11i : ಶಾಓಮಿಯ ಅತ್ಯಂತ ವೇಗದ ಚಾರ್ಜಿಂಗ್ ಸ್ಮಾರ್ಟ್‌ಫೋನ್ ಜನವರಿಯಲ್ಲಿ ಬಿಡುಗಡೆ! 11i ಹೈಪರ್‌ಚಾರ್ಜ್ ಭಾರತದಲ್ಲಿ ಜನವರಿ 6 ರಂದು ಬಿಡುಗಡೆಯಾಗಲಿದೆ. ಇದರ ಬೆಲೆ ಸುಮಾರು 25,000 ರೂ ಇರಬಹುದು ಎಂದು ಊಹಿಸಲಾಗಿದೆ. : ಶಾಓಮಿ 2022 ರ ತನ್ನ ಮೊದಲ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಜನವರಿ 6 ರಿಂದ ಬಿಡುಗಡೆ ಮಾಡಲು ಸಿದ್ಧವಾಗಿದೆ. ಭಾರತದ ನಂ.1 ಸ್ಮಾರ್ಟ್‌ಫೋನ್ ತಯಾರಕ, 11i ಹೈಪರ್‌ಚಾರ್ಜ್ಅನ್ನು ಜನವರಿ ಮೊದಲ ವಾರದಲ್ಲಿ ದೇಶದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದೆ. ಈ ಸ್ಮಾರ್ಟ್‌ಫೋನ್ ಕಳೆದ ತಿಂಗಳ ಕೊನೆಯಲ್ಲಿ ಚೀನಾದಲ್ಲಿ ಬಿಡುಗಡೆಯಾದ 11 + ನ ಮರುಬ್ರಾಂಡೆಡ್ ಮಾದರಿ ಎಂದು ಹೇಳಲಾಗುತ್ತದೆ. ಹೊಸ ಫೋನ್ ಭಾರತದಲ್ಲಿ 120W ವೇಗದ ಚಾರ್ಜಿಂಗ್ ( ) ಬೆಂಬಲದೊಂದಿಗೆ ಬರಲಿದೆ ಎಂದು ಶಾಓಮಿ ದೃಢಪಡಿಸಿದೆ, ಇದು ದೇಶದಲ್ಲಿ ಈ ತಂತ್ರಜ್ಞಾನವನ್ನು ಬೆಂಬಲಿಸುವ ಕಂಪನಿಯ ಮೊದಲ ಫೋನ್ ಆಗಿದೆ. ಈ ವರ್ಷದ ಆರಂಭದಲ್ಲಿ, ಶಾಓಮಿ 11 ಅನ್ನು 67W ವೇಗದ ಚಾರ್ಜಿಂಗ್‌ನೊಂದಿಗೆ ಪರಿಚಯಿಸಿತ್ತು. ಆದರೆ ರಿಟೇಲ್ ಬಾಕ್ಸ್ 55W ವೇಗದ ಚಾರ್ಜರ್ ಅನ್ನು ಹೊಂದಿತ್ತು. ‌ ಸಹಜವಾಗಿ , ಮತ್ತು ಸ್ಮಾರ್ಟ್‌ಫೋನ್‌ಗಳು ತಮ್ಮ ವೇಗದ ಚಾರ್ಜಿಂಗ್ ಅನ್ನು 33W ಗೆ ನಿರ್ಬಂಧಿಸುತ್ತವೆ. ಹಾಗಾಗಿ ಶಾಓಮಿ ಯ ಹೊಸ ಬಿಡುಗಡೆ 120W ಚಾರ್ಜರ್ ಹೇಗೆ ಕೆಲಸ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಶಾಓಮಿಯ ಚಾರ್ಜಿಂಗ್ ಟೆಕ್ ( ) ಖಂಡಿತವಾಗಿಯೂ, ತಮ್ಮ ಸಾಧನಗಳಲ್ಲಿ ವೇಗವಾಗಿ ಚಾರ್ಜಿಂಗ್ ತಂತ್ರಜ್ಞಾನವನ್ನು ನೀಡುವ , Realmeಗಳ ಜತೆಗೆ ಸ್ಪರ್ಧಿಸಲಿದೆ. 11i ಬೆಲೆ ಎಷ್ಟು? ಹೊಸ ಮತ್ತು ಉನ್ನತ ತಂತ್ರಜ್ಞಾನ ಜತೆಗೆ ಬಿಡುಗಡೆಯಾಗುತ್ತಿದೆ ಎಂದರೆ 11i ಹೈಪರ್‌ಚಾರ್ಜ್ ಮಧ್ಯಮ ಪ್ರೀಮಿಯಂ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿರುವ ಸಾಧ್ಯತೆ ಇದೆ. ಇದು ಖಂಡಿತವಾಗಿಯೂ ಭಾರತದಲ್ಲಿ 10 ಗಿಂತ ಹೆಚ್ಚು ಬೆಲೆಗೆ ಮಾರಾಟವಾಗಲಿದೆ. ಇದೀಗ ಭಾರತದಲ್ಲಿ 10 ನ ಟಾಪ್-ಎಂಡ್ ಮಾದರಿಯ ಬೆಲೆ 21,999 ರೂ. 11i ಹೈಪರ್‌ಚಾರ್ಜ್‌ನ ಬೆಲೆಯು ಅದಕ್ಕಿಂತ ಹೆಚ್ಚಾಗಿರಬಹುದು ಎಂದು ಊಹಿಸಲಾಗಿದೆ. ಚೀನಾದಲ್ಲಿ ಬಿಡುಗಡೆಯಾಗಿರುವ ಇದೇ ಮಾದರಿಯ 11 + ಬೆಲೆ 6GB ಮತ್ತು 128GB ಸ್ಟೋರೇಜ್ ರೂಪಾಂತರಕ್ಕಾಗಿ 1,899 (ಸುಮಾರು ರೂ 22,200) ನಿಂದ ಪ್ರಾರಂಭವಾಗುತ್ತದೆ. ಜಾಗತಿಕ ಚಿಪ್ ಕೊರತೆ ಮತ್ತು ಕಚ್ಚಾ ಸಾಮಗ್ರಿಗಳು ದುಬಾರಿಯಾಗುತ್ತಿರುವುದರಿಂದ, ಅನೇಕ ಸ್ಮಾರ್ಟ್‌ಫೋನ್ ತಯಾರಕರು ತಮ್ಮ ಸಾಧನಗಳಿಗೆ ಜಾಗತಿಕ ಮಾರುಕಟ್ಟೆಯ ಬೆಲೆಗಿಂತ ಹೆಚ್ಚಿನ ಬೆಲೆಯನ್ನು ಭಾರತದಲ್ಲಿ ನೀಡುವುದನ್ನು ನಾವು ನೋಡಿದ್ದೇವೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, 11i ಹೈಪರ್‌ಚಾರ್ಜ್‌ಗೆ ದೇಶದಲ್ಲಿ ರೂ 25,000 ಕ್ಕಿಂತ ಹೆಚ್ಚು ಬೆಲೆ ನಿರ್ಧಾರವಾಗುವ ಸಾಧ್ಯತೆ ಇದೆ. ಆದರೂ ಈ ಬಗ್ಗೆ ಶಾಓಮಿಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. 11i ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಭಾರತದಲ್ಲಿ ಬಿಡುಗಡೆಯಾಗುವ ಮಾದರಿಯೂ ಚೀನಾದಲ್ಲಿ ಬಿಡುಗಡೆಯಾದ ಮೊಬೈಲ್‌ ವೈಶಿಷ್ಟ್ಯಗಳ ಜತೆಗೇ ಬಿಡುಗೆಯಾಗಲಿದೆ. ಫೋನ್ 6.67-ಇಂಚಿನ ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 4,500mAh ಬ್ಯಾಟರಿ ಮತ್ತು 120W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಬಹುದು. ಫೋನ್ 920 ಚಿಪ್‌ಸೆಟ್ ನೊಂದಿಗೆ ಚಾಲಿತವಾಗಬಹುದು. ಇದು ಭಾರತದಲ್ಲಿ ಈ ಪ್ರೊಸೆಸರ್‌ನೊಂದಿಗೆ ಬರುವ ಮೊದಲ ಫೋನ್ ಆಗಿದೆ. ಫೋನ್ 108-ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸ್‌ರ್, 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು. ಮುಂಭಾಗದಲ್ಲಿ 16-ಮೆಗಾಪಿಕ್ಸೆಲ್ ಸೆನ್ಸರ್‌ ಕೂಡ ನಿರೀಕ್ಷಿಸಬಹುದು. ಫೋನ್ ಪವರ್ ಬಟನ್‌ನಲ್ಲಿ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಒಳಗೊಂಡಿರಬಹದು. ಇದನ್ನೂ ಓದಿ: 1) : ಹೊಸ ವರ್ಷದಲ್ಲಿ ಹಾನರ್ ಫೋಲ್ಡಬಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ! 2)ಡಿ.26ರಿಂದ ಭಾರತದಲ್ಲಿ 5 ಮಾರಾಟ, ಇಲ್ಲಿದೆ ಫೋನ್ ಬೆಲೆ ಹಾಗೂ ವಿಶೇಷತೆ! 3)’ : ವಿಶ್ವದ ಮೊದಲ ಎಸ್‌ಎಮ್‌ಎಸ್ ' ' ₹91 ಲಕ್ಷಕ್ಕೆ ಮಾರಾಟ!