ಕೃಷಿ ಪತ್ತಿನ ಸೊಸೈಟಿಗೆ ಎಲ್‌ಪಿಜಿ, ಪೆಟ್ರೋಲ್‌ ಡೀಲರ್‌ಶಿಪ್‌: ಸಹಕಾರ ಸಂಘ ಬಲಪಡಿಸಲು ಕೇಂದ್ರದ ಮಹತ್ವದ ನಿರ್ಧಾರ ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಮತ್ತು ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್‌ ಪುರಿ ನಡುವೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನವದೆಹಲಿ (ಏಪ್ರಿಲ್‌ 13, 2023): ದೇಶದ ಸಹಕಾರ ವಲಯಕ್ಕೆ ಇನ್ನಷ್ಟು ಬಲ ತುಂಬಲು ಮುಂದಾಗಿರುವ ಕೇಂದ್ರ ಸರ್ಕಾರ, ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿಗಳಿಗೆ ಮುಂಬರುವ ದಿನಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಮತ್ತು ಎಲ್‌ಪಿಜಿ ಡೀಲರ್‌ಶಿಪ್‌ ನೀಡಲು ನಿರ್ಧರಿಸಿದೆ. ಜೊತೆಗೆ ಈಗಾಗಲೇ ಸಗಟು ಪೆಟ್ರೋಲ್‌/ ಡೀಸೆಲ್‌ ಸಗಟು ಗುತ್ತಿಗೆ ಹೊಂದಿರುವ ಸೊಸೈಟಿಗಳಿಗೆ ಅದನ್ನು ಚಿಲ್ಲರೆ ಮಾರಾಟ ಮಳಿಗೆಗಳಾಗಿ ಬದಲಾಯಿಸುವ ಒಂದು ಬಾರಿಯ ಅವಕಾಶವನ್ನೂ ನೀಡಲು ನಿರ್ಧರಿಸಿದೆ. ಬುಧವಾರ ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ( - ) ಮತ್ತು ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್‌ ಪುರಿ ( ) ನಡುವೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಲ್ಲದೆ ಸಕ್ಕರೆ () ಸಹಕಾರ ಮಿಲ್‌ಗಳಿಗೆ ಎಥೆನಾಲ್‌ () ಮಿಶ್ರಣ ಯೋಜನೆಯಡಿ, ಎಥೆನಾಲ್‌ ಮಾರಾಟ ಮಾಡುವ ಅನುಮತಿಯನ್ನು ಆದ್ಯತೆಯ ಮೇರೆಗೆ ನೀಡಲಾಗುವುದು. ಅಲ್ಲದೆ ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿಗಳು ( ) ತಮ್ಮದೇ ಆದ ಚಿಲ್ಲರೆ ಮಾರಾಟ ಮಳಿಗೆ ( ) ತೆಗೆಯಲೂ ಅನುಮತಿ ನೀಡಲಾಗುವುದು. ಇದನ್ನು ಓದಿ:ಮಾರ್ಚ್‌ನಲ್ಲಿ ಚಿಲ್ಲರೆ ಹಣದುಬ್ಬರ 15 ತಿಂಗಳ ಕನಿಷ್ಠಕ್ಕೆ, ಒಂದೇ ವರ್ಷದಲ್ಲಿ ಸಿಲಿಂಡರ್‌ ಬೆಲೆ 150 ರೂ. ಏರಿಕೆ! ಈ ಯೋಜನೆಗಳ ಮೂಲಕ ದೇಶದ 1 ಲಕ್ಷ ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿಗಳನ್ನು ಗ್ರಾಮೀಣ ಆರ್ಥಿಕಾಭಿವೃದ್ಧಿ ಕೇಂದ್ರಗಳನ್ನಾಗಿ ಪರಿವರ್ತಿಸುವ ಮತ್ತು 25 ವಿವಿಧ ಯೋಜನೆಗಳ ಮೂಲಕ 13 ಕೋಟಿ ರೈತರ ಆದಾಯವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಉಭಯ ಸಚಿವಾಲಯಗಳು ತಿಳಿಸಿವೆ. ಇದನ್ನೂ ಓದಿ:ಜಗತ್ತಿನ ಸಿರಿವಂತರು ಬಡವರಾದ್ರೆ ಹೇಗೆ ಕಾಣ್ತಾರೆ ನೋಡಿ..!