ವಾಟ್ಸಾಪ್‌ನಲ್ಲಿ ಈ 9 ಕೆಲಸ ಮಾಡಿದರೆ ನಿಮ್ಮ ಖಾತೆ ಬ್ಯಾನ್‌ ಗ್ಯಾರಂಟಿ! ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ನಿಯಮಗಳು, 2021 ( ನಿಯಮಗಳು, 2021) ಗೆ ಅನುಗುಣವಾಗಿ ವಾಟ್ಸಾಪ್ ತನ್ನ ವರದಿಯನ್ನು ಪ್ರಕಟಿಸುತ್ತದೆ. :ಮೆಟಾ ಒಡೆತನದ ವಾಟ್ಸಾಪ್‌ ಜನಪ್ರಿಯ ಮೇಸೆಜಿಂಗ್‌ ಪ್ಲಾಟಫಾರ್ಮ್‌ಗಳಲ್ಲೊಂದು. ಕಳೆದ ಕೆಲವು ತಿಂಗಳುಗಳಿಂದ ವಾಟ್ಸಾಪ್‌ ತನ್ನ ಗ್ರಾಹಕರಿಗೆ ಪೇಮೆಂಟ್‌ ವೈಶಿಷ್ಟ್ಯ ಸೇರಿದಂತೆ ನಿರಂತರವಾಗಿ ಹೊಸ ಅಪ್ಡೇಟ್‌ಗಳನ್ನು ನೀಡುತ್ತಿದೆ. ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹಲವು ಗೈಡ್‌ಲೈನ್ಸ್‌ ನೀಡಿದ್ದು ಈ ನಿಯಮಾವಳಿಗಳನ್ನು ಉಲ್ಲಂಘಿಸಿದರೆ ವಾಟ್ಸಾಪ್‌ ನಿಮ್ಮ ಖಾತೆ ನಿಷೇಧ ಮಾಡುವ ಸಾಧ್ಯತೆಗಳಿವೆ. ಅಲ್ಲದೇ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ನಿಯಮಗಳು, 2021 ( ನಿಯಮಗಳು, 2021) ಗೆ ಅನುಗುಣವಾಗಿ ವಾಟ್ಸಾಪ್ ತನ್ನ ವರದಿಯನ್ನು ಪ್ರಕಟಿಸುತ್ತದೆ. ಈ ವರದಿಯು ಭಾರತದಲ್ಲಿ ಬಳಕೆದಾರರಿಂದ ವಾಟ್ಸಾಪ್‌ನ ಕುಂದುಕೊರತೆ ಕಾರ್ಯವಿಧಾನಗಳ ಮೂಲಕ ಪಡೆದ ಕುಂದುಕೊರತೆಗಳಿಗೆ ಪ್ರತಿಕ್ರಿಯೆಯಾಗಿ ವಾಟ್ಸಾಪ್ ತೆಗೆದುಕೊಂಡ ಕ್ರಮಗಳ ಮಾಹಿತಿಯನ್ನು ಒಳಗೊಂಡಿವೆ ಎಂದು ಮೇಸೆಜಿಂಗ್‌ ಪ್ಲಾಟ್‌ಫಾರ್ಮ್ ವಾಟ್ಸಾಪ್‌ ತಿಳಿಸಿದೆ. ತನ್ನ ಇತ್ತಿಚಿನ ವರದಿಯಲ್ಲಿ 20 ಲಕ್ಷ ಖಾತೆಗಳನ್ನು ನಿಷೇಧಿಸಿದೆ ಎಂದು ವಾಟ್ಸಾಪ್ ದೃಢಪಡಿಸಿತ್ತು. ವಾಟ್ಸಾಪ್‌ ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ನಿಷೇಧಿಸಲು ಕೆಲವು ಕಾರಣಗಳಿವೆ ಮತ್ತು ವಾಟ್ಸಾಪ್ ಸೇವಾ ನಿಯಮಗಳಲ್ಲಿರುವ ಕೆಲವು ಪ್ರಮುಖ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. ಹೀಗಾಗಿ ನೀವು ವಾಟ್ಸಾಪ್‌ನ ಎಲ್ಲ ಗೈಡ್‌ ಲೈನ್ಸ್‌ ಅನುಸರಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳವುದು ಅವಶ್ಯಕವಾಗಿದೆ. ಈ ಕೆಳಗಿನ ವಾಟ್ಸಾಪ್ ನಿಯಮಗಳನ್ನು ನೀವು ಎಂದಿಗೂ ಉಲ್ಲಂಘಿಸಬಾರದು, ಇಲ್ಲದಿದ್ದರೆ ನಿಮ್ಮ ಖಾತೆ ಬ್ಯಾನಾಗುವ ಸಾಧ್ಯತೆಗಳಿವೆ ಇದನ್ನೂ ಓದಿ: : ಡಿಸೆಂಬರ್ 2021ರಲ್ಲಿ 20 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆ ಬ್ಯಾನ್! 1) ನಿಮ್ಮ ಫೋನ್ ಸಂಖ್ಯೆಯನ್ನು ಪದೇ ಪದೇ ಬದಲಾಯಿಸುವುದು:ವಾಟ್ಸಾಪ್ ಖಾತೆಯನ್ನು ಯಾವಾಗಲೂ ಫೋನ್ ಸಂಖ್ಯೆಯ ಮೂಲಕ ಪರಿಶೀಲಿಸಲಾಗುತ್ತದೆ. ನಿಮ್ಮ ಫೋನ್ ಸಂಖ್ಯೆಯನ್ನು ಆಗಾಗ್ಗೆ ಬದಲಾಯಿಸುವುದರಿಂದ ಪರಿಶೀಲನೆ ಪ್ರಕ್ರಿಯೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು, ಇದರ ಪರಿಣಾಮವಾಗಿ ನಿಮ್ಮ ಖಾತೆಯನ್ನು ಅಮಾನತುಗೊಳಿಸಬಹುದು.‌ 2) ಇತರ ಬಳಕೆದಾರರ ಮೇಲೆ ಬೇಹುಗಾರಿಕೆ:ನೀವು ಅನಧಿಕೃತ ರೀತಿಯಲ್ಲಿ ಇತರ ಬಳಕೆದಾರರಿಂದ ಅಥವಾ ಅವರ ಬಗ್ಗೆ ಮಾಹಿತಿಯನ್ನು ಪಡೆಯಬಾರದು. 3) ತಪ್ಪು ಗುರುತು: ವಾಟ್ಸಾಪ್‌ನಲ್ಲಿ ನಿಮ್ಮ ನಿಜವಾದ ಹೆಸರನ್ನು ಬಳಸುವ ಅಗತ್ಯವಿಲ್ಲದಿದ್ದರೂ, ಬೇರೊಬ್ಬರಂತೆ ನಟಿಸಲು ನಿಮಗೆ ಅನುಮತಿಸಲಾಗುವುದಿಲ್ಲ. ಆದಾಗ್ಯೂ, ಅಡ್ಡಹೆಸರುಗಳು ಮತ್ತು ಶಾರ್ಟ್ ಹೆಸರುಗಳನ್ನು ಅನುಮತಿಸಲಾಗಿದೆ.‌ 4) ದುರುದ್ದೇಶಪೂರಿತ ಕೋಡ್‌ ವಿತರಣೆ: ಯಾವುದೇ ರೂಪದಲ್ಲಿ ವೈರಸ್‌ಗಳು ಅಥವಾ ದುರುದ್ದೇಶಪೂರಿತ ಕೋಡ್‌ಗಳನ್ನು ಹೊಂದಿರುವ ಫೈಲ್‌ಗಳನ್ನು ವಾಟ್ಸಾಪ್ ಮೂಲಕ ಕಳುಹಿಸುವವರ ವಿರುದ್ಧ ವಾಟ್ಸಾಪ್‌ ಕ್ರಮ ಕೈಗೊಳ್ಳಬಹುದು. ಖಾತೆ ಕೂಡ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಬ್ಯಾನ್ ಮಾಡಬಹುದು.‌ 5) ಸ್ಪ್ಯಾಮ್ ಸಂದೇಶಗಳನ್ನು ಕಳುಹಿಸುವುದು:"ಬೃಹತ್ ಸಂದೇಶಗಳ" ಜೊತೆಗೆ, ಸ್ವಯಂಚಾಲಿತ ಸಂದೇಶಗಳನ್ನು (ಸ್ವಯಂ-ಸಂದೇಶ ಅಥವಾ ಸ್ವಯಂ-ಡಯಲಿಂಗ್) ಸಹ ನಿಷೇಧಿಸಲಾಗಿದೆ. ವಾಟ್ಸಾಪ್‌ನಿಂದ ಅನುಮತಿ ಇಲ್ಲದೇ ಯಾವುದೇ ಸಂದೇಶಗಳನ್ನು ರೆಕಾರ್ಡ್ ಮಾಡಲು ಮತ್ತು ನಂತರದ ದಿನಾಂಕದಲ್ಲಿ ಅವುಗಳನ್ನು ಸ್ವಯಂಚಾಲಿತವಾಗಿ ಕಳುಹಿಸಲು ನಿಮಗೆ ವಾಟ್ಸಾಪ್ ಅನುಮತಿಸಲಾಗುವುದಿಲ್ಲ. 6) ಅಪ್ಲಿಕೇಶನ್ ಮ್ಯಾನಿಪುಲೇಟ್ ಅಥವಾ ಹ್ಯಾಕ್ ಮಾಡುವುದು: ಅಪ್ಲಿಕೇಶನನ್ನು ಹ್ಯಾಕ್ ಮಾಡಲು ಅಥವಾ ಅದರ ಕೋಡನ್ನು ಮ್ಯಾನಿಪುಲೇಟ್ ಮಾಡಲು ಪ್ರಯತ್ನಿಸುವ ಬಳಕೆದಾರರ ಮೇಲೆ ವಾಟ್ಸಾಪ್‌ ಕ್ರಮ ಕೈಗೊಳ್ಳಬಹುದು. ಇದನ್ನೂ ಓದಿ:ಸದಸ್ಯರು ಮಾಡುವ ನಿಂದನಾತ್ಮಕ ಪೋಸ್ಟ್‌ಗಳಿಗೆ ವಾಟ್ಸಾಪ್‌ ಗ್ರೂಪ್ ಅಡ್ಮಿನ್ ಹೊಣೆಗಾರನಲ್ಲ! 8) ಸುಳ್ಳು ಸುದ್ದಿಗಳನ್ನು ಹರಡುವುದು:ಸುಳ್ಳು ಮಾಹಿತಿಯನ್ನು ಹರಡುವ ಬಳಕೆದಾರರು ವಾಟ್ಸಾಪ್ ಬಳಕೆಯ ನಿಯಮಗಳನ್ನು ಉಲ್ಲಂಘಿಸುತ್ತಾರೆ. ಹೀಗಾಗಿ ಯಾವುದೇ ಸಂದೇಶ ಅಥವಾ ವಿಡಿಯೋವನ್ನು ಫಾರ್ವರ್ಡ್‌ ಮಾಡುವ ಮುನ್ನ ಅದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳವುದು ಉತ್ತಮ 9) ಇತರ ಬಳಕೆದಾರರನ್ನು ಅವಮಾನಿಸುವುದು: ಪ್ರತಿ ಅಪ್ಲಿಕೇಶನ್ ಮತ್ತು ಪ್ರತಿ ಸಾಮಾಜಿಕ ವೇದಿಕೆಯಂತೆಯೇ, ವಾಟ್ಸಾಪ್‌ನಲ್ಲಿ ಉತ್ತಮ ನಡವಳಿಕೆಯ ಅಗತ್ಯವಿರುತ್ತದೆ. ಇತರ ಬಳಕೆದಾರರನ್ನು ಅವಮಾನಿಸುವುದರಿಂದ ನಿಮ್ಮ ಖಾತೆಯನ್ನು ಅಮಾನತುಗೊಳಿಸಬಹುದು. 10) ಹಿಂಸಾಚಾರ ಮತ್ತು ಬೆದರಿಕೆಗಳಿಗೆ ಕರೆಗಳು:ಹಿಂಸಾಚಾರವನ್ನು ಪ್ರಚೋದಿಸುವುದು (ಹೇಗಾದರೂ ಕಾನೂನುಬಾಹಿರ) ಅಥವಾ ಇತರ ಬಳಕೆದಾರರಿಗೆ ಬೆದರಿಕೆ ಹಾಕುವುದರಿಂದಲೂ ನೀವು ಫೇಸ್‌ಬುಕ್ (ಈಗ ಮೆಟಾ) ನಿಗದಿಪಡಿಸಿದ ನಿಯಮಗಳನ್ನು ಹಾಗೂ ವಾಟ್ಸಾಪ್ ನಿಯಮಗಳನ್ನು ಸಹ ಉಲ್ಲಂಘಿಸುತ್ತಿದ್ದೀರಿ. ಹೀಗಾಗಿ ವಾಟ್ಸಾಪ್‌ ನಿಮ್ಮ ಖಾತೆ ಅಮಾನತುಗೊಳಿಸಬಹುದು. ಸಂದೇಶಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಆಗಿರುವುದರಿಂದ ನೀವು ಇವುಗಳಲ್ಲಿ ಯಾವುದನ್ನಾದರೂ ಮಾಡುತ್ತಿದ್ದೀರಾ ಎಂಬುದನ್ನು ವಾಟ್ಸಾಪ್ ಹೇಗೆ ತಿಳಿಯಬಹುದು ಎಂದು ನೀವು ಆಶ್ಚರ್ಯ ಪಡಬಹುದು. ಮೊದಲಿಗೆ, ಇತರ ಬಳಕೆದಾರರು ಅಂತಹ ಅಪರಾಧಗಳಿಗಾಗಿ ನಿಮ್ಮ ಖಾತೆಯನ್ನು ರಿಪೋರ್ಟ್ ಮಾಡಬಹುದು.‌ ಇದಲ್ಲದೇ ಅಸಹಜ ನಡವಳಿಕೆಯನ್ನು ಸ್ವಯಂಚಾಲಿತ ವ್ಯವಸ್ಥೆಗಳ ಮೂಲಕ ವಾಟ್ಸಾಪ್‌ ಪತ್ತೆ ಹಚ್ಚುತ್ತದೆ. ನಿರಂತರವಾಗಿ ಕೃತಕ ಬುದ್ಧಿಮತ್ತೆ () ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನಗಳು, ಡೇಟಾ ವಿಜ್ಞಾನಿಗಳು ( ) ಮತ್ತು ತಜ್ಞರು () ಮತ್ತು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನಮ್ಮ ಗ್ರಾಹಕರನ್ನು ಸುರಕ್ಷಿತವಾಗಿರಿಸಲು ಕಳೆದ ಕೆಲವು ವರ್ಷಗಳಲ್ಲಿ ಈ ಪ್ರಕ್ರಿಯೆಗಳಲ್ಲಿ ಹೆಚ್ಚಿನ ಶ್ರಮವಹಿಸಿದೆ ಎಂದು ವಾಟ್ಸಾಪ್ ತಿಳಿಸಿದೆ.