: ಜುಲೈನಲ್ಲಿ 15 ದಿನ ಬ್ಯಾಂಕ್ ರಜೆ; ರಜಾಪಟ್ಟಿ ಹೀಗಿದೆ.. ಪ್ರತಿ ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಆ ತಿಂಗಳಿಗೆ ಸಂಬಂಧಿಸಿ ಆರ್ ಬಿಐ ರಜಾಪಟ್ಟಿ ಬಿಡುಗಡೆ ಮಾಡುತ್ತದೆ.ಅದರಂತೆ ಜುಲೈ ತಿಂಗಳ ಬ್ಯಾಂಕ್ ರಜಾಪಟ್ಟಿಯನ್ನು ಆರ್ ಬಿಐ ಬಿಡುಗಡೆ ಮಾಡಿದೆ.ಹಾಗಾದ್ರೆ ಜುಲೈ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕ್ ಕಾರ್ಯನಿರ್ವಹಿಸೋದಿಲ್ಲ? ಇಲ್ಲಿದೆ ಮಾಹಿತಿ. ನವದೆಹಲಿ (ಮೇ 25):ಜೂನ್ ತಿಂಗಳು ಮುಕ್ತಾಯಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಪ್ರತಿ ಹೊಸ ತಿಂಗಳ ಪ್ರಾರಂಭಕ್ಕೂ ಮುನ್ನ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಅದರಂತೆ ಆರ್ ಬಿಐ ಜುಲೈ ತಿಂಗಳ ರಜಾಪಟ್ಟಿ ಬಿಡುಗಡೆ ಮಾಡಿದೆ. ಜುಲೈ ತಿಂಗಳಲ್ಲಿ ನಿಮಗೆ ಬ್ಯಾಂಕಿಗೆ ಭೇಟಿ ನೀಡುವ ಕೆಲಸವಿದ್ದರೆ ಈ ರಜಾಪಟ್ಟಿ ನೋಡಿಕೊಂಡು ಹೋಗುವುದು ಉತ್ತಮ. ಜುಲೈ ತಿಂಗಳಲ್ಲಿ ವಾರದ ರಜೆಗಳು ಸೇರಿದಂತೆ ಬ್ಯಾಂಕ್ ಗೆ ಒಟ್ಟು 15 ದಿನಗಳ ಕಾಲ ರಜೆ ನೀಡಲಾಗಿದೆ. ರಜಾ ದಿನಗಳಂದು ಆನ್ ಲೈನ್ ವಹಿವಾಟುಗಳಿಗೆ ಯಾವುದೇ ಸಮಸ್ಯೆಯಿಲ್ಲ. ಇನ್ನು ಆರ್ ಬಿಐ ರಜಾಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ.ಆಯಾ ಪ್ರಾದೇಶಿಕ ಆಚರಣೆಗಳು ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಇನ್ನು ಎಲ್ಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ಬ್ಯಾಂಕ್ () ರಜೆಗಳನ್ನು () ಆರ್ ಬಿಐ () ಮೂರು ವರ್ಗಗಳನ್ನಾಗಿ ವಿಂಗಡಿಸಿದೆ.1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್​ ಕ್ಲೋಸಿಂಗ್ ರಜೆಗಳು ( ). ಆರ್ ಬಿಐ () ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ ( ), ಖಾಸಗಿ ವಲಯ ( ), ವಿದೇಶಿ ಬ್ಯಾಂಕುಗಳು ( ), ಕೋಆಪರೇಟಿವ್ ಬ್ಯಾಂಕುಗಳು (- ) ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ ( ) ಅನ್ವಯಿಸಲಿವೆ. ಭಾರತೀಯರ ಸ್ವಿಸ್‌ ಬ್ಯಾಂಕ್‌ ಠೇವ​ಣಿ 30 ಸಾವಿರ ಕೋಟಿ ರು.ಗೆ ಇಳಿ​ಕೆ: ಭಾರ​ತದ ಜಿಡಿಪಿ ದರ ಶೇ.6.3 ಬ್ಯಾಂಕುಗಳಿಗೆ () ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ ( ) ಹಾಗೂ ಎಟಿಎಂ ವ್ಯವಹಾರಗಳಿಗೆ ( ) ಯಾವುದೇ ತೊಂದರೆಯಾಗೋದಿಲ್ಲ. ಆದರೆ, ಬ್ಯಾಂಕಿಗೆ () ಹೋಗಿಯೇ ಮಾಡಬೇಕಾದ ಯಾವುದಾದ್ರೂ ಕೆಲಸವಿದ್ರೆ ಮಾತ್ರ ಮುಂದೂಡುವುದು ಉತ್ತಮ. ಕೆಲವೊಮ್ಮೆ ಮನೆ () ಅಥವಾ ನಿವೇಶನ , ಕಾರ್ () ಖರೀದಿಗೆ () ಏನಾದ್ರೂ ಪ್ಲ್ಯಾನ್ ಮಾಡಿದ್ರೆ ಸಾಲ ಪ್ರಕ್ರಿಯೆಗೆ ಸಂಬಂಧಿಸಿ ಬ್ಯಾಂಕಿಗೆ ಭೇಟಿ ನೀಡಬೇಕಾದ ಅನಿವಾರ್ಯತೆ ಇರುತ್ತದೆ. ಹಾಗೆಯೇ ಬ್ಯಾಂಕ್ ಗಳಲ್ಲಿ ಎಫ್ ಡಿ () ಮಾಡಿಸಲು ಅಥವಾ ಇನ್ಯಾವುದೋ ಹೂಡಿಕೆ () ಯೋಜನೆಗಳಲ್ಲಿ ಹಣ ತೊಡಗಿಸುವ ಯೋಚನೆ ಮಾಡಿದ್ರು ಕೂಡ ಬ್ಯಾಂಕಿಗೆ ಹೋಗಬೇಕಾದ ಸಂದರ್ಭ ಎದುರಾಗುತ್ತದೆ. ಹೀಗಾಗಿ ಯಾವೆಲ್ಲ ದಿನ ರಜೆಯಿರುತ್ತದೆ ಎಂಬುದನ್ನು ಮೊದಲೇ ಗಮನಿಸಿ ಆ ಬಳಿಕ ಭೇಟಿ ನೀಡುವ ಪ್ಲ್ಯಾನ್ () ಮಾಡೋದು ಉತ್ತಮ. : ಖಾತೆಯೊಂದು, ಮೂರು ಲಾಭ ನೀಡುವ ಈ ಖಾತೆ ವಿಶೇಷವೇನು? ಜುಲೈ ತಿಂಗಳ ರಜಾಪಟ್ಟಿ ಹೀಗಿದೆ:ಜುಲೈ 2:ಭಾನುವಾರಜುಲೈ 5:ಗುರು ಹರ್ಗೋವಿಂದ್ ಸಿಂಗ್ ಜಯಂತಿ (ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕ್ ಮುಚ್ಚಿರುತ್ತದೆ)ಜುಲೈ 6:ಮಿಜೋ ಮಿಚ್ಚೆ ಇನ್ ಸುಹ್ಖಹಂ ಪೌಲ್ ()ದಿನ (ಮಿಜೋರಂನಲ್ಲಿ ಬ್ಯಾಂಕ್ ರಜೆ)ಜುಲೈ 8:ಎರಡನೇ ಶನಿವಾರಜುಲೈ 9:ಭಾನುವಾರಜುಲೈ 11:ಕೆರ್ ಪೂಜಾ (ತ್ರಿಪುರದಲ್ಲಿ ಬ್ಯಾಂಕುಗಳಿಗೆ ರಜೆ)ಜುಲೈ 13:ಭಾನು ಜಯಂತಿ (ಸಿಕ್ಕಿಂನಲ್ಲಿ ಬ್ಯಾಂಕುಗಳಿಗೆ ರಜೆ)ಜುಲೈ 16:ಭಾನುವಾರಜುಲೈ 17:ಯು ತಿರೋಟ್ ಸಿಂಗ್ ಡೇ (ಮೇಘಾಲಯದಲ್ಲಿ ಬ್ಯಾಂಕಿಗೆ ರಜೆ)ಜುಲೈ 21:ದ್ರುಕ್ಪ ಶೀ ಝಿ (ಸಿಕ್ಕಿಂನಲ್ಲಿ ಬ್ಯಾಂಕ್ ಗಳಿಗೆ ರಜೆ)ಜುಲೈ 22:ನಾಲ್ಕನೇ ಶನಿವಾರಜುಲೈ 23:ಭಾನುವಾರಜುಲೈ 28:ಅಶೂರ (ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕುಗಳಿಗೆ ರಜೆ)ಜುಲೈ 29:ಮೊಹರಂ (ತಜಿಯಾ)ಜುಲೈ 30:ಭಾನುವಾರ