ಸಗಟು ಹಣದುಬ್ಬರ ಸೂಚ್ಯಂಕ ಶೇ.1.34ಕ್ಕಿಳಿಕೆ: 29 ತಿಂಗಳಲ್ಲೇ ಕನಿಷ್ಠ ಮಾರ್ಚ್ ತಿಂಗಳ ಸಗಟು ದರ ಆಧರಿತ ಹಣದುಬ್ಬರ ಸೂಚ್ಯಂಕವು ಶೇ.1.34ಕ್ಕೆ ಇಳಿಕೆಯಾಗಿದೆ. ಇದು ಕಳೆದ 29 ತಿಂಗಳಲ್ಲೇ ಕನಿಷ್ಠ ಪ್ರಮಾಣವಾಗಿದೆ. ಜೊತೆಗೆ ಸತತ 10ನೇ ತಿಂಗಳು ಹಣದುಬ್ಬರ ಇಳಿಕೆಯ ಹಾದಿಯಲ್ಲಿ ಸಾಗಿದಂತಾಗಿದೆ. ಈ ಮೂಲಕ ಭಾರೀ ಹಣದುಬ್ಬರದ ಆತಂಕದಿಂದ ಸರ್ಕಾರ ಪಾರಾಗುವಂತಾಗಿದೆ. ನವದೆಹಲಿ: ಮಾರ್ಚ್ ತಿಂಗಳ ಸಗಟು ದರ ಆಧರಿತ ಹಣದುಬ್ಬರ ಸೂಚ್ಯಂಕವು ಶೇ.1.34ಕ್ಕೆ ಇಳಿಕೆಯಾಗಿದೆ. ಇದು ಕಳೆದ 29 ತಿಂಗಳಲ್ಲೇ ಕನಿಷ್ಠ ಪ್ರಮಾಣವಾಗಿದೆ. ಜೊತೆಗೆ ಸತತ 10ನೇ ತಿಂಗಳು ಹಣದುಬ್ಬರ ಇಳಿಕೆಯ ಹಾದಿಯಲ್ಲಿ ಸಾಗಿದಂತಾಗಿದೆ. ಈ ಮೂಲಕ ಭಾರೀ ಹಣದುಬ್ಬರದ ಆತಂಕದಿಂದ ಸರ್ಕಾರ ಪಾರಾಗುವಂತಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ( ) ಸೋಮವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಅನ್ವಯ, ಮಾರ್ಚ್‌ ತಿಂಗಳ ಸಗಟುದರ ಆಧರಿತ ಹಣದುಬ್ಬರ () ಸೂಚ್ಯಂಕ ಶೇ.1.34ರಷ್ಟಿತ್ತು. ಇದು 29 ತಿಂಗಳಲ್ಲೇ ಕನಿಷ್ಠ. 2023ರ ಫೆಬ್ರವರಿಯಲ್ಲಿ ಈ ಪ್ರಮಾಣವು ಶೇ.3.85ರಷ್ಟಿದ್ದರೆ, 2022ರ ಮಾರ್ಚ್‌ ಶೇ.14.63ರಷ್ಟಿತ್ತು. ಆಹಾರೇತರ ವಸ್ತುಗಳು, ಜವಳಿ, ಖನಿಜ, ರಬ್ಬರ್‌ (), ಪ್ಲಾಸ್ಟಿಕ್‌ ವಸ್ತುಗಳು, ಕಚ್ಚಾ ಪೆಟ್ರೋಲಿಯಂ ಉತ್ಪನ್ನ, ನೈಸರ್ಗಿಕ ಅನಿಲ, ಪೇಪರ್‌, ವಿವಿಧ ಉತ್ಪಾದಿತ ವಸ್ತುಗಳ ಬೆಲೆ ಇಳಿಕೆಯು ಸಗಟು ಹಣದುಬ್ಬರ ( ) ಸೂಚ್ಯಂಕ ಇಳಿಕೆಗೆ ನೆರವಾಗಿದೆ. ಆಹಾರ ವಸ್ತುಗಳ ಪಟ್ಟಿ ಏರಿಕೆಯಾಗಿದ್ದರೂ, ಉಳಿದ ವಸ್ತುಗಳ ದರ ಗಮನಾರ್ಹ ಪ್ರಮಾಣದಲ್ಲಿ ಇಳಿದಿರುವುದು ಒಟ್ಟಾರೆ ಸೂಚ್ಯಂಕ ಇಳಿಕೆಗೆ ಕಾರಣವಾಗಿದೆ. ಬಡ್ಡಿ ದರ ಏರಿಕೆಗೆ ರಿಸರ್ವ್‌ ಬ್ಯಾಂಕ್ ತಾತ್ಕಾಲಿಕ ತಡೆ: ಸಾಲಗಾರರು ಖುಷ್‌ ಹಣದುಬ್ಬರವಲ್ಲ, ಹೈಪರ್‌ ಹಣದುಬ್ಬರದತ್ತ ಪಾಕ್‌, ಸಾಲ ತೀರಿಸುವ ಅವಧಿ ವಿಸ್ತರಿಸಿದ ಚೀನಾ!