: ಕನೆಕ್ಟ್ ಪ್ರೊ, ಇನ್‌ಪ್ಲುಯೆನ್ಸ್‌ ಪ್ರೋ ಆ್ಯಪ್‌ ಬಿಡುಗಡೆ ಬೆಂಗಳೂರು(ನ.26):ಮಾಹಿತಿ ತಂತ್ರಜ್ಞಾನ( ) ಕುರಿತು ಅಷ್ಟಾಗಿ ತಿಳಿದುಕೊಂಡಿಲ್ಲ, ಆದರೆ ಮೊದಲಿನಿಂದಲೂ ಜನರ ಜತೆ ನೇರವಾಗಿ ಸಂಪರ್ಕ ಇಟ್ಟುಕೊಂಡಿದ್ದೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ()ಹೇಳಿದ್ದಾರೆ. ಬೆಂಗಳೂರು(ನ.26):ಮಾಹಿತಿ ತಂತ್ರಜ್ಞಾನ( ) ಕುರಿತು ಅಷ್ಟಾಗಿ ತಿಳಿದುಕೊಂಡಿಲ್ಲ, ಆದರೆ ಮೊದಲಿನಿಂದಲೂ ಜನರ ಜತೆ ನೇರವಾಗಿ ಸಂಪರ್ಕ ಇಟ್ಟುಕೊಂಡಿದ್ದೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ()ಹೇಳಿದ್ದಾರೆ. ಗುರುವಾರ ಆಕಾರ್‌ಮ್ಯಾಕ್ಸ್‌() ಕಂಪನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕನೆಕ್ಟ್ ಪ್ರೊ ಮತ್ತು ಇನ್‌ಪ್ಲುಯೆನ್ಸ್‌ ಪ್ರೊ’(, ) ಮೊಬೈಲ್‌ ಆ್ಯಪ್‌( ) ಬಿಡುಗಡೆಗೊಳಿದ ಸಿದ್ದರಾಮಯ್ಯ ಜನರನ್ನು ಸಂಪರ್ಕಿಸಲು ಹಾಗೂ ಮಾಹಿತಿ ತಲುಪಿಸಲು ಸಹಕಾರಿಯಾದ ಮೊಬೈಲ್‌() ಹೊಸದಾಗಿ ಬಂದಾಗ ಆರು ತಿಂಗಳು ಉಪಯೋಗಿಸಿದ್ದೆ. ತಡರಾತ್ರಿವರೆಗೂ ಕರೆಗಳು ಬಂದು ಕಿರಿಕಿರಿ ನೀಡಿದ್ದರಿಂದ ಎಸೆದಿದ್ದೆ. ಸಾರ್ವಜನಿಕರನ್ನು ತಲುಪಲು ಮಾಹಿತಿ ತಂತ್ರಜ್ಞಾನ ಅವಶ್ಯಕ ಎಂದರೂ ಸಹ ಮೊದಲಿನಂತೆ ಜನರೊಂದಿಗೆ ನೇರ ಸಂಪರ್ಕ ಇಟ್ಟುಕೊಳ್ಳುವ ಮೂಲಕ ಹಳೆ ಸಂಸ್ಕೃತಿ ಮುಂದುವರಿಸಿದ್ದೇನೆ. ಮೊಬೈಲ್‌ ಇಟ್ಟುಕೊಂಡಿಲ್ಲ, ಆದರೆ ಕರೆಗಳು ಬಂದಾಗ ಸಿಬ್ಬಂದಿ ಮೊಬೈಲ್‌ ನೀಡುತ್ತಾರೆ. ಹೊರತಾಗಿ ಮಾಹಿತಿ ತಂತ್ರಜ್ಞಾನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಹೋಗಿಲ್ಲ. ಈ ತಂತ್ರಜ್ಞಾನದಿಂದ ದುರುಪಯೋಗಕ್ಕಿಂತ ಉಪಯೋಗ ಹೆಚ್ಚಿದೆ. ನಮ್ಮ ಸಾಮಾಜಿಕ ಮಾಧ್ಯಮ ತಂಡದವರು, ಸಾಮಾಜಿಕ ಜಾಲತಾಣದಲ್ಲಿ( ) ನನಗೆ ಆರೂವರೆ ಲಕ್ಷ ಫಾಲೋವರ್ಸ್‌ ಇರುವುದಾಗಿ ತಿಳಿಸಿದ ಸಿದ್ದರಾಮಯ್ಯ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ವತ್ಥನಾರಾಯಣ್‌( ), ನಟ ಮತ್ತು ನಿರ್ದೇಶಕ ರಮೇಶ್‌ ಅರವಿಂದ್‌( ), ಹಿರಿಯ ನಟಿ ಮತ್ತು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ( ), ನಟಿ ಆದಿತಿ ಪ್ರಭುದೇವ್‌( ), ಎನ್‌ಅರ್‌ಐ ವೆಲ್‌ಫೇರ್‌ ಸೊಸೈಟಿ ಆಫ್‌ ಇಂಡಿಯಾ ಸಂಚಾಲಕ ದೀಪಕ್‌ ಸಿಂಗ್‌, ಕಂಪನಿಯ ಸಿಇಒ ಸ್ನೇಹಾ ರಾಕೇಶ್‌ ಉಪಸ್ಥಿತರಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ‘ಕನೆಕ್ಟ್ ಪ್ರೊ ಮತ್ತು ಇನ್‌ಪ್ಲುಯೆನ್ಸ್‌ ಪ್ರೊ’ ಮೊಬೈಲ್‌ ಆ್ಯಪ್‌ ಬಿಡುಗಡೆಗೊಳಿಸಿದರು. ರಮೇಶ್‌ ಅರವಿಂದ್‌, ತಾರಾ ಅನುರಾಧ, ಆದಿತಿ ಪ್ರಭುದೇವ್‌, ದೀಪಕ್‌ ಸಿಂಗ್‌, ಸ್ನೇಹಾ ರಾಕೇಶ್‌ ಮತ್ತಿತರರು ಪಾಲ್ಗೊಂಡಿದ್ದರು.