ಡಾಲರ್‌ ಅವಲಂಬನೆ ತಗ್ಗಿಸಲು ಮಹತ್ವದ ಕ್ರಮ: ಮೊದಲ ಸಲ ರುಪಾಯಿಯಲ್ಲೇ ತೈಲ ಬಿಲ್‌ ಪಾವತಿಸಿದ ಭಾರತ ಭಾರತಕ್ಕೆ ಪ್ರಮುಖ ಇಂಧನ ರಫ್ತು ದೇಶವಾಗಿರುವ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ)ಗೆ ಇದೇ ಮೊದಲ ಬಾರಿಗೆ ರುಪಾಯಿಯಲ್ಲಿ ಭಾರತ ಕಚ್ಚಾತೈಲ ಖರೀದಿಗೆ ಪಾವತಿಯನ್ನು ಮಾಡಿದೆ ನವದೆಹಲಿ: ಭಾರತಕ್ಕೆ ಪ್ರಮುಖ ಇಂಧನ ರಫ್ತು ದೇಶವಾಗಿರುವ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ)ಗೆ ಇದೇ ಮೊದಲ ಬಾರಿಗೆ ರುಪಾಯಿಯಲ್ಲಿ ಭಾರತ ಕಚ್ಚಾತೈಲ ಖರೀದಿಗೆ ಪಾವತಿಯನ್ನು ಮಾಡಿದೆ. ಈ ಮೂಲಕ ಅಮೆರಿಕದ ಡಾಲರ್‌ ಮೇಲಿನ ಅವಲಂಬನೆಯನ್ನು ತಪ್ಪಿಸುವ ಮಹತ್ವದ ಹೆಜ್ಜೆ ಇರಿಸಲಾಗಿದೆ. ಅಬುಧಾಬಿಯ ನ್ಯಾಷನಲ್‌ ಆಯಿಲ್‌ ಕಂಪನಿಯಿಂದ ಖರೀದಿಸಲಾಗಿದ್ದ ಲಕ್ಷಾಂತರ ಬ್ಯಾರಲ್‌ ಕಚ್ಚಾತೈಲದ ಪಾವತಿಯನ್ನು ಭಾರತದ ಇಂಡಿಯನ್‌ ಆಯಿಲ್‌ () ರುಪಾಯಿಯಲ್ಲಿ ಮಾಡಿದೆ. ಈ ವಹಿವಾಟನ್ನು ಭಾರತದಲ್ಲಿರುವ ಯುಎಇಯ ()ರಾಯಭಾರ ಕಚೇರಿ ಖಚಿತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಭೇಟಿಯ ಸಮಯದಲ್ಲಿ ಸ್ಥಳೀಯ ಕರೆನ್ಸಿಗಳಲ್ಲೇ ವ್ಯವಹಾರ ನಡೆಸಲು ಉಭಯ ದೇಶಗಳು ಕಳೆದ ಜುಲೈನಲ್ಲಿ ಒಪ್ಪಂದ ಮಾಡಿಕೊಂಡಿದ್ದವು. ರಿಯಲ್‌ ಟೈಮ್‌ ಪೇಮೆಂಟ್‌ ( ) ಲಿಂಕ್‌ ಬಳಸಿ ವ್ಯವಹಾರ ನಡೆಸುವುದಕ್ಕೂ ಚಾಲನೆ ನೀಡಲಾಗಿತ್ತು. ಸ್ಥಳೀಯ ಕರೆನ್ಸಿಗಳಲ್ಲೇ ವಹಿವಾಟು ನಡೆಸುವ ಈ ವಿಧಾನವನ್ನು ಜಾಗತಿಕ ಮಾರಾಟದ ಈ ಸಂಕಷ್ಟದ ಸಮಯದಲ್ಲಿ ಮತ್ತಷ್ಟು ದೇಶಗಳು ಅಳವಡಿಸಿಕೊಳ್ಳುವ ಸಾಧ್ಯತೆಗಳಿವೆ. ಇದರ ಮೂಲಕ ಡಾಲರ್‌ನಲ್ಲಿ ನಡೆಯುತ್ತಿದ್ದ ವಿನಿಮಯಕ್ಕೆ ಇತಿಶ್ರೀ ಹಾಡಬಹುದಾಗಿದೆ. 2022-23ರಲ್ಲಿ ಉಭಯ ದೇಶಗಳ ನಡುವೆ ಸುಮಾರು 4.42 ಲಕ್ಷ ಕೋಟಿ ರು.ನಷ್ಟು ವ್ಯವಹಾರ ನಡೆದಿತ್ತು. ಕಚ್ಚಾ ತೈಲದ ಬೆಲೆ ಇಳಿದರೂ ಇಳಿ​ಯದ ಪೆಟ್ರೋಲ್‌, ಡೀಸೆಲ್‌ ಬೆಲೆ