ಭಾರತದಲ್ಲಿ ಬಿಡುಗಡೆ: ಹೇಗಿದೆ ಟಾಟಾ ಗ್ರೂಪ್‌ನ ಈ -- ಸೂಪರ್‌ ಆ್ಯಪ್? ಭಾರತೀಯ ಗ್ರಾಹಕರ ಜೀವನವನ್ನು ಸರಳ ಮತ್ತು ಸುಲಭಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಲಿಂಕ್ಡ್‌ಇನ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ :ಟಾಟಾ ಗ್ರೂಪ್ ಅಧಿಕೃತವಾಗಿ ಭಾರತದಲ್ಲಿ ಟಾಟಾ ನ್ಯೂ ( ) ಸೂಪರ್ ಅಪ್ಲಿಕೇಶನನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ಅನಾವರಣಗೊಳಿಸಿದೆ. , , ಮತ್ತು ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ಎಲ್ಲಾ ಸೂಪರ್ ಅಪ್ಲಿಕೇಶನ್‌ಗಳಿಗೆ ಹೋಲಿಸಿದರೆ, ಟಾಟಾ ನ್ಯೂಯು ಯಪಿಐ () ಪಾವತಿಗಳು, ಹೋಟೆಲ್ ಅಥವಾ ಫ್ಲೈಟ್ ಬುಕಿಂಗ್, ದಿನಸಿ ಶಾಪಿಂಗ್ ಒಳಗೊಂಡಂತೆ ವ್ಯಾಪಕ ಶ್ರೇಣಿಯ ಸೇವೆಗಳನ್ನು ನೀಡುತ್ತದೆ. ನೀವು ಪ್ರತಿ ಬಾರಿ ಖರೀದಿ ಮಾಡುವಾಗ ಅಪ್ಲಿಕೇಶನ್ ರಿವಾರ್ಡಗಳನ್ನು ನೀಡುತ್ತದೆ. ಒಂದು 1 ರೂಪಾಯಿಗೆ ಸಮಾನವಾಗಿರುತ್ತದೆ. ಭವಿಷ್ಯದಲ್ಲಿ ಬಳಕೆದಾರರು ಶಾಪಿಂಗ್ ಅಥವಾ ಯಾವುದೇ ಸೇವೆಗಾಗಿ ರಿಡೀಮ್ ಮಾಡಲು ಇದನ್ನು ಬಳಸಬಹುದಾಗಿದೆ. "ಭಾರತೀಯ ಗ್ರಾಹಕರ ಜೀವನವನ್ನು ಸರಳ ಮತ್ತು ಸುಲಭಗೊಳಿಸುವುದು ನಮ್ಮ ಗುರಿಯಾಗಿದೆ. ಆಯ್ಕೆಯ ಶಕ್ತಿ, ತಡೆರಹಿತ ಅನುಭವ ಮತ್ತು ನಿಷ್ಠೆ ಟಾಟಾ ನ್ಯೂ ಉದ್ದೇಶವಾಗಿದೆ, ಇದು ಪ್ರಬಲವಾದ ಒನ್ ಟಾಟಾ ಅನುಭವವನ್ನು ನೀಡುತ್ತದೆ," ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಲಿಂಕ್ಡ್‌ಇನ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.‌ ಡೌನಲೋಡ್‌ ಲಭ್ಯ: ಅಪ್ಲಿಕೇಶನ್ ಈಗ ಗೂಗಲ್‌ ಪ್ಲೇ ಸ್ಟೋರ್ ಮತ್ತು ಆಪಲ್‌ ಆಪ್‌ ಸ್ಟೋರ್ ಎರಡರಲ್ಲೂ ಡೌನ್‌ಲೋಡ್ ಮಾಡಲು ಲಭ್ಯವಿದೆ. ಇದನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದಾಗಿದೆ, ಆದರೆ ಪ್ರಸ್ತುತ ಕೆಲವು ದೋಷಗಳನ್ನು ಎದುರಿಸುತ್ತಿದೆ. ಐಫೋನ್‌ನಲ್ಲಿ ಅಪ್ಲಿಕೇಶನನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕೆಲ ಬಳಕೆದಾರರು ತಿಳಿಸಿದ್ದಾರೆ. ಇದನ್ನೂ ಓದಿ:ಗೂಗಲ್ ಪ್ಲೇ ಸ್ಟೋರ್‌ ಮಹತ್ವದ ಬದಲಾವಣೆ: ನವೆಂಬರ್‌ನಿಂದ ಈ ಆ್ಯಪ್ಸ್‌ ಡೌನ್‌ಲೋಡ್‌ ಅಸಾಧ್ಯ ಆಂಡ್ರಾಯ್ಡನಲ್ಲಿ ಅಪ್ಲಿಕೇಶನ್ ಸುಲಭವಾಗಿ ಡೌನ್‌ಲೋಡ್‌ ಆಗುತ್ತಿದೆ. ಆಪ್‌ ಹೊಸದಾಗಿ ಬಿಡುಗಡೆಯಾಗಿರುವುದರಿಂದ ಸಾಕಷ್ಟು ಬಳಕೆದಾರರು ಡೌನ್‌ಲೋಡ್ ಮಾಡಲು ಪ್ರಯತ್ನಿಸುತ್ತಿರುವುದರಿಂದ ಈ ಸಮಸ್ಯೆಯಾಗುತ್ತಿರಬಹುದು. :ಟಾಟಾ ಈ ವಾರದ ಆರಂಭದಲ್ಲಿ ನ್ಯೂ ಸೂಪರ್ ಅಪ್ಲಿಕೇಶನ್‌ನ ಸಾರ್ವಜನಿಕ ಬಿಡುಗಡೆಯನ್ನು ಘೋಷಿಸಿತು. ಇದುವರೆಗೆ ಇದು ಟಾಟಾ ಉದ್ಯೋಗಿಗಳಿಗೆ ಮಾತ್ರ ಲಭ್ಯವಿತ್ತು. ಪ್ರಸ್ತುತ ನಡೆಯತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ( 2022) ಪಂದ್ಯಾವಳಿಯಲ್ಲಿ ಟಾಟಾ ಮೊದಲ ಬಾರಿಗೆ ಸಾರ್ವಜನಿಕವಾಗಿ ಸೂಪರ್ ಅಪ್ಲಿಕೇಶನ್ ಜಾಹೀರಾತು ಮಾಡಲು ಪ್ರಾರಂಭಿಸಿತು. ಅಪ್ಲಿಕೇಶನ್ ಈಗ ಎಲ್ಲರಿಗೂ ಲಭ್ಯವಿದೆ. ಪ್ರತಿಸ್ಪರ್ಧಿ ಸೂಪರ್ ಅಪ್ಲಿಕೇಶನ್‌ಗಳಿಗಿಂತ ಭಿನ್ನವಾಗಿ, ಅಪ್ಲಿಕೇಶನ್ ಪ್ರತಿ ವಹಿವಾಟಿಗೆ ಬಹುಮಾನಗಳನ್ನು ನೀಡುವ ಗುರಿಯನ್ನು ಹೊಂದಿದೆ. ಉದಾಹರಣೆಗೆ, ನೀವು ಅಪ್ಲಿಕೇಶನ್ ಮೂಲಕ ಮಾಡುವ ಪ್ರತಿ ಪಾವತಿ ಅಥವಾ ವಹಿವಾಟಿನ ಮೇಲೆ ಅಪ್ಲಿಕೇಶನ್ ರೂಪದಲ್ಲಿ ಬಹುಮಾನಗಳನ್ನು ನೀಡುತ್ತದೆ. ಈ ರೂ. 1 ಗೆ ಸಮನಾಗಿರುತ್ತದೆ ಮತ್ತು ಭವಿಷ್ಯದ ವಹಿವಾಟುಗಳಲ್ಲಿ ಇವುಗಳನ್ನು ಪುನಃ ಬಳಸಬಹುದಾಗಿದೆ. ಆದಾಗ್ಯೂ, ಬಳಸಲು, ಬಳಕೆದಾರರು ಖರೀದಿ ಮಾಡಲು ಟಾಟಾ ಪೇ ( ) ಬಳಸಬೇಕಾಗುತ್ತದೆ, ಇದು ಅಮೆಝಾನ್‌ ಪೇ ( ) ಅಥವಾ ಪೇಟಿಎಂ () ವ್ಯಾಲೆಟ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಪಾವತಿ: ಬಳಕೆದಾರರಿಗೆ ಯುಪಿಐ () ಪಾವತಿಗಳನ್ನು ಮಾಡಲು ಸಹ ಅನುಮತಿಸುತ್ತದೆ. ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡುವ ಮೂಲಕ ಬಳಕೆದಾರರು ದಿನಸಿ ಅಂಗಡಿ ಸೇರಿದಂತೆ ಹಲವು ಕಡೆ ಪಾವತಿಗಳನ್ನು ಮಾಡಬಹುದು. ಪ್ಲಾಟ್‌ಫಾರ್ಮ್ ಬಳಕೆದಾರರಿಗೆ ಹಣವನ್ನು ಕಳುಹಿಸಲು, ಹಣವನ್ನು ಅವರಿಗೆ ವರ್ಗಾಯಿಸಲು, ಖಾತೆಗಳಿಗೆ ಹಣವನ್ನು ವರ್ಗಾಯಿಸಲು, ಬ್ಯಾಲೆನ್ಸ್ ಪರಿಶೀಲಿಸಿ, ಹಣವನ್ನು ವಿನಂತಿಸಲು, ಆಟೋ ಪೇ ನಿರ್ವಹಣೆ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಅನುಮತಿಸುತ್ತದೆ. ಇದನ್ನೂ ಓದಿ: : ಗೂಗಲ್‌ ಪೇ ಹೊಸ ಫೀಚರ್:‌ ಹಣ ಪಾವತಿ ಈಗ ಇನ್ನೂ ಸುಲಭ! ಹೆಚ್ಚುವರಿಯಾಗಿ, ಟಾಟಾ ನ್ಯೂಯು ಬಿಗ್‌ಬಾಸ್ಕೆಟ್‌ನಂತಹ ಹಲವಾರು ಇತರ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದು, ನ್ಯೂಕೋಯಿನ್‌ಗಳ ರೂಪದಲ್ಲಿ ರಿಯಾಯಿತಿಗಳು ಮತ್ತು ಕ್ಯಾಶ್‌ಬ್ಯಾಕನ್ನು ನೀಡುತ್ತದೆ. ಟಾಟಾ ಬ್ರ್ಯಾಂಡ್‌ಗಳ ಸಮಾಗಮ:" ಅಪ್ಲಿಕೇಶನ್ ಇಂದು ಲೈವ್ ಆಗುತ್ತಿದ್ದಂತೆ, ನಮ್ಮ ಹಲವಾರು ವಿಶ್ವಾಸಾರ್ಹ ಮತ್ತು ಪ್ರೀತಿಪಾತ್ರ ಬ್ರ್ಯಾಂಡ್‌ಗಳಾದ , , , , , , 1Mg, , , ನ್ಯೂ ಪ್ಲಾಟ್‌ಫಾರ್ಮ್‌ನಲ್ಲಿ ನೋಡಲು ನನಗೆ ಹೆಮ್ಮೆಯಾಗುತ್ತದೆ. ಅಲ್ಲದೇ ವಿಸ್ತಾರಾ, ಏರ್ ಇಂಡಿಯಾ, ಟೈಟಾನ್, ತನಿಷ್ಕ್, ಟಾಟಾ ಮೋಟಾರ್ಸ್ ಶೀಘ್ರದಲ್ಲೇ ಸೇರಲಿದೆ" ಎಂದು ಚಂದ್ರಶೇಖರನ್ ಹೈಲೈಟ್ ಮಾಡಿದ್ದಾರೆ. ಆಲ್‌ ಇನ್‌ ಒನ್‌ ಆಪ್?;ಸೂಪರ್ ಅಪ್ಲಿಕೇಶನ್ ಬಳಕೆದಾರರಿಗೆ ಬಿಲ್‌ಗಳನ್ನು ಪಾವತಿಸಲು, ಮೊಬೈಲ್ ರೀಚಾರ್ಜ್‌ಗಳನ್ನು ಮಾಡಲು ಮತ್ತು ನಡೆಯುತ್ತಿರುವ ಐಪಿಎಲ್‌ 2021 ಸೀಸನ್‌ಗೆ ಸಂಬಂಧಿಸಿದ ನವೀಕರಣಗಳನ್ನು ಸಹ ನೀಡುತ್ತದೆ. ಸೂಪರ್ ಅಪ್ಲಿಕೇಶನ್ ಮೂಲಕ ಬಳಕೆದಾರರು ದಿನಸಿ, ಔಷಧಿಗಳು, ಉಡುಪುಗಳು, ಎಲೆಕ್ಟ್ರಾನಿಕ್ಸ್ ಮತ್ತು ಹೆಚ್ಚಿನದನ್ನು ಖರೀದಿಸಲು ಸಹ ಸಾಧ್ಯವಾಗುತ್ತದೆ.