ಕಾಲ್ ಸೆಂಟರ್ ಹುಡುಗಿಗೆ 300 ಕೋಟಿ ಸಾಲ ಕೇಳಿದ ಭೂಪ! ಮಾತು ಕೇಳಿದ್ರೆ ಬಿದ್ದು ಬಿದ್ದು ನಗ್ತೀರಾ ಕಾಲ್ ಸೆಂಟರ್ ನಿಂದ ಬರುವ ಕರೆ ರಿಸೀವ್ ಮಾಡಿ ನೀವು ಸುಸ್ತಾಗ್ತೀರಾ. ಎಷ್ಟೋ ಬಾರಿ ಬೈದು ಕರೆ ಇಟ್ಟಿರ್ತೀರಿ. ಆದ್ರೆ ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಳ್ತಾರೆ. ಈಗ ತಮಾಷೆ ಆಡಿಯೋ ಒಂದು ವೈರಲ್ ಆಗಿದೆ. ಹಲೋ.. ನಮಸ್ತೆ.. ನನ್ನ ಹೆಸರು ನಿಶಾ. ನಾನು ಬ್ಯಾಂಕ್‌ನಿಂದ ಕರೆ ಮಾಡ್ತಿದ್ದೇನೆ. ನಿಮಗೆ ಲೋನ್ ಬೇಕಾ ಸರ್/ ಮೇಡಂ…ಅಂತಾ ಕೇಳಿದಾಗ ನಾವೇನು ಹೇಳ್ತೇವೆ? ಬೇಕು ಅಂತಾ ಹೇಳೋರು ಬಹಳ ಅಪರೂಪ. ಬ್ಯುಸಿ ಇರಲಿ ಬಿಡಲಿ, ನಾನು ಬ್ಯುಸಿ ಅಂತಾ ಕಾಲ್ ಕಟ್ ಮಾಡ್ತೇವೆ. ಆದ್ರೆ ಕೆಲವರಿಗೆ ಸಿಕ್ಕಾಪಟ್ಟೆ ಪುರಸೊತ್ತಿರುತ್ತೆ. ಕರೆ ಮಾಡಿದವರ ತಲೆ ತಿನ್ನೋಕೆ ಅವರು ಸಿದ್ಧವಾಗಿರ್ತಾರೆ. ಇಲ್ಲೊಬ್ಬ ವ್ಯಕ್ತಿ ಕೂಡ ಅದೇ ಕೆಲಸ ಮಾಡಿದ್ದಾನೆ. ಸಾಲ ಬೇಕಾ ಅಂತಾ ಕೇಳಿದ್ರೆ ಹೌದು ಎಂದಿದ್ದಲ್ಲದೆ 300 ಕೋಟಿ ರೂಪಾಯಿಯನ್ನು ಟ್ರೈನ್ ಖರೀದಿ ಮಾಡೋಕೆ ಕೇಳಿದ್ದಾನೆ..! ಸಾಮಾಜಿಕ ಜಾಲತಾಣದಲ್ಲಿ ಈತನ ಆಡಿಯೋ () ವೈರಲ್ ಆಗಿದೆ. ಮೊದಲು ಸಿಬ್ಬಂದಿ ಹೆಸರಿನಲ್ಲಿ ಹುಡುಗಿಯೊಬ್ಬಳು ಕರೆ ಮಾಡ್ತಾಳೆ. ನಿಮಗೆ ಗೃಹ ಸಾಲ () ಅಥವಾ ಮನೆ ಸಾಲ ಬೇಕಾ ಅಂತಾ ಕೇಳ್ತಾಳೆ. ಅದಕ್ಕೆ ಗ್ರಾಹಕ () ಹೌದು ಎನ್ನುತ್ತಾನೆ. ಸಾಲ ಬೇಕು ಅಂತಾ ಹೇಳೋರೇ ಅಪರೂಪ. ಹಾಗಿರುವಾಗ ಸಾಲ ಬೇಕು ಎಂದವನನ್ನು ಕಾಲ್ ಸೆಂಟರ್ ಸಿಬ್ಬಂದಿ ಬಿಡೋದಿದ್ಯಾ? ಆಕೆ ತನ್ನ ಸಂಭಾಷಣೆ ಮುಂದುವರೆಸ್ತಾಳೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬ್ಯಾಂಕ್ ಸ್ಲಿಪ್, ಇದೆಂಥಾ ಹೀಗ್ ಬರೆದಿದ್ದು? ಯಾವುದಕ್ಕೆ ಸಾಲ ಬೇಕು ಅಂತಾ ಅವಳು ಕೇಳ್ತಾಳೆ. ಅದಕ್ಕೆ ಆತ ನೀಡಿದ ಉತ್ತರ ಕೇಳಿ ಆಕೆ ದಂಗಾಗುತ್ತಾಳೆ. ಮೊದಲು 300 ಕೋಟಿ ರೂಪಾಯಿ ಸಾಲಬೇಕು ಅಂತಾ ಈ ಯಪ್ಪ ಕೇಳೋದಾ? 300 ಕೋಟಿಯಾ..! ಯಾತಕ್ಕೆ ಎಂದು ಕಾಲ್ ಸೆಂಟರ್ ಉದ್ಯೋಗಿ ಕೇಳಿದ್ದಕ್ಕೆ ಟ್ರೈನ್ ಖರೀದಿ ಮಾಡೋಕೆ ಅಂತಾ ಗ್ರಾಹಕ ಉತ್ತರ ನೀಡ್ತಾನೆ. ಟ್ರೈನ್ ಖರೀದಿನಾ ಅಂತಾ ಅತ್ಯಾಶ್ಚರ್ಯದಿಂದ ಕೇಳುವ ಸಿಬ್ಬಂದಿ ಮೊದಲು ಯಾವಾಗಾದ್ರೂ ಸಾಲ ಪಡೆದಿದ್ದೀರಾ ಎಂದು ಕೇಳುತ್ತಾಳೆ. ಮೊದಲು ಯಾವಾಗ ಸಾಲ ಪಡೆದಿದ್ದೆ ಎಂಬ ಆತನ ಉತ್ತರ ಮತ್ತೂ ತಮಾಷೆಯಾಗಿದೆ. ಹೌದು ಎನ್ನುವ ವ್ಯಕ್ತಿ, ಸೈಕಲ್ ಖರೀದಿಗೆ ಸಾಲ ಪಡೆದಿದ್ದೆ ಎನ್ನುತ್ತಾನೆ. ಸೈಕಲ್ ಖರೀದಿಗೆ ಎಷ್ಟು ಸಾಲ ಅಂತಾ ಸಿಬ್ಬಂದಿ ಕೇಳಿದ್ರೆ 1600 ರೂಪಾಯಿ ಎಂದು ಈತ ಉತ್ತರ ನೀಡ್ತಾನೆ. ಮೋಸ್ಟ್ಲಿ ಚೇರ್ ಮೇಲೆ ಕುಳಿತಿದ್ದ ಹುಡುಗಿ ಬೆವತಿರಬೇಕು. ಆದ್ರೆ ಮುಂದೇನಾಯ್ತು ಅನ್ನೋದು ಈ ಕ್ಲಿಪ್ ನಲ್ಲಿ ಇಲ್ಲ. : ಮಗನ ನಾಲ್ಕು ಲಕ್ಷದ ಶೂ ನೋಡಿ ತಂದೆ ಶಾಕ್ ಈ ಆಡಿಯೋವನ್ನು dumbest_man1811 ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪಾರ್ಟ್ 2 ಬೇಕು ಅಂದ್ರೆ ಕಮೆಂಟ್ ಮಾಡಿ ಅಂತಾ ಶೀರ್ಷಿಕೆ ಹಾಕಲಾಗಿದೆ. ಇದಕ್ಕೆ ಇನ್ಸ್ಟಾಗ್ರಾಮ್ ಬಳಕೆದಾರರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಹೀಗೆ ಒಂದೆರಡು ಸಾರಿ ಮಾಡಿದ್ರೆ ಎಲ್ಲ ಬ್ಯಾಂಕ್ ನವರು ನಿಮ್ಮ ನಂಬರ್ ಬ್ಲಾಕ್ ಮಾಡ್ತಾರೆ ಅಂತಾ ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೆಷ್ಟು ಜನರಿಗೆ 300 ಕೋಟಿ ರೂಪಾಯಿ ಟ್ರೈನ್ ಖರೀದಿ ಮಾಡ್ಬೇಕು ಅಂತಾ ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ಟ್ರೈನ್ ಬದಲು ಖಾಸಗಿ ಜೆಟ್ ಖರೀದಿ ಮಾಡ್ಬಹುದಿತ್ತು ಎಂದು ಇನ್ನೊಬ್ಬರು ಸಲಹೆ ನೀಡಿದ್ರೆ ಮತ್ತೊಬ್ಬರು ನಿಮ್ಮ ಉತ್ತರ ನೋಡಿ ಸಿಬ್ಬಂದಿ ತನ್ನ ಕೆಲಸ ಬಿಟ್ಟಿರಬೇಕು ಎಂದಿದ್ದಾರೆ. ನನಗೂ ಐದು ರೂಪಾಯಿ ಸಾಲ ಪಡೆದು ಹೆಲಿಕಾಪ್ಟರ್ ಖರೀದಿ ಮಾಡ್ಬೇಕು ಅಂತಾ ಮತ್ತೊಬ್ಬರು ತಮಾಷೆ ಮಾಡಿದ್ರೆ, ಹೀರೋ ಸೈಕಲ್ ಗೆ ಲೋನ್ ಮಾಡಿದ್ದೀರಾ ಎಂದು ಬಳಕೆದಾರನೊಬ್ಬ ನಕ್ಕಿದ್ದಾನೆ. 1600 ರೂಪಾಯಿ ಸೈಕಲ್ ಖರೀದಿ ಮಾಡಿದ್ದೀರಿ ಅಂದಾದ್ರೆ ನೀವು ಶ್ರೀಮಂತರೇ ಬಿಡಿ ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ. 🙂 (@dumbest_man1811)