ಏ.2ಕ್ಕೆ M33 5G ಲಾಂಚ್, ಕ್ಯಾಮೆರಾ ಹೇಗಿದೆ? ಫೀಚರ್‌ಗಳೇನು? *ಸ್ಯಾಮ್ಸಂಗ್‌ನ ಈ ಹೊಸ ಫೋನು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ*ಅಮೆಜಾನ್ ಮೈಕ್ರೋಸೈಟ್ ಮೂಲಕ ಬಿಡುಗಡೆ ದಿನಾಂಕ ಖಚಿತಪಡಿಸಿದ ಸ್ಯಾಮ್ಸಂಗ್*ಈ ಗ್ಯಾಲಕ್ಸಿ ಎಂ335 ಸ್ಮಾರ್ಟ್‌ಫೋನಿನಲ್ಲಿ ನಾಲ್ಕುಕ್ಯಾಮೆರಾ ಸೆಟ್ ಅಪ್ ಇದೆ. ಭಾರತೀಯ ಮಾರುಕಟ್ಟೆಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ33 5ಜಿ ( M333 5G) ಸ್ಮಾರ್ಟ್‌ ಫೋನ್ ಲಾಂಚ್ ಆಗುವ ಬಗ್ಗೆ ಕೆಲವಾರು ದಿನಗಳಿಂದ ಸುದ್ದಿ ಇತ್ತು. ಅದೀಗ ಖಚಿತವಾಗಿದೆ. ಏಪ್ರಿಲ್ 2ರಂದು ಈ ಗ್ಯಾಲಕ್ಸಿ ಎಂ33 5ಜಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಸ್ಮಾರ್ಟ್‌ಫೋನ್ ತಯಾರಿಕೆಯ ಜಗತ್ತಿನ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ದಕ್ಷಿಣ ಕೊರಿಯಾ ( )ದ ಟೆಕ್ ದೈತ್ಯ ಸ್ಯಾಮ್ಸಂಗ್ ತನ್ನ ಪ್ರೀಮಿಯಂ ಮತ್ತು ಬಜೆಟ್ ಫೋನ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಅಗ್ರ ಪಾಲನ್ನು ಹೊಂದಿದೆ. ವಿಶಾಲವಾದ ಗ್ರಾಹಕ ವಲಯವನ್ನು ಒಳಗೊಂಡಿದೆ. ಈಗ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ33 5ಜಿ ( M33 5G) ಸ್ಮಾರ್ಟ್‌ಫೋನ್ ಲಾಂಚ್ ಆಗುತ್ತಿರುವುದು ಸ್ಯಾಮ್ಸಂಗ್ ಪ್ರಿಯರಲ್ಲಿ ಖುಷಿಯಾಗಿರುತ್ತದೆ. ಅಂದ ಹಾಗೆ, ಆನ್ ಲೈನ್ ಕಾಮರ್ಸ್ ತಾಣವಾಗಿರುವ ಅಮೆಜಾನ್ ಮೈಕ್ರೋಸೈಟ್‌ನ ಡೆಡಿಕೆಟೆಡ್ ಪೇಜ್ಮೂಲಕ ಕಂಪನಿಯು ಭಾರತದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ33 5ಜಿ ಸ್ಮಾರ್ಟ್‌ಫೋನ್ ಏಪ್ರಿಲ್ 2ರಂದು ಲಾಂಚ್ ಖಚಿತಪಡಿಸಿದೆ. : ಡಿಸ್‌ಪ್ಲೇ, ಫಾಸ್ಟ್ ಚಾರ್ಜಿಂಗ್ ಸೇರಿ ಸೂಪರ್ಬ್ ಫೀಚರ್ಸ್ ಹೇಗಿರಲಿದೆ ಈ ಗ್ಯಾಲಕ್ಸಿ ಎಂ33 5ಜಿ ಫೋನ್?ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ33 5ಜಿ ಸ್ಮಾರ್ಟ್‌ಫೋನ್ ವಿಶೇಷತೆಗಳ ಬಗ್ಗೆ ಈಗಾಗಲೇ ಆನ್‌ಲೈನ್ ಒಂದಿಷ್ಟು ಮಾಹಿತಿ ಸೋರಿಕೆಯಾಗಿವೆ. ಹಲವು ಟಿಪ್ಸಟರ್‌ಗಳು ಈ ಬಗ್ಗೆ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಅಮೆಜಾನ್ ಮೈಕ್ರೊಸೈಟ್‌ನಲ್ಲಿ ನೀಡಲಾಗಿರುವ ಮಾಹಿತಿಯ ಪ್ರಕಾರ, ಎಂ33 5ಜಿ ಸ್ಮಾರ್ಟ್‌ಫೋನ್ ಗ್ರಾಹಕರಿಗೆ 6 + 128 ಮತ್ತು 8 + 128 ಎರಡು ಮಾದರಿಯ ಮತ್ತು ಸ್ಟೋರೇಜ್‌ಗಳಲ್ಲಿ ಸಿಗಲಿದೆ. ಈ ಫೋನ್ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000 ಬ್ಯಾಟರಿಯನ್ನು ಹೊಂದಿದೆ. ಎಲ್‌ಸಿಡಿ ಡಿಸ್‌ಪ್ಲೇ?ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ M33 5G ಯ ಭಾರತೀಯ ಮಾದರಿಯು 12 ಆಧಾರಿತ 4.1 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ. 120Hz ರಿಫ್ರೆಶ್ ರೇಟ್‌ನೊಂದಿಗೆ 6.6-ಇಂಚಿನ ಪೂರ್ಣ-+ (1,080x2,408 ಪಿಕ್ಸೆಲ್‌ಗಳು) ಡಿಸ್‌ಪ್ಲೇ ಹೊಂದಿರಲು ಎಂದು ಹೇಳಲಾಗುತ್ತಿದೆ. ಕ್ವಾಡ್ ರಿಯರ್ ಕ್ಯಾಮೆರಾಅಮೆಜಾನ್ ಮೈಕ್ರೋಸೈಟ್‌ನಲ್ಲಿ ತಿಳಿಸಿರುವಂತೆ, M33 5G ಫೋನ್ ಹಿಂಬದಿಯಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಸೆಟ್‌ಅಪ್‌ನಲ್ಲಿ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದ್ದರೆ, 5 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಮತ್ತು ಎರಡು 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಮತ್ತು ಡೆಪ್ತ್ ಕ್ಯಾಮೆರಾಗಳನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಸ್ಮಾರ್ಟ್‌ಫೋನ್ 8-ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಸಹ ಹೊಂದಿರ ಬಹುದು ಎಂದು ಹ ಳಲಾಗುತ್ತಿದೆ. ಈ ಫೋನ್ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಜೊತೆಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಒಳಗೊಂಡಿರುವ ನಿರೀಕ್ಷೆಯಿದೆ. 2 ಏಪ್ರಿಲ್ 7ಕ್ಕೆ ಭಾರತದಲ್ಲಿ ಲಾಂಚ್: ಬೆಲೆ ಎಷ್ಟು? ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ33 5ಜಿ ಸ್ಮಾರ್ಟ್‌ಫೋನ್ ಬಗ್ಗೆ ಈವರೆಗೂ ಸಂಪೂರ್ಣವಾಗಿರುವ ಮಾಹಿತಿಗಳಿಲ್ಲ. ಅಮೆಜಾನ್ ಮೈಕ್ರೋಸೈಟ್ ಡೆಡಿಕೆಟೆಡ್ ಪುಟದಲ್ಲೂ ಸ್ವಲ್ಪ ಮಾಹಿತಿಯನ್ನು ನೀಡಲಾಗಿದೆ. ಹಾಗಾಗಿ, ಎರಡು ವೆರಿಯೆಂಟ್‌ಗಳಲ್ಲಿ ದೊರೆಯಲಿರುವ ಈ ಫೋನ್ ಬೆಲೆ ಎಷ್ಟು ಎಂಬುದು ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ ಬ್ಯಾಟರಿ ಮತ್ತು ಕ್ಯಾಮೆರಾಗಳನ್ನು ಪರಿಗಣಿಸಿದರೆ ಇದು ಪ್ರೀಮಿಯಂ ಫೋನ್ ಆಗಿರಬಹದು ಎಂಬ ನಿರೀಕ್ಷೆ ಹಲವರದು. ಎಂ33 5ಜಿ ಸ್ಮಾರ್ಟ್‌ಫೋನ್ ಬಗೆಗಿನ ಎಲ್ಲ ಪ್ರಶ್ನೆಗಳಿಗೆ ಏಪ್ರಿಲ್ 2ರಂದು ಉತ್ತರ ಸಿಗಲಿದೆ.