಹೊಂದಿದೆ. ಜೈವಿಕ ವಿಘಟನೀಯ ಮತ್ತು ಇತರ ಪ್ಲಾಸ್ಟಿಕ್ ಅಲ್ಲದ ಪರ್ಯಾಯಗಳನ್ನು ಇಂದು ಪ್ಲಾಸ್ಟಿಕ್‌ನಂತೆ ಕೈಗೆಟುಕುವ ಮತ್ತು ಲಭ್ಯವಾಗುವಂತೆ ಉತ್ತೇಜಿಸಲು ಪ್ರಾರಂಭಿಸುವುದು ಮುಖ್ಯ ಎಂದು ಕಂಪನಿಯು ಗುರುತಿಸಿದೆ ಎಂದು ಝೊಮಾಟೊ ಸಂಸ್ಥಾಪಕ ಮತ್ತು ಸಿಇಓ ದೀಪಿಂದರ್ ಗೋಯಲ್ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. "ಇನ್ನು ಮುಂದೆ, ನೀವು ಝೊಮಾಟೊ ಮೂಲಕ ಆರ್ಡರ್ ಮಾಡುವ ಪ್ರತಿ ಊಟವೂ 100 ಪ್ರತಿಶತ ಪ್ಲಾಸ್ಟಿಕ್ ನ್ಯೂಟ್ರಲ್ ಆಗಿರುತ್ತದೆ, ಅಂದರೆ ನಿಮ್ಮ ಆರ್ಡರ್‌ನ ಪ್ಯಾಕೇಜಿಂಗ್‌ನಲ್ಲಿ ಬಳಸಿದ ಎಲ್ಲಾ ಪ್ಲಾಸ್ಟಿಕ್‌ನ ಶೇಕಡಾ 100 ಕ್ಕಿಂತ ಹೆಚ್ಚಿನದನ್ನು ನಾವು ಸ್ವಯಂಪ್ರೇರಣೆಯಿಂದ ಮರುಬಳಕೆ ಮಾಡುತ್ತೇವೆ" ಎಂದು ಅವರು ಬರೆದಿದ್ದಾರೆ. ಪ್ಲಾಸ್ಟಿಕ್ ನ್ಯೂಟ್ರಲ್ ಆಗುವುದು ಎಂದರೆ ನಿಮ್ಮ ಪ್ಲಾಸ್ಟಿಕ್ ಹೆಜ್ಜೆಗುರುತನ್ನು ಅರರಿತುಕೊಂಡು ಅದೇ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವನ್ನು ತ್ಯಾಜ್ಯ ನಿರ್ವಹಣಾ ಕ್ರಮಗಳ ಮೂಲಕ ಮರುಬಳಕೆ ಮಾಡುವುದು. ತ್ಯಾಜ್ಯ ನಿರ್ವಹಣಾ ಸಂಸ್ಥೆಗಳೊಂದಿಗೆ ಓಪ್ಪಂದ:ಇದನ್ನು ಸಾಧಿಸಲು "ನಾವು ಅತ್ಯಾಧುನಿಕ ಐಎಸ್‌ಓ () ಪ್ರಮಾಣೀಕರಿಸಿದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದ್ದೇವೆ, ಅವರು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲು ಮತ್ತು ಜವಾಬ್ದಾರಿಯುತವಾಗಿ ಪ್ರಕ್ರಿಯೆಗೊಳಿಸಲು ಭಾರತದಾದ್ಯಂತ ಪುರಸಭೆಗಳೊಂದಿಗೆ ಪಾಲುದಾರರಾಗುತ್ತಾರೆ" ಎಂದು ಗೋಯಲ್ ಹೇಳಿದ್ದಾರೆ. ಇದನ್ನೂ ಓದಿ:ಬಿರುಬಿಸಿಲಿನಲ್ಲಿ ಸೈಕಲ್‌ನಲ್ಲೇ ಫುಡ್‌ ಡೆಲಿವರಿ ಮಾಡುತ್ತಿದ್ದ ದುರ್ಗಾ, ನೆಟ್ಟಿಗರ ಉದಾರತೆಯಿಂದ ಸಿಕ್ತು ಬೈಕ್! ಆಹಾರ ವಿತರಣೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಅಥವಾ ತೊಡೆದುಹಾಕಲು ನಮ್ಮ ಮುಂದೆ ದೊಡ್ಡ ಜವಾಬ್ದಾರಿ ಇದೆ ಎಂದು ಹೇಳಿದ ಗೋಯಲ್, "ಎಲ್ಲಾ ರೀತಿಯ ಆಹಾರಗಳಿಗೆ ಸಮರ್ಥನೀಯ ಪ್ಯಾಕೇಜಿಂಗನ್ನು ಅಭಿವೃದ್ಧಿಪಡಿಸಲು ಮತ್ತು ಉತ್ತೇಜಿಸಲು ನಮ್ಮ ಪ್ರಯತ್ನಗಳನ್ನು ಹೆಚ್ಚಿಸುತ್ತಿದದ್ದೆವೆ" ಎಂದು ಹೇಳಿದ್ದಾರೆ. ಪರಿಸರ ಸ್ನೇಹಿ ಪ್ಯಾಕೆಜಿಂಗ್:"ನಾವು ಕೈಗೆಟುಕುವ ಮತ್ತು ಸಮರ್ಥನೀಯ ಪ್ಯಾಕೇಜಿಂಗ್ ಪರ್ಯಾಯಗಳಿಗೆ ಬದಲಾಯಿಸುವಲ್ಲಿ ನಮ್ಮ ರೆಸ್ಟೋರೆಂಟ್ ಪಾಲುದಾರರನ್ನು ಬೆಂಬಲಿಸುವ ಮೂಲಕ ಮುಂದಿನ ಮೂರು ವರ್ಷಗಳಲ್ಲಿ 100 ಮಿಲಿಯನ್ ಹೆಚ್ಚುವರಿ ಪರಿಸರ ಸ್ನೇಹಿ ಆಹಾರ ವಿತರಣಾ ಆರ್ಡರ್‌ಗಳನ್ನು (ಸುಸ್ಥಿರ ಪ್ಯಾಕೇಜಿಂಗ್‌ನಲ್ಲಿ ಆರ್ಡರ್‌ಗಳು) ತಲುಪಿಸುವ ಗುರಿಯನ್ನು ಹೊಂದಿದ್ದೇವೆ" ಎಂದು ಗೋಯಲ್ ತಿಳಿಸಿದ್ದಾರೆ. ಇದನ್ನು ಸಾಧಿಸಲು, "ನಾವು ಸರ್ಕಾರದ ನೇತೃತ್ವದ ಉಪಕ್ರಮಗಳು, ಸಾಮಾಜಿಕ ಉದ್ಯಮಗಳು ಮತ್ತು ಸ್ಟಾರ್ಟ್‌ಅಪ್‌ಗಳು ಸೇರಿದಂತೆ ರೆಸ್ಟೋರೆಂಟ್ ಉದ್ಯಮಕ್ಕೆ ನವೀನ ಪರಿಹಾರಗಳು ಮತ್ತು ಮಾದರಿಗಳಲ್ಲಿ ಕೆಲಸ ಮಾಡುವ ವಿವಿಧ ಪಾಲುದಾರರೊಂದಿಗೆ ಪಾಲುದಾರರಾಗಲಿದ್ದೇವೆ" ಎಂದು ಅವರು ಹೇಳಿದ್ದಾರೆ ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆ:ಈ ಉಪಕ್ರಮಕಗಕಾಗಿ ಝೊಮಾಟೊಗೆ ಗಮನಾರ್ಹ ಪ್ರಮಾಣದ ಹಣ ವೆಚ್ಚ ಮಾಡಬೇಕಾಗುತ್ತದೆ ಮತ್ತು ಅದರ ಲಾಭ ಮತ್ತು ನಷ್ಟದ ಹೇಳಿಕೆಯನ್ನು ಋಣಾತ್ಮಕವಾಗಿ ಪರಿಣಾಮ ಬೀರಲಿದೆ ಎಂದು ಗೋಯಲ್ ಹೇಳಿದರು. "ಆದಾಗ್ಯೂ, ಭೂಗ್ರಹಕ್ಕೆ ಯಾವುದು ಒಳ್ಳೆಯದೋ, ಅದು ವ್ಯಾಪಾರಕ್ಕೆ ಒಳ್ಳೆಯದು ಎಂದು ನಾನು ಬಲವಾಗಿ ನಂಬುತ್ತೇನೆ. ನೀವು ಎಲ್ಲವನ್ನೂ ಸರಿಯಾಗಿ ಮಾಡಿದಾಗ ಲಾಭವಾಗುತ್ತದೆ ಎಂದು ನಾನು ನಂಬುತ್ತೇನೆ ಮತ್ತು ಇದು ಖಂಡಿತವಾಗಿಯೂ ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆ." ಎಂದು ಗೋಯಲ್‌ ಹೇಳಿದ್ದಾರೆ. ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ:ದೀರ್ಘಾವಧಿಯ ಸುಸ್ಥಿರತೆಯ ಕಡೆಗೆ ಝೊಮ್ಯಾಟೊ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾತನಾಡಿದ ಗೋಯಲ್, ಕಳೆದ ವರ್ಷ ಕಂಪನಿಯು ' 'ಯನ್ನು ಪ್ರಾರಂಭಿಸಿದೆ ಮತ್ತು ಭಾರತದಲ್ಲಿ ತನ್ನ ಎಲ್ಲಾ ವಿತರಣೆಗಳು ಮತ್ತು ಪ್ಯಾಕೇಜಿಂಗ್‌ಗಳ ಇಂಗಾಲದ ಹೆಜ್ಜೆಗುರುತನ್ನು ಸರಿದೂಗಿಸಲು ಸ್ಥಳೀಯ ಪರಿಸರ ಯೋಜನೆಗಳಿಗೆ ಧನಸಹಾಯವನ್ನು ಪ್ರಾರಂಭಿಸಿದೆ ಎಂದು ಹೇಳಿದರು. ಇದನ್ನೂ ಓದಿ:ನಿಸರ್ಗದ ಸುಖ ಸವಿಯೋಣ, ಜೀವ ಸಂಕುಲವನ್ನು ಪಾಲನೆ ಮಾಡುವ ಭೂ ತಾಯಿಯ ಕಾಪಾಡುವ! ಝೊಮ್ಯಾಟೋ ತನ್ನ ಅಪ್ಲಿಕೇಶನ್‌ನಲ್ಲಿ ಡೀಫಾಲ್ಟ್ ಆಯ್ಕೆಯಾಗಿ ' '(ಕಟ್ಲರಿ ಅಗತ್ಯವಿಲ್ಲ) ಎಂಬ ಆಯ್ಕೆ ಕೂಡ ನೀಡಿದೆ. 74 ಪ್ರತಿಶತ ಆರ್ಡರ್‌ಗಳು ಕಟ್ಲರಿ ಇಲ್ಲದೆ ಹೋಗುವುದನ್ನು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡಿದ್ದು "ಟನ್‌ಗಟ್ಟಲೆ ಏಕ-ಬಳಕೆಯ ಪ್ಲಾಸ್ಟಿಕ್‌ನ ಭೂಮಿಗೆ ಸೇರುವುದನ್ನು ತಡೆಯುತ್ತದೆ" ಎಂದು ಗೋಯಲ್‌ ತಿಳಿಸಿದ್ದಾರೆ. "ನಾವು EV100 ಉಪಕ್ರಮಕ್ಕೆ ಸಹಿ ಹಾಕಿದ್ದೇವೆ ಮತ್ತು 2030 ರ ವೇಳೆಗೆ 100 ಪ್ರತಿಶತ (ಎಲೆಕ್ಟ್ರಿಕ್ ವಾಹನ) ಫ್ಲೀಟ್‌ಗೆ ತೆರಳಲು ಬದ್ಧರಾಗಿದ್ದೇವೆ. ಅಲ್ಲದೇ ಕಳೆದ ವರ್ಷ ಕಂಪನಿಯು ಸುಮಾರು 5,00,000 ಇಂಗಾಲದ ಹೊರಸೂಸುವಿಕೆಯನ್ನು ಸರಿದೂಗಿಸಿತು" ಎಂದು ಅವರು ಹೇಳಿದರು.