ನೆಟ್‌ಫ್ಲಿಕ್ಸ್ ಚಂದಾದಾರರಲ್ಲಿ ಭಾರೀ ಕುಸಿತ: ಪಾಸ್‌ವರ್ಡ್ ಶೇರಿಂಗ್‌ಗೆ ಶೀಘ್ರದಲ್ಲೇ ಕಡಿವಾಣ? ಹಣದುಬ್ಬರ, ರಷ್ಯಾ ಉಕ್ರೇನ್ ಯುದ್ಧ ಮತ್ತು ತೀವ್ರ ಸ್ಪರ್ಧೆಯು ಚಂದಾದಾರರ ನಷ್ಟಕ್ಕೆ ಕಾರಣವಾಗಿದೆ ಎಂದು ನೆಟ್‌ಫ್ಲಿಕ್ಸ್ ಹೇಳಿದೆ :ಹಣದುಬ್ಬರ, ರಷ್ಯಾ ಉಕ್ರೇನ್ ಯುದ್ಧ ಯುದ್ಧ ಮತ್ತು ತೀವ್ರ ಪೈಪೋಟಿಯು ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಮೊದಲ ಬಾರಿಗೆ ಚಂದಾದಾರರ ನಷ್ಟಕ್ಕೆ ಕಾರಣವಾಗಿದ್ದು, ಭವಿಷ್ಯದಲ್ಲಿ ಕಂಪನಿ ಇನ್ನಷ್ಟು ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ ಎಂದು ನೆಟ್‌ಫ್ಲಿಕ್ಸ್‌ ಹೇಳಿದೆ. ಕೋವಿಡ್‌ ಸಮಯದಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದ್ದ ನೆಟ್‌ಫ್ಲಿಕ್ಸ್‌ ಈಗ ಚಂದಾದಾರರನ್ನು ಕಳೆದುಕೊಂಡಿದ್ದು ಸ್ಟ್ರೀಮಿಂಗ್ ಕಂಪನಿಯಲ್ಲಿ ಹಠಾತ್ ಬದಲಾವಣೆಯನ್ನು ಸೂಚಿಸುತ್ತದೆ. ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ನೆಟ್‌ಫ್ಲಿಕ್ಸ್ ಚಂದಾದಾರಿಕೆಯಲ್ಲಿ ಏರಿಕೆಯಾಗಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಕಂಪನಿಯು ತನ್ನ ಚಂದಾದಾರಿಕೆ ವ್ಯವಹಾರದ ಏರಿಳಿತಗಳನ್ನು ಅರ್ಥೈಸಿಕೊಳ್ಳಲು ವಿಫಲವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಪ್ರತಿಸ್ಪರ್ಧಿಗಳ ಬೆಳವಣಿಗೆ ಮತ್ತು ಬಳಕೆದಾರರು ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳುವ ಖಾತೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಬೆಳೆಯಲು ಕಷ್ಟವಾಗುವಂತೆ ತೋರುತ್ತಿದೆ. ಇದನ್ನೂ ಓದಿ:+: ಓಟಿಟಿ ಮಾರುಕಟ್ಟೆಗೆ ಶಾರುಖ್ ಎಂಟ್ರಿ? ಟ್ವೀಟರ್‌ನಲ್ಲಿ ಕಿಂಗ್‌ಖಾನ್‌ ಸುಳಿವು! ಹೀಗಾಗಿ ತನ್ನ ಚಂದಾದಾರ ಸಂಖ್ಯೆ ಹೆಚ್ಚಿಸಲು ನೆಟ್‌ಪ್ಲಿಕ್ಸ್ ಕಡಿಮೆ ಬೆಲೆಯ ಯೋಜನೆಗಳನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಇನ್ನು ಪಾಸವರ್ಡ್‌ ಶೇರಿಂಗ್‌ಗೆ ಕಡಿವಾಣ ಹಾಕಲು ಹೊಸ ಮಾರ್ಗವೊಂದನ್ನು ಕಂಡುಹಿಡಿಯಬೇಕಿದೆ. 2.5 ಮಿಲಿಯನ್ ಚಂದಾದಾರರನ್ನು ಸೇರಿಸುವ ಗುರಿ ಹೊಂದಿದ್ದ ನೆಟ್‌ಫ್ಲಿಕ್ಸ್, ತನ್ನ ಮೊದಲ ತ್ರೈಮಾಸಿಕದಲ್ಲಿ 200,000 ಚಂದಾದಾರರನ್ನು ಕಳೆದುಕೊಂಡಿದೆ ಎಂದು ಹೇಳಿದೆ. ರಷ್ಯಾ ಉಕ್ರೇನ್‌ ಯುದ್ಧ ಆರಂಭದ ನಂತರ ರಷ್ಯಾದಲ್ಲಿ ನೆಟ್‌ಫ್ಲಿಕ್ಸ್‌ ಸೇವೆಯನ್ನು ಸ್ಥಗಿತಗೊಳಿಸಿತ್ತು. ಇದರ ಪರಿಣಾಮವಾಗಿ ಕಂಪನಿ ಸುಮಾರು 700,000 ಸದಸ್ಯರನ್ನು ಕಳೆದುಕೊಂಡಿತು. ಚಂದಾದಾರರ ಬೆಳವಣಿಗೆಯಲ್ಲಿ ಕುಸಿತದಿಂದಾಗಿ, ಪ್ರತಿಸ್ಪರ್ಧಿಗಳಂತೆ ನೆಟ್‌ಫ್ಲಿಕ್ಸ್ ಜಾಹೀರಾತುಗಳೊಂದಿಗೆ ಕಡಿಮೆ-ಬೆಲೆಯ ಆವೃತ್ತಿಯನ್ನು ನೀಡುವ ಕುರಿತು ಯೋಚಿಸಬಹುದು ಎಂದು ವರದಿಗಳು ಸೂಚಿಸಿವೆ. ಪ್ರತಿಸ್ಪರ್ಧಿಗಳಾದ ಮತ್ತು + ನಿಂದ ಇದೇ ರೀತಿಯ ಕೊಡುಗೆಗಳನ್ನು ನೀಡುತ್ತವೆ. ಇನ್ನು ಉಕ್ರೇನ್‌ ಮೇಲೆ ರಷ್ಯಾ ಯುದ್ಧ ತೀವ್ರವಾಗುತ್ತಿದ್ದಂತೆ ರಷ್ಯಾ ಮೇಲೆ ಅಮೆರಿಕ ಮೂಲದ ಕಂಪನಿಗಳ ನಿಷೇಧ ಹೇರಿದ್ದವು. ಒಟಿಟಿ ಸೇವೆ ನೀಡುವ ನೆಟ್‌ಫ್ಲಿಕ್ಸ್‌ ಮತ್ತು ಅಮೆರಿಕನ್‌ ಎಕ್ಸ್‌ಪ್ರೆಸ್‌ ಕಾರ್ಡ್‌ಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿದ್ದವು. ನೆಟ್‌ ಫ್ಲಿಕ್ಸ್‌ ಚಂದಾದಾರರ ಕುಸಿತಕ್ಕೆ ಇದು ಕೂಡ ಬಹುಮುಖ್ಯ ಕಾರಣವಾಗಿರಬಹುದು. ಇದನ್ನೂ ಓದಿ:15 ಸೇವೆಗಳೊಂದಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಬಿಡುಗಡೆ! ಸ್ಟ್ರೀಮಿಂಗ್ ಉದ್ಯಮ‌ ಬೆಳವಣಿಗೆ: ಇನ್ನು ಮಾಧ್ಯಮ ಮತ್ತು ಮನರಂಜನೆಯ ಮಾರುಕಟ್ಟೆಯ ಜಂಟಿ ವರದಿಯ ಪ್ರಕಾರ, ಭಾರತೀಯ ಓಟಿಟಿ ಸ್ಟ್ರೀಮಿಂಗ್ ಉದ್ಯಮವು ( ) ಮುಂದಿನ ದಶಕದಲ್ಲಿ ವಾರ್ಷಿಕ 22-25 ಶೇಕಡಾ ಹಾಗೂ 13-15 ಶತಕೋಟಿ ಬೆಳೆವಣಿಗೆಯ ನಿರೀಕ್ಷೆಯಿದೆ. ಓಟಿಟಿ (ಓವರ್-ದಿ-ಟಾಪ್) ಉದ್ಯಮವು ನಿರಂತರವಾಗಿ ಬೆಳೆಯುತ್ತಿದೆ ಹಾಗೂ ಮಾರುಕಟ್ಟೆಯಲ್ಲಿ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಕಷ್ಟು ಸ್ಪರ್ಧೆ ಇದೆ. ಮತ್ತು ಎಲ್ಲಾ ರೀತಿಯ ಕಂಟೆಂಟ್‌ಗಳನ್ನು ನೀಡುವ 40ಕ್ಕೂ ಹೆಚ್ಚು ಕಂಪನಿಗಳೊಂದಿ ಮಾರುಕಟ್ಟೆಗಳಲ್ಲಿ ಪೈಫೋಟಿ ನಡೆಸುತ್ತಿವೆ ಎಂದು ಮತ್ತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ () ವರದಿ ಹೇಳಿದೆ. ಕೈಗೆಟಕುವ ದರದ ಹೈ-ಸ್ಪೀಡ್ ಮೊಬೈಲ್ ಇಂಟರ್ನೆಟ್, ಕಳೆದ ಆರು ವರ್ಷಗಳಲ್ಲಿ ಇಂಟರ್ನೆಟ್ ಬಳಕೆದಾರರನ್ನು ದ್ವಿಗುಣಗೊಳಿಸುವುದು, ಡಿಜಿಟಲ್ ಪಾವತಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಸೇರಿದಂತೆ ಹಲವು ವಿಷಯಗಳು ಓಟಿಟಿ ಹಾಗೂ ಡಿಜಿಟಲ್ ವೀಡಿಯೊ ಸ್ಟ್ರೀಮಿಂಗ್‌ಗಾಗಿ ಬೆಳವಣಿಗೆಗೆ ಕಾರಣವಾಗಿವೆ.