: ಡಿಸೆಂಬರ್ 2021ರಲ್ಲಿ 20 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆ ಬ್ಯಾನ್! ಹೊಸ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ನಿಯಮಗಳು, 2021 ( ನಿಯಮಗಳು, 2021) ಗೆ ಅನುಗುಣವಾಗಿ ವಾಟ್ಸಾಪ್ ತನ್ನ ಇತ್ತೀಚಿನ ಅನುಸರಣೆ ವರದಿಯನ್ನು ಪ್ರಕಟಿಸಿದೆ. ಮೇಸೆಜಿಂಗ್‌ ಪ್ಲಾಟ್‌ಫಾರ್ಮ್ ವೇದಿಕೆಯು ಡಿಸೆಂಬರ್‌ನಲ್ಲಿ 20 ಲಕ್ಷ ಖಾತೆಗಳನ್ನು ನಿಷೇಧಿಸಿದೆ ಎಂದು ದೃಢಪಡಿಸಿದೆ. :ವಾಟ್ಸಾಪ್ ತನ್ನ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು ಡಿಸೆಂಬರ್‌ನ 2021ರಲ್ಲಿ 20 ಲಕ್ಷಕ್ಕೂ ಹೆಚ್ಚು ಭಾರತೀಯ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ. ಹೊಸ ನಿಷೇಧಿತ ಖಾತೆಗಳ ಅಂಕಿ ಅಂಶವು ನವೆಂಬರ್ 2021 ರಲ್ಲಿ ವಾಟ್ಸಾಪ್ ನಿಂದ ನಿಷೇಧಿಸಲ್ಪಟ್ಟ 17 ಲಕ್ಷ ಭಾರತೀಯ ಖಾತೆಗಳಿಂದ 3 ಲಕ್ಷ ಹೆಚ್ಚಳ ಕಂಡಿದೆ. ಗಮನಾರ್ಹವಾಗಿ, ಈ ವರದಿಗಳನ್ನು ಭಾರತದ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021 ರ ಅನುಸಾರವಾಗಿ ಬಿಡುಗಡೆ ಮಾಡಲಾಗಿದೆ. ಈ ವರದಿಗಳು ಭಾರತದಲ್ಲಿ ಬಳಕೆದಾರರಿಂದ ವಾಟ್ಸಾಪ್‌ನ ಕುಂದುಕೊರತೆ ಕಾರ್ಯವಿಧಾನಗಳ ಮೂಲಕ ಪಡೆದ ಕುಂದುಕೊರತೆಗಳಿಗೆ ಪ್ರತಿಕ್ರಿಯೆಯಾಗಿ ವಾಟ್ಸಾಪ್ ತೆಗೆದುಕೊಂಡ ಕ್ರಮಗಳ ಮಾಹಿತಿಯನ್ನು ಒಳಗೊಂಡಿವೆ ಎಂದು ಮೇಸೆಜಿಂಗ್‌ ಪ್ಲಾಟ್‌ಫಾರ್ಮ್ ಹೇಳುತ್ತದೆ. ಜತೆಗೆ ಭಾರತದ ಕಾನೂನುಗಳು ಅಥವಾ ವಾಟ್ಸಾಪ್‌ನ ಸೇವಾ ನಿಯಮಗಳನ್ನು ಉಲ್ಲಂಘಿಸುವ ತಡೆಗಟ್ಟುವಿಕೆ ಮತ್ತು ಪತ್ತೆ ವಿಧಾನಗಳ ಮೂಲಕ ಭಾರತದಲ್ಲಿ ಕ್ರಮ ಕೈಗೊಳ್ಳಲಾದ ಖಾತೆಗಳನ್ನು ಒಳಗೊಂಡಿದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ' ’ ಅವಧಿ 2 ದಿನಗಳವರೆಗೆ ವಿಸ್ತರಣೆ? 528 ಕುಂದುಕೊರತೆ ವರದಿ:ಇತ್ತೀಚಿನ ವರದಿಯು ಡಿಸೆಂಬರ್ 1, 2021 ರಿಂದ ಡಿಸೆಂಬರ್ 31, 2021 ರವರೆಗಿನ ಅವಧಿಯ ಮಾಹಿತಿಯನ್ನು ಒಳಗೊಂಡಿದೆ. ಈ ತಿಂಗಳ ಅವಧಿಯಲ್ಲಿ ವಾಟ್ಸಾಪ್ ಒಟ್ಟು 528 ಕುಂದುಕೊರತೆ ವರದಿಗಳನ್ನು ಸ್ವೀಕರಿಸಿದೆ. ಭಾರತದಲ್ಲಿ ಒಟ್ಟು 20,79,000 ಖಾತೆಗಳನ್ನು ಬ್ಯಾನ್ ಮಾಡಿರುವುದಾಗಿ ವಾಟ್ಸಾಪ್ ದೃಢಪಡಿಸಿದೆ. ವಾಟ್ಸಾಪ್ +91 ಫೋನ್ ಸಂಖ್ಯೆಯ ಮೂಲಕ ಖಾತೆಯನ್ನು ಭಾರತೀಯ‌ ಖಾತೆ ಎಂದು ಗುರುತಿಸುತ್ತದೆ. "ಕೆಳಗೆ ಹಂಚಿಕೊಳ್ಳಲಾದ ಡೇಟಾವು ದುರ್ಬಳಕೆ ( ) ಪತ್ತೆ ವಿಧಾನವನ್ನು ಬಳಸಿಕೊಂಡು ಡಿಸೆಂಬರ್ 1, 2021-ಡಿಸೆಂಬರ್ 31, 2021 ರ ನಡುವೆ ವಾಟ್ಸಾಪ್‌ನಿಂದ ನಿಷೇಧಿಸಲಾದ ಭಾರತೀಯ ಖಾತೆಗಳ ಸಂಖ್ಯೆಯನ್ನು ಹೈಲೈಟ್ ಮಾಡುತ್ತದೆ, ಇದು ನಮ್ಮ "" ವೈಶಿಷ್ಟ್ಯದ ಮೂಲಕ ಬಳಕೆದಾರರಿಂದ ಪಡೆದ ನೆಗೆಟಿವ್ ಪ್ರತಿಕ್ರಿಯೆಗಳ ಮೇಲೆ ತೆಗೆದುಕೊಂಡ ಕ್ರಮವನ್ನು ಒಳಗೊಂಡಿದೆ. ನಾವು ನಮ್ಮ ಕೆಲಸಕ್ಕೆ ಹೆಚ್ಚಿನ ಪಾರದರ್ಶಕತೆಯನ್ನು ತರುವುದನ್ನು ಮುಂದುವರಿಸುತ್ತೇವೆ ಮತ್ತು ಭವಿಷ್ಯದ ವರದಿಗಳಲ್ಲಿ ನಮ್ಮ ಪ್ರಯತ್ನಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಸೇರಿಸುತ್ತೇವೆ, ”ಎಂದು ಕಂಪನಿಯು ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: : ಅನ್‌ಲಿಮಿಟೆಡ್ ಗೂಗಲ್‌ ಡ್ರೈವ್ ಬ್ಯಾಕಪ್‌ಗೆ ಕಡಿವಾಣ? ವಾಟ್ಸಾಪ್‌ನ ದುರ್ಬಳಕೆ ಪತ್ತೆಯು ಖಾತೆಯ ಕಾರ್ಯವಿಧಾನ ಆಧರಸಿ ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ - ನೋಂದಣಿ ಸಮಯದಲ್ಲಿ, ಸಂದೇಶ ಕಳುಹಿಸುವಾಗ ಮತ್ತು ನಕಾರಾತ್ಮಕ ಪ್ರತಿಕ್ರಿಯೆಗೆ ಪ್ರತಿಕ್ರಿಯೆಯಾಗಿ. ಬಳಕೆದಾರರ ವರದಿಗಳು () ಮತ್ತು ಬ್ಲಾಕ್‌ಗಳ () ರೂಪದಲ್ಲಿ ಪ್ರತಿಕ್ರಿಯೆಯನ್ನು ಸ್ವೀಕರಿಸಬಹುದು ಎಂದು ವೇದಿಕೆ ಸೇರಿಸುತ್ತದೆ. "ವಿಶ್ಲೇಷಕರ ತಂಡವು ಈ ವ್ಯವಸ್ಥೆಯು ಪ್ರತಿ ಪ್ರಕರಣಗಳನ್ನು ಮೌಲ್ಯಮಾಪನ ಮಾಡಲು ಮತ್ತು ಕಾಲಾನಂತರದಲ್ಲಿ ನಮ್ಮ ಪರಿಣಾಮಕಾರಿತ್ವವನ್ನು ಸುಧಾರಿಸಲು ಸಹಾಯ ಮಾಡುತ್ತದೆ" ಎಂದು ಕಂಪನಿಯು ಹೇಳಿದೆ. ಎಂಡ್-ಟು-ಎಂಡ್ ಎನ್‌ಕ್ರಿಪ್ಟೆಡ್ ಮೆಸೇಜಿಂಗ್ ಸಿಸ್ಟಮ್‌ಗಳಲ್ಲಿ, ದುರುಪಯೋಗವನ್ನು ತಡೆಗಟ್ಟುವಲ್ಲಿ ವಾಟ್ಸಾಪ್ () ಉದ್ಯಮದ ಮುಂಚೂಣಿಯಲ್ಲಿದೆ ಎಂದು ಅದು ಹೇಳಿಕೊಂಡಿದೆ. ನಿರಂತರವಾಗಿ ಕೃತಕ ಬುದ್ಧಿಮತ್ತೆ () ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನಗಳು, ಡೇಟಾ ವಿಜ್ಞಾನಿಗಳು ( ) ಮತ್ತು ತಜ್ಞರು () ಮತ್ತು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನಮ್ಮ ಗ್ರಾಹಕರನ್ನು ಸುರಕ್ಷಿತವಾಗಿರಿಸಲು ಕಳೆದ ಕೆಲವು ವರ್ಷಗಳಲ್ಲಿ ಈ ಪ್ರಕ್ರಿಯೆಗಳಲ್ಲಿ ಹೆಚ್ಚಿನ ಶ್ರಮವಹಿಸಿದೆ ಎಂದು ಕಂಪನಿ ತಿಳಿಸಿದೆ.