10 ಹೊಸ ವರ್ಷಕ್ಕೂ ಮುನ್ನ ಕಮಿಷನರ್ ವಾರ್ನಿಂಗ್, ಮೋದಿ ಘನತೆ ಹಾಳುಮಾಡಲ್ಲ ಎಂದ ಟಿಕಾಯತ್! ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮತಾಂತರ ನಿಷೇಧ ಮಸೂದೆ ಕಿತ್ತೊಗೆಯುವುದಾಗಿ ಭರವಸೆ ನೀಡಿದೆ. ಇದ್ದ ಪ್ರಧಾನಿ ಮೋದಿ ವರ್ಚಸ್ಸು ಹಾಳು ಮಾಡಲು ಯತ್ನಿಸುವುದಿಲ್ಲ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ. ಹೊಸ ವರ್ಷ ಸಂಭ್ರಮದಿನ ಸುಮ್ಮನೆ ಓಡಾಡಲು ಬಿಡುವುದಿಲ್ಲ ಎಂದು ಕಮಿನಷರ್ ಎಚ್ಚರಿಸಿದ್ದಾರೆ. ಪ್ರಶಾಂತ್ ಸಂಬರ್ಗಿ ವಿರುದ್ಧ ದೂರು, ಹೊಸ ವರ್ಷಕ್ಕೆ ಟಾಟಾ ನೆಕ್ಸಾನ್ ಇವಿ ಕಾರು ಬಿಡುಗಡೆ ಸೇರಿದಂತೆ ಡಿಸೆಂಬರ್ 27ರ ಟಾಪ್ 10 ಸುದ್ದಿ ವಿವಿರ. ಕಾಂಗ್ರೆಸ್ ಸರಕಾರ ಬಂದರೆ ವಾರದಲ್ಲಿ - ಇರೋಲ್ಲ: ಸಿದ್ದರಾಮಯ್ಯ ನಮ್ಮ ಸರ್ಕಾರ ( ) ಅಧಿಕಾರಕ್ಕೆ ಬಂದರೆ ಒಂದೇ ವಾರದಲ್ಲಿ ಮತಾಂತರ ವಿಧೇಯಕ ಹಿಂಪಡೆಯುತ್ತೇವೆ. ಮತಾಂತರ ನಿಷೇಧ ಕಾಯ್ದೆ ( ) ಕಿತ್ತೆಸೆಯುತ್ತೇವೆ ಎಂದು ವಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ () ಹೇಳಿದರು. ಬೆಂಗಳೂರಿನಲ್ಲಿಂದು ( ) ಮಾತನಾಡಿದ ಮಾಜಿ ಸಿಎಂ ಮೊದಲ ಅಧಿವೇಶನದಲ್ಲೇ ಕಾಯ್ದೆ ಹಿಂಪಡೆದು ಎಸೆಯುತ್ತೇವೆ. ದಾರಿ ತಪ್ಪಿದ ಕಾರು : ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಮುಖ್ಯಮಂತ್ರಿ ಕೊಂಕಣ ಸುತ್ತಿ‌ ಮೈಲಾರಕ್ಕೆ ಬಂದ ಹಾಗೇ ಬಸವನ ಗುಡಿಯ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( ) ಆಗಮಿಸಿದರು. ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಕೋವಿಡ್ ಮೃತರಿಗೆ ಪರಿಹಾರ ಹಂಚಿಕೆ ಕಾರ್ಯಕ್ರಮ ಏರ್ಪಡಿಸಿದ್ದು ಕಾರ್ಯಕ್ರಮಕ್ಕೆ ತೆರಳುವಾದ ಸಿಎಂ () ಇದ್ದ ವಾಹನ () ದಾರಿ ತಪ್ಪಿದ ಪ್ರಸಂಗ ಜರುಗಿತು. : ಪ್ರಧಾನಿ ಕ್ಷಮೆ ಯಾಚಿಸುವುದನ್ನು ರೈತರು ಬಯಸುವುದಿಲ್ಲ : ರಾಕೇಶ್‌ ಟಿಕಾಯತ್‌ ರೈತರು ಪ್ರಧಾನಿಯವರಿಂದ ಕ್ಷಮೆ ಯಾಚನೆಯನ್ನು ಬಯಸುವುದಿಲ್ಲ. ಹಾಗೆಯೇ ವಿದೇಶದಲ್ಲಿ ಅವರ ಘನತೆಯನ್ನು ಹಾಳು ಮಾಡಲು ಬಯಸುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್‌ ನಾಯಕ ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ. ಮತ್ತು ಕ್ರಿಕೆಟರ್ ಸಂಬಂಧಿಕರು! ಇಡೀ ವಿಶ್ವವೇ ಮೆಚ್ಚಿ ಮೆರೆಸಿರುವ ಭೂಮಿ ತೂಕದ ಮನುಷ್ಯ, ಸ್ಪಿನ್ ಮಾಂತ್ರಿಕ, ಕ್ರಿಕೆಟ್ ದಿಗ್ಗಜ, ನಮ್ಮೆಲ್ಲರ ಪ್ರೀತಿಯ ಹೆಮ್ಮೆಯ ಕನ್ನಡಿಗ ಜಂಬೋ ಅನಿಲ್ ಕುಂಬ್ಳೆ ( ) ಮತ್ತು ಅವರ ಪತ್ನಿ ಚೇತನಾ () ಕೆಲವು ದಿನಗಳ ಹಿಂದೆ ಜೀ ಕನ್ನಡ ( ) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಚಾಂಪಿಯನ್ ಶಿಪ್ ವೇದಿಕೆಯಲ್ಲಿ ( ) ಭಾಗಿಯಾಗಿದ್ದರು. ಈ ವೇಳೆ ತಮ್ಮ ನೆಚ್ಚಿನ ಹಾಡುಗಳನ್ನು ಹಾಡುತ್ತಾ, ಸಿನಿ ಜಗತ್ತಿನ ಜೊತೆಗಿರುವ ಸಂಬಂಧದ ಬಗ್ಗೆ ಹಂಚಿಕೊಂಡಿದ್ದಾರೆ ನನ್ನ ಮಗ ಒಟ್ಟಿಗೆ ಜಿಮ್ ಮಾಡ್ತಾರೆ, ಬಿಟ್ಬಿಟಿಯಲ್ಲೋ ಅಂದೆ!: ಕ್ರೇಜಿಸ್ಟಾರ್ ಕಿರಿಕ್ ಪಾರ್ಟಿ' ( ) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ () ಜರ್ನಿ ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ ( ) ಇದೀಗ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. : ಪ್ರಶಾಂತ್ ಸಂಬರಗಿ ಮತ್ತೆ ಸುದ್ದಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರದ ಬಗ್ಗೆ ವಿವಾದ ಹುಟ್ಟುಹಾಕಿ ಸದಾ ಸುದ್ದಿಯಾಗುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ( ) ವಿರುದ್ಧ ಎಫ್​ಐಆರ್​ ದಾಖಲಾಗಿದೆ. 9i : 50MP ಪ್ರೈಮರಿ ಕ್ಯಾಮೆರಾ, 5000mAh ಬ್ಯಾಟರಿಯೊಂದಿಗೆ ಶೀಘ್ರದಲ್ಲೇ ಬಿಡುಗಡೆ? ಅಲಿ ಎಕ್ಸ್‌ಪ್ರೆಸ್ ಲೀಕ್‌ ಪ್ರಕಾರ 9i, 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿರಬಹುದು ಎಂದು ಹೇಳಲಾಗಿದೆ. 2021: ಈ 5 ಮಾಹಿತಿಗಳನ್ನು ಉಲ್ಲೇಖಿಸದಿದ್ರೆ ತೊಂದರೆ ಗ್ಯಾರಂಟಿ! 2020-21ನೇ ಸಾಲಿನ ಆದಾಯ ತರಿಗೆ ರಿಟರ್ನ್ಸ್ ( ) ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನವಾಗಿದೆ. ಆದಾಯ ತೆರಿಗೆ ಇಲಾಖೆ ( )ಇಂದು (ಡಿ.27) ನೀಡಿರೋ ಮಾಹಿತಿ ಪ್ರಕಾರ ಈ ತನಕ 4.50ಕೋಟಿಗೂ ಅಧಿಕ ಜನರು ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಿದ್ದಾರೆ. ಹೊಸ ವರ್ಷಕ್ಕೆ ಟಾಟಾದಿಂದ ಗೂಡ್ ನ್ಯೂಸ್, 400+ ಮೈಲೇಜ್ ಟಾಟಾ ನೆಕ್ಸಾನ್ ಬಿಡುಗಡೆ ರೆಡಿ! ಟಾಟಾ ಮೋಟಾರ್ಸ್ ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿದೆ. ಸದ್ಯ ಕಡಿಮೆಗೆ ಬೆಲೆಗೆ ಅತ್ಯುತ್ತಮ ಎಲೆಕ್ಟ್ರಿಕ್ ಕಾರು ನೀಡುತ್ತಿರುವ ಟಾಟಾ ಮೋಟಾರ್ಸ್ ಇದೀಗ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಟಾಟಾ ಮೋಟಾರ್ಸ್ ಅಮೆರಿಕದ ಟೆಸ್ಲಾ ಕಾರುಗಳಿಗೆ ಪೈಪೋಟಿ ನೀಡಲು ಇದೀಗ 500ಕ್ಕಿಂತ ಹೆಚ್ಚು ಕಿಲೋಮೀಟರ್ ಮೈಲೇಜ್ ನೀಡಬಲ್ಲ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಹೊಸ ವರ್ಷದಲ್ಲಿ ನೂತನ ಟಾಟಾ ನೆಕ್ಸಾನ್ ಇವಿ ಕಾರು ಬಿಡುಗಡೆಯಾಗಲಿದೆ. 2022: ಪಾಸ್ ಕೊಡಲ್ಲ, ಸುಮ್ಮನೆ ಓಡಾಡಿದ್ರೆ ಬಿಡಲ್ಲ, ಕಮಿಷನರ್ ಪಂತ್ ಆದೇಶ ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಈ ಬಾರಿ ಹೊಸ ವರ್ಷಾಚರಣೆ ( 2022) ಮಾಡಬೇಕು. ಸಾರ್ವಜನಿಕ ಸ್ಥಳದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜನೆಗೆ ಅವಕಾಶವಿಲ್ಲ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ( ) ತಿಳಿಸಿದ್ದಾರೆ.