ಜಾಗತಿಕ ನಾವಿನ್ಯತಾ ಸೂಚ್ಯಂಕ: 2015ರಲ್ಲಿ 81ನೇ ಸ್ಥಾನದಲ್ಲಿದ್ದ ಭಾರತಕ್ಕೆ 40ನೇ ಸ್ಥಾನ ಜಾಗತಿಕ ನಾವಿನ್ಯತಾ ಸೂಚ್ಯಂಕ () 2023ರ ಶ್ರೇಯಾಂಕದಲ್ಲಿ ಭಾರತವು 132 ಆರ್ಥಿಕತೆಗಳಲ್ಲಿ 40 ನೇ ಸ್ಥಾನ ಪಡೆದಿದೆ. ಜಿನೇವಾ ಮೂಲದ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ () ಈ ಸೂಚ್ಯಂಕ ಸಿದ್ಧಪಡಿಸಿದೆ. ನವದೆಹಲಿ: ಜಾಗತಿಕ ನಾವಿನ್ಯತಾ ಸೂಚ್ಯಂಕ () 2023ರ ಶ್ರೇಯಾಂಕದಲ್ಲಿ ಭಾರತವು 132 ಆರ್ಥಿಕತೆಗಳಲ್ಲಿ 40 ನೇ ಸ್ಥಾನ ಪಡೆದಿದೆ. ಜಿನೇವಾ ಮೂಲದ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ () ಈ ಸೂಚ್ಯಂಕ ಸಿದ್ಧಪಡಿಸಿದೆ. ಸೂಚ್ಯಂಕದಲ್ಲಿ ಕಳೆದ ಹಲವಾರು ವರ್ಷಗಳಿಂದ ಭಾರತವು ಏರುಗತಿಯಲ್ಲಿದೆ. 2015ರಲ್ಲಿ ಪಡೆದಿದ್ದ 81 ಸ್ಥಾನದಿಂದ ಈ ವರ್ಷ 40 ಕ್ಕೆ ಏರುತ್ತಿರುವ ಪಥದಲ್ಲಿದೆ ಎಂದು ಭಾರತ ಸರ್ಕಾರದ ನೀತಿ ಆಯೋಗ ( ) ಹೇಳಿದೆ. ಸ್ಟಾರ್ಟಪ್‌ಗಳಿಗೆ () ದೇಶದಲ್ಲಿ ಉತ್ತಮ ವಾತಾವರಣ ಸೃಷ್ಟಿ, ಖಾಸಗಿ ಹಾಗೂ ಸರ್ಕಾರಿ ಸಂಶೋಧನಾ ಸಂಸ್ಥೆಗಳ ಅದ್ಭುತ ಕೆಲಸ, ಜ್ಞಾನ ಬಂಡವಾಳ ಸುಧಾರಣೆ- ಇತ್ಯಾದಿಗಳು ಭಾರತದ ಸೂಚ್ಯಂಕ ಸುಧಾರಣೆಗೆ ಕಾರಣವಾಗಿವೆ. ಜಾಗತಿಕ ನಾವಿನ್ಯತಾ ಸೂಚ್ಯಂಕವು( ), ವಿಶ್ವದಾದ್ಯಂತ ಸರ್ಕಾರಗಳಿಗೆ ತಮ್ಮ ದೇಶಗಳಲ್ಲಿನ ನಾವೀನ್ಯತೆಗೆ ಸಂಬಂಧಿಸಿದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ಸೂಚಿಸುವ ವಿಶ್ವಾಸಾರ್ಹ ಮಾನದಂಡವಾಗಿದೆ. ಅಮೆರಿಕ ರಾಯಭಾರಿ ಕಚೇರಿಯಿಂದ ಈ ವರ್ಷ 10 ಲಕ್ಷ ವೀಸಾ ವಿತರಣೆ ನವದೆಹಲಿ: ಪ್ರಸಕ್ತ ವರ್ಷದಲ್ಲಿ 10 ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಅಮೆರಿಕದ ವಲಸೆಯಲ್ಲದ ವೀಸಾ ನೀಡಬೇಕೆಂಬ ಗುರಿಯನ್ನು ಅಮೆರಿಕದ ರಾಯಭಾರ ( ) ಕಚೇರಿ ಗುರುವಾರ ಪೂರೈಸಿದೆ. ಅಮೆರಿಕದಲ್ಲಿ ತಮ್ಮ ಮಗನ ಪದವಿ ಸಮಾರಂಭದಲ್ಲಿ ಭಾಗಿಯಾಗಲು ವೀಸಾಗೆ ಅರ್ಜಿ ಸಲ್ಲಿಸಿದ್ದ ದಂಪತಿಗಳು ಈ ವೀಸಾವನ್ನು ಪಡೆದುಕೊಳ್ಳಬಹುದು. ಭಾರತದಲ್ಲಿನ ಅಮೆರಿಕ ರಾಯಭಾರಿ ( ) ಎರಿಕ್‌ ಗಾರ್ಸೆಟ್ಟಿ ( ) ಕೊನೆಯ ವೀಸಾವನ್ನು ವಿತರಿಸಿದರು.