ಕೋಟಿ ಕೋಟಿ ಎಲ್ಲ ಲೆಕ್ಕಕ್ಕೇ ಇಲ್ಲ ಇಲ್ಲಿ.. ಜಗತ್ತಿನಲ್ಲಿ ಗರಿಷ್ಠ ಗಳಿಕೆ ಮಾಡಿದ ಅಗ್ರ 10 ಸಿನಿಮಾಗಳಿವು..! : ಬಾಹುಬಲಿ, ಕೆಜಿಎಫ್‌ ಚಿತ್ರಗಳು ಸಾವಿರಗಟ್ಟಲೆ ಹಣವನ್ನು ಬಾಕ್ಸಾಫೀಸಲ್ಲಿ ಬಾಚಿಕೊಂಡಾಗ ಸಿನಿಮಾ ಉದ್ಯಮದವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಆದರೆ, ಜಗತ್ತಿನಲ್ಲಿ ಗರಿಷ್ಠ ಗಳಿಕೆ ಮಾಡಿದ ಅಗ್ರ 10 ಸಿನಿಮಾಗಳ ಪಟ್ಟಿಯಲ್ಲಿ ಭಾರತದ ಯಾವೊಂದು ಸಿನಿಮಾ ಕೂಡ ಸ್ಥಾನ ಪಡೆದುಕೊಂಡಿಲ್ಲ. : ಬಾಹುಬಲಿ, ಕೆಜಿಎಫ್‌ ಚಿತ್ರಗಳು ಸಾವಿರಗಟ್ಟಲೆ ಹಣವನ್ನು ಬಾಕ್ಸಾಫೀಸಲ್ಲಿ ಬಾಚಿಕೊಂಡಾಗ ಸಿನಿಮಾ ಉದ್ಯಮದವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಆದರೆ, ಜಗತ್ತಿನಲ್ಲಿ ಗರಿಷ್ಠ ಗಳಿಕೆ ಮಾಡಿದ ಅಗ್ರ 10 ಸಿನಿಮಾಗಳ ಪಟ್ಟಿಯಲ್ಲಿ ಭಾರತದ ಯಾವೊಂದು ಸಿನಿಮಾ ಕೂಡ ಸ್ಥಾನ ಪಡೆದುಕೊಂಡಿಲ್ಲ. ಸ್ಪೈಡರ್‌ ಮ್ಯಾನ್‌-ನೋ ವೇ ಹೋಮ್‌ (-: ): ಜಾನ್‌ ವಾಟ್ಸ್‌ ನಿರ್ದೇಶದನ ಅಮೆರಿಕದ ಸೂಪರ್‌ ಹಿರೋ ಸರಣಿಯ 'ಸ್ಪೈಡರ್‌ ಮ್ಯಾನ್‌-ನೋ ವೇ ಹೋಮ್‌' 2021ರ ಡಿಸೆಂಬರ್‌ 13 ರಂದು ಬಿಡುಗಡೆ ಕಂಡಿತ್ತು. ಇದು ವಿಶ್ವದಾದ್ಯಂತ 1,921,847,111 ಯುಎಸ್‌ ಡಾಲರ್‌ ಹಣ ಸಂಪಾದಿಸಿತ್ತು. ಭಾರತೀಯ ರೂಪಾಯಿಯಲ್ಲಿ ಈ ಮೊತ್ತ 15,986 ಕೋಟಿ ರೂಪಾಯಿಗಳು ಜುರಾಸಿಕ್‌ ವರ್ಲ್ಡ್‌ ( ): ಕಾಲಿನ್ ಟ್ರೆವೊರೊ ನಿರ್ದೇಶನದ ಸೈನ್ಸ್ ಫಿಕ್ಷನ್‌ ಆಕ್ಷನ್‌ ಚಿತ್ರ ಬಿಡುಗಡೆ ಕಂಡಿದ್ದು 2015ರಲ್ಲಿ. ಇಲ್ಲಿಯವರೆಗೂ ಈ ಚಿತ್ರ ಮಾಡಿರುವ ಕಮಾಯಿ 1,671,537,444 ಯುಎಸ್‌ ಡಾಲರ್‌. ಅಂದರೆ, 13,905 ಕೋಟಿ ರೂಪಾಯಿ.