ಬಿಲಿಯನೇರ್ ಮುಕೇಶ್‌ ಅಂಬಾನಿ; ಉದ್ಯಮಿಯಾಗದಿದ್ದರೆ ಇನ್ನೇನು ಆಗಲು ಬಯಸಿದ್ದರು? ಜೀವನದಲ್ಲಿ ಒಬ್ಬೊಬ್ಬರಿಗೆ ಒಂದು ರೀತಿಯ ಕನಸಿರುತ್ತದೆ. ಆದರೆ ಹಲವು ಏಳುಬೀಳುಗಳ ನಡುವೆ, ಅವಕಾಶದ ಕೊರತೆಗೋ, ಅನಿವಾರ್ಯತೆಗೋ ಏನೋ ಆಗೋಕೆ ಹೊರಟು ಮತ್ತೇನೂ ಆಗಿಬಿಡುತ್ತಾರೆ. ಇದು ಜನಸಾಮಾನ್ಯರ ಜೀವನದಲ್ಲಷ್ಟೇ ಆಗುವಂಥದ್ದಲ್ಲ. ಬಿಲಿಯನೇರ್ ಮುಕೇಶ್ ಅಂಬಾನಿ ಜೀವನದಲ್ಲೂ ಹೀಗೇ ಆಗಿದ್ಯಂತೆ. ಜೀವನದಲ್ಲಿ ಒಬ್ಬೊಬ್ಬರಿಗೆ ಒಂದು ರೀತಿಯ ಕನಸಿರುತ್ತದೆ. ಆದರೆ ಹಲವು ಏಳುಬೀಳುಗಳ ನಡುವೆ, ಅವಕಾಶದ ಕೊರತೆಗೋ, ಅನಿವಾರ್ಯತೆಗೋ ಏನೋ ಆಗೋಕೆ ಹೊರಟು ಮತ್ತೇನೂ ಆಗಿಬಿಡುತ್ತಾರೆ. ಇದು ಜನಸಾಮಾನ್ಯರ ಜೀವನದಲ್ಲಷ್ಟೇ ಆಗುವಂಥದ್ದಲ್ಲ. ಬಿಲಿಯನೇರ್ ಮುಕೇಶ್ ಅಂಬಾನಿ ಜೀವನದಲ್ಲೂ ಹೀಗೇ ಆಗಿದ್ಯಂತೆ. ಮುಕೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಭಾರತದ ಅತ್ಯಂತ ಬೆಲೆಬಾಳುವ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿದ್ದಾರೆ, ಇದು 11 ಟ್ರಿಲಿಯನ್‌ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ವ್ಯವಹಾರವನ್ನು ಹೊಂದಿದೆ. ರಿಲಯನ್ಸ್ ಇಂಡಸ್ಟ್ರೀಸ್ ಕೂಡ ಭಾರತದ ಅತ್ಯಂತ ಲಾಭದಾಯಕ ಕಂಪನಿಗಳಲ್ಲಿ ಒಂದಾಗಿದೆ. ಮುಕೇಶ್ ಅಂಬಾನಿಯನ್ನು ರಿಲಯನ್ಸ್ ಇಂಡಸ್ಟ್ರೀಸ್‌ನ ಮಾಲೀಕ, ಬಿಲಿಯನೇರ್ ಎಂದು ಜಗತ್ತಿನಾದ್ಯಂತ ಗುರುತಿಸುತ್ತಾರೆ. ಅಂಬಾನಿ ಕುಟುಂಬದ ಎಲ್ಲಾ ಕಾರ್ಯಕ್ರಮಗಳು ಕೋಟಿ ಕೋಟಿ ವ್ಯಯಿಸಿ ಅದ್ಧೂರಿಯಾಗಿ ನಡೆಯುತ್ತವೆ. ಕುಟುಂಬ ಸದಸ್ಯರು ಸಹ ಕೋಟಿ ಬೆಲೆ ಬಾಳುವ ಡಿಸೈನರ್ ವೇರ್ ಉಡುಗೆಯಲ್ಲಿ ಮಿಂಚುತ್ತಾರೆ. ಆದ್ರೆ ಮುಕೇಶ್ ಅಂಬಾನಿ ಈ ಬಿಲಿಯನೇರ್ ಮುಕೇಶ್ ಅಂಬಾನಿ ವ್ಯಾಪಾರ ಜಗತ್ತಿಗೆ ಪ್ರವೇಶಿಸಲು ಆಸಕ್ತಿ ಹೊಂದಿರಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಮುಕೇಶ್ ಅಂಬಾನಿ ಈಗ 7 ಲಕ್ಷ ಕೋಟಿ ರೂ.ಗಿಂತ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಆದರೆ ಅವರು ಹೀಗೆ ಯಶಸ್ವೀ ಉದ್ಯಮಿಯಾಗುವ ಬದಲು ಶಿಕ್ಷಕರಾಗಲು ಬಯಸಿದ್ದರಂತೆ. 2017ರಲ್ಲಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಮುಕೇಶ್ ಅಂಬಾನಿ, ನಾನು ಜೀವನದಲ್ಲಿ ಉತ್ತಮ ಶಿಕ್ಷಕನಾಗಲು ಬಯಸಿದ್ದೆ ಎಂದು ಬಹಿರಂಗಪಡಿಸಿದ್ದರು. ರಿಲಯನ್ಸ್ ಇಂಡಸ್ಟ್ರೀಸ್‌ಗೆ ಸೇರುವ ಮೊದಲು ಮುಕೇಶ್ ಅಂಬಾನಿ ವಿಶ್ವವಿದ್ಯಾನಿಲಯದಲ್ಲಿ ಕಲಿಸಲು ಅಥವಾ ವಿಶ್ವ ಬ್ಯಾಂಕ್‌ನಲ್ಲಿ ಕೆಲಸ ಮಾಡಬೇಕೆಂದು ಬಯಸಿದ್ದರು. ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಕೂಡಾ ಶಿಕ್ಷಕಿಯಾಗಬೇಕೆಂದು ಬಯಸಿದ್ದರು. 'ನನ್ನ ತಂದೆ (ದಿವಂಗತ ಧೀರೂಭಾಯಿ ಅಂಬಾನಿ) ನನ್ನನ್ನು ರಿಲಯನ್ಸ್‌ಗೆ ಕರೆತರುವ ಮೊದಲು, ನಾನು ಸ್ವಲ್ಪ ಕಾಲ ವಿಶ್ವ ಬ್ಯಾಂಕ್‌ನಲ್ಲಿ ಕೆಲಸ ಮಾಡಲು ಅಥವಾ ವಿಶ್ವವಿದ್ಯಾಲಯದಲ್ಲಿ ಕಲಿಸಲು ಬಯಸಿದ್ದೆ. ನನ್ನ ಪತ್ನಿ (ನೀತಾ) ಶಿಕ್ಷಕಿಯಾಗಿರುವುದರಿಂದ, ನಾನು ಬೋಧನೆಯನ್ನು ಕೈಗೆತ್ತಿಕೊಳ್ಳಲು ಇದು ಉತ್ತಮ ಸಮಯ ಎಂದು ಅಂದುಕೊಂಡೆ. ಮುಂದೆ, ನಾವಿಬ್ಬರೂ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತೇವೆ. ನಮ್ಮ ಸ್ವಂತ ವೈಯಕ್ತಿಕ ತೃಪ್ತಿಗಾಗಿ ನಾವಿದನ್ನು ಮಾಡಲು ಬಯಸುತ್ತೇವೆ' ಎಂದು ಮುಕೇಶ್ ಅಂಬಾನಿ ತಿಳಿಸಿದ್ದರು. ಮುಕೇಶ್ ಅಂಬಾನಿಯವರ ಮಕ್ಕಳಾದ ಆಕಾಶ್ ಅಂಬಾನಿ, ಇಶಾ ಅಂಬಾನಿ ಮತ್ತು ಅನಂತ್ ಅಂಬಾನಿ ಕೂಡ ಈಗ ಕುಟುಂಬದ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ರಿಲಯನ್ಸ್ ರಿಟೇಲ್, ರಿಲಯನ್ಸ್ ಜಿಯೋ ಇನ್ಫೋಕಾಮ್ ಮತ್ತು ಇತರವು ಸೇರಿದಂತೆ ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಹಲವಾರು ಅಂಗಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ. ಅಂಬಾನಿ ಕುಟುಂಬ ಹಲವು ವಿದ್ಯಾಭ್ಯಾಸ ಸಂಸ್ಥೆಗಳನ್ನು ನಡೆಸುತ್ತಿದೆ. ಮಾತ್ರವಲ್ಲ ಹಲವು ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆಯನ್ನು ಸಹ ನೀಡುತ್ತಿದೆ.