ಖರೀದಿಸಿದ ಸಾಮಗ್ರಿಗೆ ಬಿಲ್ ಪಡಿರಿ: ಒಂದು ಕೋಟಿವರೆಗೆ ಬಹುಮಾನ ಗೆಲ್ಲಿ ಕೇಂದ್ರ ಸರ್ಕಾರವು ‘ಮೇರಾ ಬಿಲ್‌ ಮೇರಾ ಅಧಿಕಾರ್‌’ಎಂಬ ಹೊಸ ಜಿಎಸ್‌ಟಿ ಇನ್‌ವಾಯ್ಸ್‌ (ಬಿಲ್‌) ಪ್ರೋತ್ಸಾಹಕ ಬಹುಮಾನ ಯೋಜನೆಯೊಂದನ್ನು ಪ್ರಕಟಿಸಿದೆ. ಸೆ.1ರಿಂದ ಯೋಜನೆ ಆರಂಭವಾಗಲಿದ್ದು 10 ಸಾವಿರ ರು.ನಿಂದ 1 ಕೋಟಿ ರು.ವರೆಗೂ ಲಕ್ಕಿ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. ನವದೆಹಲಿ: ಕೇಂದ್ರ ಸರ್ಕಾರವು ‘ಮೇರಾ ಬಿಲ್‌ ಮೇರಾ ಅಧಿಕಾರ್‌’ (ನನ್ನ ಬಿಲ್‌ ನನ್ನ ಅಧಿಕಾರ) ಎಂಬ ಹೊಸ ಜಿಎಸ್‌ಟಿ ಇನ್‌ವಾಯ್ಸ್‌ (ಬಿಲ್‌) ಪ್ರೋತ್ಸಾಹಕ ಬಹುಮಾನ ಯೋಜನೆಯೊಂದನ್ನು ಪ್ರಕಟಿಸಿದ್ದು, ಇದನ್ನು ಮೊದಲು 6 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. ಸೆ.1ರಿಂದ ಯೋಜನೆ ಆರಂಭವಾಗಲಿದ್ದು 10 ಸಾವಿರ ರು.ನಿಂದ 1 ಕೋಟಿ ರು.ವರೆಗೂ ಲಕ್ಕಿ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. ಗ್ರಾಹಕರು () ವಸ್ತುಗಳನ್ನು ಖರೀದಿ ಮಾಡುವಾಗ ಪ್ರತಿ ಬಾರಿ ಬಿಲ್ ಕೇಳುವಂತೆ ಪ್ರೇರೇಪಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಇದನ್ನು ಅಸ್ಸಾಂ (), ಗುಜರಾತ್‌ ಮತ್ತು ಹರಿಯಾಣ ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ( ) ಪುದುಚೇರಿ, ದಮನ್‌ ಮತ್ತು ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿಯಲ್ಲಿ ಮೊದಲಿಗೆ ಆರಂಭಿಸಲಾಗುತ್ತಿದೆ ‘ಮೇರಾ ಬಿಲ್ ಮೇರಾ ಅಧಿಕಾರ್‌’( ) ಮೊಬೈಲ್ ಆ್ಯಪ್‌ ಐಒಎಸ್‌ ಹಾಗೂ ಆ್ಯಂಡ್ರಾಯ್ಡ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ( ) ಲಭ್ಯವಾಗಲಿದೆ. ಪೆಟ್ರೋಲ್‌ ತೆರಿಗೆ ಇಳಿಕೆ: ಬೆಲೆ ಏರಿಕೆಯಿಂದ ಕಂಗೆಟ್ಟ ಜನರಿಗೆ ಕೇಂದ್ರದಿಂದ ಶೀಘ್ರ ರಿಲೀಫ್‌ ಲಕ್ಕಿ ಡ್ರಾಗಾಗಿ ( ) ಪರಿಗಣಿಸಬೇಕಾದ ಬಿಲ್‌ ರಸೀದಿಯ ಕನಿಷ್ಠ ಖರೀದಿ ಮೌಲ್ಯವು 200 ರೂಪಾಯಿ ಆಗಿದೆ. ಒಬ್ಬರು 1 ತಿಂಗಳಲ್ಲಿ ಗರಿಷ್ಠ 25 ಬಿಲ್‌ಗಳನ್ನು ಆ್ಯಪ್‌ನಲ್ಲಿ ಅಪ್‌ಡೇಟ್‌ ಮಾಡಬಹುದು. ಇದರ ಅಡಿಯಲ್ಲಿ ಮಾಸಿಕ ಮತ್ತು ತ್ರೈಮಾಸಿಕ ಡ್ರಾ ಮಾಡಲಾಗುವುದು ಮತ್ತು ವಿಜೇತರು 10 ಸಾವಿರ ರು.ನಿಂದ 1 ಕೋಟಿ ರು.ವರೆಗೆ ನಗದು ಬಹುಮಾನಕ್ಕೆ ಅರ್ಹರಾಗುತ್ತಾರೆ. ಜಿಎಸ್‌ಟಿಯಲ್ಲಿ () ನೋಂದಾಯಿತವಾದ ಎಲ್ಲ ಪೂರೈಕೆದಾರರ ಬಿಲ್‌ಗಳು ಯೋಜನೆಗೆ ಅರ್ಹವಾಗಿರುತ್ತವೆ. ಜಿಎಸ್‌ಟಿ ನಂಬರ್‌, ಇನ್‌ವಾಯ್ಸ್ ಸಂಖ್ಯೆ, ಪಾವತಿಸಿದ ಮೊತ್ತ ಮತ್ತು ತೆರಿಗೆ ಮೊತ್ತವನ್ನು ಬಿಲ್‌ಗಳು ಹೊಂದಿರಬೇಕು.