ವಿಶ್ವದ ದಿಗ್ಗಜ ನಾಯಕರ ಮಹಾಮೇಳ, ಜಿ20 ಶೃಂಗಸಭೆಗೆ ಭಾರತ ಖರ್ಚು ಮಾಡಿದ್ದೆಷ್ಟು? 18ನೇ ಆವೃತ್ತಿಯ ಜಿ20 ಸಮಾವೇಶ ಇಂದಿನಿಂದ ನವದೆಹಲಿಯ ಭಾರತ ಮಂಟಪದಲ್ಲಿಆರಂಭವಾಗಲಿದೆ. ಹಾಗಿದ್ದಲ್ಲಿ, ಕಳೆದ 8 ವರ್ಷಗಳ ಜಿ20 ಶೃಂಗಸಭೆಗೆ ಆಗಿರುವ ಖರ್ಚುಗಳೆಷ್ಟು, ಭಾರತ ಮಾಡುತ್ತಿರುವ ಖರ್ಚು ಎಷ್ಟು ಎನ್ನುವ ವಿವರ ಇಲ್ಲಿದೆ. ಇಂದಿನ ಡಾಲರ್‌ನ ಮೌಲ್ಯದಲ್ಲಿ ಈ ಲೆಕ್ಕಾಚಾರಗಳಿವೆ. 18ನೇ ಆವೃತ್ತಿಯ ಜಿ20 ಸಮಾವೇಶ ಇಂದಿನಿಂದ ನವದೆಹಲಿಯ ಭಾರತ ಮಂಟಪದಲ್ಲಿಆರಂಭವಾಗಲಿದೆ. ಹಾಗಿದ್ದಲ್ಲಿ, ಕಳೆದ 8 ವರ್ಷಗಳ ಜಿ20 ಶೃಂಗಸಭೆಗೆ ಆಗಿರುವ ಖರ್ಚುಗಳೆಷ್ಟು, ಭಾರತ ಮಾಡುತ್ತಿರುವ ಖರ್ಚು ಎಷ್ಟು ಎನ್ನುವ ವಿವರ ಇಲ್ಲಿದೆ. ಇಂದಿನ ಡಾಲರ್‌ನ ಮೌಲ್ಯದಲ್ಲಿ ಈ ಲೆಕ್ಕಾಚಾರಗಳಿವೆ. ಚೀನಾ:ಬಹುಶಃ ಇತ್ತೀಚಿನ ವರ್ಷಗಳಲ್ಲಿ ಯಾವುದಾದರೂ ದೇಶ ಜಿ20ಗೆ ದಂಡಿಯಾಗಿ ಹಣ ಸುರಿದಿದ್ದೆಂದರೆ ಅದು ಚೀನಾ ಮಾತ್ರ. 2016ರ ಶೃಂಗಸಭೆಗಾಗಿ ಚೀನಾ ಬರೋಬ್ಬರಿ 24 ಬಿಲಿಯನ್‌ ಡಾಲರ್‌ ಹಣ ಖರ್ಚು ಮಾಡಿತ್ತು. ಜರ್ಮನಿ:2017ರಲ್ಲಿ ಜರ್ಮನಿ ಜಿ20 ಶೃಂಗಸಭೆಯನ್ನು ಆಯೋಜನೆ ಮಾಡಿತ್ತು. ಅದಕ್ಕಾಗಿ ಜರ್ಮನಿ 94 ಮಿಲಿಯನ್‌ ಡಾಲರ್‌ ಅಂದರೆ 779 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿತ್ತು. ಇಂಡೋನೇಷ್ಯಾ:ಕಳೆದ ವರ್ಷದ ಶೃಂಗಸಭೆಗೆ ಇಂಡೋನೇಷ್ಯಾ ಆತಿಥ್ಯ ವಹಿಸಿಕೊಂಡಿತ್ತು. ದ್ವೀಪರಾಷ್ಟ್ರ ಈ ಕಾರ್ಯಕ್ರಮಕ್ಕೆ ಖರ್ಚುಮಾಡಿದ್ದು ಬರೀ 33 ಮಿಲಿಯನ್‌ ಯುಎಸ್‌ ಡಾಲರ್‌ ಅಂದರೆ, ಬರೀ 273 ಕೋಟಿ ರೂಪಾಯಿ. ಭಾರತ:ಈ ಬಾರಿ ಶೃಂಗಸಭೆ ಭಾರತದ ಆತಿಥ್ಯದಲ್ಲಿ ನಡೆಯುತ್ತಿದೆ. ಇದಕ್ಕಾಗಿ ಭಾರತ 120 ಮಿಲಿಯನ್‌ ಡಾಲರ್‌ ಹಣವನ್ನು ಅಂದರೆ, 995 ಕೋಟಿ ರೂಪಾಯಿ ಹಣವನ್ನು ಬರೀ ಈ ಕಾರ್ಯಕ್ರಮಕ್ಕ ಖರ್ಚು ಮಾಡುತ್ತಿದೆ. ಭದ್ರತೆಗಾಗಿಯೇ ಹೆಚ್ಚಿನ ಹಣ ವಿನಿಯೋಗವಾಗುತ್ತದೆ.