ಸ್ಯಾನಿಟರಿ ಪ್ಯಾಡ್‌ಗೆ ಹೇಳಿ ಗುಡ್‌ ಬೈ: ದೇಶಿಯ ಕಾಂಫಿ ಕಫ್‌ಗೆ ಹೇಳಿ ಹಾಯ್‌.. ಹಾಯ್‌ ! ದಿವ್ಯಾ ಅವರು ನೀಡುವ ಕಾಂಫಿಕಪ್‌ಗಳನ್ನು 10 ವರ್ಷಗಳ ಕಾಲ ಬಳಸಬಹುದಾಗಿದ್ದು, ಮುಟ್ಟಾದ ಸಮಯದಲ್ಲಿ ನಿರಂತರ 12 ಗಂಟೆಗಳ ಕಾಲ ಉಪಯೋಗಿಸಬಹುದಾಗಿದೆ. ಹೆಣ್ಣು ಮಕ್ಕಳು, ಮಹಿಳೆಯರು ಬಳಸೋ ಸ್ಯಾನಿಟರಿ ಪ್ಯಾಡ್( ) ಹೆಚ್ಚಾಗಿ ಪ್ಲಾಸ್ಟಿಕ್‌ಗಳಿಂದ ಮಾಡಲ್ಪಟ್ಟಿದೆ ಹಾಗೂ ಇದು ಮಹಿಳೆಯರ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕ ಅನ್ನೋದು ಹೆಚ್ಚಿನವರಿಗೆ ಗೊತ್ತೇ ಇಲ್ಲ. ಅಧ್ಯಯನಗಳ ಪ್ರಕಾರ, ಪಾಲಿ, ಮಾರ್ಫಿನ್, ಡಯಾಕ್ಸಿನ್, ಥೈಲೈಡ್ಸ್ ಮುಂತಾದ ಕೆಮಿಕಲ್‌ಗಳನ್ನು ಇದರಲ್ಲಿ ಬಳಸಲಾಗುತ್ತದೆ. ಈ ಪ್ಯಾಡ್‌ಗಳಿಂದಾಗಿ ಸರಿಯಾದ ಸಮಯದಲ್ಲಿ ಮುಟ್ಟಾಗದಿರೋದು, ತುರಿಕೆ, ರ್ಯಾಷಸ್, ಸಂತಾನವಾಗದ ಸಮಸ್ಯೆ, ಗರ್ಭಕೋಶದ ಸಮಸ್ಯೆ, ಸರ್ವಿಕ್ಸ್, ಯುಟೇರಿಯನ್ ಕ್ಯಾನ್ಸರ್ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಇನ್ನು ಇದರಲ್ಲಿ ಪ್ಲಾಸ್ಟಿಕ್ ಹಾಗೂ ಕೆಮಿಕಲ್ ಬಳಸುವುದರಿಂದ 800-900 ವರ್ಷಗಳ ಕಾಲ ಮಣ್ಣಿನಲ್ಲಿ ಕರಗೋದಿಲ್ಲ ಹಾಗೂ ಸುಟ್ಟಾಗ ಇದರಿಂದ ಹೊರಡುವ ಕೆ‌ಮಿಕಲ್ ಪರಿಸರಕ್ಕೂ ಹೆಚ್ಚಿನ ಹಾನಿಯುಂಟು ಮಾಡುತ್ತದೆ. ಅಧ್ಯಯನದ ಪ್ರಕಾರ, ನಮ್ಮ ದೇಶದಲ್ಲಿ ಪ್ರತೀ ವರ್ಷ ಸುಮಾರು 9,000 ಟನ್‌ಗಳಷ್ಟು ತ್ಯಾಜ್ಯ ಕೇವಲ ಸ್ಯಾನಿಟರಿ ಪ್ಯಾಡ್‌ಗಳಿಂದ ಉಂಟಾಗುತ್ತಿದೆ. ಈ ಕಾರಣದಿಂದ ಸ್ಯಾನಿಟರಿ ಪ್ಯಾಡ್‌ಗಳಿಗೆ ಪರ್ಯಾಯವಾಗಿ ಕೊರೊನಾ ಸಮಯದಲ್ಲಿ 2020 ಆಗಸ್ಟ್ 15ರಿಂದ ಉತ್ತರಕನ್ನಡ ಜಿಲ್ಲೆಯ ಶಿರಸಿಯ ನಿವಾಸಿ ದಿವ್ಯಾ ಗೋಕರ್ಣ ತಾವೇ ಖುದ್ದಾಗಿ ಇಂಡಿಯಾ ಮೇಡ್ ಉತ್ಪನ್ನಗಳನ್ನು ಪ್ರಾರಂಭಿಸಿದ್ದಾರೆ.ಈಕೆ ಉತ್ಪಾದಿಸುತ್ತಿರೋ ಈ ಉತ್ಪನ್ನದ ಹೆಸರು ಕಾಂಫಿ ಕಪ್ ( ). ಮೆಡಿಕಲಿ ಅಪ್ರೂವ್ಡ್ ಸಿಲಿಕಾನ್‌ನಿಂದ ನಿರ್ಮಿಸಲ್ಪಟ್ಟ ಈ ಕಾಂಫಿ ಕಪ್, ಮಟ್ಟಿನ ಸಮಯದಲ್ಲಿ ಮಹಿಳೆಯರು ಧರಿಸಬಹುದಾದ ಆರೋಗ್ಯಕರ ಹಾಗೂ ಸುರಕ್ಷಿತ ಉತ್ಪನ್ನ. ಸಾಮಾನ್ಯವಾಗಿ ಒಂದು ತಿಂಗಳಲ್ಲಿ ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು, ಮಹಿಳೆಯರು () 10-12 ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ. ಪ್ರತೀ ತಿಂಗಳು ಇದಕ್ಕೆ ಅಷ್ಟೇ ಬೆಲೆ ಕೊಟ್ಟು ಖರೀದಿಸಬೇಕು. ಆದರೆ, ಕಾಂಫಿ ಕಪ್ ಒಂದು ಬಾರಿ ಖರೀದಿಸಿದರೆ ಸುಮಾರು 10 ವರ್ಷಗಳ ಕಾಲ ಉಪಯೋಗಿಸಬಹುದಾಗಿದೆ. 2019-2020ರಲ್ಲಿ ಈ ಕಾಂಫಿಕಪ್ ತಯಾರಿ ಬಗ್ಗೆ ಸಿದ್ಧತೆ ನಡೆಸುತ್ತಿದ್ದ ದಿವ್ಯಾ, ಕಳೆದ 3 ವರ್ಷಗಳಿಂದ ಇದನ್ನು ಬೆಂಗಳೂರಿನಲ್ಲಿ ತಮ್ಮ ಘಟಕದಲ್ಲಿ ತಯಾರಿಸಿ ಜನರಿಗೆ ಇದರ ಅಗತ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಈಗಾಗಲೇ ಸುಮಾರು 8 ಮಂದಿ ಮಹಿಳೆಯರು ಇವರಡಿಯಲ್ಲಿ ಕೆಲಸ ಮಾಡುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಮೆಡಿಕಲ್ ರೆಪ್ರೆಸೆಂಟೇಟಿವ್ಸ್ ಇವುಗಳನ್ನು ಮಾರಾಟ ಕೂಡಾ ಮಾಡುತ್ತಿದ್ದಾರೆ.ಇದನ್ನೂ ವೀಕ್ಷಿಸಿ:ಕೊರೊನಾ ಟೈಮ್‌ನಲ್ಲಿ ಕೈಕೊಟ್ಟ ಚಿಕ್ಕ ಕಿರಾಣಿ ಅಂಗಡಿ: ಯ್ಯೂಟೂಬ್ ವಿಡಿಯೋ ನೋಡಿ ರೊಟ್ಟಿ ಮಷಿನ್ ಖರೀದಿ ! ಹೆಣ್ಣು ಮಕ್ಕಳು, ಮಹಿಳೆಯರು ಬಳಸೋ ಸ್ಯಾನಿಟರಿ ಪ್ಯಾಡ್( ) ಹೆಚ್ಚಾಗಿ ಪ್ಲಾಸ್ಟಿಕ್‌ಗಳಿಂದ ಮಾಡಲ್ಪಟ್ಟಿದೆ ಹಾಗೂ ಇದು ಮಹಿಳೆಯರ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕ ಅನ್ನೋದು ಹೆಚ್ಚಿನವರಿಗೆ ಗೊತ್ತೇ ಇಲ್ಲ. ಅಧ್ಯಯನಗಳ ಪ್ರಕಾರ, ಪಾಲಿ, ಮಾರ್ಫಿನ್, ಡಯಾಕ್ಸಿನ್, ಥೈಲೈಡ್ಸ್ ಮುಂತಾದ ಕೆಮಿಕಲ್‌ಗಳನ್ನು ಇದರಲ್ಲಿ ಬಳಸಲಾಗುತ್ತದೆ. ಈ ಪ್ಯಾಡ್‌ಗಳಿಂದಾಗಿ ಸರಿಯಾದ ಸಮಯದಲ್ಲಿ ಮುಟ್ಟಾಗದಿರೋದು, ತುರಿಕೆ, ರ್ಯಾಷಸ್, ಸಂತಾನವಾಗದ ಸಮಸ್ಯೆ, ಗರ್ಭಕೋಶದ ಸಮಸ್ಯೆ, ಸರ್ವಿಕ್ಸ್, ಯುಟೇರಿಯನ್ ಕ್ಯಾನ್ಸರ್ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಇನ್ನು ಇದರಲ್ಲಿ ಪ್ಲಾಸ್ಟಿಕ್ ಹಾಗೂ ಕೆಮಿಕಲ್ ಬಳಸುವುದರಿಂದ 800-900 ವರ್ಷಗಳ ಕಾಲ ಮಣ್ಣಿನಲ್ಲಿ ಕರಗೋದಿಲ್ಲ ಹಾಗೂ ಸುಟ್ಟಾಗ ಇದರಿಂದ ಹೊರಡುವ ಕೆ‌ಮಿಕಲ್ ಪರಿಸರಕ್ಕೂ ಹೆಚ್ಚಿನ ಹಾನಿಯುಂಟು ಮಾಡುತ್ತದೆ. ಅಧ್ಯಯನದ ಪ್ರಕಾರ, ನಮ್ಮ ದೇಶದಲ್ಲಿ ಪ್ರತೀ ವರ್ಷ ಸುಮಾರು 9,000 ಟನ್‌ಗಳಷ್ಟು ತ್ಯಾಜ್ಯ ಕೇವಲ ಸ್ಯಾನಿಟರಿ ಪ್ಯಾಡ್‌ಗಳಿಂದ ಉಂಟಾಗುತ್ತಿದೆ. ಈ ಕಾರಣದಿಂದ ಸ್ಯಾನಿಟರಿ ಪ್ಯಾಡ್‌ಗಳಿಗೆ ಪರ್ಯಾಯವಾಗಿ ಕೊರೊನಾ ಸಮಯದಲ್ಲಿ 2020 ಆಗಸ್ಟ್ 15ರಿಂದ ಉತ್ತರಕನ್ನಡ ಜಿಲ್ಲೆಯ ಶಿರಸಿಯ ನಿವಾಸಿ ದಿವ್ಯಾ ಗೋಕರ್ಣ ತಾವೇ ಖುದ್ದಾಗಿ ಇಂಡಿಯಾ ಮೇಡ್ ಉತ್ಪನ್ನಗಳನ್ನು ಪ್ರಾರಂಭಿಸಿದ್ದಾರೆ. ಈಕೆ ಉತ್ಪಾದಿಸುತ್ತಿರೋ ಈ ಉತ್ಪನ್ನದ ಹೆಸರು ಕಾಂಫಿ ಕಪ್ ( ). ಮೆಡಿಕಲಿ ಅಪ್ರೂವ್ಡ್ ಸಿಲಿಕಾನ್‌ನಿಂದ ನಿರ್ಮಿಸಲ್ಪಟ್ಟ ಈ ಕಾಂಫಿ ಕಪ್, ಮಟ್ಟಿನ ಸಮಯದಲ್ಲಿ ಮಹಿಳೆಯರು ಧರಿಸಬಹುದಾದ ಆರೋಗ್ಯಕರ ಹಾಗೂ ಸುರಕ್ಷಿತ ಉತ್ಪನ್ನ. ಸಾಮಾನ್ಯವಾಗಿ ಒಂದು ತಿಂಗಳಲ್ಲಿ ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು, ಮಹಿಳೆಯರು () 10-12 ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ. ಪ್ರತೀ ತಿಂಗಳು ಇದಕ್ಕೆ ಅಷ್ಟೇ ಬೆಲೆ ಕೊಟ್ಟು ಖರೀದಿಸಬೇಕು. ಆದರೆ, ಕಾಂಫಿ ಕಪ್ ಒಂದು ಬಾರಿ ಖರೀದಿಸಿದರೆ ಸುಮಾರು 10 ವರ್ಷಗಳ ಕಾಲ ಉಪಯೋಗಿಸಬಹುದಾಗಿದೆ. 2019-2020ರಲ್ಲಿ ಈ ಕಾಂಫಿಕಪ್ ತಯಾರಿ ಬಗ್ಗೆ ಸಿದ್ಧತೆ ನಡೆಸುತ್ತಿದ್ದ ದಿವ್ಯಾ, ಕಳೆದ 3 ವರ್ಷಗಳಿಂದ ಇದನ್ನು ಬೆಂಗಳೂರಿನಲ್ಲಿ ತಮ್ಮ ಘಟಕದಲ್ಲಿ ತಯಾರಿಸಿ ಜನರಿಗೆ ಇದರ ಅಗತ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಈಗಾಗಲೇ ಸುಮಾರು 8 ಮಂದಿ ಮಹಿಳೆಯರು ಇವರಡಿಯಲ್ಲಿ ಕೆಲಸ ಮಾಡುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಮೆಡಿಕಲ್ ರೆಪ್ರೆಸೆಂಟೇಟಿವ್ಸ್ ಇವುಗಳನ್ನು ಮಾರಾಟ ಕೂಡಾ ಮಾಡುತ್ತಿದ್ದಾರೆ. ಇದನ್ನೂ ವೀಕ್ಷಿಸಿ:ಕೊರೊನಾ ಟೈಮ್‌ನಲ್ಲಿ ಕೈಕೊಟ್ಟ ಚಿಕ್ಕ ಕಿರಾಣಿ ಅಂಗಡಿ: ಯ್ಯೂಟೂಬ್ ವಿಡಿಯೋ ನೋಡಿ ರೊಟ್ಟಿ ಮಷಿನ್ ಖರೀದಿ !