ಕ್ರೆಡಿಟ್ ಕಾರ್ಡ್ ಬಳಸಿ ಗೂಗಲ್ ಪೇ ಮೂಲಕ ಪಾವತಿ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ ಯುಪಿಐ ಇಂದು ಜನಪ್ರಿಯ ಪಾವತಿ ವಿಧಾನವಾಗಿದೆ.ಅನೇಕ ಪಾವತಿ ಗೇಟ್ ವೇಗಳ ಮೂಲಕ ಯುಪಿಐ ಪಾವತಿ ಮಾಡಬಹುದಾಗಿದೆ. ಅವುಗಳಲ್ಲಿ ಗೂಗಲ್ ಪೇ ಕೂಡ ಒಂದು. ಇದು ಬಳಕೆದಾರರಿಗೆ ತಮ್ಮ ಬ್ಯಾಂಕ್ ಖಾತೆ, ಡೆಬಿಟ್ ಕಾರ್ಡ್ ಬಳಸಿ ಯಪಿಐ ಪಾವತಿಗಳನ್ನು ಮಾಡಲು ಅವಕಾಶ ನೀಡುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಆಯ್ದ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ಕೂಡ ಗೂಗಲ್ ಪೇ ಮೂಲಕ ಯುಪಿಐ ಪಾವತಿಗಳನ್ನು ಮಾಡಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಅದು ಹೇಗೆ? ಇಲ್ಲಿದೆ ಮಾಹಿತಿ. :ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ) ಸಾಕಷ್ಟು ಜಪ್ರಿಯತೆ ಗಳಿಸಿದೆ. ಸರಕುಗಳು ಹಾಗೂ ಸೇವೆಗಳಿಗೆ ಪಾವತಿ ಮಾಡಲು ಇದು ಸುಲಭ ಹಾಗೂ ಸುರಕ್ಷಿತ ವಿಧಾನವಾಗಿದೆ. ಅನೇಕ ಜನಪ್ರಿಯ ಪಾವತಿ ಗೇಟ್ ವೇಗಳು ಈಗ ಲಭ್ಯವಿವೆ. ಇವುಗಳಲ್ಲಿ ಗೂಗಲ್ ಪೇ ಕೂಡ ಒಂದು. ಇದು ಬಳಕೆದಾರರಿಗೆ ತಮ್ಮ ಬ್ಯಾಂಕ್ ಖಾತೆ, ಡೆಬಿಟ್ ಕಾರ್ಡ್ ಬಳಸಿ ಯಪಿಐ ಪಾವತಿಗಳನ್ನು ಮಾಡಲು ಅವಕಾಶ ನೀಡುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಆಯ್ದ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ಕೂಡ ಗೂಗಲ್ ಪೇ ಮೂಲಕ ಯುಪಿಐ ಪಾವತಿಗಳನ್ನು ಮಾಡಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ. ಭಾರತದ ರಾಷ್ಟ್ರೀಯ ಪಾವತಿಗಳ ನಿಗಮ (ಎನ್ ಪಿಸಿಐ) ಪ್ರಾರಂಭದಲ್ಲಿ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಯುಪಿಐ ಪಾವತಿಗಳನ್ನು ಮಾಡಲು ಬಳಕೆದಾರರಿಗೆ ಅವಕಾಶ ನೀಡಿತ್ತು. ಇತ್ತೀಚೆಗೆ ಇದು ಗೂಗಲ್ ಪೇ ಸಹಯೋಗದಲ್ಲಿ ಯುಪಿಐ ಜೊತೆಗೆ ರುಪೇ ಕ್ರೆಡಿಟ್ ಕಾರ್ಡ್ ಗಳನ್ನು ಸಮನ್ವಯಗೊಳಿಸಿದೆ. ಈ ಮೂಲಕ ವ್ಯಾಪಾರಿಗಳ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿಗಳನ್ನು ಮಾಡಲು ಬಳಕೆದಾರರಿಗೆ ಅವಕಾಶ ನೀಡಿದೆ. ಅಲ್ಲದೆ, ಈ ಪಾವತಿಗಳಿಗೆ ಬಳಕೆದಾರರು ಕ್ರೆಡಿಟ್ ಕಾರ್ಡ್ ಅನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋಗಬೇಕಾದ ಅಗತ್ಯ ಕೂಡ ಇಲ್ಲ. ಈ ಸೇವೆ ಯಾವೆಲ್ಲ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಳಿಗೆ ಲಭ್ಯ?ಆಕ್ಸಿಸ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ), ಕೋಟಕ್ ಮಹೀಂದ್ರ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಂತಹ ಪ್ರಮುಖ ಬ್ಯಾಂಕ್ ಗಳ ಎಲ್ಲ ರುಪೇ ಕ್ರೆಡಿಟ್ ಕಾರ್ಡ್ ಬಳಕೆದಾರರು ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದು ರುಪೇ ಮಾಹಿತಿ ನೀಡಿದೆ. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಬ್ಯಾಂಕ್ ಗಳುಈ ಹೊಸ ಸೇವೆಯನ್ನು ಅನುಷ್ಠಾನಕ್ಕೆ ತರಲಿವೆ ಎಂದು ಗ್ರಾಹಕರಿಗೆ ರುಪೇ ಭರವಸೆ ನೀಡಿದೆ. ಹೀಗಾಗಿ ನಿಮ್ಮ ಬಳಿ ಮೇಲೆ ಹೇಳಿದ ಯಾವುದೇ ಬ್ಯಾಂಕ್ ನ ರುಪೇ ಕ್ರೆಡಿಟ್ ಕಾರ್ಡ್ ಇದ್ದರೆ, ಅದನ್ನು ನೀವು ಗೂಗಲ್ ಪೇಗೆ ಲಿಂಕ್ ಮಾಡುವ ಮೂಲಕ ಪಾವತಿಗಳನ್ನು ಮಾಡಬಹುದು. ವಿಶ್ವ ಡಿಜಿಟಲ್ ಪೇಮೆಂಟ್‌ನಲ್ಲಿ ಭಾರತಕ್ಕೆ ಮೊದಲ ಸ್ಥಾನ, 2022ರಲ್ಲಿ 89.5 ಮಿಲಿಯನ್ ಟ್ರಾನ್ಸಾಕ್ಷನ್! ಗೂಗಲ್ ಪೇನಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಹೇಗೆ?ಹಂತ 1:ನಿಮ್ಮ ಗೂಗಲ್ ಪೇ ಖಾತೆಗೆ ರುಪೇ ಕ್ರೆಡಿಟ್ ಕಾರ್ಡ್ ಸೇರ್ಪಡೆಗೊಳಿಸಿ.*ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಗೂಗಲ್ ಪೇ ಅಪ್ಲಿಕೇಷನ್ ತೆರೆಯಿರಿ.*ಈಗ ಸೆಟ್ಟಿಂಗ್ ಮೆನುಗೆ ತೆರಳಿ.*' ' ಮೇಲೆ ಕ್ಲಿಕ್ ಮಾಡಿ. ಆ ಬಳಿಕ ' ' ಆಯ್ಕೆ ಮಾಡಿ.*ನಿಮ್ಮ ರುಪೇ ಕ್ರೆಡಿಟ್ ಕಾರ್ಡ್ ನ ಕೊನೆಯ ಆರು ಅಂಕೆಗಳು, ಗಡುವು ದಿನಾಂಕ ( ) ಹಾಗೂ ಪಿನ್ ನಮೂದಿಸಿ. ಆಧಾರ್ ಬಳಸಿ ಸಕ್ರಿಯಗೊಳಿಸಲು ಅವಕಾಶ;ಬಳಕೆದಾರರಿಗೆ ಹೊಸ ಸೌಲಭ್ಯ ಕಲ್ಪಿಸಿದ ಗೂಗಲ್ ಪೇ ಹಂತ 2:ಯುಪಿಐನಲ್ಲಿ ರುಪೇ ಕ್ರೆಡಿಟ್ ಕಾರ್ಡ್ ಸಕ್ರಿಯಗೊಳಿಸಿ ಹಾಗೂ ಅದನ್ನು ಬಳಸಿ.*ನಿಮ್ಮ ಕಾರ್ಡ್ ಸಕ್ರಿಯಗೊಳಿಸಲು ಗೂಗಲ್ ಪೇ ಅಪ್ಲಿಕೇಷನ್ ನಲ್ಲಿ ನಿಮ್ಮ ಪ್ರೊಫೈಲ್ ನಲ್ಲಿರುವ ' 'ಮೇಲೆ ಕ್ಲಿಕ್ ಮಾಡಿ.*ನಿಮಗೆ ರುಪೇ ಕ್ರೆಡಿಟ್ ಕಾರ್ಡ್ ನೀಡಿರುವ ಬ್ಯಾಂಕ್ ಆಯ್ಕೆ ಮಾಡಿ.*ನಿಮ್ಮ ರುಪೇ ಕ್ರೆಡಿಟ್ ಕಾರ್ಡ್ ಗೆ ವಿಶಿಷ್ಟ ಯುಪಿಐ ಪಿನ್ ಸೆಟ್ ಮಾಡಿ.*ನಿಮ್ಮ ರುಪೇ ಕ್ರೆಡಿಟ್ ಕಾರ್ಡ್ ಈಗ ಯುಪಿಐ ಪಾವತಿಗಳನ್ನು ಮಾಡಲು ಸಿದ್ಧವಾಗಿದೆ.*ವ್ಯಾಪಾರಿ ಪಾವತಿ ಇಂಟರ್ ಫೇಸ್ ನಲ್ಲಿ ಯುಪಿಐ ಅನ್ನು ಪಾವತಿ ಆಯ್ಕೆಯಾಗಿ ಆರಿಸಿ.*ಯುಪಿಐ ಐಡಿ ನಮೂದಿಸಿ ಅಥವಾ ವ್ಯಾಪಾರಿ ನೀಡಿರುವ ಕ್ಯುಆರ್ ಕೋಡ್ ನಮೂದಿಸಿ.*ಪಾವತಿ ಮೊತ್ತವನ್ನು ದೃಢೀಕರಿಸಿ. ನಿಮ್ಮ ಯುಪಿಐ ಪಿನ್ ನಮೂದಿಸಿ ಹಾಗೂ ವಹಿವಾಟು ಪೂರ್ಣಗೊಳಿಸಿ.