ಕೋವಿಡ್ ಸ್ಫೋಟದಿಂದ 3ನೇ ಅಲೆ ಖಚಿತ, ಫ್ಯಾನ್ಸ್‌ಗೆ ಸಂದೇಶ ರವಾನಿಸಿದ ರಚಿತಾ, ಡಿ.30ರ 10 ! ಭಾರತದಲ್ಲಿ ಕೋವಿಡ್ ಸ್ಫೋಟಗೊಂಡಿದೆ. ಕೆಲವೇ ದಿನಗಳಲ್ಲಿ ಭಾರತದಲ್ಲಿ 3ನೇ ಅಲೆ ವಕ್ಕರಿಸಲಿದೆ ಎಂದು ಕೇಂಬ್ರಿಜ್‌ ತಜ್ಞ ಭವಿಷ್ಯ ನುಡಿದಿದ್ದಾರೆ. ಆದರೆ ಜನರು ಲಸಿಕೆ ಹಾಕಲು ಹಿಂದೇಟು ಹಾಕುತ್ತಿದ್ದು ಮರವೇರಿ ಕುಳಿತುಕೊಂಡ ಘಟನೆ ನಡೆದಿದೆ. ಅಭಿಮಾನಿಗಳಿಗೆ ರಚಿತಾ ವಿಶೇಷ ಸಂದೇಶ ರವಾನಿಸಿದ್ದಾರೆ. ಉದ್ಯಮಿ ರತನ್ ಟಾಟಾ ಸರಳ ಹುಟ್ಟು ಹಬ್ಪ ಆಚರಣೆ, ಭಾರತ ಸೌತ್ ಆಫ್ರಿಕಾ ಟೆಸ್ಟ್ ಸೇರಿದಂತೆ ಡಿಸೆಂಬರ್ 31ರ ಟಾಪ್ 10 ಸುದ್ದಿ! : ಕೋವಿಡ್‌ ಲಸಿಕೆಗೆ ಹೆದರಿ ಮರ ಏರಿದ ವ್ಯಕ್ತಿಯ ಕಿತಾಪತಿ ಕೋವಿಡ್‌-19 ಲಸಿಕೆಗೆ ಹೆದರಿ ವ್ಯಕ್ತಿಯೊಬ್ಬ ಮರ ಹತ್ತಿದ ಘಟನೆ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ನಡೆದಿದೆ.ಪುದುಚೇರಿಯ () ವಿಲಿಯನೂರ್ () ಸಮೀಪದ ಹಳ್ಳಿಯಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ದೇಶದ ಹೆಮ್ಮೆಯ ಉದ್ಯಮಿ ರತನ್‌ ಟಾಟಾ ಹೀಗೇಕೆ ಬರ್ತಡೇ ಆಚರಿಸಿದ್ರು...? ದೇಶದ ಹಿರಿಯ ಉದ್ಯಮಿ, ಟಾಟಾ ಗ್ರೂಪ್‌ನ ಮುಖ್ಯಸ್ಥ ರತನ್ ಟಾಟಾ ಅವರು ಇತ್ತೀಚೆಗಷ್ಟೇ ತಮ್ಮ 84 ನೇ ವಸಂತಕ್ಕೆ ಕಾಲಿರಿಸಿದ್ದರು. ಕೆಲ ದಿನಗಳ ಹಿಂದೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಟಾಟಾ ಹೇಗೆ ಹುಟ್ಟುಹಬ್ಬ ಆಚರಿಸಿದರು ಎಂಬ ವಿಡಿಯೋ ಈಗ ವೈರಲ್‌ ಆಗಿದೆ. 84 ವರ್ಷದ ಟಾಟಾ ತಮ್ಮ ಸಂಸ್ಥೆಯ ಅತ್ಯಂತ ಕಿರಿಯ ಉದ್ಯೋಗಿ ಜೊತೆ ಒಂದು ಮೇಣದ ಬತ್ತಿಯನ್ನು ಊದಿ ನಂತರ ಸಣ್ಣ ಕಪ್‌ ಕೇಕ್‌ ಕತ್ತರಿಸುವ ಮೂಲಕ ಸರಳವಾಗಿ ಅವರ ಹುಟ್ಟುಹಬ್ಬ ಆಚರಿಸಿದ್ದಾರೆ. 3rd : ಭಾರತಕ್ಕೆ ಶೀಘ್ರ 3ನೇ ಅಲೆ, ಕೇಂಬ್ರಿಜ್‌ ತಜ್ಞ ಭವಿಷ್ಯ! ಇನ್ನು ಕೆಲವೇ ದಿನಗಳಲ್ಲಿ ಬಹುಶಃ ಇದೇ ವಾರ, ಭಾರತದಲ್ಲಿ ಕೋವಿಡ್‌ ಕೇಸುಗಳ ಸಂಖ್ಯೆ ‘ಸ್ಫೋಟಕ ಏರಿಕೆ’ ಕಾಣಲಿದೆ ಎಂದು ಬ್ರಿಟನ್ನಿನ ಕೇಂಬ್ರಿಜ್‌ ವಿಶ್ವವಿದ್ಯಾಲಯದ ತಜ್ಞರೊಬ್ಬರು ಎಚ್ಚರಿಕೆ ನೀಡಿದ್ದಾರೆ. ದೇಶದಲ್ಲಿ ಒಮಿಕ್ರೋನ್‌ ರೂಪಾಂತರಿ ತಳಿಯಿಂದ ಸೋಂಕಿತರಾಗುವವರ ಸಂಖ್ಯೆ ಮತ್ತು ಒಟ್ಟಾರೆ ಕೋವಿಡ್‌ ಕೇಸುಗಳ ಸಂಖ್ಯೆ ಏರುತ್ತಿರುವುದರ ನಡುವೆಯೇ ಈ ಎಚ್ಚರಿಕೆ ಹೊರಬಿದ್ದಿರುವುದು 3ನೇ ಅಲೆಯ ಸಾಧ್ಯತೆಯನ್ನು ಇನ್ನಷ್ಟುಹೆಚ್ಚಿಸಿದೆ. ಆದರೆ, ಈ ಬಾರಿಯ ಅಲೆ ಬಹಳ ಕಡಿಮೆ ದಿನಗಳ ಕಾಲ ಇರುತ್ತದೆ ಎಂಬ ಸಮಾಧಾನಕರ ಸಂಗತಿಯನ್ನೂ ಕೇಂಬ್ರಿಜ್‌ ತಜ್ಞರು ಹೇಳಿದ್ದಾರೆ. , : ಸೆಂಚೂರಿಯನ್ ಟೆಸ್ಟ್‌ ಗೆಲುವಿಗೆ ಟೀಂ ಇಂಡಿಯಾಗೆ ಬೇಕಿದೆ ಮೂರೇ ವಿಕೆಟ್..! ಭಾರತ ಹಾಗೂ ದಕ್ಷಿಣ ಆಫ್ರಿಕಾ ( ) ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಲ್ಲಿ ಟೀಂ ಇಂಡಿಯಾ ( ) ಗೆಲುವಿನತ್ತ ದಾಪುಗಾಲಿಡಲಾರಂಭಿಸಿದೆ. ಐ : ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ ಡಿಂಪಲ್ ಕ್ವೀನ್! ನಟಿ ರಚಿತಾ ರಾಮ್‌ಗೆ ( ) ಸ್ಯಾಂಡಲ್‌ವುಡ್‌ನಲ್ಲಿ ಬಹು ಬೇಡಿಕೆ ಇದೆ. ಚಂದನವನದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ರಚಿತಾ ರಾಮ್ ಕೂಡ ಒಬ್ಬರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿಯಾಗಿರುವ ನಟಿ ರಚಿತಾ ರಾಮ್‌ಗೆ ಕೆಲ ದಿನಗಳಿಂದ ತೀವ್ರ ಆಯಾಸ ಉಂಟಾಗುತ್ತಿದೆ. : ಫೇಸ್‌ಬುಕ್ ಪ್ರೊಫೈಲ್ ಲಾಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ ಮೆಟಾ () ಒಡೆತನದ ಫೇಸ್‌ಬುಕ್ () ಸಾಮಾಜಿಕ ಜಾಲತಾಣವನ್ನು ಎಲ್ಲರೂ ಬಳಸುತ್ತಾರೆ. ವಾಸ್ತವದಲ್ಲಿ ಫೇಸ್‌ಬುಕ್ ಎಂಬುದು ನಮ್ಮ ಬದುಕಿನ ಭಾಗವೇ ಆಗಿದೆ. ಹಾಗಾಗಿ, ಒಂದಿಲ್ಲ ಒಂದು ರೀತಿಯಲ್ಲಿ ನಾವು ಫೇಸ್‌ಬುಕ್ ಪ್ರಭಾವಕ್ಕೆ ಒಳಗಾಗಿಯೇ ಇರುತ್ತೇವೆ. ಫೇಸ್‌ಬುಕ್‌ನಿಂದ ಎಷ್ಟು ಲಾಭವಿದೆಯೋ ಅಷ್ಟೇ ಅಪಾಯವೂ ಇದೆ. : 2020-21ನೇ ಆರ್ಥಿಕ ಸಾಲಿನ ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆ ಗಡುವು ಫೆಬ್ರವರಿ 28ರ ತನಕ ವಿಸ್ತರಣೆ ಉದ್ಯಮಗಳಿಗೆ 2020-21ನೇ ಆರ್ಥಿಕ ಸಾಲಿನ ವಾರ್ಷಿಕ ಸರಕು ಮತ್ತು ಸೇವಾ ತೆರಿಗೆ () ರಿಟರ್ನ್ಸ್ ()ಸಲ್ಲಿಕೆ ಮಾಡೋ ಗಡುವನ್ನು ಪರೋಕ್ಷ ತೆರಿಗೆಗಳು ಹಾಗೂ ಕಸ್ಟಮ್ಸ್ ಕೇಂದ್ರೀಯ ಮಂಡಳಿ () ಫೆಬ್ರವರಿ 28ರ ತನಕ ವಿಸ್ತರಿಸಿದೆ. ಈ ಹಿಂದೆ ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31ಕೊನೆಯ ದಿನಾಂಕವಾಗಿತ್ತು. ಟ್ವೀಟ್ ಮೂಲಕ ಸಿಬಿಐಸಿ ಈ ಮಾಹಿತಿ ನೀಡಿದೆ. ಪೆಟ್ರೋಲ್, ಡೀಸೆಲ್ ಕಾರು ಸ್ಥಗಿತಗೊಳಿಸಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಹ್ಯುಂಡೈ ಹೆಜ್ಜೆ! ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಹ್ಯುಂಡೈ ಕಾರುಗಳು( ) ಅತೀ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಸೌತ್ ಕೊರಿಯಾದ( ) ಹ್ಯುಂಡೈ ಕಾರುಗಳಿಗೆ ಭಾರಿ ಬೇಡಿಕೆಯೂ ಇದೆ. ವಿಶ್ವದ ಅತೀ ದೊಡ್ಡ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಹ್ಯುಂಡೈ ಇದೀಗ ಪೆಟ್ರೋಲ್ ಹಾಗೂ ಡೀಸೆಲ್( ) ಕಾರು ಉತ್ಪಾದನೆ ಸ್ಥಗಿತಗೊಳಿಸಿ, ಎಲೆಕ್ಟ್ರಿಕ್ ವಾಹನದತ್ತ ಗಮನಕೇಂದ್ರಿಕರಿಸಲು ನಿರ್ಧರಿಸಿದೆ