‌ : 2021ರಲ್ಲಿ ಟ್ವೀಟರ್‌ನಲ್ಲಿ ಅತಿ ಹೆಚ್ಚು ಚರ್ಚೆಗೊಳಗಾದ ವಿಷಯ ಯಾವುದು ಗೊತ್ತಾ? *#COVID19, # ಮತ್ತು # ಗಳಿಗೆ ಅಗ್ರಸ್ಥಾನ*ಪ್ರಧಾನಿ ಮೋದಿ ಲಸಿಕೆ ಪಡೆದ ಬಗೆಗಿನ ಟ್ವೀಟ್‌ ಅತಿ ಹೆಚ್ಚು ಮರುಟ್ವೀಟ್‌*ವಿರಾಟ್ ಮಗಳ ಜನನದ ಟ್ವೀಟ್‌ ವೈರಲ್: ಕ್ರಿಡಾ ವಿಭಾಗದಲ್ಲೂ ಕೊಹ್ಲಿ ನಂ.1! ನವದೆಹಲಿ(ಡಿ. 09): ಭಾರತದಲ್ಲಿ 2021ರಲ್ಲಿ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಟ್ವೀಟರ್‌ನಲ್ಲಿ () ಅತಿ ಹೆಚ್ಚು ಚರ್ಚಿಸಲಾದ ವಿಷಯಗಳ ಬಗ್ಗೆ ಸಂಸ್ಥೆ ಗುರುವಾರ ಮಾಹಿತಿ ಬಹಿರಂಗಪಡಿಸಿದೆ. 2021ರ ಟ್ರೆಂಡ್‌ಗಳಲ್ಲಿ ಭಾರತದಲ್ಲಿ -19 ಪರಿಹಾರಕ್ಕೆ ದೇಣಿಗೆ ನೀಡಿದ ಕುರಿತ ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ ( ) ಅವರ ಟ್ವೀಟ್ ದೇಶದಲ್ಲಿ ಹೆಚ್ಚು ಮರುಟ್ವೀಟ್ ಮಾಡಲಾಗಿದೆ ಎಂದು ಟ್ವೀಟರ್‌ ತಿಳಿಸಿದೆ. ಜತಗೆ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ( ) ಅವರ ಮಗಳ () ಜನನದ ಘೋಷಣೆಯು ಹೆಚ್ಚು ಟ್ರೆಂಡ್‌ ಆಗಿದ್ದು ಅತಿ ಹೆಚ್ಚು ಲೈಕ್ಸ್‌ ಪಡೆದ ಟ್ವೀಟ್‌ ಎಂದು ಸಂಸ್ಥೆ ಹೇಳಿದೆ. #COVID19, # ಮತ್ತು #TeamIndiaಎಂಬ ಹ್ಯಾಶ್‌ಟ್ಯಾಗ್‌ಗಳು 2021 ರಲ್ಲಿ ಟ್ವೀಟರ್‌ನಲ್ಲಿ ಅತಿ ಹೆಚ್ಚು ಬಾರಿ ರಿಟ್ವೀಟ್ ಮಾಡಿದ ಹ್ಯಾಶ್‌ಟ್ಯಾಗ್‌ಗಳಾಗಿವೆ. 2021 ರ ಜನವರಿ 1 ಮತ್ತು ನವೆಂಬರ್ 15 ರ ನಡುವೆ ಭಾರತದಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ಟ್ವೀಟ್‌ ಆಧಾರದ ಮೇಲೆ ಹೆಚ್ಚು ಮರುಟ್ವೀಟ್ ಮಾಡಿದ ಮತ್ತು ಇಷ್ಟಪಟ್ಟ ಟ್ವೀಟ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2021 ರ ಅತಿ ಹೆಚ್ಚು ರೀಟ್ವೀಟ್ ಮಾಡಿದ ಟ್ವೀಟ್! ಭಾರತದಲ್ಲಿ -19 ರ ಎರಡನೇ ಅಲೆ ಸಮಯದಲ್ಲಿ ಟ್ವೀಟರ್ ಅಗತ್ಯ ಸಂಪನ್ಮೂಲಗಳನ್ನು ಹುಡುಕುವ ಮೂಲವಾಗಿದ್ದರಿಂದ, ಹೆಚ್ಚಿನ ಸಂಖ್ಯೆಯ ಜನರು ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲು ಮತ್ತು ಬೆಂಬಲಿಸಲು ಟ್ವೀಟರನ್ನು ಬಳಸಿದ್ದಾರೆ. ಅವರಲ್ಲಿ ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ ಅವರು ಏಪ್ರಿಲ್‌ನಲ್ಲಿ ಭಾರತದಲ್ಲಿ -19 ಪರಿಹಾರಕ್ಕಾಗಿ ತಮ್ಮ ದೇಣಿಗೆಯನ್ನು ಘೋಷಿಸಲು ಟ್ವೀಟ್ ಮಾಡಿದ ಸಂದೇಶವು 2021 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮರುಟ್ವೀಟ್ ಮಾಡಿದ ಟ್ವೀಟ್ ಆಗಿದೆ. ಇದನ್ನು ಇಲ್ಲಿಯವರೆಗೆ 114,000 ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದೆ. 2021 ರಲ್ಲಿ ಹೆಚ್ಚು ಲೈಕ್ಸ್ ಪಡೆದ ಟ್ವೀಟ್ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಈ ವರ್ಷ ತಮ್ಮ ಮಗಳ ಜನನವನ್ನು ಘೋಷಿಸಲು ಟ್ವಿಟರ್ ಬಳಸಿದ್ದರು. ಆ ಟ್ವೀಟ್ ಇದುವರೆಗೆ 538,200 ಲೈಕ್‌ಗಳೊಂದಿಗೆ ವರ್ಷದ ಅತಿ ಹೆಚ್ಚು ಲೈಕ್‌ ಪಡೆದ ಟ್ವೀಟ್ ಆಗಿದೆ. ಜನವರಿ 11 2021 ರಂದು ಕೊಹ್ಲಿ ಈ ಬಗ್ಗೆ ಟ್ವೀಟ್‌ ಮಾಡಿದ್ದರು. ಕುತೂಹಲಕಾರಿಯಾಗಿ, ಕಳೆದ ವರ್ಷ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರ ಗರ್ಭಧಾರಣೆಯನ್ನು ಘೋಷಿಸಿದ ಟ್ವೀಟ್ 2020 ರಲ್ಲಿ ಅತಿ ಹೆಚ್ಚು ಲೈಕ ಪಡೆದಿದ್ದ ಟ್ವೀಟ್ ಆಗಿತ್ತು. ಪ್ರಧಾನಿ ಮೋದಿ ಲಸಿಕೆ ಪಡೆದ ಬಗೆಗಿನ ಟ್ವೀಟ್‌ ಅತಿ ಹೆಚ್ಚು ಮರುಟ್ವೀಟ್‌! ಸರ್ಕಾರದ ಉನ್ನತ ಟ್ವೀಟ್‌ಗಳ ಪಟ್ಟಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ -19 ಲಸಿಕೆ ಪಡೆಯುವ ಚಿತ್ರವನ್ನು ಹಂಚಿಕೊಳ್ಳುವ ಟ್ವೀಟ್ ವರ್ಷದ ಹೆಚ್ಚು ಮರುಟ್ವೀಟ್ ಮಾಡಿದ ಟ್ವೀಟ್ ಎಂದು ಟ್ವಿಟರ್ ಹೇಳಿದೆ. ಈ ಟ್ವೀಟ್ ಇಲ್ಲಿಯವರೆಗೆ 45,100 ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಗಳಿಸಿದೆ. ಮಾರ್ಚ್‌ 1 2021 ರಂದು ಪ್ರಧಾನಿ ನರೇಂದ್ರ ಮೋದಿ ಈ ಟ್ವೀಟ್‌ ಮಾಡಿದ್ದರು. ವ್ಯವಹಾರ ಕ್ಷೇತ್ರದಲ್ಲಿ ರತನ್ ಟಾಟಾ ಟ್ವೀಟ್ ಅತಿ ಹೆಚ್ಚು ಮರುಟ್ವೀಟ್! ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರು ಅಕ್ಟೋಬರ್‌ನಲ್ಲಿ ಏರ್ ಇಂಡಿಯಾವನ್ನು ಟಾಟಾ ಗ್ರೂಪ್‌ಗೆ ಮರಳಿ ಸ್ವಾಗತಿಸುವುದಾಗಿ ಮಾಡಿದ ಪ್ರಕಟಣೆಯು ವ್ಯವಹಾರದಲ್ಲಿ ಹೆಚ್ಚು ಮರುಟ್ವೀಟ್ ಮಾಡಿದ ಟ್ವೀಟ್ ಎಂದು ಸಂಸ್ಥೆ ತಿಳಿಸಿದೆ. ಈ ವರ್ಷದ ವ್ಯವಹಾರ ಕ್ಷೇತ್ರದಲ್ಲಿ ಅತಿ ಹೆಚ್ಚು ಇಷ್ಟಪಟ್ಟ ಟ್ವೀಟ್ ಕೂಡ ಇದಾಗಿದೆ. ಈ ಟ್ವೀಟ್ ಇಲ್ಲಿಯವರೆಗೆ 82,900 ರೀಟ್ವೀಟ್‌ಗಳು ಮತ್ತು 403,900 ಲೈಕ್‌ಗಳನ್ನು ಸೆರೆಹಿಡಿದಿದೆ. ಅಕ್ಟೋಬರ್‌ 8 2021 ರಂದು ಟಾಟಾ ಈ ಟ್ವೀಟ್‌ ಮಾಡಿದ್ದರು. ಮನರಂಜನೆ ವಿಭಾಗದಲ್ಲಿ ಬೀಸ್ಟ್‌ಗೆ ಅಗ್ರಸ್ಥಾನ! ತಮಿಳು ನಟ ವಿಜಯ್ ಚಿತ್ರ ಬೀಸ್ಟ್‌ನ ಮೊದಲ ನೋಟವನ್ನು ಅನಾವರಣಗೊಳಿಸಿದ ಟ್ವೀಟ್ ಈ ವರ್ಷ ಮನರಂಜನೆಯಲ್ಲಿ ಅತಿ ಹೆಚ್ಚು ರೀಟ್ವೀಟ್ ಆಗಿದ್ದು, ಇಲ್ಲಿಯವರೆಗೆ 139,400 ಕ್ಕೂ ಹೆಚ್ಚು ರಿಟ್ವೀಟ್ ಆಗಿದೆ. ಇದು 341,500 ಕ್ಕೂ ಹೆಚ್ಚು ಲೈಕ್‌ಗಳೊಂದಿಗೆ ಮನರಂಜನೆ ವಿಭಾಗದಲ್ಲಿ ನೆಟ್ಟಿಗರು ಅತಿ ಹೆಚ್ಚು ಇಷ್ಟಪಟ್ಟ ಟ್ವೀಟ್ ಆಗಿದೆ. ಕ್ರೀಡಾ ವಿಭಾಗ: ವಿರಾಟ್‌ ಧೋನಿ ಅಭಿನಂಧಿಸಿದ ಟ್ವೀಟ್ ನಂ 1! ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಎಂಎಸ್ ಧೋನಿ ಅವರ ಮ್ಯಾಚ್ ವಿನ್ನಿಂಗ್ ಆಟಕ್ಕಾಗಿ ವಿರಾಟ್ ಕೊಹ್ಲಿ ಮಾಡಿದ ಟ್ವೀಟ್ ಈ ವರ್ಷ ಕ್ರೀಡೆಯಲ್ಲಿ ಅತಿ ಹೆಚ್ಚು ರೀಟ್ವೀಟ್ ಮತ್ತು ಲೈಕ್‌ ಪಡೆದ ಟ್ವೀಟ್ ಆಗಿದೆ. ಇದು ಇಲ್ಲಿಯವರೆಗೆ 91,600 ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಮತ್ತು 529,500 ಲೈಕ್‌ಗಳನ್ನು ಸೆರೆಹಿಡಿದಿದೆ. 2021 ರ ಹೆಚ್ಚು ಟ್ವೀಟ್ ಮಾಡಿದ ಹ್ಯಾಶ್‌ಟ್ಯಾಗ್‌ಗಳು! 2021 ರ ಆರಂಭಿಕ ತಿಂಗಳುಗಳಲ್ಲಿ ಭಾರತವು -19 ರ ಎರಡನೇ ಅಲೆಯಿಂದ ತತ್ತರಿಸಿದ್ದರಿಂದ, ಹೆಚ್ಚಿನ ಸಂಖ್ಯೆಯ ಜನರು ಸಂಪನ್ಮೂಲಗಳನ್ನು ಹುಡುಕಲು ಮತ್ತು ಇತರರಿಗೆ ಸಹಾಯ ಮಾಡಲು #COVID19 ಹ್ಯಾಶ್‌ಟ್ಯಾಗ್ ಅನ್ನು ಬಳಸಿದರು. ಹಾಗಾಗಿ ಈ ಹ್ಯಾಶ್‌ಟ್ಯಾಗ್ ಈ ವರ್ಷ ಅತಿ ಹೆಚ್ಚು ರೀಟ್ವೀಟ್ ಮಾಡಿದ ಹ್ಯಾಶ್‌ ಟ್ಯಾಗ್‌ ಆಗಿದೆ. ನಂತರ ಸ್ಥಾನದಲ್ಲಿ # ಇದ್ದೂ ಇದನ್ನು ವಿವಿಧ ರಾಜಕಾರಣಿಗಳು, ಸೆಲೆಬ್ರಿಟಿಗಳು, ನಾಗರಿಕರು ಮತ್ತು ಪ್ರತಿಭಟನಾ ನಿರತ ರೈತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮತ್ತು ವಿನಿಮಯ ಮಾಡಿಕೊಳ್ಳಲು ಬಳಸಿಕೊಂಡರು. ವರ್ಷದಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ T20 ವಿಶ್ವಕಪ್ ಮತ್ತು ಟೋಕಿಯೊ ಒಲಿಂಪಿಕ್ಸ್‌ವರೆಗಿನ ಕ್ರೀಡಾ ಪಂದ್ಯಗಳ ಪಟ್ಟಿಯನ್ನು ದೇಶದ ಜನರು ನೋಡಿದ್ದರಿಂದ # ಎಂಬ ಹ್ಯಾಶ್‌ಟ್ಯಾಗ್ ವರ್ಷದ ಹೆಚ್ಚು ಟ್ವೀಟ್ ಮಾಡಿದ ಹ್ಯಾಶ್‌ಟ್ಯಾಗ್‌ಗಳಲ್ಲಿ ಒಂದಾಗಿದೆ. ಟೋಕಿಯೊ ಒಲಿಂಪಿಕ್ಸ್‌ ಸಂದರ್ಭದಲ್ಲಿ -19 ಟ್ರೆಂಡಿಗ್‌ ಗಣನೀಯವಾಗಿ ಹಿಂದೆ ಸರಿದು ಕ್ರಿಡಾ ಕ್ಷೇತ್ರದ ಟ್ರೆಂಡಿಗ್‌ಗೆ ಜನರು ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಹಾಗಾಗಿ #Tokyo2020 ಕೂಡ ವರ್ಷದ ಅತಿ ಹೆಚ್ಚು ರಿಟ್ವೀಟ್ ಮಾಡಿದ ಹ್ಯಾಶ್‌ಟ್ಯಾಗ್‌ಗಳಲ್ಲಿ ಒಂದಾಗಿದೆ. ಹೆಚ್ಚು ಟ್ವೀಟ್ ಮಾಡಿದ ಪ್ರಚಲಿತ ವಿದ್ಯಮಾನಗಳ ಹ್ಯಾಶ್‌ಟ್ಯಾಗ್‌ಗಳು #COVID19 ಈ ವರ್ಷ ಪ್ರಚಲಿತ ವ್ಯವಹಾರಗಳ ( ) ವಿಭಾಗದಲ್ಲಿ ಹೆಚ್ಚು ಟ್ವೀಟ್ ಮಾಡಿದ ಹ್ಯಾಶ್‌ಟ್ಯಾಗ್ ಆಗಿದ್ದರೆ, ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡಿರುವುದು ಭಾರತೀಯರನ್ನು # ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡುವಂತೆ ಮಾಡಿದೆ ಹಾಗಾಗಿ ಇದು ಕೂಡ ಪ್ರಸ್ತುತ ವಿದ್ಯಮಾನಗಳಲ್ಲಿ ಹೆಚ್ಚು ಟ್ವೀಟ್ ಮಾಡಿದ ಹ್ಯಾಶ್‌ಟ್ಯಾಗ್‌ಗಳಲ್ಲಿ ಒಂದಾಗಿದೆ. ಈ ವರ್ಷ ಹಲವಾರು ಯುವ ಉದ್ಯೋಗ ಆಕಾಂಕ್ಷಿಗಳು ತಮ್ಮ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ () ಪರೀಕ್ಷೆಗಳ ಅಂಕಗಳನ್ನು ಬಿಡುಗಡೆ ಮಾಡುವಂತೆ ಸಿಬ್ಬಂದಿ ಆಯ್ಕೆ ಆಯೋಗವನ್ನು ( ) ಒತ್ತಾಯಿಸಿದರು. ಇದು ನಲ್ಲಿ ಪ್ರಸ್ತುತ ವ್ಯವಹಾರಗಳಲ್ಲಿ #CGL19marks ಹ್ಯಾಶ್‌ಟ್ಯಾಗ್‌ನ ಟ್ರೆಂಡ್‌ಗೆ ಕಾರಣವಾಗಿತ್ತು. ಇನ್ನು# ಹ್ಯಾಶ್‌ಟ್ಯಾಗ್ ಬಳಸಿ ಗಡಿಯಲ್ಲಿ ಹೋರಾಡುತ್ತಿರುವ ಸೈನಿಕರಿಗೆ ಟ್ವಿಟರ್ ಬಳಕೆದಾರರು ತಮ್ಮ ಹೆಮ್ಮೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ, ಇದು ಈ ವರ್ಷದ ಪ್ರಸ್ತುತ ವಿದ್ಯಮಾನಗಳಲ್ಲಿ ಹೆಚ್ಚು ಟ್ವೀಟ್‌ಗಳಲ್ಲಿ ಒಂದಾಗಿದೆ. ಉತ್ತರಾಖಂಡ್‌ನಲ್ಲಿ ಹಠಾತ್ ಪ್ರವಾಹದಿಂದಾಗಿ ಜನರಲ್ಲಿ ಆತಂಕ ಮೂಡಿಸಿದ್ದರಿಂದ ಟ್ವೀಟರ್‌ನಲ್ಲಿ ಹೆಚ್ಚು ಟ್ವೀಟ್ ಮಾಡಿದ ಐದು ಹ್ಯಾಶ್‌ಟ್ಯಾಗ್‌ಗಳಲ್ಲಿ # ಎಂಬ ಹ್ಯಾಶ್‌ಟ್ಯಾಗ್ ಕೂಡ ಒಂದಾಗಿದೆ. ಹೆಚ್ಚು ಟ್ವೀಟ್ ಮಾಡಿದ ಸಂಸ್ಕೃತಿ ಹ್ಯಾಶ್‌ಟ್ಯಾಗ್‌ಗಳು ಟ್ವಿಟ್ಟರ್ ಸಾಂಸ್ಕೃತಿಕ ವಿಭಾಗದಲ್ಲಿ () ಹೆಚ್ಚು ಟ್ವೀಟ್ ಮಾಡಿದ ಹ್ಯಾಶ್‌ಟ್ಯಾಗ್ ಆಗಿ # ಹೊರಹೊಮ್ಮಿದೆ. ನಂತರದ ಸ್ಥಾನದಲ್ಲಿ # ಇದೆ. ಇದು ದೇಶದ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ. #, ##, ಮತ್ತು # ಹ್ಯಾಶ್‌ಟ್ಯಾಗ್‌ಗಳು ಕೂಡ ಸಂಸ್ಕೃತಿ ವಿಭಾಗದಲ್ಲಿ ಹೆಚ್ಚು ಟ್ವೀಟ್ ಮಾಡಲಾದ ಟಾಪ್-ಐದುಗಳಲ್ಲಿ ಸೇರಿವೆ. ಡಿಜಿಟಲ್ ಸ್ವತ್ತುಗಳ ಕುರಿತು ಹೆಚ್ಚಿನ ಟ್ವೀಟ್ ಮಾಡಿದ ಹ್ಯಾಶ್‌ಟ್ಯಾಗ್‌ಗಳು ಕ್ರಿಪ್ಟೋಕರೆನ್ಸಿಗಳು ಮತ್ತು ಡಿಜಿಟಲ್ ಸ್ವತ್ತುಗಳ ( ) ಸುತ್ತ ಸರ್ಕಾರವು ಅಧಿಕೃತ ನಿಯಮಗಳ ಬಗ್ಗೆ ಇನ್ನೂ ಸ್ಪಷ್ಟತೆ ನೀಡದಿದ್ದರೂ ಭಾರತದಲ್ಲಿ ಜನರು # ಅನ್ನು 2021ರಲ್ಲಿ ಅತಿ ಹೆಚ್ಚು ಟ್ವೀಟ್ ಮಾಡಿದ್ದಾರೆ. ಬಿನಾನ್ಸ್ ಸ್ಮಾರ್ಟ್ ಚೈನ್‌ಗಾಗಿ ( ) # ನಂತಹ ಹ್ಯಾಶ್‌ಟ್ಯಾಗ್‌ಗಳು ಮತ್ತು ಡಿಜಿಟಲ್ ಸ್ವತ್ತುಗಳ ಕುರಿತು ಹೆಚ್ಚು ಟ್ವೀಟ್ ಮಾಡಲಾದ ಹ್ಯಾಶ್‌ಟ್ಯಾಗ್‌ಗಳಲ್ಲಿ # (- ) ನಂತಹ ಹ್ಯಾಶ್‌ ಟ್ಯಾಗ್‌ಗಳೂ ಅತಿ ಹೆಚ್ಚು ಟ್ವೀಟ್‌ ಆಗಿ ಹೊರಹೊಮ್ಮಿವೆ.