: ಅಮೆರಿಕದಲ್ಲಿ ಹಂದಿ ಹೃದಯ ಕಸಿಗೊಳಗಾಗಿದ್ದ ವ್ಯಕ್ತಿ ಸಾವು! ‌ಡೇವಿಡ್ ಬೆನೆಟ್ ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದಲ್ಲಿ ಮಂಗಳವಾರ ನಿಧನರಾದರು ಎಂದು ವೈದ್ಯರು ತಿಳಿಸಿದ್ದಾರೆ. ವಾಷಿಂಗ್‌ಟನ್ (ಮಾ. 10):ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಹೃದಯ ( ) ಕಸಿಗೊಳಗಾಗಿದ್ದ ವ್ಯಕ್ತಿ ಬುಧವಾರ ಸಾವನ್ನಪ್ಪಿದ್ದಾರೆ. ಅಮೆರಿಕಾದ ಶಸ್ತ್ರಚಿಕಿತ್ಸಕರು 57 ವರ್ಷ ವಯಸ್ಸಿನ ಡೇವಿಡ್ ಬೆನೆಟ್ ( ) ಅವರಿಗೆ ತಳೀಯವಾಗಿ ಮಾರ್ಪಡಿಸಿದ ( ) ಹಂದಿಯ ಹೃದಯವನ್ನು ಯಶಸ್ವಿಯಾಗಿ ಅಳವಡಿಸಿದ್ದರು. ಆದರೆ ಹೃದಯ ಕಸಿ ಅಳವಡಿಕೆ ಯಶಸ್ವಿಯಾಗಿದ್ದರೂ ಡೇವಿಡ್ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಶಸ್ತ್ರಚಿಕಿತ್ಸೆ ನಡೆಸಿದ ಮೇರಿಲ್ಯಾಂಡ್ ಆಸ್ಪತ್ರೆ ಬುಧವಾರ ಪ್ರಕಟನೆಯಲ್ಲಿ ತಿಳಿಸಿದೆ. ಡೇವಿಡ್ ಬೆನೆಟ್ (57) ಅವರು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದಲ್ಲಿ ಮಂಗಳವಾರ ನಿಧನರಾದರು. ವೈದ್ಯರು ಸಾವಿಗೆ ನಿಖರವಾದ ಕಾರಣವನ್ನು ನೀಡಿಲ್ಲ, ಆದರೆ ಹೃದಯ ಕಸಿ ಆದ ಬಳಿಕ ಆರೋಗ್ಯ ಹದಗೆಡುತ್ತಾ ಬಂದಿತ್ತು ಎಂದು ವೈದ್ಯರು ಹೇಳಿದ್ದಾರೆ. ಬೆನೆಟ್ ಅವರ ಮಗ ಈ ಪ್ರಯೋದ ಮೂಲಕ ಕೊನೆಯವರೆಗೂ ಜೀವ ಉಳಿಸಲು ಪ್ರಯತ್ನಿಸಿದ ಆಸ್ಪತ್ರೆ ವೈದ್ಯರನ್ನು ಶ್ಲಾಘಿಸಿದ್ದಾರೆ, ಅಂಗಾಂಗದ ಕೊರತೆಯನ್ನು ಕೊನೆಗೊಳಿಸಲು ಹೆಚ್ಚಿನ ಪ್ರಯತ್ನಗಳಿಗೆ ಇದು ಸಹಾಯ ಮಾಡುತ್ತದೆ ಎಂದು ಕುಟುಂಬವು ಆಶಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: : ಇದೇ ಮೊದಲ ಬಾರಿಗೆ ಮನುಷ್ಯನಿಗೆ ಹಂದಿ ಹೃದಯ ಕಸಿ: ಅಮೆರಿಕಾ ವೈದ್ಯರ ಐತಿಹಾಸಿಕ ಸಾಧನೆ! ದಶಕಗಳಿಂದ ವೈದ್ಯರು ಜೀವ ಉಳಿಸುವ ಕಸಿ ಮಾಡಲು ಪ್ರಾಣಿಗಳ ಅಂಗಗಳನ್ನು ಬಳಸಲು ಪ್ರಯತ್ನಿಸುತ್ತಿದ್ದಾರೆ. ಮೇರಿಲ್ಯಾಂಡ್‌ನ ಬೆನೆಟ್, ಈ ಹೊಸ ಪ್ರಯತ್ನಕ್ಕೆ ಸಾಕ್ಷಿಯಾದರು, ಏಕೆಂದರೆ ಬೆನೆಟ್ ಮಾನವ ಅಂಗಾಂಗ ಕಸಿ ಮಾಡಲು ಅನರ್ಹ ಎಂದು ಪರಿಗಣಿಸಲಾಗಿತ್ತು. ವೈದ್ಯಕೀಯ ಲೋಕದಲ್ಲಿ ಮೊದಲ ಪ್ರಯತ್ನವಾಗಿ ವೈದ್ಯರು ಮನುಷ್ಯನಿಗೆ ಹಂದಿ ಹೃದಯ ಕಸಿ ಮಾಡಿ ಸಾವಿನಂಚಿನಲ್ಲಿದ್ದ ವ್ಯಕ್ತಿಯ ಜೀವ ಉಳಿಸಿದ್ದರು. ಅಂಗಾಂಗ ಸ್ವೀಕರಿಸಿವವರು ತುಂಬಾ ಕಳಪೆ ಆರೋಗ್ಯವನ್ನು ಹೊಂದಿರುವಾಗ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಸಾಂಪ್ರದಾಯಿಕ ಕಸಿಗೆ ಸೂಕ್ತವಲ್ಲದ ರೋಗಿಯನ್ನು ಉಳಿಸಲು ಕೊನೆಯ ಪ್ರಯತ್ನವಾಗಿ ಅಮೆರಿಕಾದ ಹೊಸ ವರ್ಷದ ಮುನ್ನಾದಿನದಂದು ಶಸ್ತ್ರಚಿಕಿತ್ಸೆಗೆ ತುರ್ತು ಅಧಿಕಾರವನ್ನು ನೀಡಿತ್ತು. "ಇದು ಅದ್ಭುತ ಶಸ್ತ್ರಚಿಕಿತ್ಸೆಯಾಗಿದೆ ಮತ್ತು ಅಂಗಗಳ ಕೊರತೆಯ ಬಿಕ್ಕಟ್ಟನ್ನು ಪರಿಹರಿಸಲು ನಮ್ಮನ್ನು ಒಂದು ಹೆಜ್ಜೆ ಹತ್ತಿರಕ್ಕೆ ತರುತ್ತದೆ" ಎಂದು ಹಂದಿ ಹೃದಯವನ್ನು ಶಸ್ತ್ರಚಿಕಿತ್ಸೆಯಿಂದ ಕಸಿ ಮಾಡಿದ ಬಾರ್ಟ್ಲಿ ಗ್ರಿಫಿತ್ ( ) ಹೇಳಿದ್ದರು. ಇದನ್ನೂ ಓದಿ:'ಶೀಘ್ರದಲ್ಲಿ ಭೇಟಿಯಾಗೋಣ': ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯ ಇಚ್ಛಾಮರಣ! ಸುಮಾರು 110,000 ಅಮೆರಿಕನ್ನರು ಪ್ರಸ್ತುತ ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ ಮತ್ತು ಅಧಿಕೃತ ಅಂಕಿಅಂಶಗಳ ಪ್ರಕಾರ ಪ್ರತಿ ವರ್ಷ 6,000 ಕ್ಕೂ ಹೆಚ್ಚು ರೋಗಿಗಳು ಅಂಗಾಂಗಗಳಿ ಸಿಗದೆ ಸಾಯುತ್ತಾರೆ. ಹೀಗಾಗಿ ಹಂದಿ ಹೃದಯದ ಕಸಿ ಯಶಸ್ವಿಯಾದರೆ, ಮುಂದೊಂದು ದಿನ ಇಂತಹ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಇದು ವರದಾನವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ಶಸ್ತ್ರಚಿಕಿತ್ಸೆ ನಡೆದ ಎರಡು ತಿಂಗಳ ನಂತರ ವ್ಯಕ್ತಿ ಮೃತಪಟ್ಟಿದ್ದಾರೆ ಎಂಬ ವಿಷಯ ಹೊರಬಿದ್ದಿದೆ. "ಇಲ್ಲ ಸಾಯಬೇಕು ಅಥವಾ ಕಸಿ ಮಾಡಿ. ನಾನು ಬದುಕಲು ಬಯಸುತ್ತೇನೆ. ಇದು ಕತ್ತಲೆಯಲ್ಲಿ ಗುಂಡು ಹಾರಿಸುವುದು ಎಂದು ನನಗೆ ತಿಳಿದಿದೆ, ಆದರೆ ಇದು ನನ್ನ ಕೊನೆಯ ಆಯ್ಕೆಯಾಗಿದೆ" ಎಂದು ಮೇರಿಲ್ಯಾಂಡ್ ನಿವಾಸಿ ಡೇವಿಡ್ ಬೆನೆಟ್ ಶಸ್ತ್ರಚಿಕಿತ್ಸೆಗೆ ಒಂದು ದಿನ ಮೊದಲು ಹೇಳಿದ್ದರು. ಹೃದಯ-ಶ್ವಾಸಕೋಶದ ಬೈಪಾಸ್ ಯಂತ್ರದಲ್ಲಿ ಕಳೆದ ಹಲವು ತಿಂಗಳುಗಳಿಂದ ಹಾಸಿಗೆ ಹಿಡಿದಿರುವ ಬೆನೆಟ್, "ನಾನು ಚೇತರಿಸಿಕೊಂಡ ನಂತರ ಹಾಸಿಗೆಯಿಂದ ಹೊರಬರಲು ಎದುರು ನೋಡುತ್ತಿದ್ದೇನೆ." ಎಂದು ಹೇಳಿದ್ದರು.