ಲಸಿಕೆ ಪೋರ್ಟಲ್‌ನಲ್ಲಿ ಮಹತ್ವದ ಬದಲಾವಣೆ! * ಕೋವಿನ್‌ ಪೋರ್ಟಲ್‌ನಲ್ಲಿ ಮಹತ್ವದ ಬದಲಾವಣೆ * ಯಾರು ಬೇಕಾದರೂ ಇನ್ನು ಲಸಿಕೆ ಸ್ಟೇಟಸ್‌ ನೋಡಬಹುದು ನವದೆಹಲಿ(ನ.21): ದೇಶದ ಪ್ರತಿಯೊಬ್ಬ ವ್ಯಕ್ತಿಯ ಲಸಿಕಾಕರಣದ () ಪ್ರಕ್ರಿಯೆಯನ್ನು ಯಾವುದೇ ವ್ಯಕ್ತಿ ನೋಡಲು ಅವಕಾಶ ನೀಡುವ ಸೇವೆಯನ್ನು ಕೋವಿನ್‌ ಪೋರ್ಟಲ್‌ನಲ್ಲಿ ( ) ಕೇಂದ್ರ ಆರೋಗ್ಯ ಸಚಿವಾಲಯ ಸಕ್ರಿಯಗೊಳಿಸಿದೆ. ಹೊಸ ಸೇವೆಯನ್ನು ಖಾಸಗಿ ಕಂಪನಿಗಳು, ಟ್ರಾವೆಲ್‌ ಏಜೆನ್ಸಿ ( ), ಕಚೇರಿಗಳು, ಉದ್ಯೋಗಿಗಳು, ಮನರಂಜನಾ ಏಜೆನ್ಸಿಗಳು ಅಥವಾ ಸರ್ಕಾರಿ ಏಜೆನ್ಸಿಗಳಾದ ಐಆರ್‌ಸಿಟಿಸಿ ಮುಂತಾದವು ವ್ಯಕ್ತಿಯ ಲಸಿಕಾಕರಣ ಸ್ಟೇಟಸ್‌ ಪರಿಶೀಲನೆ ವೇಳೆ ಬಳಕೆ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ನೋ ಯುವರ್‌ ವ್ಯಾಕ್ಸಿನೇಶನ್‌ ಸ್ಟೇಟಸ್‌’ ( ) ಫೀಚರ್‌ ನಾಗರಿಕರು ಲಸಿಕೆ ಸ್ವೀಕರಿಸಿರುವ ಬಗ್ಗೆ ಪರಿಶೀಲನೆ ಮಾಡಿ ಮಾಹಿತಿ ಒದಗಿಸುತ್ತದೆ. ಲಸಿಕೆ ಪಡೆದ ಜನರು ಇದನ್ನು ಜಾಲತಾಣಗಳಲ್ಲಿ ಹಂಚಿಕೊಂಡು ಲಸಿಕೆ ಅಭಿಯಾನವನ್ನು ( ) ಪ್ರೋತ್ಸಾಹಿಸಬಹುದು. ಏನೇನು ಪ್ರಕ್ರಿಯೆ? - ಕೋವಿನ್‌ ಆ್ಯಪ್‌ನಲ್ಲಿ ಹೆಸರು, ಮೊಬೈಲ್‌ ಸಂಖ್ಯೆ ನಮೂದಿಸಬೇಕು - ಆಗ ಮೊಬೈಲ್‌ಗೆ ಬರುವ ಒಟಿಪಿಯನ್ನು ಸಂಬಂಧಿಸಿದ ಸಿಬ್ಬಂದಿಗೆ ಹೇಳಬೇಕು - ವ್ಯಾಕ್ಸಿನೇಶನ್‌ ಸ್ಟೇಟಸ್‌ ಲಭ್ಯವಾಗುತ್ತದೆ. - ಸಂಬಂಧಿಸಿದ ಸಿಬ್ಬಂದಿಗೆ ‘ನೀವು ಲಸಿಕೆ ಪಡೆದಿದ್ದೀರಿ’ ಎಂದು ಖಚಿತವಾಗುತ್ತದೆ - ಅದನ್ನು ಡೌನ್‌ಲೋಡ್‌ ಕೂಡ ಮಾಡಿಕೊಳ್ಳಬಹುದು. ಲಸಿಕೆ ಪ್ರಮಾ​ಣ​ಪ​ತ್ರ​ದಲ್ಲಿ ಇನ್ನು ಜನ್ಮ ದಿನಾಂಕ ಕೋವಿಡ್‌ ಲಸಿಕಾ ಪ್ರಮಾ​ಣ​ಪ​ತ್ರ​ದಲ್ಲಿ ಮಹ​ತ್ವದ ಬದ​ಲಾ​ವಣೆ ತರಲು ಕೇಂದ್ರ ಸರ್ಕಾರ ನಿರ್ಧ​ರಿ​ಸಿದೆ. ಇನ್ನು ವಿದೇ​ಶಕ್ಕೆ ತೆರ​ಳ​ಬ​ಯ​ಸುವ ವ್ಯಕ್ತಿ​ಗ​ಳ ಲಸಿಕಾ ಪ್ರಮಾ​ಣ​ಪ​ತ್ರ​ದಲ್ಲಿ ಜನ್ಮ​ದಿ​ನಾಂಕ ಕೂಡ ಇರ​ಲಿ​ದೆ ಎಂದು ಮೂಲ​ಗಳು ಹೇಳಿ​ವೆ. ವಿಶ್ವಸಂಸ್ಥೆಯ ನಿಯಮಾವಳಿ ಪ್ರಕಾರ ಪ್ರಮಾ​ಣ​ಪ​ತ್ರ​ದ​ಲ್ಲಿ ಫಲಾನುಭವಿಗಳ ಜನ್ಮ ದಿನಾಂಕ ಇರ​ಬೇಕು. ಆದರೆ ಜನ್ಮ​ದಿ​ನಾಂಕವು ಪ್ರಮಾ​ಣ​ಪ​ತ್ರ​ದಲ್ಲಿ ಇಲ್ಲದ ಕಾರಣ ಬ್ರಿಟನ್‌ ಸರ್ಕಾ​ರವು ಲಸಿಕೆ ಪಡೆದ ಭಾರ​ತೀ​ಯ​ರಿಗೂ ಕ್ವಾರಂಟೈನ್‌ ಕಡ್ಡಾ​ಯ​ಗೊ​ಳಿ​ಸಿ​ತ್ತು. ಈ ಹಿನ್ನೆ​ಲೆ​ಯಲ್ಲಿ ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದು ವಿದೇಶ ಪ್ರಯಾಣಕ್ಕೆ ಬಯಸಿದ್ದರೆ ಅವ​ರ ಲಸಿಕೆ ಪ್ರಮಾ​ಣ​ಪ​ತ್ರ​ದಲ್ಲಿ ಜನ್ಮ​ದಿ​ನಾಂಕ ನಿಗ​ದಿ​ಪ​ಡಿ​ಸ​ಲಾ​ಗು​ತ್ತದೆ. ಮುಂದಿನ ವಾರ ಕೋ-ವಿನ್‌ ವೆಬ್‌​ಸೈ​ಟ್‌​ನ​ಲ್ಲಲಿ ಈ ಬದ​ಲಾ​ವಣೆ ತರ​ಲಾ​ಗು​ತ್ತದೆ ಎಂದು ಮೂಲ​ಗಳು ತಿಳಿ​ಸಿ​ವೆ, ಪ್ರಸ್ತುತ ಹುಟ್ಟಿದ ವರ್ಷದ ಲೆಕ್ಕಾಚಾರದಲ್ಲಿ ಲಸಿಕೆ ಫಲಾನುಭವಿಗಳಿಗೆ ಅವರ ಕೋವಿನ್‌ ಪ್ರಮಾಣ ಪತ್ರದಲ್ಲಿ ವಯಸ್ಸು ಮಾತ್ರವೇ ನಮೂದಿಸಲಾಗುತ್ತಿದೆ.