10 ಬಿಲಿಯನ್ ವೀಕ್ಷಣೆ ಪಡೆದ ಮೊದಲ ಯೂಟ್ಯೂಬ್ ವೀಡಿಯೊ! "ಬೇಬಿ ಶಾರ್ಕ್" ವೀಡಿಯೊ ಹೊಸ ಮೈಲುಗಲ್ಲನ್ನು ಮುಟ್ಟಿದ್ದು ಯೂಟ್ಯೂಬ್‌ನಲ್ಲಿ 10 ಶತಕೋಟಿ ವೀಕ್ಷಣೆಗಳು ಪಡೆದಿದೆ. :"ಬೇಬಿ ಶಾರ್ಕ್" ( ) ವೀಡಿಯೊ ಹೊಸ ಮೈಲುಗಲ್ಲನ್ನು ಮುಟ್ಟಿದ್ದು ಯೂಟ್ಯೂಬ್‌ನಲ್ಲಿ 10 ಶತಕೋಟಿ ವೀಕ್ಷಣೆಗಳು ಪಡೆದಿದೆ. ನವೆಂಬರ್ 2020 ರಲ್ಲಿ ಯೂಟ್ಯೂಬ್‌ ಪ್ಲಾಟ್‌ಫಾರ್ಮ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ವೀಡಿಯೊ ದಾಖಲೆ ಜತೆಗೆ ಇದೀಗ ಸೈಟ್‌ನಲ್ಲಿ 10 ಬಿಲಿಯನ್ ವೀಕ್ಷಣೆಗಳನ್ನು ತಲುಪಿದ ಏಕೈಕ ವೀಡಿಯೊ ಇದಾಗಿದೆ ಎಂದು ಯೂಟ್ಯೂಬ್ ದೃಢಪಡಿಸಿದೆ. ದಕ್ಷಿಣ ಕೊರಿಯಾದ ಶೈಕ್ಷಣಿಕ ಕಂಪನಿಯಾದ ಪಿಂಕ್‌ಫಾಂಗ್‌ನಿಂದ () ತಯಾರಿಸಲ್ಪಟ್ಟ ಮತ್ತು ಕೊರಿಯನ್-ಅಮೇರಿಕನ್ ಗಾಯಕ ಹೋಪ್ ಸೆಗೋಯಿನ್ ( ) ಅವರಿಂದ ಹಾಡಲ್ಪಟ್ಟ ಮಕ್ಕಳ ಹಾಡು ಇದಾಗಿದೆ. ಇದು 2016 ರಲ್ಲಿ ಅಪಲೋಡ್‌ ಮಾಡಲಾಗಿದ್ದು ಏಷ್ಯಾದಲ್ಲಿ ವೈರಲ್ ಹಿಟ್ ಆಗಿತ್ತು ಆದರೆ 2019 ರವರೆಗೆ ಅಮೆರಿಕಾದಲ್ಲಿ ಪ್ರಸಿದ್ಧಿ ಪಡೆದಿರಲಿಲ್ಲ. ಇದರ ಯಶಸ್ಸು ಸ್ವಲ್ಪಮಟ್ಟಿಗೆ ಆಕಸ್ಮಿಕವಾಗಿತ್ತು. 2019 ರಲ್ಲಿ, "ಕ್ಲಿಪ್ ಈ ರೀತಿಯಲ್ಲಿ ಪ್ರಸಿದ್ಧಿ ಪಡೆಯುವುದನ್ನು ಕಂಪನಿಯು ನಿರೀಕ್ಷಿಸಿರಲಿಲ್ಲ, , " ಎಂದು ಪಿಂಕ್‌ಫಾಂಗ್‌ನ ಯುಎಸ್ ಸಿಇಒ ಬಿನ್ ಜಿಯೋಂಗ್ ಹೇಳಿದ್ದರು ಎಂದು ಸಿಎನ್‌ಎನ್ () ವರದಿ ಮಾಡಿದೆ. ಈ ವಿಶೇಷ ಮೈಲುಗಲ್ಲು ಆಚರಿಸಲು, ತಮ್ಮ ಕಂಪನಿಯೊಂದಿಗೆ "ಬೇಬಿ ಶಾರ್ಕ್ ಡ್ಯಾನ್ಸ್ ಕ್ಷಣಗಳನ್ನು" ಹಂಚಿಕೊಳ್ಳಲು ಪ್ರಪಂಚದಾದ್ಯಂತ ಮಕ್ಕಳನ್ನು ಆಹ್ವಾನಿಸುತ್ತಿದೆ. ಯೂಟ್ಯೂಬ್‌ನ ಅತಿ ಹೆಚ್ಚು ವೀಕ್ಷಿಸಿದ ವೀಡಿಯೊವು "ಬೇಬಿ ಶಾರ್ಕ್ ಡ್ಯಾನ್ಸ್" ವೀಡಿಯೋದಲ್ಲಿ ನಾವು ಇಬ್ಬರು ಮಕ್ಕಳನ್ನು ಕಾಣಬಹುದು. ಆದರೆ ಇತರ ಕ್ಯಾರೆಕ್ಟರ್ಸ್‌ ಅನಿಮೇಟೆಡ್‌ ಆಗಿದ್ದು ಶಾರ್ಕ್ ಮತ್ತು ಅದರ ಕುಟುಂಬ ಜತೆಗೆ ಮೀಸೆಯ "ಅಜ್ಜ ಶಾರ್ಕ್" ಸೇರಿದಂತೆ ಇತರ ಶಾರ್ಕ್‌ಗಳು ಪ್ರಶಾಂತವಾಗಿ ಈಜುತ್ತಿರುತ್ತವೆ ಮತ್ತು ನಂತರ ಮಕ್ಕಳನ್ನು ಬೇಟೆಯಾಡಲು ಪ್ರಯತ್ನಿಸುತ್ತವೆ. ಆದರೂ ಶಾರ್ಕ್‌ ವಿಫಲವಾಗುತ್ತವೆ. ಶಾರ್ಕ್‌ಗಳು ದೂರದಿಂದ ನೋಡುತ್ತಿರುವಾಗ ಮಕ್ಕಳು ತಾವು ಸುರಕ್ಷಿತವಾಗಿರುವುದಕ್ಕೆ ಸಂಭ್ರಮಿಸುತ್ತಾ ಕುಣಿದು ಕುಪ್ಪಳಿಸುತ್ತಾರೆ. ಈ ವೀಡಿಯೋವನ್ನು ನೀವು ಇಲ್ಲಿ ನೋಡಬಹುದು. 30 ಕೋಟಿ ಹಿಂಬಾಲಕರು ಪಡೆದ ಮೊದಲ ಮಹಿಳೆ! ಕೈಲಿ ಕಾಸ್ಮೆಟಿಕ್ಸ್‌ ಕಂಪನಿಯ ಸಂಸ್ಥಾಪಕಿ, ಮಾಡೆಲ್‌ ಕೈಲಿ ಜೆನ್ನರ್‌ ಇನ್ಸ್ಟಾಗ್ರಾಮ್‌ನಲ್ಲಿ ( ) 300 ಮಿಲಿಯನ್‌(30 ಕೋಟಿ) ಹಿಂಬಾಲಕರನ್ನು ಹೊಂದಿದ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೊದಲು ಈ ದಾಖಲೆ ಪಾಪ್‌ ಸ್ಟಾರ್‌ ಅರಿಯಾನ ಗ್ರಾಂಡೆ (29 ಕೋಟಿ) ಅವರ ಹೆಸರಲ್ಲಿತ್ತು. ಇದೀಗ ಗ್ರಾಂಡೆ ದಾಖಲೆ ಮುರಿದಿರುವ ಕೈಲಿ ಜೆನ್ನರ್‌ (24), ಫುಟ್‌ಬಾಲ್‌ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ(38.8 ಕೋಟಿ ಹಿಂಬಾಲಕರು) ಬಳಿಕ ಅತೀ ಹೆಚ್ಚು ಫಾಲೋವರ್‌ಗಳನ್ನ ಹೊಂದಿರುವ ವ್ಯಕ್ತಿಯೆನಿಸಿದ್ದಾರೆ. ಈ ಹಿಂದೆ ಕೈಲಿ ಮಗಳೊಂದಿಗಿನ ಫೋಟೋ ಹಾಕಿದ್ದು, ಇದು ಇನ್ಸ್ಟಾಗ್ರಾಮ್‌ನಲ್ಲಿ ಅತೀ ಹೆಚ್ಚು ಲೈಕ್‌ ಪಡೆದ ಫೋಟೋ ಎಂಬ ದಾಖಲೆ ನಿರ್ಮಿಸಿತ್ತು.ಆದರೆ ಒಂದು ಮೊಟ್ಟೆಯ ಫೋಟೋ ಆ ದಾಖಲೆಯನ್ನು ಮುರಿದಿತ್ತು. ರಾಪರ್ ಟ್ರಾವಿಸ್ ಸ್ಕಾಟ್ ( ) ಅವರೊಂದಿಗೆ ಎರಡನೇ ಮಗುವನ್ನು ನಿರೀಕ್ಷಿಸುತ್ತಿರುವ ರಿಯಾಲಿಟಿ ಟಿವಿ ತಾರೆ, ನವೆಂಬರ್‌ನಲ್ಲಿ ಟ್ರಾವಿಸ್ ಸ್ಕಾಟ್ ಅವರ ಆಸ್ಟ್ರೋವರ್ಲ್ಡ್ ದುರಂತದ ( ) ನಂತರ ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಂಡರು. ಆಸ್ಟ್ರೋವರ್ಲ್ಡ್ ಫೆಸ್ಟಿವಲ್‌ನಲ್ಲಿ ಸ್ಕಾಟ್ ಪ್ರದರ್ಶನ ನೀಡುತ್ತಿರುವಾಗ ಪ್ರೇಕ್ಷಕರು ವೇದಿಕೆಯತ್ತ ತೆರಳಲು ಪ್ರಾರಂಭಿಸಿದಾಗ ಹತ್ತು ಜನರು ಸಾವನ್ನಪ್ಪಿದ್ದರು ಮತ್ತು ನೂರಾರು ಜನ ಗಾಯಗೊಂಡಿದ್ದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.