:ಆಗಸ್ಟ್ ತಿಂಗಳಲ್ಲಿ 14 ದಿನ ಬ್ಯಾಂಕ್ ರಜೆ; ಇಲ್ಲಿದೆ ನೋಡಿ ಆರ್ ಬಿಐ ಹಾಲಿಡೇ ಲಿಸ್ಸ್ ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ರಕ್ಷಾ ಬಂಧನ ಸೇರಿದಂತೆ ಅನೇಕ ಹಬ್ಬಗಳಿವೆ. ಹೀಗಾಗಿ ಬ್ಯಾಂಕ್ ಗಳು ವಾರದ ರಜೆಗಳು ಸೇರಿದಂತೆ ಒಟ್ಟು 14 ದಿನಗಳ ಕಾಲ ಕಾರ್ಯನಿರ್ವಹಿಸೋದಿಲ್ಲ. ನವದೆಹಲಿ (ಜು.26):ಪ್ರತಿ ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬ್ಯಾಂಕ್ ಗಳ ರಜಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಜುಲೈ ತಿಂಗಳು ಮುಕ್ತಾಯವಾಗುತ್ತ ಬಂದಿದ್ದು, ಆಗಸ್ಟ್ ತಿಂಗಳ ಬ್ಯಾಂಕ್ ಹಾಲಿಡೇ ಲಿಸ್ಟ್ ಅನ್ನು ಆರ್ ಬಿಐ ಬಿಡುಗಡೆ ಮಾಡಿದೆ. ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ರಕ್ಷಾ ಬಂಧನ ಸೇರಿದಂತೆ ಅನೇಕ ಹಬ್ಬಗಳಿವೆ. ಹೀಗಾಗಿ ವಾರದ ರಜೆಗಳು ಸೇರಿದಂತೆ ಒಟ್ಟು 14 ದಿನಗಳ ಕಾಲ ಕಾರ್ಯನಿರ್ವಹಿಸೋದಿಲ್ಲ. ರಜಾ ದಿನಗಳಂದು ಆನ್ ಲೈನ್ ವಹಿವಾಟುಗಳಿಗೆ ಯಾವುದೇ ಸಮಸ್ಯೆಯಿಲ್ಲ. ಇನ್ನು ಆರ್ ಬಿಐ ರಜಾಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ.ಆಯಾ ಪ್ರಾದೇಶಿಕ ಆಚರಣೆಗಳು ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಇನ್ನು ಎಲ್ಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ಬ್ಯಾಂಕ್ () ರಜೆಗಳನ್ನು () ಆರ್ ಬಿಐ () ಮೂರು ವರ್ಗಗಳನ್ನಾಗಿ ವಿಂಗಡಿಸಿದೆ.1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್​ ಕ್ಲೋಸಿಂಗ್ ರಜೆಗಳು ( ). ಆರ್ ಬಿಐ () ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ ( ), ಖಾಸಗಿ ವಲಯ ( ), ವಿದೇಶಿ ಬ್ಯಾಂಕುಗಳು ( ), ಕೋಆಪರೇಟಿವ್ ಬ್ಯಾಂಕುಗಳು (- ) ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ ( ) ಅನ್ವಯಿಸಲಿವೆ. ಚಲಾವಣೆಯಲ್ಲಿರುವ 2 ಸಾವಿರ ರೂ. ನೋಟುಗಳಲ್ಲಿ ಶೇ.76ರಷ್ಟು ಬ್ಯಾಂಕುಗಳಿಗೆ ವಾಪಸ್ ಆಗಸ್ಟ್ ತಿಂಗಳಲ್ಲಿ ಬ್ಯಾಂಕಿಗೆ ಭೇಟಿ ನೀಡಿಯೇ ಮಾಡಬೇಕಾದ ಯಾವುದಾದ್ರೂ ಕೆಲಸವಿದ್ರೆ ರಜಾಪಟ್ಟಿ ನೋಡಿಕೊಂಡು ಹೋಗೋದು ಉತ್ತಮ. ಸಾಲಗಳಿಗೆ ಸಂಬಂಧಿಸಿ ಅಥವಾ ಕ್ರೆಡಿಟ್ ಕಾರ್ಡ್ ವಿಚಾರವಾಗಿ ಬ್ಯಾಂಕ್ ಗೆ ಭೇಟಿ ನೀಡುವ ಅಗತ್ಯವಿರೋರು ರಜೆಗಳನ್ನು ಗಮನಿಸಿಕೊಂಡು ಹೋಗೋದು ಉತ್ತಮ. ಇನ್ನು 2 ಸಾವಿರ ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಸೆಪ್ಟೆಂಬರ್ 30ರ ತನಕ ಮಾತ್ರ ಕಾಲಾವಕಾಶ ನೀಡಲಾಗಿದೆ. ಹೀಗಾಗಿ ಆಗಸ್ಟ್ ತಿಂಗಳಲ್ಲಿ 2 ಸಾವಿರ ರೂಪಾಯಿ ನೋಟುಗಳನ್ನು ಖಾತೆಗೆ ಜಮೆ ಮಾಡಲು ಅಥವಾ ಬೇರೆ ಮುಖಬೆಲೆಯ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಬ್ಯಾಂಕಿಗೆ ಹೋಗಬೇಕಾದ ಅನಿವಾರ್ಯತೆಯಿದ್ರೆ ರಜಾಪಟ್ಟಿಯನ್ನು ನೋಡಿ ಪ್ಲ್ಯಾನ್ ಮಾಡಿ. ಇನ್ನು ರಜೆಯಿರುವ ದಿನ ಎಟಿಎಂ ಹಾಗೂ ಆನ್ ಲೈನ್ ವಹಿವಾಟುಗಳಿಗೆ ಯಾವುದೇ ಸಮಸ್ಯೆಯಿರೋದಿಲ್ಲ. ನಾಳೆಯೇ ರೈತರ ಬ್ಯಾಂಕ್‌ ಖಾತೆಗೆ ಬರಲಿದೆ ಪಿಎಂ ಕಿಸಾನ್‌ ಹಣ: ಇಲ್ಲಿದೆ ಚೆಕ್‌ ಮಾಡೋ ಲಿಂಕ್ ಆಗಸ್ಟ್ ತಿಂಗಳ ರಜಾಪಟ್ಟಿ ಹೀಗಿದೆ:ಆಗಸ್ಟ್ 6:ಭಾನುವಾರಆಗಸ್ಟ್ 8:ಟೆಂಡೊಂಗ್ ಲೊ ರಮ್ ಫಾತ್ (ಗ್ಯಾಂಗ್ಟಕ್ ನಲ್ಲಿ ಬ್ಯಾಂಕ್ ಗಳಿಗೆ ರಜೆ)ಆಗಸ್ಟ್ 12:ಎರಡನೇ ಭಾನುವಾರಆಗಸ್ಟ್ 13:ಭಾನುವಾರಆಗಸ್ಟ್ 15:ಸ್ವಾತಂತ್ರ್ಯ ದಿನಾಚರಣೆಆಗಸ್ಟ್ 16:ಪಾರ್ಸಿ ಹೊಸ ವರ್ಷ ( ಬೆಲ್ಪುರ್, ಉಂಬೈ ಹಾಗೂ ನಾಗ್ಪುರದಲ್ಲಿ ಬ್ಯಾಂಕ್ ಗಳಿಗೆ ರಜೆ)ಆಗಸ್ಟ್ 18: ಶ್ರೀಮಂತ ಶಂಕರ್ ದೇವ್ ತಿಥಿ (ಗುವಾಹಟಿಯಲ್ಲಿ ರಜೆ)ಆಗಸ್ಟ್ 20:ಭಾನುವಾರಆಗಸ್ಟ್ 26:ಶನಿವಾರಆಗಸ್ಟ್ 27:ಭಾನುವಾರಆಗಸ್ಟ್ 28:ಮೊದಲ ಓಣಂಆಗಸ್ಟ್ 29:ಥಿರುಓಣಂಆಗಸ್ಟ್ 30:ರಕ್ಷಾ ಬಂಧನ್ಆಗಸ್ಟ್ 31:ರಕ್ಷಾ ಬಂಧನ್ /ಶ್ರೀ ನಾರಾಯಣ ಗುರು ಜಯಂತಿ/ ಪಂಗ್ ಲಾಬ್ಸೊಲ್ (ಗ್ಯಾಂಗ್ಟಕ್, ಡೆಹ್ರಾಡೂನ್, ಕಾನ್ಪುರ್, ಕೊಚ್ಚಿ, ಲಖ್ನೋ ಹಾಗೂ ತಿರುವನಂತಪುರಂನಲ್ಲಿ ರಜೆ)