Scamನಲ್ಲಿ ಮೋಸ ಹೋದವರ ಹಣ ಟೆಕ್‌ ಕಂಪನಿಗಳೇ ಮರುಪಾವತಿಸಲಿ: ಬ್ರಿಟಿಷ್ ಲಾ ಮೇಕರ್ಸ್! ವಂಚನೆಗಳ ಜಾಹೀರಾತುಗಳನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೀಡುವ ದೊಡ್ಡ ಟೆಕ್ ಕಂಪನಿಗಳು ಸಂತ್ರಸ್ತರಿಗೆ ಮರುಪಾವತಿಯನ್ನು ನೀಡಬೇಕು ಎಂದು ಬ್ರಿಟಿಷ್ ಲಾ ಮೇಕರ್ಸ್ ಹೇಳಿದ್ದಾರೆ :ಬ್ರಿಟನ್‌ನಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ವಂಚನೆಯ ( ) ಪ್ರಕರಣಗಳನ್ನು ಎದುರಿಸಲು ವ್ಯಾಪಕ ಪ್ರಯತ್ನಗಳ ಭಾಗವಾಗಿ, ವಂಚನೆಗಳ ಜಾಹೀರಾತುಗಳನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೀಡುವ ದೊಡ್ಡ ಟೆಕ್ ಕಂಪನಿಗಳು ಸಂತ್ರಸ್ತರಿಗೆ ಮರುಪಾವತಿಯನ್ನು ನೀಡಬೇಕು ಎಂದು ಬ್ರಿಟಿಷ್ ಲಾ ಮೇಕರ್ಸ್ ಹೇಳಿದ್ದಾರೆ.‌ ಆನ್‌ಲೈನ್‌ನಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನ ಮಾಡುವ ಬಳಕೆದಾರರಿಗೆ ಮರುಪಾವತಿ ಮಾಡಲು ಬ್ಯಾಂಕ್‌ಗಳು ಸ್ವಯಂಪ್ರೇರಿತ ಕಾನೂನಿಗೆ ಸಹಿ ಹಾಕಿದ್ದರೂ, ಎಲ್ಲಕ್ಕಿಂತ ಹೆಚ್ಚು ಆಮಿಷಕ್ಕೆ ಒಳಗಾಗುವ ಸಾಮಾಜಿಕ ಮಾಧ್ಯಮ ಮತ್ತು ಇತರ ವೆಬ್‌ಸೈಟ್‌ಗಳ ಮೇಲೆ ಸಾಕಷ್ಟು ನಿಯಂತ್ರಣವಿಲ್ಲ, ಮೆಲ್ ಸ್ಟ್ರೈಡ್ ( ), ಕ್ರಾಸ್-ಪಾರ್ಟಿ ಟ್ರೆಸರಿ ಸಮಿತಿಯ ಅಧ್ಯಕ್ಷ ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. "ಇಂಥಹ ವೆಬ್‌ಸೈಟ್‌ಗಳ ಮೇಲೆ ಸರ್ಕಾರವು ಕ್ರಮ ಕೈಗೊಳ್ಳಬೇಕು" ಅವರುಆಗ್ರಹಿಸಿದ್ದಾರೆ. "ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಇಂಥಹ ವಿಷಯವನ್ನು ಹೋಸ್ಟ್ ಮಾಡುತ್ತಿವೆ, ಆದರೆ ನಿಜವಾಗಿಯೂ ಸ್ಪ್ಯಾಮ್‌ಜಾಹೀರಾತುಗಳನ್ನು ತೆಗೆಯಲು ಪ್ರಯತ್ನಗಳನ್ನು ಮಾಡುತ್ತಿಲ್ಲ ಮತ್ತು ಅವರು ಜಾಹೀರಾತು ಆದಾಯವನ್ನು ಪಡೆಯುತ್ತಿರುವುದರಿಂದ ಆರ್ಥಿಕವಾಗಿ ಅದು ಲಾಭದಾಯಕವಾಗಿದೆ" ಎಂದು ಸ್ಟ್ರೈಡ್ ಹೇಳಿದ್ದಾರೆ. ಭಾರತದಲ್ಲೂ ಪ್ರತಿದಿನ ಸಾವಿರಾರು ಆನ್‌ಲೈನ್‌ ಸ್ಕ್ಯಾಮ್‌ಗಳು ವರದಿಯಾಗುತ್ತವೆ. ಈ ಬಗ್ಗೆ ಐಟಿ ಕಾನೂನುಗಳಿದ್ದರು ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಲಾಗಿಲ್ಲ. ಅಲ್ಲದೇ ಆನ್‌ಲೈನ್ ಸ್ಕ್ಯಾಮ್‌ನಲ್ಲಿ ಮೋಸ ಹೋದವರ ಹಣ ಮರುಪಾವತಿಯ ಕಾನೂನಿನ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲ. ಇದನ್ನೂ ಓದಿ:ಈ ಅಪಾಯಕಾರಿ ಕೊರಿಯರ್ ಡೆಲಿವರಿ ಮೇಸೆಜ್‌ಗಳನ್ನು ಅಪ್ಪಿತಪ್ಪಿಯೂ ಓಪನ್‌ ಮಾಡ್ಬೇಡಿ! ಖಜಾನೆ, ಆದಾಯ ಮತ್ತು ಕಸ್ಟಮ್ಸ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಹಣಕಾಸು ನಡವಳಿಕೆ ಪ್ರಾಧಿಕಾರ ಸೇರಿದಂತೆ ಸಂಬಂಧಿತ ಸಾರ್ವಜನಿಕ ಸಂಸ್ಥೆಗಳ ಖರ್ಚು, ಆಡಳಿತ ಮತ್ತು ನೀತಿಯನ್ನು ಪರಿಶೀಲಿಸಲು ಖಜಾನೆ ಸಮಿತಿಯನ್ನು ಹೌಸ್ ಆಫ್ ಕಾಮನ್ಸ್ ನೇಮಿಸುತ್ತದೆ. ಇದರ ಅಧ್ಯಕ್ಷತೆಯನ್ನು ಮೆಲ್ ಸ್ಟ್ರೈಡ್ ಸಂಸದರು ವಹಿಸಿದ್ದಾರೆ. ಗಂಭೀರವಾಗಿ ಪರಿಗಣಿಸಿ:ಫೇಸ್‌ಬುಕ್, ಟ್ವಿಟರ್ ಮತ್ತು ಮೈಕ್ರೋಸಾಫ್ಟ್ ಸೇರಿದಂತೆ ಬ್ರಿಟನ್‌ನ ಪ್ರಮುಖ ಟೆಕ್ ಕಂಪನಿಗಳನ್ನು ಪ್ರತಿನಿಧಿಸುವ ವ್ಯಾಪಾರ ಸಂಸ್ಥೆಯಾದ ಟೆಕ್‌ಯುಕೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆರ್ಥಿಕ ಅಪರಾಧದ ಕುರಿತಾದ ವರದಿಯ ಮಾಹಿತಿಯನ್ನು ಖಜಾನೆ ಸಮಿತಿಯು ಬುಧವಾರ ಪ್ರಕಟಿಸಿದ್ದು, ಇದು ಆನ್‌ಲೈನ್ ಮೋಸ ಹೋಗುವವರಿಗೆ ಮರುಪಾವತಿಸಲು ಸಹಾಯ ಮಾಡಲು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಒತ್ತಾಯಿಸುವುದನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರವನ್ನು ಒತ್ತಾಯಿಸಿದೆ. ಗೂಗಲ್, ಟಿಕ್‌ಟಾಕ್ ಮತ್ತು ಅಮೆಜಾನ್ ತೆಗೆದುಕೊಂಡ ಇದೇ ರೀತಿಯ ಕ್ರಮಗಳನ್ನು ಅನುಸರಿಸಿ, ಸಂಭಾವ್ಯ ಹಣಕಾಸು ಸೇವೆಗಳ ಜಾಹೀರಾತುದಾರರನ್ನು ಬ್ರಿಟನ್‌ನ ಹಣಕಾಸು ನಡವಳಿಕೆ ಪ್ರಾಧಿಕಾರದಿಂದ ಅಧಿಕೃತಗೊಳಿಸಬೇಕೆಂದು ಮೆಟಾ ಒಡೆತನದ ಫೇಸ್‌ಬುಕ್, ಟ್ವಿಟರ್ ಮತ್ತು ಮೈಕ್ರೋಸಾಫ್ಟ್ ಬದ್ಧವಾಗಿದೆ ಎಂದು ಡಿಸೆಂಬರ್‌ನಲ್ಲಿ ಟೆಕ್‌ಯುಕೆ ಹೇಳಿದೆ ಎಂದು ವರದಿಯು ಗಮನಿಸಿದೆ. ಆದರೆ ಈ ಬದಲಾವಣೆಗಳಿಗೆ ಯಾವುದೇ ಸೆಟ್ ಟೈಮ್‌ಲೈನ್ ಇಲ್ಲ ಮತ್ತು ಇತರ ಪ್ರಮುಖ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಇದನ್ನು ಅನುಸರಿಸಿಲ್ಲ ಎಂದು ವರದಿ ಹೇಳಿದೆ. ಇದನ್ನೂ ಓದಿ: : ನೌಕರಿ ಹೆಸರಲ್ಲಿ 45 ಮಂದಿಗೆ ಧೋಖಾ! ಬೆಳೆಯುತ್ತಿರುವ ಆನ್‌ಲೈನ್ ವಂಚನೆ ಪ್ರಕರಣಗಳನ್ನು ತಡೆಗಟ್ಟಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಮತ್ತು ವಂಚನೆ-ಹೋರಾಟದ ಪ್ರಯತ್ನಗಳು ಒಬ್ಬ ಮಂತ್ರಿ ಅಥವಾ ಇಲಾಖೆಯ ಅಡಿಯಲ್ಲಿ ಕೇಂದ್ರೀಕೃತವಾಗಿರಬೇಕು ಎಂಬ ವರದಿಯ ಸಂಶೋಧನೆಗಳಿಗೆ ಸರ್ಕಾರ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ. ಬ್ರಿಟನ್ ಬ್ಯಾಂಕ್ ವಂಚನೆಗಳಿಗೆ ಜಾಗತಿಕ ಕೇಂದ್ರಬಿಂದುವಾಗಿದೆ ಎಂದು ರಾಯಿಟರ್ಸ್ ಅಕ್ಟೋಬರ್‌ನಲ್ಲಿ ವರದಿ ಮಾಡಿದೆ, ಈ ವರ್ಷದ ಮೊದಲ ಆರು ತಿಂಗಳಲ್ಲಿ ದಾಖಲೆಯ 754 ಮಿಲಿಯನ್ (ಸುಮಾರು ರೂ. 7,630 ಕೋಟಿ) ಕಳ್ಳತನವಾಗಿದೆ, ಇದು 2020 ರ ಇದೇ ಅವಧಿಗೆ ಹೋಲಿಸಿದರೆ 30 ಶೇಕಡಾ ಹೆಚ್ಚಾಗಿದೆ. "ನಿಜವಾಗಿಯೂ ಅದನ್ನು ತಡೆ ಹಿಡಿಯಲು ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ತುಂಬಾ ನಿಧಾನವಾಗಿದೆ ಎಂದು ನಾವು ಭಾವಿಸುತ್ತೇವೆ... ಜನರು ಸದ್ದಿಲ್ಲದೆ ಅನೇಕ ಸಂದರ್ಭಗಳಲ್ಲಿ, ದೊಡ್ಡ ಪ್ರಮಾಣದ ಹಣವನ್ನು ವಂಚಿಸುತ್ತಾರೆ, ಜನರು ಜೀವನದ ಉಳಿತಾಯವನ್ನು ಕಳೆದುಕೊಳ್ಳುತ್ತಾರೆ" ಎಂದು ಸ್ಟ್ರೈಡ್ ಹೇಳಿದ್ದಾರೆ.