A53: ಬಿಡುಗಡೆ ಮುನ್ನವೇ ಸ್ಮಾರ್ಟ್‌ಫೋನ್ ಇಮೇಜ್, ವಿಶೇಷತೆಗಳ ಮಾಹಿತಿ ಸೋರಿಕೆ! *ಭಾರತೀಯ ಮಾರುಕಟ್ಟೆಗೆ ಸ್ಯಾಮ್ಸಂಗ್ ಮಧ್ಯಮವ್ಯಾಪ್ತಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ*ಬಿಡುಗಡೆ ಮುನ್ನವೇ ಸ್ಯಾಮ್ಸಂಗ್ ಗ್ಯಾಲಕ್ಸಿ ಎ53 ಇಮೇಜ್, ವಿಶೇಷತೆ ಬಹಿರಂಗವಾಯಿತು.*ಈ ಫೋನ್‌ ಬೆಲೆ ಎಷ್ಟಿರಲಿದೆ ಎಂಬ ಮಾಹಿತಿ ಇಲ್ಲ, ಶೀಘ್ರವೇ ಭಾರತದಲ್ಲಿ ಬಿಡುಗಡೆ ಸಾಧ್ಯತೆ :ಪ್ರಮುಖ ಸ್ಮಾರ್ಟ್‌ಫೋನ್ ಉತ್ಪಾದಕ ಕಂಪನಿ ಎನಿಸಿಕೊಂಡಿರುವ ಸ್ಯಾಮ್ಸಂಗ್ ಭಾರತೀಯ ಮಾರುಕಟ್ಟೆಗೆ ಮೂರು ಸ್ಮಾರ್ಟ್‌ಫೋನ್ ರಿಲೀಸ್ ಮಾಡುವ ಸಾಧ್ಯತೆಗಳಿವೆ. ಈಗಾಗಲೇ ಗೊತ್ತಿರುವಂತೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎ53 ( A53), ಸ್ಯಾಮ್ಸಂಗ್ ಎ33 ( A33) ಸ್ಮಾರ್ಟ್‌ಫೋನ್‌ಗಳು ಕಂಪನಿಯ ಭಾರತೀಯ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. ಜತೆಗೆ ಈ ಎರಡೂ ಫೋನುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದವು. ಈಗ ಮತ್ತೆ ಫೋನ್‌ನ ವಿನ್ಯಾಸ ಮತ್ತು ಬಣ್ಣದ ಆಯ್ಕೆಗಳ ಮಾಹಿತಿಯೂ ಸೋರಿಕೆಯಾಗಿದ್ದು, ಕುತೂಹಲ ಹೆಚ್ಚಾಗಿದೆ . ಇದೇ ವೇಳೆ, ಕೆಲವು ಮೂಲಗಳ ಪ್ರಕಾರ, ಕಂಪನಿಯ ಸ್ಯಾಮ್ಸಂಗ್ ಗ್ಯಾಲಕ್ಸಿ ಎ73 5ಜಿ ( A73 5G) ಸ್ಮಾರ್ಟ್‌ಫೋನ್ ಕೂಡ ಬ್ಯೂರೋ ಆಫ್ ಸ್ಟ್ಯಾಂಡರ್ಡ್() ಸರ್ಟಿಫಿಕೇಷನ್ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ. ಹಾಗಾಗಿ, ಸ್ಯಾಮ್ಸಂಗ್ ಕಂಪನಿಯು ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೆ ಮಧ್ಯಮ ವ್ಯಾಪ್ತಿಯ ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಈ ಫೋನುಗಳ ಸಂಬಂಧಿಸಿದ ಮಾಹಿತಿಯು ಸೋರಿಕೆಯಾಗಿರುವುದು ಬಳಕೆದಾರರಲ್ಲಿ ಸಾಕಷ್ಟು ಕುತೂಹಲವೂ ಹೆಚ್ಚಾಗಿದೆ. ಇದನ್ನೂ ಓದಿ: : ಸೈಬರ್ ದಾಳಿಗೆ ಈಡಾಗದಂತೆ ಫೋನ್ ರಕ್ಷಿಸಿಕೊಳ್ಳುವುದು ಹೇಗೆ? ಹೇಗಿದೆ ವಿನ್ಯಾಸ?:ಸ್ಯಾಮ್ಸಂಗ್ ಗ್ಯಾಲಕ್ಸಿ ಎ53 ( A53)ಗೆ ಸಂಬಂಧಿಸಿದ ಇಮೇಜ್‌ಗಳನ್ನು ಜರ್ಮನಿಯ . ವೆಬ್‌ಸೈಟ್‌ನಿಂದ ಗೊತ್ತಾಗಿವೆ. ಜೊತೆಗೆ, ಈ ಫೋನಿನ ಬಣ್ಣಗಳ ಆಯ್ಕೆಯ ಮಾಹಿತಿಯನ್ನು ಷೇರ್ ಮಾಡಿಕೊಳ್ಳಲಾಗಿದ್ದು, ಈ ಫೋನು ಕಪ್ಪು ಮತ್ತು ಬಿಳಿಯ ಬಣ್ಣಗಳಲ್ಲಿ ದೊರೆಯಲಿದೆ. ವಿನ್ಯಾಸದ ಬಗ್ಗೆ ಸೋರಿಕೆಯಾಗಿದ್ದು, ಸ್ಯಾಮ್ಸಂಗ್ ಎ52 ( A52) ರೀತಿಯಲ್ಲೇ ಸ್ಯಾಮ್ಸಂಗ್ ಗ್ಯಾಲಕ್ಸಿ ಎ53 ( A53) ವಿನ್ಯಾಸ ಹೋಲಿಕೆಯನ್ನು ಹಂಚಿಕೊಂಡಿದೆ ಎನ್ನಲಾಗುತ್ತಿದೆ. ಹಳೆಯ ಫೋನಿಗೆ ಹೋಲಿಸಿದರೆ, ಹೊಸ ಫೋನಿನ ಕ್ಯಾಮೆರಾ ಮಾಡ್ಯೂಲ್ ವಿನ್ಯಾಸವನ್ನು ಬದಲಿಸಲಾಗಿರುವುದು ತಿಳಿಯುತ್ತದೆ. ಸೋರಿಕೆಯಾಗಿರುವ ಇಮೇಜ್‌ನಲ್ಲಿ ಈ ಫೋನಿನ ಬಲಭಾಗಕ್ಕೆ ಪವರ್ ಬಟನ್ ಮತ್ತು ವ್ಯಾಲೂಮ್ ಬಟನ್‌ಗಳಿರುವುದು ಗೊತ್ತಾಗುತ್ತದೆ. ಮತ್ತೇನು ವಿಶೇಷತೆ?:ಕೆಲವು ಮೂಲಗಳ ಪ್ರಕಾರ, ಸ್ಯಾಮ್ಸಂಗ್ ಗ್ಯಾಲಕ್ಸಿ ಎ33 ಫೋನ್, ಫುಲ್ ಎಚ್‌ಡಿ 6.5 ಇಂಚ್ ಸೂಪರ್ ಅಮೋಎಲ್ಇಡಿ ಡಿಸ್‌ಪ್ಲೇಯೊಂದಿಗೆ ಬರಲಿದೆ. ಸ್ಯಾಮ್ಸಂಗ್ 1200 ಪ್ರೊಸೆರ್ ಇರಲಿದೆ. ಇದನ್ನು 6 ಜಿಬಿ ಅಥವಾ 8 ಜಿಬಿ RAMನೊಂದಿಗೆ ಸಂಯೋಜಿಸಲಾಗಿರುತ್ತದೆ. ಇನ್ನು ಈ ಫೋನ್ 128 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ್ದು ಅದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1 ಟಿಬಿವರೆಗೂ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: : ಕೋವಿಡ್ ಕಾಲದಲ್ಲಿ ನೆರವಾದ ಆನ್ಲೈನ್ ಎಜುಕೇಷನ್ ಆಪ್ಸ್ ಕ್ಯಾಮೆರಾ ಹೇಗಿದೆ?:ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾಸ ಸ್ಯಾಮ್ಸಂಗ್ ಗ್ಯಾಲಕ್ಸಿ ಎ53 64 ಮೆಗಾ ಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, 12 ಮೆಗಾ ಪಿಕ್ಸೆಲ್ ಸೆನ್ಸರ್ ಇದ್ದು, ಅಲ್ಟ್ರಾ ವೈಡ್ ಲೆನ್ಸ್‌ನೊಂದಿಗೆ ಸಂಯೋಜಿಸಲಾಗಿದೆ. ಹಾಗಾಯೇ 5 ಮೆಗಾ ಪಿಕ್ಸೆಲ್ ಎರಡು ಮೈಕ್ರೋ ಮತ್ತು ಡೆಪ್ತ್ ಕ್ಯಾಮೆರಾಗಳನ್ನು ನೋಡಬಹುದಾಗಿದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಾಗಿ ಕಂಪನಿಯು 32 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಸ್ಮಾರ್ಟ್‌ಪೋನ್‌ನಲ್ಲಿ ಕಂಪನಿಯು 5000 ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಿದೆ. ಇದು 25 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡಲಿದೆ. ಅಂಡ್‌ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಇದ್ದು, 5ಜಿ, ಬ್ಲೂಟೂತ್, ವೈ ಫೈ ಮತ್ತು ಎನ್‌ಎಫ್‌ಸಿ ಈ ಫೋನ್ ಸಪೋರ್ಟ್ ಮಾಡಲಿದೆ ಎಂದು ಸೋರಿಕೆಯಾದ ಮಾಹಿತಿಯಿಂದ ಗೊತ್ತಾಗಿದೆ. ಗೀಕ್ ಬೆಂಚ್ , ಮೈಸ್ಮಾರ್ಟ್ ಪ್ರೈಸ್ ಸೇರಿದಂತೆ ಇನ್ನೂ ಹಲವು ತಾಣಗಳು ಇದೇ ರೀತಿಯ ಮಾಹಿತಿಯನ್ನು ಸೋರಿಕೆ ಮಾಡಿದ್ದು, ಬಳಕೆದಾರರಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.