ಏಲಿಯನ್ಸ್ ಆಕರ್ಷಿಸಲು ಬಾಹ್ಯಾಕಾಶಕ್ಕೆ ಮಾನವರ ನಗ್ನ ಚಿತ್ರ: ನಾಸಾ ವಿಜ್ಞಾನಿಗಳ ಹೊಸ ಪ್ರಯೋಗ! ಅನ್ಯಲೋಕದ ಜೀವಿಗಳನ್ನು ಅಥವಾ ಏಲಿಯನ್‌ಗಳನ್ನು ಸಂಪರ್ಕಿಸುವ ಹೊಸ ಪ್ರಯತ್ನದಲ್ಲಿ, ವಿಜ್ಞಾನಿಗಳು ಇಬ್ಬರು ನಗ್ನ ವ್ಯಕ್ತಿಗಳ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ ಹೋಸ ಪ್ರಯೋಗಕ್ಕೆ ಸಿದ್ದರಾಗಿದ್ದಾರೆ. ನವದೆಹಲಿ (ಏ. 04):ಮಾನವರು 150 ವರ್ಷಗಳಿಂದ ಅನ್ಯಲೋಕದ ಜೀವಿಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಆದರೂ ಈ ಪ್ರಯತ್ನಕ್ಕೆ ಇನ್ನೂ ಯಶಸ್ಸು ಸಿಕ್ಕಿಲ್ಲ, ಅಥವಾ ವಿಜ್ಞಾನಿಗಳು ಈ ಸಾಹಸದಲ್ಲಿ ಯಶಸ್ವಿಯಾಗಿದ್ದರೂ ಕನಿಷ್ಠ ಸಾರ್ವಜನಿಕರಿಗೆ ಈ ಬಗ್ಗೆ ತಿಳಿದಿಲ್ಲ. ಈಗ ಅನ್ಯಲೋಕದ ಜೀವಿಗಳನ್ನು ಅಥವಾ ಏಲಿಯನ್‌ಗಳನ್ನು ಸಂಪರ್ಕಿಸುವ ಹೊಸ ಪ್ರಯತ್ನದಲ್ಲಿ, ವಿಜ್ಞಾನಿಗಳು ಇಬ್ಬರು ನಗ್ನ ವ್ಯಕ್ತಿಗಳ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ ಹೊಸ ಪ್ರಯೋಗಕ್ಕೆ ಸಿದ್ದರಾಗಿದ್ದಾರೆ. ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ವಿಜ್ಞಾನಿಗಳ ಗುಂಪೊಂದು ಹೊಸ ಸಂದೇಶವನ್ನು ಅಭಿವೃದ್ಧಿಪಡಿಸಿದೆ. ಈ ಸಂದೇಶಗಳನ್ನು ಇತರೆ ಗೃಹಗಳಲ್ಲಿ ಅಸ್ತಿತ್ವದಲ್ಲಿರಬಹುದಾದ ಅನ್ಯಲೋಕದ ಬುದ್ಧಿವಂತ ಜೀವಿಗಳಿಗೆ ರವಾನಿಸಬಹುದು ಎಂದು ಸೈಂಟಿಫಿಕ್ ಅಮೇರಿಕನ್ ( ) ವರದಿ ತಿಳಿಸಿದೆ. ಇದನ್ನೂ ಓದಿ:ಬ್ರಹ್ಮಾಂಡದಲ್ಲಿ 136 ಜ್ಯೋತಿರ್ವರ್ಷ ದೂರದಲ್ಲಿ ಅಡಗಿದ್ದ ಮಸುಕಾದ ಗ್ಯಾಲಕ್ಸಿ ಪತ್ತೆ! ಏಲಿಯನ್‌ ಸಂಪರ್ಕ ಪ್ರಯತ್ನ:ಸಂಭಾವ್ಯ ಅನ್ಯಗ್ರಹ ಜೀವಿಗಳ ಬಗೆಗಿನ ಕುತೂಹಲವನ್ನು ಹೆಚ್ಚಿಸಲು ಮತ್ತು ಸಂವಹನವನ್ನು ಉತ್ತೇಜಿಸಲು ಭೂಮಿಯ ವಾತಾವರಣದಿಂದ ಇಬ್ಬರು ನಗ್ನ ವ್ಯಕ್ತಿಗಳ ಕಾರ್ಟೂನನ್ನು ಕಳುಹಿಸುವ ಮೂಲಕ ವಿಶ್ವದಲ್ಲಿನ ಇತರ ಜೀವ ರೂಪಗಳನ್ನು ಸಂಪರ್ಕಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಈ ಯೋಜನೆಯು ಗುರುತ್ವಾಕರ್ಷಣೆಯ ಚಿತ್ರಣವನ್ನು ಮತ್ತು ಡಿಎನ್‌ಎಯನ್ನು () ಸಹ ಒಳಗೊಂಡಿದೆ, ಜೊತೆಗೆ ನಗ್ನ ಪುರುಷ ಮತ್ತು ಮಹಿಳೆ ಹಲೋ () ಎಂದು ಹೇಳುವ ಪಿಕ್ಸಿಲೇಟೆಡ್ ರೇಖಾಚಿತ್ರವನ್ನೂ ಒಳಗೊಂಡಿದೆ. ಬೀಕನ್ ಇನ್ ದಿ ಗ್ಯಾಲಕ್ಸಿ ( - ) ಹೆಸರಿನ ಹೊಸ ಬಾಹ್ಯಾಕಾಶ ಟಿಪ್ಪಣಿಯನ್ನು () ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ವಿಜ್ಞಾನಿ ಜೊನಾಥನ್ ಜಿಯಾಂಗ್ ಮತ್ತು ಅವರ ಸಹೋದ್ಯೋಗಿಗಳು ರೂಪಿಸಿದ್ದಾರೆ. ಈ ವಿಜ್ಞಾನಿಗಳು ತಮ್ಮ ಪ್ರೇರಣೆ ಮತ್ತು ವಿಧಾನವನ್ನು ಪ್ರಿಪ್ರಿಂಟ್ ಸೈಟ್‌ನ ಅಧ್ಯಯನದಲ್ಲಿ ಪ್ರಕಟಿಸಿದ್ದಾರೆ. ವಿಜ್ಞಾನಿಗಳ ಪ್ರಕಾರ, ಅವರು ಅನ್ಯಗೃಹ ಜೀವಿ ಅಥವಾ ಏಲಿಯನ್‌ಗಳೊಂದಿಗೆ ಸಂಹವನ ಮಾಡುವ ಸವಾಲುಗಳ ಕಾರಣದಿಂದಾಗಿ ಈ ಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ. ಆದರೆ ಅನ್ಯಗೃಹ ಜೀವಿಗಳ ಸಂಹವನ ಮಾಧ್ಯಮ ಮಾನವರ ಶೈಲಿಗಿಂತ ಸಂಪೂರ್ಣವಾಗಿ ವಿಭಿನ್ನವಾದ ಭಾಷೆಯ ಸ್ವರೂಪವನ್ನು ಹೊಂದಿರಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಅಜ್ಞಾತ ಬಾಹ್ಯಾಕಾಶ ವಸ್ತು ಪತ್ತೆ:ಕೆಲ ದಿನಗಳ ಹಿಂದೆ ಬಾಹ್ಯಾಕಾಶದಲ್ಲಿ ಪ್ರತಿ 18 ನಿಮಿಷಗಳಿಗೊಮ್ಮೆ ಸುಮಾರು ಒಂದು ನಿಮಿಷ ಸಕ್ರಿಯವಾಗಿದ್ದ ಹೊಸ ವಸ್ತುವೊಂದನ್ನು ಆಸ್ಟ್ರೇಲಿಯಾದ ರೇಡಿಯೋ ಖಗೋಳಶಾಸ್ತ್ರಜ್ಞರ ( )ತಂಡವು ಪತ್ತೆ ಮಾಡಿತ್ತು. ಇದು ಭೂಮಿಯಿಂದ ಸುಮಾರು 4,000 ಜ್ಯೋತಿರ್ವಷಗಳಷ್ಟು ದೂರದಲ್ಲಿದ್ದು ಗಂಟೆಗೆ ಮೂರು ಬಾರಿ ನಿಯಮಿತ ಮಧ್ಯಂತರದಲ್ಲಿ ಬಲವಾದ ರೇಡಿಯೊ ಸಂಕೇತಗಳನ್ನು ಕಳುಹಿಸುತ್ತಿತ್ತು. ಇದನ್ನೂ ಓದಿ:ಸೂರ್ಯನ ಅತ್ಯಂತ ಸ್ಪಷ್ಟ ಚಿತ್ರ ಸೆರೆಹಿಡಿದ ಯುರೋಪಿಯನ್ ಸೋಲಾರ್ ಆರ್ಬಿಟರ್! ಇದು ಕುಸಿದ ನಕ್ಷತ್ರದ ( ) ಅವಶೇಷವಾಗಿರಬಹುದು, ದಟ್ಟವಾದ ನ್ಯೂಟ್ರಾನ್ ನಕ್ಷತ್ರ ಅಥವಾ ಬಲವಾದ ಕಾಂತೀಯ ಕ್ಷೇತ್ರದೊಂದಿಗೆ ಸತ್ತ ಬಿಳಿ ಕುಬ್ಜ ನಕ್ಷತ್ರವಾಗಿರಬಹುದು ( ), ಅಥವಾ ಅದು ಸಂಪೂರ್ಣವಾಗಿ ಬೇರೆ ಯಾವುದಾದರೂ ವಸ್ತು ಆಗಿರಬಹುದು ಎಂಬುದು ಖಗೋಳಶಾಸ್ತ್ರಜ್ಞರ ಅಭಿಪ್ರಾಯಪಟ್ಟಿದ್ದರು. ಇನ್ನು ಇದು ಏಲಿಯನ್‌ಗಳು ಮಾನವರಿಗಾಗಿ ಕಳುಹಿಸಯತ್ತಿರುವ ಸಂದೇಶವಾಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು. ಈ ಬೆನ್ನಲ್ಲೇ ಮಾಹಿತಿ ನೀಡಿದ್ದ ಆಸ್ಟ್ರೇಲಿಯಾದ ಕರ್ಟಿನ್ ವಿಶ್ವವಿದ್ಯಾಲಯದ ( ) ಖಗೋಳ ಭೌತಶಾಸ್ತ್ರಜ್ಞ ಡಾ ನತಾಶಾ ಹರ್ಲಿ-ವಾಕರ್ "ನಮ್ಮ ಅವಲೋಕನಗಳ ಸಮಯದಲ್ಲಿ ಈ ವಸ್ತುವು ಕೆಲವು ಗಂಟೆಗಳ ಕಾಲ ಗೋಚರಿಸುತ್ತದೆ ಮತ್ತು ಕಣ್ಮರೆಯಾಗುತ್ತಿದೆ. ಇದು ಸಂಪೂರ್ಣವಾಗಿ ಅನಿರೀಕ್ಷಿತವಾಗಿತ್ತು. ಖಗೋಳಶಾಸ್ತ್ರಜ್ಞನಿಗೆ ಇದು ಒಂದು ರೀತಿಯ ಭಯಾನಕ ಸಂಗತಿ. ಏಕೆಂದರೆ ಆಕಾಶದಲ್ಲಿರುವ ಈ ವಸ್ತುವಿನ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ, ಇದರ ಬಗ್ಗೆ ಏನೂ ತಿಳಿದಿಲ್ಲ, ”ಎಂದು ಹೇಳಿದ್ದರು.