X30 5G ಸ್ಮಾರ್ಟ್‌ಫೋನ್ ಲಾಂಚ್, ಬೆಲೆ ಎಷ್ಟು? * ಈ ಆನರ್ ಎಕ್ಸ್30 5ಜಿ ಸ್ಮಾರ್ಟ್‌ಫೋನ್ ಬೆಲೆ ಅಂದಾಜು 17,190 ರೂ.* ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ, 16 ಸೆಲ್ಫಿ ಕ್ಯಾಮೆರಾ* ಭಾರತೀಯ ಮಾರುಕಟ್ಟೆಗೆ ಬಿಡುಗೆಯಾಗುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ : ಸ್ಮಾರ್ಟ್‌ಫೋನ್ () ಉತ್ಪಾದನಾ ಕಂಪನಿಗಳ ಸಾಲಿನಲ್ಲಿ ಆನರ್() ಕಂಪನಿ ಕೂಡ ಪ್ರಮುಖವಾಗಿದ್ದು, ಬಜೆಟ್‌ ಫೋನಿನಿಂದ ಹಿಡಿದು ಪ್ರೀಮಿಯಂವರೆಗಿನ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿದೆ. ಈ ಆನರ್ ಕಂಪನಿ, ಚೀನಾ ಮಾರುಕಟ್ಟೆಗೆ ಇದೀಗ ಆನರ್ ಎಕ್ಸ್30 5ಜಿ ( X30 5G) ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಈ ಹೊಸ ಸ್ಮಾರ್ಟ್‌ಫೋನ್ ಬಗ್ಗೆ ಬಹಳ ದಿನಗಳಿಂದಲೂ ಮಾತುಗಳು ಕೇಳಿ ಬರುತ್ತಿದ್ದವು. ಆನ್‌ಲೈನ್‌ನಲ್ಲಿ ಸಾಕಷ್ಟು ಮಾಹಿತಿಯೂ ಸೋರಿಕೆಯಿಂದಾಗಿ ತೀವ್ರ ಕುತೂಹಲ ಕೆರಳಿಸಿತ್ತು. ಅದಕ್ಕೀಗ ಎಲ್ಲ ತೆರೆ ಬಿದ್ದಿದ್ದು, ಕಂಪನಿಯು ಚೀನಾ ಮಾರುಕಟ್ಟೆಗೆ ಆನರ್ ಎಕ್ಸ್30 5ಜಿ ( X30 5G) ಮಧ್ಯಮ ವ್ಯಾಪ್ತಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಫೋನು ಎಫ್‌ಎಚ್‌ಪ್ಲಸ್ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಕ್ವಾಲಂಕಾಮ್ ಪ್ರೊಸೆಸರ್ ಅನ್ನು ನೀವು ಈ ಫೋನಿನಲ್ಲಿ ಕಾಣಬಹುದು. ಸಾಕಷ್ಟು ಹೊಸ ಹೊಸ ಫೀಚರ್‌ಗಳನ್ನು ಹೊಂದಿರುವ ಈ ಫೋನು ಗ್ರಾಹಕರ ನಿರೀಕ್ಷೆಗಳನ್ನು ತಲುಪಬಹುದು. ಚೀನಾ () ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಆನರ್ ಎಕ್ಸ್30 5ಜಿ ( X30 5G) ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಹಾಗೂ 66 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಕಂಪನಿಯು ಹೇಳಿಕೊಂಡಿರುವ ಪ್ರಕಾರ, ಈ ಫೋನು ಬ್ಯಾಟರಿ ಅರ್ಧಗಂಟೆಯಲ್ಲೇ ಶೇ.81ರಷ್ಟು ಚಾರ್ಜ್ ಆಗುತ್ತದೆ. ಅಂದರೆ, ಅಷ್ಟೊಂದು ವೇಗವಾಗಿ ಚಾರ್ಜ್ ಆಗುವುದನ್ನು ನೋಡಬಹುದು. 2022ರಲ್ಲಿ ಸ್ಯಾಮ್ಸಂಗ್, ಆಪಲ್, ಶಿಯೋಮಿ, ಒನ್‌ಪ್ಲಸ್ ಯಾವ ಫೋನು ಲಾಂಚ್? ಈ ಮೊದಲೇ ಹೇಳಿರುವಂತೆ ಆನರ್ ಎಕ್ಸ್30 5ಜಿ ( X30 5G) ಸ್ಮಾರ್ಟ್‌ಫೋನ್ ಅಕ್ಟಾ ಕೋರ್ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 696 ಪ್ರೊಸೆಸರ್ ಆಧರಿತವಾಗಿದ್ದು, ಇದಕ್ಕೆ 6 ಮತ್ತು 8 ಸಂಯೋಜಿತಗೊಂಡಿದೆ. ಜೊತೆಗೆ ನೀವು ಈ ಫೋನಿನ ರ್ಯಾಮ್ ಅನ್ನು 2 GBವರೆಗೂ ವರ್ಚವಲ್ ಆಗಿ ವಿಸ್ತರಿಸಿಕೊಳ್ಳಬಹುದಾಗಿದೆ. ಒಟ್ಟು ಎರಡು ವೆರಿಯೆಂಟ್‌ಗಳಲ್ಲಿ ಈ ಫೋನು ಸಿಗಲಿದೆ. ಅದಂರೆ, 6 ಮತ್ತು 128 ಸ್ಟೋರೇಜ್, 8 ಮತ್ತು 256 ಸ್ಟೋರೇಜ್ ವೆರಿಯೆಂಟ್‌ಗಳಲ್ಲಿ ಲಭ್ಯವಾಗಲಿದೆ. ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್ ಅಪ್ ಇದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದ್ದರೆ, ಎರಡು ಮತ್ತು ಮೂರನೇ ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಿವೆ. ಸೆಲ್ಫಿಗಾಗಿ ಕಂಪನಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಿದೆ. 4,800 ಬ್ಯಾಟರಿ ನೀಡಲಾಗಿದೆ. ಆನರ್ ಎಕ್ಸ್ 30 5ಜಿ ಸ್ಮಾರ್ಟ್‌ಫೋನ್ ಒಟ್ಟು ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಮಿಡ್‌ನೈಟ್ ಬ್ಲ್ಯಾಕ್ ( ), ಟೈಟಾನಿಯಂ ಸಿಲ್ವರ್ ( ), ಒಸಿಯನ್ ಬ್ಲೂ ( ), ಗೋಲ್ಡ್ (), ಟೈಟಾನಿಯಂ ಸ್ಕೈ ಸಿಲ್ವರ್ ಸ್ಟಾರ್ ರಿಂಗ್ ( ) ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ. Oppoದ ಮೊದಲ ಪೋಲ್ಡಬಲ್ ಸ್ಮಾರ್ಟ್‌ಫೋನ್ ಫೈಂಡ್ ಎನ್ ಬಿಡುಗಡೆ, ಏನೆಲ್ಲ ಫೀಚರ್ಸ್ ಇದೆ? ಭಾರತೀಯ () ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಈ ಆನರ್ ಎಕ್ಸ್30 5ಜಿ ಸ್ಮಾರ್ಟ್‌ಫೋನ್ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ, ಈ ಫೋನ್ ಬೆಲೆ ಎಷ್ಟಿರಬಹುದು ಎಂಬ ಕುತೂಹಲ ಇದ್ದೇ ಇರುತ್ತದೆ. ಮೊದಲೇ ಹೇಳಿದಂತೆ ಇದೊಂದು ಮಧ್ಯಮವ್ಯಾಪ್ತಿಯ ಸ್ಮಾರ್ಟ್‌ಫೋನ್ ಆಗಿರುವುದರಿಂದ ರೀತಾ ದುಬಾರಿ ಬೆಲೆಯನ್ನು ನಿರೀಕ್ಷಿಸುವ ಅಗತ್ಯವೇನೂ ಇಲ್ಲ. ಚೀನಾ () ಮಾರುಕಟ್ಟೆಯಲ್ಲಿ ಈ ಫೋನು ಬೆಲೆ ಅಂದಾಜು 1499 ಯಾನ್. ಅಂದರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ ಅಂದಾಜು 17,190 ರೂಪಾಯಿ. ಹಾಗಾಗಿ, ಈ ಫೋನು ತೀರಾ ದುಬಾರಿಯೂ ಅಲ್ಲ, ಅಗ್ಗವೂ ಅಲ್ಲ.