: ಮನರಂಜನೆ ಜತೆಗೆ ಆರೋಗ್ಯಕರ ಜೀವನಕ್ಕೆ ಆ್ಯಕ್ಟೀವ್‌ ಗೇಮಿಂಗ್!‌ ವೇಟ್‌ಲಿಫ್ಟಿಂಗ್ ಅಥವಾ ಓಟದಂತಹ ಸಾಂಪ್ರದಾಯಿಕ ವ್ಯಾಯಾಮವು ಕೆಲವು ಜನರಿಗೆ ಇಷ್ಟವಾಗುವುದಿಲ್ಲ. ವ್ಯಾಯಾಮದಂತೆ ತೋರದ ಆದರೆ ದೆಹಕ್ಕೆ ಸಾಕಷ್ಟು ವ್ಯಾಯಾಮ ನೀಡುವ ವೀಡಿಯೊ ಗೇಮಿಂಗನ್ನು ಕೆಲವರು ಇಷ್ಟಪಡಬಹುದು. ಜಿಮ್‌ಗೆ ಹೋಗಲು ಇಷ್ಟಪಡದ ಜನರಿಗೆ ಮನರಂಜನೆಯ ಜತೆಗೆ ಆರೋಗ್ಯಕರ ಜೀವನಕ್ಕೂ ಎಕ್ಸರ್‌ಗೇಮಿಂಗ್ ಸಹಾಯ ಮಾಡಬಹುದು ದಿನ ಕಳೆದಂತೆ ಮನುಷ್ಯನ ಜೀವನಶೈಲಿ, ಆಹಾರಪದ್ಧತಿ ಬದಲಾಗುತ್ತಿದೆ. ಜತೆಗೆ ಆರೋಗ್ಯ ಸಮಸ್ಯೆಯೂ ಹೆಚ್ಚಾಗಿದೆ. ಈ ಮಧ್ಯೆ ಜನರು ಆರೋಗ್ಯಕರ ಜೀವನಕ್ಕಾಗಿ ಕಸರತ್ತು ಮಾಡುವುದು ಸರ್ವೇ ಸಾಮಾನ್ಯ. ಆದರೆ ವೇಟ್‌ಲಿಫ್ಟಿಂಗ್ ಅಥವಾ ಓಟದಂತಹ ಸಾಂಪ್ರದಾಯಿಕ ವ್ಯಾಯಾಮವು ಕೆಲವು ಜನರಿಗೆ ಇಷ್ಟವಾಗದಿರಬಹುದು. ವ್ಯಾಯಾಮದಂತೆ ತೋರದ ಆದರೆ ದೆಹಕ್ಕೆ ಸಾಕಷ್ಟು ವ್ಯಾಯಾಮ ನೀಡುವ ವೀಡಿಯೊ ಗೇಮಿಂಗನ್ನು ಕೆಲವರು ಇಷ್ಟಪಡಬಹುದು. ಜಿಮ್‌ಗೆ ಹೋಗಲು ಇಷ್ಟಪಡದ ಜನರಿಗೆ ಮನರಂಜನೆಯ ಜತೆಗೆ ಆರೋಗ್ಯಕರ ಜೀವನಕ್ಕೂ ಈ ಎಕ್ಸರ್‌ಗೇಮಿಂಗ್ ಸಹಾಯ ಮಾಡಬಹುದು. ಎಕ್ಸರ್‌ಗೇಮಿಂಗ್ ಎಂದದರೇನು?:ಎಕ್ಸರ್‌ಗೇಮಿಂಗ್ ಅಥವಾ ಆಕ್ಟಿವ್ ವೀಡಿಯೊ ಗೇಮಿಂಗ್, ಜನರು ಹೆಚ್ಚು ಸಕ್ರಿಯರಾಗಲು ಸಹಾಯ ಮಾಡುತ್ತದೆ. ಇದನ್ನು ತಂತ್ರಜ್ಞಾನ-ಚಾಲಿತ ದೈಹಿಕ ಚಟುವಟಿಕೆಗಳು ಎಂದು ವ್ಯಾಖ್ಯಾನಿಸಲಾಗಿದೆ, ನಿರ್ದಿಷ್ಟ ಆಟವನ್ನು ಆಡಲು ಭಾಗವಹಿಸುವವರು ದೈಹಿಕವಾಗಿ ಸಕ್ರಿಯರಾಗಿರಬೇಕು. ಇದು ಫಿಟ್ನೆಸ್ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಉದಯೋನ್ಮುಖ ಪ್ರವೃತ್ತಿಯಾಗಿದೆ. ಇದನ್ನೂ ಓದಿ: : ಮೊಬೈಲ್ ಗೇಮಿಂಗ್ ಮಾರುಕಟ್ಟೆಗೆ ಎಂಟ್ರಿ: 250ಕ್ಕೂ ಹೆಚ್ಚು ಉಚಿತ ಗೇಮ್ಸ್! ಮೂಲಭೂತವಾಗಿ, ವ್ಯಾಯಾಮ ಮಾಡುವುದರೊಂದಿಗೆ, ಒಬ್ಬ ವ್ಯಕ್ತಿಯು ಗೇಮಿಂಗ್‌ನಲ್ಲಿ ಮನರಂಜನೆಯನ್ನು ಪಡೆಯುತ್ತಾನೆ. ಹೀಗಾಗಿ ಸಾಂಪ್ರದಾಯಿಕ ವೀಡಿಯೊ ಗೇಮಿಂಗ್‌ ಬದಲಾಗಿ ಎಕ್ಸರ್‌ಗೇಮಿಂಗ್ ಪ್ರಯತ್ನಿಸಿದಾಗ ಆಟಗಾರನಿಗೆ ಇದು ಆರೋಗ್ಯಕರವಾಗಿರಲು ಮತ್ತು ಫಿಟ್ ಆಗಿರಲು ಸಹಾಯ ಮಾಡುತ್ತದೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಸ್ಪೋರ್ಟ್ ಅಂಡ್ ಎಕ್ಸರ್ಸೈಸ್ ಸೈಕಾಲಜಿ' ಪ್ರಕಾರ, ಡ್ಯಾನ್ಸ್ ಡ್ಯಾನ್ಸ್ ರೆವಲ್ಯೂಷನ್, ಇಎ ಸ್ಪೋರ್ಟ್ಸ್ ಆಕ್ಟಿವ್ ಮತ್ತು ಬೀಟ್ ಸೇಬರ್ ಕೆಲವು ಹೆಚ್ಚು ಜನಪ್ರಿಯ ವ್ಯಾಯಾಮಗಳಾಗಿವೆ. ಮತ್ತು ನಂತಹ ಹೆಚ್ಚಿನ ಗೇಮಿಂಗ್ ಕನ್ಸೋಲ್‌ಗಳಿಗೆ ಆಕ್ಟಿವ್ ಗೇಮಿಂಗ್ ಆಯ್ಕೆಗಳು ಅಸ್ತಿತ್ವದಲ್ಲಿವೆ. ಎಕ್ಸರ್‌ಗೇಮಿಂಗ್ ವ್ಯಾಯಾಮದ ಪ್ರಯೋಜನಗಳು?:ಎಕ್ಸರ್‌ಗೇಮಿಂಗ್ ವ್ಯಾಯಾಮಗಳು ಆಟಗಾರಿಗೆ ಮನರಂಜನೆ ನೀಡುವ ಜತೆಗೆ ದೈಹಿಕ ಚಟುವಟಿಕೆಗಳಲ್ಲಿ ತೊಡಗುವಂತೆ ನಿರ್ಮಿಸಲಾಗಿವೆ. ಎಕ್ಸರ್‌ಗೇಮ್‌ಗಳ ಅನುಭವವನ್ನು ಮೊಬೈಲ್‌ ಸಾಧನಗಳಲ್ಲಿ ಪಡೆಯುವುದು ಕಷ್ಟ ಸಾಧ್ಯವಾದರೂ ಗೇಮಿಂಗ್ ಪ್ರಿಯರು ಫೇವರೇಟ್‌ ಮತ್ತು ನಂತಹ ಗೇಮಿಂಗ್ ಕನ್ಸೋಲ್‌ಗಳಲ್ಲಿ ಈ ಆಟಗಳು ಲಭ್ಯವಿವೆ. ಎಕ್ಸರ್‌ಗೇಮಿಂಗ್ ವ್ಯಾಯಾಮದ ಕೆಲ ಪ್ರಯೋಜನಗಳ ಪಟ್ಟಿ ಇಲ್ಲಿದೆ. ಈ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಯಾಗಿ ಇವುಗಳನ್ನು ಪರಿಗಣಿಸಬಾರದು ಮನರಂಜನೆ ಜತೆಗೆ ವ್ಯಾಯಾಮ:ಈ ಆಟಗಳು ವಿನೋದಮಯವಾಗಿದ್ದು ಯಾವುದೇ ವೇಟ್‌ಲಿಫ್ಟಿಂಗ್ ಅಥವಾ ಒತ್ತಡದ ವ್ಯಾಯಾಮದ ಅಗತ್ಯವಿರುವುದಿಲ್ಲ. ಹೀಗಾಗಿ ಮನರಂಜನೆ ಜತೆಗೆ ಆಟಗಾರರು ದೈಹಿಕ ಚಟುವಟಿಕೆಯಲ್ಲಿ ತೊಡಹಬಹುದು. ಇದನ್ನೂ ಓದಿ: ಗ್ರಾಹಕರಿ ಮತ್ತೊಂದು ಕೊಡುಗೆ, ಒನ್ ಪ್ಲಸ್ ಟಿವಿಯಲ್ಲಿ ಆಡಬಹುದು ಜಿಯೋ ಗೇಮ್ಸ್! ದೈಹಿಕ ಚಟುವಟಿಕೆ:ನೀವು ಆಡುತ್ತಿರುವಾಗ ನಿಮ್ಮ ದೇಹವು ಚಲನೆಯಲ್ಲಿರುತ್ತದೆ ಹೀಗಾಗಿ ಇದು ನಿಮ್ಮನ್ನು ಹೆಚ್ಚು ಆಕ್ಟಿವ್ ಮತ್ತು ಫೀಟ್‌ ಆಗಿಸಬಹುದು. ಇಂಥಹ ಆಟಗಳನ್ನು ದೈಹಿಕ ಚಲನೆಯನ್ನು ಬೆಂಬಲಿಸುವ ಡಿಜಿಟಲ್ ಆಟಗಳೆಂದು ವ್ಯಾಖ್ಯಾನಿಸಲಾಗಿದೆ. ಸಾಮಾಜಿಕ ಸಂವಹನ:ಈ ಆಟಗಳಲ್ಲಿ ಒಬ್ಬರೇ ಆಟ ಆಡಲು ಹಲವಾರು ಆಯ್ಕೆಗಳಿವೆ. ಅಲ್ಲದೆ, ನೀವು ಇತರ ಬಳಕೆದಾರರೊಂದಿಗೆ ಆಡಿದಾಗ ಇದು ಆಸಕ್ತಿದಾಯಕವಾಗುತ್ತದೆ. ಅಲ್ಲದೇ ಆಟದ ಜತೆಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇದು ಸಹಾಯ ಮಾಡಬಹುದು. ಪ್ರೇರಣೆ:ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಅವರ ನೆಚ್ಚಿನ ಆಟಗಳನ್ನು ಆಡುವುದರಿಂದ ಇದು ಪ್ರೇರೇಣಾದಾಯಕವಾಗಿರಬಹುದು. ಅಲ್ಲದೇ ಕುಟುಂಬ ಸದಸ್ಯರು ಒಂದೆಡೆ ಸೇರಲು ಅವಕಾಶ ನೀಡಬಹುದು. ವ್ಯಾಯಾಮ ಮಾಡುವುದು ಮಕ್ಕಳು ಅಥವಾ ಹದಿಹರೆಯದವರಿಗೆ ಮಾತ್ರ ಸೀಮಿತವಾಗಿಲ್ಲ, ಹೀಗಾಗಿ ಆಟ, ವ್ಯಾಯಾಮ ಹಾಗೂ ಮನರಂಜನೆಯ ಕಾಂಬಿನೇಷನ್‌ನೊಂದಿಗೆ ಯಾರೂ ಬೇಕಾದರೂ ಫಿಟ್ ಆಗಬಹುದು. ಎಕ್ಸರ್‌ಗೇಮ್‌ಗಳು ತಮ್ಮ ಮಕ್ಕಳ ದೈಹಿಕ ಚಟುವಟಿಕೆಯನ್ನು ಹೆಚ್ಚಿಸಲು ಪೋಷಕರಿಗೆ ಕೂಡ ಸುಲಭವಾದ ಮಾರ್ಗವಾಗಿದೆ.