: 2021ರಲ್ಲಿ ಜಾಗತಿಕವಾಗಿ 10 ಮಿಲಿಯನ್ ಸ್ಮಾರ್ಟ್‌ಫೋನ್‌ ಮಾರಾಟ! *ಜಾಗತಿಕವಾಗಿ 1 ಕೋಟಿ ಯುನಿಟ್‌ಗಳ ಮಾರಾಟ*ಭಾರತದಲ್ಲಿ ಮಾರಾಟ ಶೇ.29% ಬೆಳವಣಿಗೆ*11 ಮಿಲಿಯನ್‌ ತಲುಪಿದ ಕಮ್ಯೂನಿಟಿ ಫೋರಮ್ : ಚೀನಾದ ಸ್ಮಾರ್ಟ್‌ಫೋನ್ ತಯಾರಕ ಒನ್‌ಪ್ಲಸ್ () ತನ್ನ ಜಾಗತಿಕವಾಗಿ 10 ಮಿಲಿಯನ್ ಯುನಿಟ್‌ಗಳನ್ನು (1 ಕೋಟಿ) ಮಾರಾಟ ( ) ಮಾಡುವ ಗುರಿಯನ್ನು ಸಾಧಿಸಿದೆ ಎಂದು ಸಿಇಒ ಪೀಟ್ ಲಾವ್ ( ) ತಿಳಿಸಿದ್ದಾರೆ. ಕಂಪನಿ ನಿರ್ಧರಿಸಿದ ಸಮಯಕ್ಕಿಂತ ಮುಂಚಿತವಾಗಿಯೇ 10 ಕೋಟಿ ಸಾಧನಗಳ ಮಾರಾಟವಾಗಿವೆ ಎಂದು ಅವರು ತಿಳಿಸಿದ್ದಾರೆ.ಕಂಪನಿಯ ಎಂಟನೇ ವಾರ್ಷಿಕೋತ್ಸವದ ಕುರಿತು ಮಾತನಾಡಿರುವ ಪೀಟ್‌, ವೈಬೋ‌ ( ) ಲೇಖನದ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜಾಗತಿಕವಾಗಿ 10 ಮಿಲಿಯನ್ ಯುನಿಟ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ಬ್ರ್ಯಾಂಡ್ ಮುಟ್ಟಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಲಾವ್ ಹಂಚಿಕೊಂಡ ಲೇಖನದ ಪ್ರಕಾರ, ಈ ವರ್ಷ, ದೇಶೀಯ ಮಾರುಕಟ್ಟೆಯಲ್ಲಿ ತನ್ನ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿದೆ ಮತ್ತು ಉತ್ಪನ್ನಗಳು ಮತ್ತು ಮಾರ್ಕೆಟಿಂಗ್‌ಗೆ‌ ( ) ಸಂಬಂಧಿಸಿದ ಕ್ಷೇತ್ರಗಳನ್ನು ಸಕ್ರಿಯವಾಗಿ ಮುನ್ನಡೆಸಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಒನ್‌ಪ್ಲಸ್‌ ಹವಾ! 9 ಸರಣಿ ಬಿಡುಗಡೆಯಾದ ಆರಂಭಿದಲ್ಲಿ 10 ಸೆಕೆಂಡುಗಳಲ್ಲಿ 300 ಮಿಲಿಯನ್ ಯುವಾನ್ (ಅಂದಾಜು $47 ಮಿಲಿಯನ್) ಮಾರಾಟವಾಗಿದೆ. ಕಂಪನಿಯು 9R ಮತ್ತು 9RT ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ ಈ ಮೂಲಕ ಮಧ್ಯಮ ಶ್ರೇಣಿ ಮತ್ತು ಮೇಲಿನ ಮಧ್ಯಮ ಶ್ರೇಣಿಯ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ, ನ ಜಾಗತಿಕ ಮಾರಾಟಗಳು 2021 ರ ಮೊದಲಾರ್ಧದಲ್ಲಿ ವರ್ಷದಿಂದ ವರ್ಷಕ್ಕೆ 257% ರಷ್ಟು ಹೆಚ್ಚಾಗಿದೆ. ಯುಎಸ್‌ನಲ್ಲಿನ ಮಾರಾಟ ವರ್ಷದಿಂದ ವರ್ಷಕ್ಕೆ 428% ರಷ್ಟು ಹೆಚ್ಚುತ್ತಿದೆ. ಹಾಗಾಗಿ ಈ ಅವಧಿಯಲ್ಲಿ ಒನ್‌ಪ್ಲಸ್ ಜಾಗತಿಕವಾಗಿ ಬ್ರ್ಯಾಂಡ್ ಆಗಿ ಉನ್ನತ ಬೆಳವಣಿಗೆ ದರವನ್ನು ಕಂಡಿದೆ. ಅಗ್ರ 5 ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿಒನ್‌ ಪ್ಲಸ್‌! ಯುರೋಪ್‌ನಲ್ಲಿ, ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಅತ್ಯಧಿಕ ಬೆಳವಣಿಗೆ ದರವನ್ನು ಹೊಂದಿರುವ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿದ್ದು, ವರ್ಷದಿಂದ ವರ್ಷಕ್ಕೆ 304% ಹೆಚ್ಚಳವಾಗಿದೆ. “ನಮ್ಮ ಯುರೋಪಿಯನ್ ಮಾರುಕಟ್ಟೆಗಳು ( ) ಸಹ ಗಮನಾರ್ಹ ಬೆಳವಣಿಗೆಯನ್ನು ಕಂಡಿವೆ. ವಾಸ್ತವವಾಗಿ, ಅಧಿಕೃತವಾಗಿ ವೇಗವಾಗಿ ಬೆಳೆಯುತ್ತಿರುವ ಅಗ್ರ 5 ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿಒನ್‌ ಪ್ಲಸ್‌ ಕೂಡ ಒಂದು. ಯುರೋಪ್‌ನ , 2021 ರ ಮೂರನೇ ತ್ರೈಮಾಸಿಕದಲ್ಲಿ 131% ವಾರ್ಷಿಕ ಬೆಳವಣಿಗೆ ದರವನ್ನು ಹೊಂದಿದೆ" ಎಂದು ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ. ಭಾರತದಲ್ಲಿ ಮಾರಾಟ ಶೇ.29% ಬೆಳವಣಿಗೆ! ಭಾರತದಲ್ಲಿ, ವರ್ಷದಿಂದ ವರ್ಷಕ್ಕೆ 29% ಬೆಳವಣಿಗೆಯನ್ನು ಕಂಡಿದೆ. 2021 ರ ಮೂರನೇ ತ್ರೈಮಾಸಿಕದಲ್ಲಿ 30,000 ಕ್ಕಿಂತ ಹೆಚ್ಚು ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ 30% ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಅಲ್ಲದೆ, ಕಮ್ಯೂನಿಟಿ ಫೋರಮ್ ಸದಸ್ಯರು 11 ಮಿಲಿಯನ್‌ಗೆ ತಲುಪಿದ್ದಾರೆ. ಈ ವೇದಿಕೆಯಲ್ಲಿ 116 ಮಿಲಿಯನ್ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ಒನ್‌ಪ್ಲಸ್ ತಿಳಿಸಿದೆ. ಚೈನೀಸ್ ಬ್ರ್ಯಾಂಡ್ ಈಗ 10 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಪ್ರಾರಂಭಿಸಲು ಸಜ್ಜಾಗಿದೆ. ಇದು 8 1 ಚಿಪ್‌ಸೆಟ್‌ನಿಂದ ಚಾಲಿತವಾಗುವುದನ್ನು ದೃಢೀಕರಿಸಲಾಗಿದೆ. ವರದಿಗಳ ಪ್ರಕಾರ ಫೋನ್‌ಗಳು ಮುಂದಿನ ತಿಂಗಳು ಚೀನಾದ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆಯಾಗಲಿವೆ. ಆದರೆ ಇತರ ಪ್ರದೇಶಗಳಲ್ಲಿನ ಗ್ರಾಹಕರು ಮಾರ್ಚ್ ಅಥವಾ ಏಪ್ರಿಲ್‌ವರೆಗೆ ಕಾಯಬೇಕಾಗಬಹುದು. ಇದನ್ನೂ ಓದಿ: 1) : 2022ರಲ್ಲಿ ಬಿಡುಗಡೆಯಾಗಲಿರುವ ಒನ್‌ಪ್ಲಸ್ ಫೋನ್‌ಗಳಿವು! 2) X30 5G ಸ್ಮಾರ್ಟ್‌ಫೋನ್ ಲಾಂಚ್, ಬೆಲೆ ಎಷ್ಟು? 3) Y32 : ಡ್ಯುಯಲ್ ಕ್ಯಾಮೆರಾ, ಸ್ನಾಪ್‌ಡ್ರಾಗನ್ 680 SoCಯೊಂದಿಗೆ ವಿವೋ ಹೊಸ ಫೋನ್!