: 110 ಕ್ಕೂ ಹೆಚ್ಚು ವರ್ಕೌಟ್ ಮೋಡ್‌, SpO2 ಟ್ರ್ಯಾಕಿಂಗ್‌ನೊಂದಿಗೆ ಲಾಂಚ್! ಶಾಓಮಿಯಿಂದ ಇತ್ತೀಚಿನ ಸ್ಮಾರ್ಟ್ ಬ್ಯಾಂಡ್ ಆಗಿದೆ. ಬಜೆಟ್ ಬೆಲೆಯ ಸ್ಮಾರ್ಟ್ ಬ್ಯಾಂಡ್ ಫಿಟ್ ಮತ್ತು ಆರೋಗ್ಯಕರವಾಗಿರಲು ಸಹಾಯ ಮಾಡಲು ಹಲವಾರು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. :ಭಾರತದಲ್ಲಿ ತನ್ನ ಪ್ರಮುಖ ಉತ್ಪನ್ನ ಬಿಡುಗಡೆಯ ಭಾಗವಾಗಿ ರೆಡ್‌ಮಿ ಭಾರತದಲ್ಲಿ ರೂ 3,999 ಬೆಲೆಗೆ ಪರಿಚಯಿಸಿದೆ. ಶಾಓಮಿ ಉಪ-ಬ್ರಾಂಡ್‌ನ ಹೊಸ ಸ್ಮಾರ್ಟ್ ಬ್ಯಾಂಡ್ ಡಿಸ್ಪ್ಲೇ, ನೀರಿನ ಪ್ರತಿರೋಧ () ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ರೆಡ್‌ಮಿ ಸ್ಮಾರ್ಟ್ ಬ್ಯಾಂಡ್ ಪ್ರೊನಲ್ಲಿ ಹೊಸದೇನಿದೆ ಮತ್ತು ಆರೋಗ್ಯಕರ ಜೀವನಶೈಲಿಗಾಗಿ ನಿಮಗೆ ಇದು ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದರ ಡಿಟೇಲ್ಸ್‌ ಇಲ್ಲಿದೆ, ಬೆಲೆ ಮತ್ತು ಲಭ್ಯತೆ: ರೆಡ್ಮಿ ಸ್ಮಾರ್ಟ್ ಬ್ಯಾಂಡ್ ಪ್ರೊ ಅನ್ನು ಭಾರತದಲ್ಲಿ ರೂ 3,999 ಬೆಲೆಗೆ ಬಿಡುಗಡೆ ಮಾಡಲಾಗಿದೆ. ಆದರೆ, ಇದು ರೂ 3,499 ರ ಪರಿಚಯಾತ್ಮಕ ಬೆಲೆಗೆ ಲಭ್ಯವಿರುತ್ತದೆ. ಶಾಓಮಿಯ ಅಧಿಕೃತ ವೆಬ್‌ಸೈಟ್ ಇಂಡಿಯಾ ಮೂಲಕ ಸ್ಮಾರ್ಟ್‌ ಬ್ಯಾಂಡ್ ಭಾರತದಲ್ಲಿ ಫೆಬ್ರವರಿ 14 ರಂದು ಮಾರಾಟವಾಗಲಿದೆ. ಇದನ್ನೂ ಓದಿ: : 7 ದಿನ ಬ್ಯಾಟರಿ ಲೈಫ್‌, ಬ್ಲೂಟೂತ್ ಕಾಲ್‌ನೊಂದಿಗೆ ಸ್ಮಾರ್ಟ್‌ವಾಚ್ ಲಾಂಚ್! :ಸ್ಮಾರ್ಟ್ ಬ್ಯಾಂಡ್ ವಿಶೇಷತೆಗಳ ಕುರಿತು ಗಮನಿಸುವುದಾದರೆ 1.47-ಇಂಚಿನ ಡಿಸ್ಪ್ಲೇ ಜೊತೆಗೆ 368 194 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 450nit ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ. ಇದು ನಾವು ರೆಡ್‌ಮಿ ಸ್ಮಾರ್ಟ್ ಬ್ಯಾಂಡ್‌ನಲ್ಲಿ ನೋಡಿದ 1.08-ಇಂಚಿನ ಡಿಸ್‌ಪ್ಲೇಗಿಂತ ಅಪ್‌ಗ್ರೇಡ್ ಆಗಿದೆ. ಗಡಿಯಾರದ ಗಾತ್ರ ಕೊಂಚ ದೊಡ್ಡದಾಗಿರುವುದರಿಂದ ತೂಕ ತುಸು ಹೆಚ್ಚಿದೆ. ಸ್ಮಾರ್ಟ್‌ ಬ್ಯಾಂಡ್‌ ಒಟ್ಟು 15 ಗ್ರಾಂ ತೂಕವಿದೆ. ರೆಡ್‌ಮಿ ಸ್ಮಾರ್ಟ್ ಬ್ಯಾಂಡ್ 10.15mm ದಪ್ಪ ಮತ್ತು 24.45mm ಅಗಲವಿದೆ. ಡಿಸ್ಪ್ಲೇ 2.5D ಟೆಂಪರ್ಡ್ ಗ್ಲಾಸ್‌ನಿಂದ ರಕ್ಷಿಸಲ್ಪಟ್ಟಿದೆ ಹಾಗೂ ಫ್ರೇಮನ್ನು ಬಲವರ್ಧಿತ ಗಾಜಿನ ಫೈಬರ್‌ನಿಂದ ನಿರ್ಮಿಸಲಾಗಿದೆ. ಬ್ಯಾಂಡ್ ಸ್ಟ್ರಾಪ್ ಅನ್ನು ( ) ವಸ್ತುಗಳಿಂದ ಮಾಡಲಾಗಿದೆ. 5 ವರೆಗೆ ಜಲನಿರೋಧಕವಾಗಿದೆ ಎಂದು ಶಾಓಮಿ ಹೇಳುತ್ತದೆ. ಶಾಓಮಿಯ ಸ್ಮಾರ್ಟ್ ಬ್ಯಾಂಡ್ ಅಪೊಲೊ 3.5 ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು 6.0 ಮತ್ತು ನಂತರದ ಅಥವಾ 10.0 ಮತ್ತು ನಂತರದ ಬೆಂಬಲದೊಂದಿಗೆ ಬರುತ್ತದೆ. 200mAh ಲಿಥಿಯಂ-ಐಯಾನ್ ಪಾಲಿಮರ್ ಬ್ಯಾಟರಿಯನ್ನು ಬೆಂಬಲಿಸುತ್ತದೆ, ಇದಕ್ಕೆ ಮ್ಯಾಗ್ನೆಟಿಕ್ ಚಾರ್ಜಿಂಗ್ ಅಗತ್ಯವಿದೆ ಮತ್ತು ವಿಶಿಷ್ಟ ಬಳಕೆಯ ಅಡಿಯಲ್ಲಿ 14 ದಿನಗಳ ಬ್ಯಾಕಪ್ ನೀಡಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ. ಇದನ್ನೂ ಓದಿ: X43: ಫೆ.9ಕ್ಕೆ ಭಾರತದಲ್ಲಿ ‌ಆ್ಯಂಡ್ರಾಯ್ಡ್ ಟಿವಿ ಲಾಂಚ್, ಬೆಲೆ ಎಷ್ಟು? ಏನೆಲ್ಲ ವಿಶೇಷತೆ? 110 ಕ್ಕೂ ಹೆಚ್ಚು ವರ್ಕ್‌ಔಟ್ ಮೋಡ್‌ಗಳು, ರಕ್ತದ ಆಮ್ಲಜನಕ ಶುದ್ಧತ್ವ (SpO2) ಟ್ರ್ಯಾಕಿಂಗ್, ಹೃದಯ ಬಡಿತ ಮಾನಿಟರಿಂಗ್, ಯಾವಾಗಲೂ ಆನ್ ಡಿಸ್ಪ್ಲೇ, ಮಹಿಳೆಯರ ಋತುಚಕ್ರದ ಆರೋಗ್ಯ ಟ್ರ್ಯಾಕಿಂಗ್, ಒತ್ತಡ ಮಟ್ಟದ ಮೇಲ್ವಿಚಾರಣೆ ಮತ್ತು ನಿದ್ರೆ ಗುಣಮಟ್ಟದ ಟ್ರ್ಯಾಕಿಂಗ್‌ನೊಂದಿಗೆ ಬರುತ್ತದೆ. ಹಲವಾರು ವೈಶಿಷ್ಟ್ಯಗಳನ್ನು ನೀಡುವುದರೊಂದಿಗೆ, ಭಾರತೀಯ ಮಾರುಕಟ್ಟೆಯಲ್ಲಿ ರೆಡ್‌ಮಿ ಸ್ಮಾರ್ಟ್ ಬ್ಯಾಂಡ್ ಪ್ರೊ ದರಗಳು ಹೇಗೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.