ಕಚ್ಚಾ ತೈಲದ ಬೆಲೆ ಇಳಿದರೂ ಇಳಿ​ಯದ ಪೆಟ್ರೋಲ್‌, ಡೀಸೆಲ್‌ ಬೆಲೆ ಅಂತಾರಾಷ್ಟ್ರೀಯವಾಗಿ ಕಚ್ಚಾತೈಲದ ಬೆಲೆ ಇಳಿಕೆಯಾದರೂ ಸಹ ಭಾರತದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳ ಇಳಿ​ಕೆ ಮತ್ತಷ್ಟು ವಿಳಂಬವಾಗಲಿದೆ. ತೈಲ ಕಂಪ​ನಿ​ಗ​ಳು ಕಳೆದ ವರ್ಷದ ನಷ್ಟ ತುಂಬಿಕೊಳ್ಳುವವರೆಗೂ ಬೆಲೆ ಇಳಿಕೆಯಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ನವದೆಹಲಿ: ಅಂತಾರಾಷ್ಟ್ರೀಯವಾಗಿ ಕಚ್ಚಾತೈಲದ ಬೆಲೆ ಇಳಿಕೆಯಾದರೂ ಸಹ ಭಾರತದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳ ಇಳಿ​ಕೆ ಮತ್ತಷ್ಟು ವಿಳಂಬವಾಗಲಿದೆ. ತೈಲ ಕಂಪ​ನಿ​ಗ​ಳು ಕಳೆದ ವರ್ಷದ ನಷ್ಟ ತುಂಬಿಕೊಳ್ಳುವವರೆಗೂ ಬೆಲೆ ಇಳಿಕೆಯಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ವರ್ಷ ಕಚ್ಚಾ ತೈಲದ ( ) ಬೆಲೆ ಬ್ಯಾರೆಲ್‌ 139 ಡಾಲರ್‌ ಇತ್ತು. ಇದೀಗ ಅದು 75ರಿಂದ 76 ಡಾಲರ್‌ಗೆ ಇಳಿಕೆಯಾಗಿದೆ. ಕಚ್ಚಾತೈಲ ಬೆಲೆ ಏರಿದ್ದ ಸಮಯದಲ್ಲಿ ಮಾರಾಟಗಾರರು ಪೆಟ್ರೋಲ್‌ಗೆ ಲೀಟರ್‌ಗೆ 17.4 ಮತ್ತು ಡೀಸೆಲ್‌ಗೆ 27.7 ರು. ನಷ್ಟ ಅನುಭವಿಸಿದ್ದವು. ಆದರೆ ಕಚ್ಚಾ​ತೈಲ ಬೆಲೆ ಇಳಿ​ಯು​ತ್ತಿ​ದ್ದಂತೆಯೇ ಕಳೆದ ವರ್ಷದ ಅಕ್ಟೋ​ಬರ್‌-ಡಿಸೆಂಬ​ರ್‌ ತ್ರೈಮಾ​ಸಿ​ಕ​ದಲ್ಲಿ ಪೆಟ್ರೋಲ್‌ ಮೇಲೆ ಲೀಟ​ರ್‌ಗೆ 10 ರು. ಲಾಭ​ವನ್ನು ತೈಲ ಕಂಪ​ನಿ​ಗಳು ( ) ಗಳಿ​ಸಿ​ದವು. ಆದರೆ ಡೀಸೆಲ್‌ ಮೇಲೆ ಲೀಟ​ರ್‌ಗೆ 6.5 ರು. ನಷ್ಟ ಅನು​ಭ​ವಿ​ಸು​ತ್ತಲೇ ಇದ್ದವು. ನಂತ​ರದ ತ್ರೈಮಾ​ಸಿ​ಕ​ದ​ಲ್ಲಿ ಪೆಟ್ರೋಲ್‌ ಲಾಭ 6.8 ರು.ಗೆ ಕುಸಿ​ದರೆ ಡೀಸೆಲ್‌ ಮೇಲೆ ಲೀಟ​ರ್‌ಗೆ 50 ಪೈಸೆ ಲಾಭ ಮಾಡಿ​ಕೊಂಡ​ವು. ಆ​ದರೆ ಈಗ ಕಚ್ಚಾಬೆಲೆ ಸತ​ವಾಗಿ ಇಳಿ​ಯು​ತ್ತಿ​ದ್ದರೂ ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌ ( ), ಭಾರತ್‌ ಪೆಟ್ರೋಲಿಯಂ ಕಾರ್ಪೋರೇಶನ್‌ ಲಿ. ( )ಮತ್ತು ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೋರೇಶನ್‌ ಲಿ. ಸಂಸ್ಥೆಗಳು ( ) ಸುಮಾರು 1 ವರ್ಷದಿಂದ ದೈನಂದಿನ ಆಧಾರದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪರಿಷ್ಕರಣೆ ಮಾಡಿಲ್ಲ. ರಷ್ಯಾದಿಂದ ಭಾರತ ದಾಖಲೆಯ ಕಚ್ಚಾ ತೈಲ ಆಮದು ಇದಕ್ಕೆ ಕಾರಣ ನೀಡಿ​ರುವ ಅಧಿ​ಕಾ​ರಿ​ಗಳು, ‘ಕಳೆದ ವರ್ಷ ಕಚ್ಚಾ ತೈಲದ ಬೆಲೆ ಇಂಧನ ಮಾರಾಟ ಬೆಲೆಗಿಂತ ಹೆಚ್ಚಿದ್ದರೂ ಸಹ ಈ ಸಂಸ್ಥೆಗಳು ಬೆಲೆ ಏರಿಕೆ ಮಾಡಿರಲಿಲ್ಲ. ಹೀಗಾಗಿ ಈಗ ಈ ನಷ್ಟವನ್ನು ತುಂಬಿಕೊಳ್ಳುವ ಸಲುವಾಗಿ ಬೆಲೆ ಪರಿಷ್ಕರಣೆ ಮಾಡಲಾಗುತ್ತಿಲ್ಲ. ಇದರಲ್ಲಿ 3 ಕಂಪನಿಗಳು ಈಗಾಗಲೇ ಪೆಟ್ರೋಲ್‌ ಮಾರಾಟದಲ್ಲಿ ಲಾಭದಲ್ಲಿವೆ. ಆದರೆ ಡೀಸೆ​ಲ್‌ ಮಾರಾ​ಟ​ದ​ಲ್ಲಿ​ ಸಾಕಷ್ಟು ನಷ್ಟ ಅನು​ಭ​ವಿ​ಸಿದ್ದು, ಈಗ ನಷ್ಟವೂ ಇಲ್ಲ, ಲಾಭವೂ ಇಲ್ಲ ಎಂಬ ಸ್ಥಿತಿಗೆ ಬಂದಿವೆ. ಹೀಗಾ​ಗಿ ಈಗಿ​ನ ಲಾಭದ ಹಣ​ವನ್ನು ಡೀಸೆಲ್‌ನ ಹಿಂದಿ​ನ ನಷ್ಟ ತುಂಬಿಕೊಳ್ಳಲು ಬಳಕೆ ಮಾಡಲಾಗುತ್ತಿದೆ. ಬೆಲೆ ಮತ್ತಷ್ಟು ಸ್ಥಿರ​ವಾ​ದರೆ ಮುಂದೆ ಬೆಲೆ ಪರಿ​ಷ್ಕ​ರಣೆ ಮಾಡ​ಬ​ಹುದು ಎಂದಿದ್ದಾ​ರೆ. ಮುಂದಿನ ತ್ರೈಮಾಸಿಕದಲ್ಲಿ ಪೆಟ್ರೋಲ್ ಬೆಲೆ ಇಳಿಕೆ ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಇಳಿಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ತ್ರೈಮಾಸಿಕದ ವೇಳೆಗೆ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಇಳಿಯಬಹುದು ಎಂಬ ಸುಳಿವನ್ನು ಕೇಂದ್ರ ಸರ್ಕಾರ ( )ನೀಡಿದೆ. ಕಚ್ಚಾ ತೈಲ ದರ ಇದೇ ಸ್ಥಿತಿ ಕಾಯ್ದುಕೊಂಡರೆ ಹಾಗೂತೈಲ ಕಂಪನಿಗಳು ಮುಂದಿನ ದಿನಗಳಲ್ಲಿ ಪೆಟ್ರೋಲ್ ಡಿಸೇಲ್ ಮಾರಾಟದಲ್ಲಿ ಲಾಭ ಮಾಡಿಕೊಂಡರೆ ಆಗ ಕಂಪನಿಗಳು ದರ ಪರಿಶೀಲನೆ ಮಾಡಬಹುದು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರಿದೀಪ್ ಪುನಿಯಾ ಹೇಳಿದ್ದಾರೆ. ಉಕ್ರೇನ್- ರಷ್ಯಾ ಯುದ್ಧ, ಜಾಗತಿಕ ಮಟ್ಟದಲ್ಲಿ ಕೋಲಾಹಲ!