ಭಾರತದಲ್ಲಿ ಲ್ಯಾಪ್ ಟಾಪ್, ಡೆಸ್ಕ್ ಟಾಪ್, ಮಾನಿಟರ್ ಉತ್ಪಾದನೆ ಆರಂಭಿಸಿದ ! ಬೆಂಗಳೂರು(ಡಿ.23):ಕೇಂದ್ರ ಸರ್ಕಾದ ಮೇಕ್ ಇನ್ ಇಂಡಿಯಾ( ) ಯೋಜನೆಗೆ ಮತ್ತಷ್ಟು ಪುಷ್ಠಿ ನೀಡಲು ಎಚ್‌ಪಿ( ) ನಿರ್ಧರಿಸಿದೆ. ಇದರ ಅಂಗವಾಗಿ ಭಾರತದಲ್ಲಿ ಲ್ಯಾಪ್ ಟಾಪ್ ಸೇರಿದಂತೆ ಪಿಸಿ ಉತ್ಪನ್ನಗಳ ಸ್ಥಳೀಯ ಉತ್ದಾದನೆಯನ್ನು ಘೋಷಣೆ ಮಾಡಿದೆ. ಭಾರತ ಸರ್ಕಾರದ `ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ಉತ್ತೇಜಿಸುವ ಮೂಲಕ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿರುವ ಫ್ಲೆಕ್ಸ್ ಸೌಲಭ್ಯದಲ್ಲಿ ಲ್ಯಾಪ್ ಟಾಪ್ ಗಳು, ಡೆಸ್ಕ್ ಟಾಪ್ ಟವರ್ ಗಳು, ಮಿನಿ ಡೆಸ್ಕ್ ಟಾಪ್ ಗಳು ಮತ್ತು ಬಹು ಮಾದರಿಗಳನ್ನು ತಯಾರಿಸಲು ಆರಂಭಿಸಿದೆ. ಈ ಉತ್ಪನ್ನಗಳಲ್ಲಿ ಕೆಲವು ಭಾರತ ಸರ್ಕಾರದಿಂದ ಆದ್ಯತೆಯ ಮಾರುಕಟ್ಟೆ ಪ್ರವೇಶವನ್ನು () ಪಡೆದಿವೆ. ಸರ್ಕಾರಿ ಇಲಾಖೆಗಳು ಹಾಗೂ ಇತರೆ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಸರ್ಕಾರಿ ಇ-ಮಾರುಕಟ್ಟೆ () ಪೋರ್ಟಲ್ ನಲ್ಲಿ ಲಭ್ಯವಿರುತ್ತವೆ. ದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದಾಗಿನಿಂದ ಎಚ್ ಪಿ ಭಾರತದೊಂದಿಗೆ() ನಿಕಟವಾದ ಪಾಲುದಾರಿಕೆಯನ್ನು ಹೊಂದುತ್ತಾ ಬಂದಿದೆ. ಈ ದಿಸೆಯಲ್ಲಿ ಭಾರತವು ಗಮನಾರ್ಹವಾದ ಪ್ರಗತಿಯನ್ನು ಸಾಧಿಸಿ ಡಿಜಿಟಲ್( ) ರೂಪಾಂತರಕ್ಕೆ ಒತ್ತು ನೀಡಿದ ರೀತಿಯಲ್ಲಿ ಲಕ್ಷಾಂತರ ನಾಗರಿಕರ ಜೀವನವನ್ನು ಸಶಕ್ತಗೊಳಿಸುವ ಮತ್ತು ಸಮುದಾಯಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ನಾವು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡಿದ್ದೇವೆ ಎಂದು ಇಂಡಿಯಾ ಮಾರ್ಕೆಟ್ ನ ವ್ಯವಸ್ಥಾಪಕ ನಿರ್ದೇಶಕ ಕೇತನ್ ಪಟೇಲ್ ಹೇಳಿದರು. Q3 2021: ಪರ್ಸ್‌ನಲ್ ಕಂಪ್ಯೂಟರ್ ದಾಖಲೆಯ 53 ಲಕ್ಷ ಮಾರಾಟ ಭಾರತ ಸರ್ಕಾರದ `ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮಕ್ಕೆ ಅನುಗುಣವಾಗಿ ಸ್ಥಳೀಯ ಉತ್ಪಾದನೆಯತ್ತ ಎಚ್ ಪಿ ಇಂಡಿಯಾಗೆ ಈ ಘೋಷಣೆ ಮಹತ್ವದ ಹೆಜ್ಜೆಯಾಗಿದೆ. ನಮ್ಮ ಉತ್ಪಾದನಾ ಕಾರ್ಯಾಚರಣೆಗಳ ಪ್ರಮಾಣ ಮತ್ತು ವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಮೂಲಕ `ಆತ್ಮ ನಿರ್ಭರ ಭಾರತ್’ ಕನಸನ್ನು ನನಸಾಗಿಸುವಲ್ಲಿ ನಾವು ಅರ್ಥಪೂರ್ಣವಾದ ಪಾತ್ರವನ್ನು ವಹಿಸುತ್ತಿದ್ದೇವೆ ಎಂದು ನಾವು ಭಾವಿಸುತ್ತೇವೆ ಎಂದು ಪಟೇಲ್ ಹೇಳಿದರು. ಎಲೈಟ್ ಬುಕ್ಸ್, ಪ್ರೊ ಬುಕ್ಸ್ ಮತ್ತು ಎಚ್ ಪಿ G8 ಸರಣಿಯ ನೋಟ್‌ಬುಕ್ ಉತ್ಪನ್ನಗಳೊಂದಿಗೆ ಭಾರತದಲ್ಲಿ ಇಂತಹ ವ್ಯಾಪಕ ಶ್ರೇಣಿಯ ಲ್ಯಾಪ್ ಟಾಪ್ ಗಳನ್ನು ತಯಾರಿಸುತ್ತಿರುವುದು ಇದೇ ಮೊದಲು. ಡೆಸ್ಕ್ ಟಾಪ್ ಮಿನಿ ಟವರ್ ಗಳು (ಎಂಟಿ), ಮಿನಿ ಡೆಸ್ಟ್ ಟಾಪ್ ಗಳು (ಡಿಎಂ), ಸಣ್ಣ ಫಾರ್ಮ್ ಫ್ಯಾಕ್ಟರ್ () ಡೆಸ್ಕ್ ಟಾಪ್ ಗಳು ಮತ್ತು ಆಲ್-ಇನ್-ಒನ್ ಪಿಸಿಗಳ ವಿವಿಧ ಮಾದರಿಗಳನ್ನು ಸೇರಿಸುವ ಮೂಲಕ ಎಚ್ ಪಿ ತನ್ನ ಸ್ಥಳೀಯವಾಗಿ ತಯಾರಿಸಿದ ವಾಣಿಜ್ಯ ಡೆಸ್ಕ್ ಟಾಪ್ ಗಳನ್ನು ವಿಸ್ತರಿಸಿದೆ. ಈ ಉತ್ಪನ್ನಗಳು ಇಂಟೆಲ್ ಮತ್ತು ಎಎಂಡಿ ಪ್ರೊಸೆಸರ್ ಆಯ್ಕೆಗಳನ್ನು ಹೊಂದಿವೆ ಮತ್ತು ವ್ಯಾಪಕ ಶ್ರೇಣಿಯ ಗ್ರಾಹಕ ವಿಭಾಗಗಳನ್ನು ಪೂರೈಸುತ್ತದೆ. : 30,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಭಾರತದಲ್ಲಿ ಈಗ ಡಿಸ್ ಪ್ಲೇ ಮಾನಿಟರ್ ಗಳನ್ನು ತಯಾರಿಸುತ್ತದೆ ಮತ್ತು ಹೈಬ್ರಿಡ್ ಕೆಲಸ ಹಾಗೂ ಕಲಿಕೆಗೆ ಅಗತ್ಯವಿರುವ ಡಿಸ್ ಪ್ಲೇ ಮಾನಿಟರ್ ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸಲು ಉತ್ತಮ ಸ್ಥಾನದಲ್ಲಿದೆ. ``ಇಂದಿನ ಜನಜೀವನಕ್ಕೆ ಪಿಸಿಗಳು ಈ ಹಿಂದಿಗಿಂತಲೂ ಹೆಚ್ಚು ಅಗತ್ಯವಾಗಿವೆ. ಉದ್ಯೋಗ, ಕಲಿಕೆ, ಗಳಿಕೆ ಮತ್ತು ಮನರಂಜನೆಯಂತಹ ಅವಕಾಶಗಳನ್ನು ಈ ಪಿಸಿಗಳು ಕಲ್ಪಿಸುತ್ತವೆ. ಸ್ಥಳೀಯ ಉತ್ಪಾದನೆಯ ವಿಸ್ತರಣೆಯೊಂದಿಗೆ ಎಚ್ ಪಿ ಇಂಡಿಯಾ ನಮ್ಮ ಪಾಲುದಾರರು ಮತ್ತು ಗ್ರಾಹಕರ ಅಗತ್ಯಗಳನ್ನು ಉತ್ತಮವಾದ ರೀತಿಯಲ್ಲಿ ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂದು ಪಟೇಲ್ ಹೇಳಿದರು. ವಾಣಿಜ್ಯ ಡೆಸ್ಕ್ ಟಾಪ್ ಗಳನ್ನು ಉತ್ಪಾದಿಸಲು ಎಚ್ ಪಿ, ಫ್ಲೆಕ್ಸ್ ಸಂಸ್ಥೆಯೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದ್ದು, 2020 ರ ಆಗಸ್ಟ್ ನಿಂದ ಉತ್ಪಾದನೆಯನ್ನು ಮಾಡುತ್ತಿದೆ. ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಎಚ್ ಪಿ ತನ್ನ ಉತ್ಪಾದನಾ ಕಾರ್ಯಾಚರಣೆಗಳನ್ನು ಗಣನೀಯ ಪ್ರಮಾಣದಲ್ಲಿ ವಿಸ್ತರಣೆ ಮಾಡಿಕೊಂಡಿದೆ. ಚೆನ್ನೈ ಬಂದರಿಗೆ ಫ್ಲೆಕ್ಸ್ ಸೌಲಭ್ಯದ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಲ್ಯಾಪ್ ಟಾಪ್ ಗಳು ಮತ್ತು ಇತರ ಪಿಸಿ ಉತ್ಪನ್ನಗಳ ತಯಾರಿಕೆಗಾಗಿ ಕಚ್ಚಾ ವಸ್ತುಗಳ ಮೂಲಗಳ ಸಾಗಣೆ ಪ್ರಕ್ರಿಯೆಯನ್ನು ಸುಧಾರಣೆ ಮಾಡುತ್ತದೆ.