2022ರಲ್ಲಿ ಸ್ಯಾಮ್ಸಂಗ್, ಆಪಲ್, ಶಿಯೋಮಿ, ಒನ್‌ಪ್ಲಸ್ ಯಾವ ಫೋನು ಲಾಂಚ್? * 2021ಕ್ಕೆ ವಿದಾಯ ಹೇಳಿ 2022ಕ್ಕೆ ಸ್ವಾಗತ ಕೋರಲು ದಿನಗಣನೆ ಆರಂಭ* ಹೊಸ ವರ್ಷದಲ್ಲಿ ಹೊಸ ಸ್ಮಾರ್ಟ್‌ಫೋನುಗಳು ಬಿಡುಗಡೆಗೆ ಸಜ್ಜು* ಅತ್ಯಾಧುನಿಕ ತಂತ್ರಜ್ಞಾನ ಹೊಸ ಫೀಚರ್‌ಗಳೊಂದಿಗೆ ಬರಲಿವೆ ಸ್ಮಾರ್ಟ್‌ಫೋನ್ಸ್ ಇನ್ನು ಹದಿನೈದು ದಿನಗಳು ಕಳೆದರೂ ನಾವೆಲ್ಲರೂ ಹೊಸ ವರ್ಷ 2022ರಲ್ಲಿರುತ್ತೇವೆ. ಈಗಾಗಲೇ ಹೊಸ ವರ್ಷ ( ) ವನ್ನು ಸ್ವಾಗತಿಸಲು ಎಲ್ಲಡೆ ಸಿದ್ಧತೆ ಜೋರಾಗುತ್ತಿದೆ. ಹಾಗೆಯೇ 2021ಕ್ಕೆ ವಿದಾಯ ಹೇಳುವ ದಿನಗಣನೆಯೂ ಆರಂಭವಾಗಿದೆ. ಅದೇ ರೀತಿ, ಹೊಸ ವರ್ಷದಲ್ಲಿ ಯಾವೆಲ್ಲ ಸ್ಮಾರ್ಟ್‌ಫೋನ್‌ ()ಗಳು ಬಿಡುಗಡೆಯಾಗಲಿವೆ ಎಂಬ ಕುತೂಹಲ ವರ್ಷಾಂತ್ಯದಲ್ಲಿ ಇದ್ದೇ ಇರುತ್ತದೆ. ಹೊಸ ತಂತ್ರಜ್ಞಾನ, ಹೊಸ ಫೋನ್‌ಗಳು ಈ ಹೊಸ ವರ್ಷದಲ್ಲಿ ಬಿಡುಗಡೆಯನ್ನು ಕಾಣಲು ಸಜ್ಜಾಗಿವೆ ಎಂದು ಹೇಳಬಹುದು. ಎಂದಿನಂತೆ ಒನ್ ಪ್ಲಸ್ (), ಆಪಲ್ (), ಸ್ಯಾಮ್ಸಂಗ್ () ಮತ್ತು ಶಿಯೋಮಿ () ಕಂಪನಿಯ ಸ್ಮಾರ್ಟ್‌ಫೋನುಗಳನ್ನು ಹೊಸ ವರ್ಷದಲ್ಲಿ ನಿರೀಕ್ಷಿಸಬಹುದಾಗಿದೆ. ಈಗಾಗಲೇ ಈ ಕಂಪನಿಯ ಫೋನುಗಳ ಬಗ್ಗೆ ಸಾಕಷ್ಟು ಕುತೂಹಲ ಬಳಕೆದಾರರಲ್ಲೂ ಮೂಡಿದೆ. ಬನ್ನಿ ಹಾಗಿದ್ದರೆ, ಹೊಸ ವರ್ಷ 2022ರಲ್ಲಿ ಯಾವೆಲ್ಲ ಫೋನುಗಳ ಬಿಡುಗಡೆಯಾಗಲಿವೆ ಎಂಬುದನ್ನು ನೋಡೋಣ. ಒನ್‌ಪ್ಲಸ್ 10:ಚೀನಾ ಮೂಲದ ಒನ್‌ಪ್ಲಸ್ ಹೊಸ ವರ್ಷದಲ್ಲಿ ಒನ್‌ಪ್ಲಸ್ 10 ಸೀರೀಸ್ ಸ್ಮಾರ್ಟ್‌ಫೋನುಗಳನ್ನು ಲಾಂಚ್ ಮಾಡಲಿದೆ. ಇವುಗಳ ಜತೆಗೆ ಬಜೆಟ್ ಸ್ಮಾರ್ಟ್‌ಫೋನ್ ಒನ್‌ಪ್ಲಸ್ ನಾರ್ಡ್ 1 ಸಿಇ ( 2 ) ಕೂಡ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ. ಈಗಾಗಲೇ ಒನ್‌ಪ್ಲಸ್ 10 ( 10) ಸೀರೀಸ್ ಫೋನುಗಳ ಬಗೆಗಿನ ಮಾಹಿತಿಯು ಸಾಕಷ್ಟು ಸೋರಿಕೆಯಾಗಿ ಕುತೂಹಲ ಮೂಡಿಸಿದೆ. ಈ ಸೀರೀಸ್‌ನಲ್ಲಿ ಕಂಪನಿ ಒನ್ ಪ್ಲಸ್ 10 ಮತ್ತು ಒನ್‌ಪ್ಲಸ್ ಪ್ರೋ ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ. ಮೊದಲಿಗೆ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ ಈ ಫೋನುಗಳು. ಆದರೆ, ದಿನಾಂಕ ಮಾತ್ರ ಖಾತ್ರಿ ಇಲ್ಲ. : ಆಪಲ್‌ನ ಶೇ.60 ಸಾಧನಗಳಲ್ಲೀಗ 15 ಐಫೋನ್ 14:ಹೊಸ ವರ್ಷದಲ್ಲಿ ಆಪಲ್ ತನ್ನ ಐಫೋನ್ 14 ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಈಗಾಗಲೇ ಗೊತ್ತಿದೆ. ಬಹುಶಃ ಮುಂಬರುವ ಸೆಪ್ಟೆಂಬರ್‌ನಲ್ಲಿ ಆಪಲ್ ಕಂಪನಿಯು ಈ ಐಫೋನ್ 14 ಸೀರೀಸ್ ಫೋನುಗಳನ್ನು ಲಾಂಚ್ ಮಾಡಬಹುದು. ಬಹುಶಃ ಐಫೋನ್ 14 ( 14), ಐಫೋನ್ 14 ಪ್ರೋ ( 14 ), ಐಫೋನ್ 14 ಪ್ರೋ ಮ್ಯಾಕ್ಸ್ ( 14 ). ಈ ಫೋನುಗಳ ಬಗ್ಗೆ ಸದ್ಯಕ್ಕೆ ಅಷ್ಟೇನೂ ಮಾಹಿತಿಯಂತೂ ಸೋರಿಕೆಯಾಗಿಲ್ಲ. ಮೂಲಗಳ ಪ್ರಕಾರ ಕಂಪನಿಯು ಮಿನಿ ಮಾಡೆಲ್‌ಗಳನ್ನು ಸ್ತಗಿತಗೊಳಿಸಲಿದೆ. ಶಿಯೋಮಿ 12:ಚೀನಾ ಮೂಲದ ಮತ್ತೊಂದು ಪ್ರಮುಖ ಕಂಪನಿಯಾಗಿರುವ ಶಿಯೋಮಿ ಹೊಸ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶಿಯೋಮಿ 12 ( 12), ಶೋಯಮಿ 12 ಪ್ರೋ ( 12 ) ಮತ್ತು ಶಿಯೋಮಿ 12 ಅಲ್ಟ್ರಾ ( 12 ) ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ ಎನ್ನಲಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಈ ಫೋನುಗಳ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿಗಳು ಸೋರಿಕೆಯಾಗಿವೆ. ಈ ಪೈಕಿ ಹೆಚ್ಚು ಕುತೂಹಲಕಾರಿಯಾಗಿರುವುದು ಈ ಎಲ್ಲ ಫೋನುಗಳಲ್ಲಿ ಕಂಪನಿಯು ಕ್ವಾಲಕಾಮ್ ಇತ್ತೀಚಿನ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್‌ಗಳು ಇರಲಿವೆ ಎಂಬುದು. Oppoದ ಮೊದಲ ಪೋಲ್ಡಬಲ್ ಸ್ಮಾರ್ಟ್‌ಫೋನ್ ಫೈಂಡ್ ಎನ್ ಬಿಡುಗಡೆ, ಏನೆಲ್ಲ ಫೀಚರ್ಸ್ ಇದೆ? ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್22:ಸ್ಯಾಮ್ಸಂಗ್ ಕಂಪನಿಯು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್22 ( S22) ಸ್ಮಾರ್ಟ್‌ಫೋನ್ ಬಿಡುಗಡೆಯೊಂದಿಗೆ ಆರಂಭಿಸುವ ಸಾಧ್ಯತೆ ಇದೆ. ಯಾಕೆಂದರೆ, ಈ ಫೋನು ಜನವರಿಯಲ್ಲಿ ಲಾಂಚ್ ಆಗಬಹುದು. ಒಟ್ಟಾರೆ ಮೂರು ಮಾಡೆಲ್‌ಗಳನ್ನು ಕಂಪನಿಯು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್22 ( S22), ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್22 ಪ್ಲಸ್ ( S22+) ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್22 ಅಲ್ಟ್ರಾ ( S22 ) ಫೋನುಗಳು ಲಾಂಚ್ ಆಗಲಿವೆ ಎನ್ನಲಾಗುತ್ತಿದೆ. ಸದ್ಯಕ್ಕೆ ಈ ಫೋನುಗಳ ಬಗ್ಗೆ ಹೆಚ್ಚಿನ ಮಾಹಿತಿಗಳೂ ಲಭ್ಯವಿಲ್ಲ ಎನ್ನಬಹುದು.