+ ಮೂಲಕ ಮಾರುಕಟ್ಟೆಗೂ ಎಂಟ್ರಿ ಕೊಟ್ಟ ಫ್ಲಿಪ್‌ಕಾರ್ಟ್! *ಔಷಧ ಡೆಲಿವರಿ-ಆರೋಗ್ಯ ಕ್ಷೇತ್ರಕ್ಕೆ ಫ್ಲಿಪ್‌ಕಾರ್ಟ್ ಪ್ರವೇಶ*ಸಸ್ತಾಸುಂದರ್‌ ಜತೆ ಒಪ್ಪಂದಕ್ಕೆ ಸಹಿ : ಶೀಘ್ರದಲ್ಲಿ ಸೇವೆ ಆರಂಭ*ಮಾರುಕಟ್ಟೆಯಲ್ಲಿ ಈಗಾಗಲೇ ಗುರಿತಿಸಿಕೊಂಡಿರುವ ಕಂಪನಿ*ಮುಂದಿನಿ ದಿನಗಳಲ್ಲಿ ಇ-ಡಯಾಗ್ನೋಸ್ಟಿಕ್ಸ್ ಸೇವೆ ಆರಂಭ! ಬೆಂಗಳೂರು(ನ.19): ಆನಲೈನ್‌ ಡೆಲಿವರಿ ( ) ಮಾರುಕಟ್ಟೆಯ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಿನಬಳಕೆಯ ಯಾವ ವಸ್ತು ಬೇಕಾದರೂ ಈಗ ಜನರು ಆನಲೈನ್‌ ಮೂಲಕ ತರಿಸಬಹುದು. ಇದಕ್ಕೆ ಔಷದಿ ಡೆಲಿವರಿ ( ) ಹೊರತಾಗಿಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಔಷಧಿ ಮನೆಗೆ ತಲುಪಿಸುವ ಹಲವಾರು ಕಂಪನಿಗಳು ಕೆಲಸ ಮಾಡುತ್ತಿವೆ. ಅನಲೈನ್‌ ಆರ್ಡರ್‌ ಮಾಡಿದ ಕೆಲವೇ ನಿಮಿಷಗಳಲ್ಲಿ ಔಷಧಿ ಮನೆಗೆ ತಲುಪಿಸುವಷ್ಟು ಈ ಸಂಸ್ಥೆಗಳು ಅಭಿವೃದ್ಧಿ ಹೊಂದಿವೆ. ಇನ್ನು ಈ ರೇಸ್‌ಗೆ ಇನ್ನೊಂದು ಸೇರ್ಪಡೆವೆಂಬಂತೆ ಶುಕ್ರವಾರ ಫ್ಲಿಪ್‌ಕಾರ್ಟ್ ಹೆಲ್ತ್‌ಕೇರ್ ( ) ವಿಭಾಗಕ್ಕೆ ಪ್ರವೇಶವನ್ನು ನೀಡುವುದಾಗಿ ತಿಳಿಸಿದೆ. ಈ ಬೆನ್ನಲ್ಲೇ ಆನ್‌ಲೈನ್ ಫಾರ್ಮಸಿಯಾದ ಸಸ್ತಾಸುಂದರ್ () ಮಾರ್ಕೆಟ್‌ಪ್ಲೇಸ್‌ನಲ್ಲಿ ಹೆಚ್ಚಿನ ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಕಂಪನಿ ತಿಳಿಸಿದೆ. ವಾಲ್‌ಮಾರ್ಟ್ () ನಿಯಂತ್ರಿತ ಇ-ಕಾಮರ್ಸ್ ( ) ಸಂಸ್ಥೆಯು ಫ್ಲಿಪ್‌ಕಾರ್ಟ್ ಹೆಲ್ತ್+ ( +) ಅನ್ನು ಪ್ರಾರಂಭಿಸುವ ಮೂಲಕ ಮೆಡಿಸಿನ್‌ ಡಿಲಿವರಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಅಭಿವೃದ್ಧಿಯ ಭಾಗವಾಗಿ, ಸಸ್ತಾಸುಂದರ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಬಹುಪಾಲು ಪಾಲನ್ನು ಪಡೆಯಲು ನಿರ್ಣಾಯಕ ಒಪ್ಪಂದಕ್ಕೆ ಸಹಿ ಹಾಕಿದೆ. ಔಷಧಿ ಡೆಲಿವರಿ ಮಾರುಕಟ್ಟೆ ಪ್ರವೇಶಿಸಲು ನಾವು ಉತ್ಸುಕರಾಗಿದ್ದೇವೆ! ಈಗಾಗಲೇ ಆನಲೈನ್‌ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ . ಪ್ರಧಾನ ಕಚೇರಿಯು ಕೋಲ್ಕತ್ತಾದಲ್ಲಿದೆ. 490 ಕ್ಕೂ ಹೆಚ್ಚು ಔಷಧಾಲಯಗಳ ನೆಟ್‌ವರ್ಕ್‌ ಹೊಂದಿರುವ ಇದು ಡಿಜಿಟಲ್ ಹೆಲ್ತ್‌ಕೇರ್ ಮತ್ತು ಫಾರ್ಮಸಿ ಪ್ಲಾಟ್‌ಫಾರ್ಮ್ ಹೊಂದಿದೆ. ಮಿತ್ಸುಬಿಷಿ ಕಾರ್ಪೊರೇಷನ್ ಮತ್ತು ರೋಹ್ಟೋ ಫಾರ್ಮಾಸ್ಯುಟಿಕಲ್ಸ್ ಎಂಬ ಜಪಾನ್‌ನ ಹೂಡಿಕೆದಾರರಿಂದ ಬೆಂಬಲಿತವಾಗಿದೆ. : , , ವ್ಯಾಕ್ಸಿನ್ ಬುಕ್ಕಿಂಗ್‌ ಫ್ಲಿಪ್‌ಕಾರ್ಟ್‌ನ ಹಿರಿಯ ವಿಪಿ ಮತ್ತು ಕಾರ್ಪೊರೇಟ್ ಡೆವಲಪ್‌ಮೆಂಟ್ ಮುಖ್ಯಸ್ಥ ರವಿ ಅಯ್ಯರ್ ( ) ಮಾತನಾಡಿ "ಸಸ್ತಾಸುಂದರ್ ಡಾಟ್ ಕಾಮ್‌ನಲ್ಲಿ ಈ ಹೂಡಿಕೆಯ ಮೂಲಕ ಔಷಧಿ ಡೆಲಿವರಿ ಮಾರುಕಟ್ಟೆ ಪ್ರವೇಶಿಸಲು ನಾವು ಉತ್ಸುಕರಾಗಿದ್ದೇವೆ, ಈಗಾಗಲೇ ಒರಿಜಿನಲ್ ಉತ್ಪನ್ನಗಳು, ತಂತ್ರಜ್ಞಾನದ ಮೂಲಕ ಲಕ್ಷಾಂತರ ಗ್ರಾಹಕರಿಗೆ ವಿಶ್ವಾಸಾರ್ಹ ಪಾಲುದಾರನಾಗಿ ಫ್ಲಿಪ್‌ಕಾರ್ಟ್ ಹೊರಹೊಮ್ಮಿದೆ. ಭಾರತದ ಜನರಿಗೆ ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ( ) ನೀಡುವುದು ತನ್ನ ಗುರಿಯಾಗಿದೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ. +, ಕಂಪನಿಯು ಇ-ಫಾರ್ಮಸಿಯೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಭವಿಷ್ಯದಲ್ಲಿ ಇ-ಡಯಾಗ್ನೋಸ್ಟಿಕ್ಸ್ (-) ಮತ್ತು ಇ-ಸಮಾಲೋಚನೆ (-) ಸೇರಿದಂತೆ ಹೊಸ ಆರೋಗ್ಯ ಸೇವೆಗಳನ್ನು ಸೇರಿಸುವ ಯೋಜನೆ ಇದೆ ಎಂದು ಹೇಳಿದ್ದಾರೆ. "ಫ್ಲಿಪ್‌ಕಾರ್ಟ್ ಹೆಲ್ತ್+ ತನ್ನ ಪ್ಯಾನ್ ಇಂಡಿಯಾ ( ) ವ್ಯಾಪ್ತಿ ಮತ್ತು ತಂತ್ರಜ್ಞಾನದ ಸಾಮರ್ಥ್ಯಗಳ ಮೂಲಕ ಫ್ಲಿಪ್‌ಕಾರ್ಟ್ ಗ್ರೂಪ್‌ನ ಹಾಗೂ ಸಸ್ತಸುಂದರ್‌ನ ಆಳವಾದ ಪರಿಣತಿಯೊಂದಿಗೆ ಗ್ರಾಹಕರಿಗೆ ಈ ಔಷಧಿ ಮಾರುಕಟ್ಟೆಯಲ್ಲಿಯೇ ಅತ್ಯಂತ ಉತ್ತಮ ಸೇವೆ ನೀಡಲಿದೆ ಎಂದು ರವಿ ಹೇಳಿದ್ದಾರೆ. ಸಿಹಿತುಳಸಿ ಹೆಸರಲ್ಲಿ ಡ್ರಗ್ಸ್‌ ಮಾರಾಟ: ಅಮೆಜಾನ್‌ಗೆ ಸಂಕಷ್ಟ ಇ-ಕಾಮರ್ಸ್‌ ದೈತ್ಯ ಅಮೆಜಾನ್‌() ಅನ್ನು ಬಳಸಿಕೊಂಡು ಮಧುಮೇಹಿಗಳಿಗೆ ಅನುಕೂಲವಾಗುವ ಸಿಹಿ ತುಳಸಿ () ನೆಪದಲ್ಲಿ ಮರಿಜುವಾನಾ () ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ವಿಚಾರಣೆಗಾಗಿ ಮಧ್ಯಪ್ರದೇಶ ಪೊಲೀಸರು ( ) ಅಮೆಜಾನ್‌ಗೆ ನೋಟಿಸ್‌ ರವಾನಿಸಿದ್ದಾರೆ. ಈವರೆಗೆ ಕೆಲವು ಪಾರ್ಸಲ್‌ ಕಂಪನಿಗಳು ಡ್ರಗ್ಸ್‌ ಪೂರೈಸುತ್ತಿರುವ ಪ್ರಕರಣಗಳು ವರದಿಯಾಗಿದ್ದವು. ಆದರೆ ಈಗ ಅಮೆಜಾನ್‌ನಂಥ ಕಂಪನಿ ಮೇಲೆ ಇಂಥ ಆರೋಪ ಕೇಳಿಬಂದಿರುವುದು ಸಂಚಲನ ಮೂಡಿಸಿದೆ.