2022: ಹೋಳಿ ವೇಳೆ ನಿಮ್ಮ ಸ್ಮಾರ್ಟ್‌ಫೋನ್ ಒದ್ದೆಯಾದರೆ ತಡ ಮಾಡದೇ ಈ ಕೆಲಸ ಮಾಡಿ! ಹೋಳಿ ವೇಳೆ ನಿಮ್ಮ ಸ್ಮಾರ್ಟ್‌ಫೋನ್ ಆಕಸ್ಮಿಕವಾಗಿ ಒದ್ದೆಯಾದರೆ, ತ್ವರಿತವಾಗಿ ಕ್ರಮವಹಿಸಿ ಮತ್ತು ಸ್ಮಾರ್ಟ್‌ಫೋನಲ್ಲಿ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳನ್ನು ಅನುಸರಿಸಿ. :ಬಣ್ಣಗಳ ಹಬ್ಬ ಹೋಳಿಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಬಣ್ಣದ ಹಬ್ಬ ಹೋಳಿಯಲ್ಲಿ ನೀರಿನ ಬಳಕೆ ಸರ್ವೇ ಸಾಮಾನ್ಯ. ಆದರೆ ನಿಮ್ಮ ಸ್ನೇಹಿತರು ಹಾಗೂ ಪ್ರೀತಿಪಾತ್ರರೊಂದಿಗೆ ಹೋಳಿ ಹಬ್ಬವನ್ನು ಆಚರಿಸುವಾಗ ನಿಮ್ಮ ಸ್ಮಾರ್ಟ್‌ಫೋನ್‌ ಸುರಕ್ಷತೆಯ ಬಗ್ಗೆ ಕೂಡ ಗಮನವಿರಲಿ. ನಿಮ್ಮ ಸ್ಮಾರ್ಟ್‌ಫೋನ್ ಜಲನಿರೋಧಕವಾಗಿದ್ದರೂ ಸಹ ಯಾವುದೇ ಕಂಪನಿಯು ನೀರಿನ ಹಾನಿಯನ್ನು ವಾರಂಟಿ ಅಡಿಯಲ್ಲಿ ಖಚಿತಪಡಿಸುವುದಿಲ್ಲ. ಹೀಗಾಗಿ ನೀವು ಹಬ್ಬದ ಸಂಬ್ರಮದ ಮಧ್ಯೆ ನಿಮ್ಮ ಸ್ಮಾರ್ಟ್‌ಫೋನ್‌ ಬಗ್ಗೆ ಕೂಡ ಕಾಳಜಿ ವಹಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ಅದಾಗ್ಯೂ, ನಿಮ್ಮ ಸ್ಮಾರ್ಟ್‌ಫೋನ್ ಆಕಸ್ಮಿಕವಾಗಿ ಒದ್ದೆಯಾದರೆ, ತ್ವರಿತವಾಗಿ ಕ್ರಮವಹಿಸಿ ಮತ್ತು ಸ್ಮಾರ್ಟ್‌ಫೋನಲ್ಲಿ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳನ್ನು ಅನುಸರಿಸಿ. ಇವುಗಳು ನಿಮ್ಮ ಫೋನನ್ನು ಹಾನಿಯಿಂದ ಉಳಿಸಲು ಸಹಾಯ ಮಾಡಬಹುದು. ನೀವು ಮಾಡಬೇಕಾದ ಮತ್ತು ಯಾವುದೇ ಕಾರಣಕ್ಕೂ ಮಾಡಬಾರದ ವಿಷಯಗಳ ಪಟ್ಟಿ ಇಲ್ಲಿದೆ ಏನು ಮಾಡಬೇಕು? ಸ್ಮಾರ್ಟ್ಫೋನನ್ನು ಆಫ್ ಮಾಡಿ ಮತ್ತು ಕವರ್ ಅಥವಾ ಸ್ಕ್ರೀನ್ ಪ್ರೊಟೆಕ್ಟರನ್ನು ತೆಗೆದುಹಾಕಿ:ಫೋನ್ ನೀರು ಅಥವಾ ಯಾವುದೇ ದ್ರವದ ಸಂಪರ್ಕಕ್ಕೆ ಬಂದಿರುವುದನ್ನು ನೀವು ಗಮನಿಸಿದ ತಕ್ಷಣ ಫೋನನ್ನು ಆಫ್ ಮಾಡಿ. ಅಲ್ಲದೆ, ಸಾಧನದ ಸುತ್ತಲೂ ಇರುವ ಎಲ್ಲಾ ಹೆಚ್ಚುವರಿ ನೀರನ್ನು ತೆಗೆದುಹಾಕಲು ಹಿಂದಿನ ಕವರ್ ಮತ್ತು ಸ್ಕ್ರೀನ್ ಗಾರ್ಡನ್ನು ತೆಗೆದುಹಾಕಿ. ಇದನ್ನೂ ಓದಿ: 2022: ರಾಜ್ಯದಿಂದ ರಾಜ್ಯಕ್ಕೆ ಹೋಳಿ ಆಚರಣೆ ಎಷ್ಟು ವಿಭಿನ್ನ ಬಲ್ಲಿರಾ? ಸ್ವಚ್ಛ ಮತ್ತು ಒಣ ಬಟ್ಟೆಯಿಂದ ಫೋನನ್ನು ಸರಿಯಾಗಿ ಒರೆಸಿ:ಮುಂದಿನ ಹಂತವು ಫೋನನ್ನು ಸ್ವಚ್ಛಗೊಳಿಸುವುದು ಮತ್ತು ಹೊರಗಿನಿಂದ ಸರಿಯಾಗಿ ಒಣಗಿಸುವುದು. ಸ್ವಚ್ಛವಾದ ಒಣ ಬಟ್ಟೆಯನ್ನು ತೆಗೆದುಕೊಂಡು ಇಡೀ ಫೋನನ್ನು ಸರಿಯಾಗಿ ಒರೆಸಿ. ಕವರ್ ಮತ್ತು ಟೆಂಪರ್ಡ್ ಗ್ಲಾಸನ್ನು ತೆಗೆದುಹಾಕುವ ಮೂಲಕ ಫೋನ್‌ನ ಎಲ್ಲಾ ಭಾಗಗಳನ್ನು ಒರೆಸುವುದನ್ನು ಖಚಿತಪಡಿಸಿಕೊಳ್ಳಿ. ಈಗ ಇದನ್ನು ಮಾಡಲು ತುಂಬಾ ತಡವಾಗಿದೆ ಎಂದು ಯೋಚಿಸಬೇಡಿ, ಇದನ್ನು ಮಾಡುವುದರಿಂದ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಉಳಿಸಲು ಸಹಾಯ ಮಾಡಬಹುದು. ಸಿಮ್‌ ಕಾರ್ಡ್ ಸ್ಲಾಟ್ ತೆಗೆಯಿರಿ:ಫೋನ್ ಸಂಪೂರ್ಣವಾಗಿ ಒಣಗಿದ ನಂತರ ಸಿಮ್‌ಕಾರ್ಡ್ ಸ್ಲಾಟನ್ನು ತೆಗೆದುಹಾಕಿ. ಇದು ಸಿಮ್ ಅಥವಾ ಮೆಮೊರಿ ಕಾರ್ಡ್ ಹಾನಿಯಾಗದಂತೆ ರಕ್ಷಿಸುತ್ತದೆ. ಫೋನ್ ಅನ್ನು ವ್ಯಾಕ್ಯೂಮ್ ಚೀಲದಲ್ಲಿರಿಸಿ:ಫೋನನ್ನು ವ್ಯಾಕ್ಯೂಮ್ ಚೀಲದಲ್ಲಿ ಇಟ್ಟುಕೊಳ್ಳುವುದು ಸಾಧನದಿಂದ ನೀರನ್ನು ಹೊರತೆಗೆಯಲು ಸಹಾಯ ಮಾಡುತ್ತದೆ. ಇದಕ್ಕಾಗಿ, ಪ್ಲಾಸ್ಟಿಕ್ ಜಿಪ್‌ಲಾಕ್ ಬ್ಯಾಗನ್ನು ತೆಗೆದುಕೊಂಡು, ಅದರೊಳಗೆ ಫೋನ್ ಜೊತೆಗೆ ವ್ಯಾಕ್ಯೂಮ್ ಹಾಕಿ ಮತ್ತು ಅದನ್ನು ಸೀಲ್ ಮಾಡಿ. ಈಗ, ವ್ಯಾಕ್ಯೂಮ್ ಬಳಸಿ ಎಲ್ಲಾ ಗಾಳಿಯನ್ನು ಹೀರಿಕೊಳ್ಳಿ, ನಂತರ ಅದನ್ನು ತೆಗೆದುಕೊಂಡು ಚೀಲದಲ್ಲಿ ಮುಚ್ಚಿ. ಅಕ್ಕಿಯ ಚೀಲದೊಳಗೆ ಫೋನನ್ನು ರಾತ್ರಿಯಿಡೀ ಬಿಡಿ: ಅಕ್ಕಿಯ ಚೀಲದೊಳಗೆ ಫೋನ್ ಇರಿಸಿ ಮತ್ತು ಒಣಗಿಸಿ. ಇದು ನೀರನ್ನು ಆವಿಯಾಗಿಸಲು ಸಹಾಯ ಮಾಡುತ್ತದೆ. ಸೂಕ್ತವಾದ ಸಮಯವನ್ನು 48 ಗಂಟೆಗಳು ಅಥವಾ ಸ್ವಲ್ಪ ಹೆಚ್ಚು ಎಂದು ಪರಿಗಣಿಸಲಾಗುತ್ತದೆ, ಆದರೆ ನಿಮಗೆ ಇಷ್ಟು ಸಮಯವಿಲ್ಲದಿದ್ದರೆ ರಾತ್ರಿಯಲ್ಲಿ ಫೋನನ್ನು ಚೀಲದಲ್ಲಿ ಇರಿಸಿ. ಇದನ್ನೂ ಓದಿ: 2022: ಬಣ್ಣದ ಜೊತೆ ಆಟ ಗರ್ಭಿಣಿಯರಿಗೆ ಎಷ್ಟು ಸೇಫ್? ಏನು ಮಾಡಬಾರದು? ಹೇರ್ ಡ್ರೈಯರ್ ಬಳಸಿ ನಿಮ್ಮ ಫೋನನ್ನು ಎಂದಿಗೂ ಒಣಗಿಸಬೇಡಿ: ಹೇರ್ ಡ್ರೈಯರ್ ಫೋನ್‌ನೊಳಗಿನ ನೀರನ್ನು ತ್ವರಿತವಾಗಿ ಒಣಗಿಸುತ್ತದೆ ಎಂದು ನೀವು ಭಾವಿಸಬಹುದು. ಇಲ್ಲ, ಇದು ನಿಮ್ಮ ಫೋನ್‌ನ ಆಂತರಿಕ ಅಂಶಗಳನ್ನು ಹಾನಿಗೊಳಿಸಬಹುದು. ಉದಾಹರಣೆಗೆ, ಡಿಸ್ಪ್ಲೇ ಮೇಲೆ ನೇರವಾಗಿ ಬಿಸಿ ಗಾಳಿಯು ಆಂತರಿಕ ವೈರಿಂಗನ್ನು ಹಾನಿಗೊಳಿಸಬಹುದು, ಅದನ್ನು ಕರಗಿಸಬಹುದು ಮತ್ತು ಫೋನನ್ನು ಸಂಪೂರ್ಣವಾಗಿ ಹಾನಿಗೊಳಿಸಬಹುದು. ನೀರನ್ನು ಹೊರತೆಗೆಯಲು ನಿಮ್ಮ ಫೋನನ್ನು ಎಂದಿಗೂ ಅಲ್ಲಾಡಿಸಬೇಡಿ: ಫೋನನ್ನು ಹೆಚ್ಚು ಅಲುಗಾಡಿಸುವುದರಿಂದ ಒಳಗಿನ ನೀರು ಇತರ ಭಾಗಗಳಿಗೆ ಪ್ರಯಾಣಿಸಲು ಮತ್ತು ಹಾನಿಗೊಳಗಾಗಲು ಕಾರಣವಾಗಬಹುದು. ಆದ್ದರಿಂದ ದಯವಿಟ್ಟು ಒದ್ದೆಯಾದ ಬಳಿಕ ಸ್ಮಾರ್ಟ್‌ಫೋನನ್ನು ಅಲುಗಾಡಿಸಬೇಡಿ. .